Haripriya Good News: ಗುಡ್‌ನ್ಯೂಸ್ ಕೊಡೋಕೆ ಹರಿಪ್ರಿಯಾ ರೆಡಿ!; ‘ಇದು ಹೊಸ ಜೀವನದ ಶುರುವಾತು...’ ಎಂದ ನಟಿ...
ಜನವರಿ 26ರಂದು ಮೈಸೂರಿನಲ್ಲಿ ವಿವಾಹ ನೆರವೇರಿಸಿಕೊಂಡಿದ್ದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ ಜೋಡಿ ಇದೀಗ ಗುಡ್‌ನ್ಯೂಸ್ ನೀಡಲು ತಯಾರಿ ನಡೆಸಿದೆ. ಹಾಗೆಂದ ಮಾತ್ರಕ್ಕೆ ಆ ವಿಚಾರವೇನು ಎಂಬುದನ್ನು ಸೋಷಿಯಲ್ ಮೀಡಿಯಾದಲ್ಲಿ ಸಂಪೂರ್ಣವಾಗಿ ಹೇಳಿಕೊಂಡಿಲ್ಲ. ಬದಲಿಗೆ ನೀವೇ ಊಹಿಸಿ ಎಂದು ಅಭಿಮಾನಿಗಳ ತಲೆಗೆ ಹುಳ ಬಿಟ್ಟಿದ್ದಾರೆ ಹರಿಪ್ರಿಯಾ. ಹಾಗಾದರೆ, ಆ ಗುಡ್ ನ್ಯೂಸ್ ಏನಿರಬಹುದು?
(1 / 5)
ಜನವರಿಯಲ್ಲಿ ಮದುವೆಯಾಗಿದ್ದ ವಸಿಷ್ಠ ಸಿಂಹ ಮತ್ತು ಹರಿಪ್ರಿಯಾ, ಎಲ್ಲೆಂದರಲ್ಲಿ ಒಟ್ಟಿಗೆ ಸುತ್ತಾಡುತ್ತ ಎಂಜಾಯ್ ಮಾಡುತ್ತಿದ್ದಾರೆ. (Instagram\ Hariprriya)
(2 / 5)
ಈ ನಡುವೆಯೇ ನಟಿ ಹರಿಪ್ರಿಯಾ ಗುಡ್‌ನ್ಯೂಸ್‌ವೊಂದನ್ನು ಹೇಳಿಕೊಳ್ಳುವ ಕಾತರದಲ್ಲಿದ್ದು, ಆ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. (Instagram\ Hariprriya)
(3 / 5)
ನನಗೆ ಗೊತ್ತು ನೀವೆಷ್ಟು ಕುತೂಹಲಿಗಳಾಗಿದ್ದೀರಿ ಎಂದು? ನಾನು ಘೋಷಿಸುವ ಮೊದಲು, ಆ ಗುಡ್ ನ್ಯೂಸ್ ಏನಿರಬಹುದೆಂದು ನೀವೇ ಊಹಿಸಿ ಎಂದಿದ್ದಾರೆ ಹರಿಪ್ರಿಯಾ. (Instagram\ Hariprriya)
(4 / 5)
ಹರಿಪ್ರಿಯಾ ಅವರ ಪೋಸ್ಟ್ ನೋಡಿದ್ದೇ ತಡ ಅವರ ಅಭಿಮಾನಿಗಳು ಬಗೆಬಗೆ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೀರಾ ಎಂದು ಕೆಲವರು ಹೇಳಿದರೆ, ಒಟ್ಟಿಗೆ ಹೊಸ ಸಿನಿಮಾ ಮಾಡುತ್ತಿರಬಹುದೇ ಎಂದೂ ಉತ್ತರಿಸಿದ್ದಾರೆ. (Instagram\ Hariprriya)
(5 / 5)
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಸಿನಿಮಾ ಸೆಲೆಬ್ರಿಟಿಗಳು ಯೂಟ್ಯೂಬ್ ಚಾನೆಲ್ ತೆರೆಯುತ್ತಿದ್ದಾರೆ. ಇದೀಗ ಅದೇ ವಿಚಾರವನ್ನು ಹರಿಪ್ರಿಯಾ ಈ ರೀತಿಯಲ್ಲಿ ಹೇಳುತ್ತಿರಬಹುದು. ಆ ಚಾನೆಲ್‌ಗೆ ಸಿಂಹಪ್ರಿಯಾ ಎಂಬ ಹೆಸರನ್ನೂ ಇಟ್ಟಿರಬಹುದು. ಇನ್ನೇನು ಶೀಘ್ರದಲ್ಲಿ ಅವರೇ ಘೋಷಣೆ ಮಾಡಲಿದ್ದಾರೆ. (Instagram\ Hariprriya)
ಇತರ ಗ್ಯಾಲರಿಗಳು