ದಿವಂಗತ ಪತ್ನಿ ಸ್ಪಂದನಾ ನೆನಪಲ್ಲಿ ‘ಚಿನ್ನ… ನಿನ್ನ ಮಗ ಪಾಸ್ ಆಗಿದ್ದಾನೆ’ ಎಂದ ವಿಜಯ ರಾಘವೇಂದ್ರ
ಇಂದು ಐಸಿಎಸ್‌ಇ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಯಲ್ಲಿ ನಟ ವಿಜಯ ರಾಘವೇಂದ್ರ ಪುತ್ರ ಶೌರ್ಯ ರಾಘವೇಂದ್ರ ಉತ್ತೀರ್ಣನಾಗಿದ್ದಾನೆ. ಈ ಖುಷಿಯನ್ನು ಸೋಷಿಯಲ್ ಮೀಡಿಯಾದಲ್ಲಿ "ಚಿನ್ನ… ನಿನ್ನ ಮಗ ಪಾಸ್ ಆಗಿದ್ದಾನೆ" ಎಂದು ವಿಜಯ ರಾಘವೇಂದ್ರ ಪೋಸ್ಟ್ ಮಾಡಿದ್ದಾರೆ.
(1 / 9)
ಇಂದು ಐಸಿಎಸ್‌ಇ ಫಲಿತಾಂಶ ಪ್ರಕಟವಾಗಿದೆ. ಪರೀಕ್ಷೆಯಲ್ಲಿ ನಟ ವಿಜಯ ರಾಘವೇಂದ್ರ ಪುತ್ರ ಶೌರ್ಯ ರಾಘವೇಂದ್ರ ಉತ್ತೀರ್ಣನಾಗಿದ್ದಾನೆ. ಈ ಖುಷಿಯನ್ನು ಸೋಷಿಯಲ್ ಮೀಡಿಯಾದಲ್ಲಿ "ಚಿನ್ನ… ನಿನ್ನ ಮಗ ಪಾಸ್ ಆಗಿದ್ದಾನೆ" ಎಂದು ವಿಜಯ ರಾಘವೇಂದ್ರ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ದಿವಂಗತ ಪತ್ನಿಯ ನೆನಪಿನೊಂದಿಗೆ ಮಗ ಪಾಸ್ ಆದ ಖುಷಿಯನ್ನು ಹಂಚಿಕೊಂಡಿದ್ದಾರೆ.
(2 / 9)
ಮಕ್ಕಳಿಗೆ ಪರೀಕ್ಷೆ ಸಮಯದಲ್ಲಿ ಓದುವಂತೆ ಪ್ರೇರೇಪಿಸುವಲ್ಲಿ ಅಮ್ಮನ ಪಾತ್ರ ಹಿರಿದಾಗಿದೆ. ಆದರೆ, ಸ್ಪಂದನಾ ರಾಘವೇಂದ್ರ ಅಗಲಿದ್ದಾರೆ. ಹೀಗಾಗಿ, ವಿಜಯ ರಾಘವೇಂದ್ರ ಅವರೇ ತನ್ನ ಮಗನಿಗೆ ಅಪ್ಪ ಮತ್ತು ಅಮ್ಮನ ಸ್ಥಾನ ತುಂಬುತ್ತಿದ್ದಾರೆ.
(3 / 9)
ಪರೀಕ್ಷೆ ಸಮಯದಲ್ಲಿ ರಾತ್ರಿವರೆಗೆ ಮಗನ ಜತೆಗೆ ಇದ್ದು ಆತನಿಗೆ ಓದಲು ಕಂಪೆನಿ ನೀಡುತ್ತಿದ್ದರು. ಮಗನ ಜತೆ ತಾನೂ ನಿದ್ದೆಗೆಡುತ್ತಿದ್ದರು.
(5 / 9)
ಮಗ ಐಸಿಎಸ್‌ಇ ಪರೀಕ್ಷೆಯಲ್ಲಿ ಪಾಸ್ ಆಗಿದ್ದಾನೆ ಎಂದು ಶುಭ ಸುದ್ದಿಯನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
(6 / 9)
ಇವರ ಪೋಸ್ಟ್‌ಗೆ ಅಭಿಮಾನಿಗಳು ಅಭಿನಂದನೆಗಳ ಸುರಿಮಳೆ ಸುರಿಸಿದ್ದಾರೆ. ಜತೆಗೆ, ಸ್ಪಂದನಾ ಅವರನ್ನು ನೆನಪಿಸಿಕೊಂಡಿದ್ದಾರೆ.
(7 / 9)
ಮಾರ್ಚ್ ತಿಂಗಳಲ್ಲಿ ಶೌರ್ಯ ರಾಘವೇಂದ್ರನ ಪರೀಕ್ಷೆ ಮುಗಿದ ಸಮಯದಲ್ಲಿಯೂ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದರು.
ಇತರ ಗ್ಯಾಲರಿಗಳು