Prabhu Deva: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌- ನಟ ಪ್ರಭುದೇವ ಭೇಟಿ, ಕಾರಣವೇನು?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Prabhu Deva: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌- ನಟ ಪ್ರಭುದೇವ ಭೇಟಿ, ಕಾರಣವೇನು?

Prabhu Deva: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌- ನಟ ಪ್ರಭುದೇವ ಭೇಟಿ, ಕಾರಣವೇನು?

Prabhu Deva: ದಕ್ಷಿಣ ಭಾರತದ ಖ್ಯಾತ ನಟ ಮತ್ತು ನಿರ್ದೇಶಕ ಪ್ರಭುದೇವ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿಯ ಹಿಂದಿನ ಉದ್ದೇಶಗಳೇನು? ತಿಳಿಯೋಣ.

ಉತ್ತರ ಪ್ರದೇಶ ಸಿಎಂ ಭೇಟಿಯಾದ ಪ್ರಭುದೇವ
icon

(1 / 7)

ಉತ್ತರ ಪ್ರದೇಶ ಸಿಎಂ ಭೇಟಿಯಾದ ಪ್ರಭುದೇವ

ನಟ ಪ್ರಭುದೇವ ಅವರು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ನವದೆಹಲಿಯಲ್ಲಿ ಭೇಟಿಯಾದರು.
icon

(2 / 7)

ಪ್ರಭುದೇವ ಅವರು ಯೋಗಿ ಆದಿತ್ಯನಾಥ್ ಅವರಿಗೆ ರಾಮನ ಪ್ರತಿಮೆಯನ್ನು ನೀಡಿ ಗೌರವಿಸಿದರು.
icon

(3 / 7)

ಪ್ರಭುದೇವ ಮಾತ್ರವಲ್ಲದೆ ನಟ ಮೋಹನ್ ಬಾಬು ಮತ್ತು ಅವರ ಮಗ ವಿಷ್ಣು ಮಂಚು ಕೂಡ ಯೋಗಿ ಆದಿತ್ಯನಾಥ್ ಅವರನ್ನು ಭೇಟಿಯಾದರು.
icon

(4 / 7)

ಶೀಘ್ರದಲ್ಲಿ  ಬಿಡುಗಡೆಯಾಗಲಿರುವ ಕಣ್ಣಪ್ಪ ಚಿತ್ರದ ಕಥೆ ಮತ್ತು ಚಿತ್ರಕಥೆಯನ್ನು ವಿಷ್ಣು ಮಂಚು ಬರೆದಿದ್ದಾರೆ. ಸಿನಿಮಾಕ್ಕೆ ಸಂಬಂಧಪಟ್ಟಂತೆ ಯೋಗಿ ಆದಿತ್ಯನಾಥ್ ಅವರೊಂದಿಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಸಿನಿಮಾದ ಪ್ರಮೋಷನ್‌ಗೆ ಸಂಬಂಧಪಟ್ಟಂತೆ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದಾರೆ.
icon

(5 / 7)

ಕಣ್ಣಪ್ಪ ಚಿತ್ರದಲ್ಲಿ ಶರತ್‌ಕುಮಾರ್, ಮುಖೇಶ್ ರಿಷಿ, ಬ್ರಹ್ಮಾಜಿ, ಬ್ರಹ್ಮಾನಂದಂ, ಅರ್ಪಿತ್ ರಂಕಾ, ಪ್ರೀತಿ ಮುಕುಂದನ್, ಐಶ್ವರ್ಯ ಭಾಸ್ಕರನ್, ದೇವರಾಜ್, ಸಂಪತ್ ರಾಮ್, ಶಿವ ಬಾಲಾಜಿ ಮುಂತಾದವರು ಇದ್ದಾರೆ.
icon

(6 / 7)

ಈ ಚಿತ್ರವನ್ನು ಸುಮಾರು 100 ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತದೆ. ಈ ಚಿತ್ರ ತೆಲುಗು, ಹಿಂದಿ, ಕನ್ನಡ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.
icon

(7 / 7)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು