ಗಿರೀಶ್‌ ಕಾರ್ನಡ್‌ ಜತೆ ನಟಿ ಹೇಮಾ ಮಾಲಿನಿ ಮದುವೆಯಾಗಬೇಕಿತ್ತು, ಅಮ್ಮನ ಆಸೆ ಈಡೇರಲಿಲ್ಲ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗಿರೀಶ್‌ ಕಾರ್ನಡ್‌ ಜತೆ ನಟಿ ಹೇಮಾ ಮಾಲಿನಿ ಮದುವೆಯಾಗಬೇಕಿತ್ತು, ಅಮ್ಮನ ಆಸೆ ಈಡೇರಲಿಲ್ಲ

ಗಿರೀಶ್‌ ಕಾರ್ನಡ್‌ ಜತೆ ನಟಿ ಹೇಮಾ ಮಾಲಿನಿ ಮದುವೆಯಾಗಬೇಕಿತ್ತು, ಅಮ್ಮನ ಆಸೆ ಈಡೇರಲಿಲ್ಲ

ಖ್ಯಾತ ನಟಿ, ಬೆಳದಿಂಗಳ ಬಾಲೆ ಹೇಮಾ ಮಾಲಿನಿ ಅವರು ತನ್ನ ಕರಿಯರ್‌ನಲ್ಲಿ 150ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಧರ್ಮೇಂದ್ರರನ್ನು ವಿವಾಹವಾದರು. ಇವರ ವಿವಾಹ ಕನ್ನಡದ ನಟ ಬರಹಗಾರ ಗಿರೀಶ್‌ ಕಾರ್ನಾಡ್‌ ಜತೆ ನಡೆಯಬೇಕಿತ್ತೆಂದು ಹೇಮಾ ಮಾಲಿನಿಯ ಅಮ್ಮ ಆಸೆ ಪಟ್ಟಿದ್ದರಂತೆ.

ಹೇಮಾ ಮಾಲಿನಿ ಅವರು ಧರ್ಮೇಂದ್ರ, ಅಮಿತಾಬ್‌ ಬಚ್ಚನ್‌, ಶಶಿ ಕಪೂರ್‌, ರಾಜೇಶ್‌ ಖನ್ನಾ, ದೇವ್‌ ಆನಂದ್‌ನಂತಹ ಸೂಪರ್‌  ಸ್ಟಾರ್‌ಗಳ ಜತೆ ನಟಿಸಿದ್ದಾರೆ. ಇವರು ನಟ ಧರ್ಮೇಂದ್ರ  ಅವರನ್ನು ಮದುವೆಯಾಗಿದ್ದರು. ಆದರೆ, ಈಕೆಯ ತಾಯಿಯ ಆಸೆ ಬೇರೆ ಆಗಿತ್ತು.
icon

(1 / 11)

ಹೇಮಾ ಮಾಲಿನಿ ಮತ್ತು ಶೋಲೆ ಸಿನಿಮಾ ನಟ ಧರ್ಮೇಂದ್ರರಿಗೆ 1980ರಲ್ಲಿ ವಿವಾಹವಾಗಿತ್ತು. ಇದು ಹೇಮಾ ಮಾಲಿನಿಯ ಮೊದಲ ಮದುವೆ. ಆದರೆ, ನಟ ಧರ್ಮೇಂದ್ರನಿಗೆ ಎರಡನೇ ಮದುವೆ. ಇವರಿಬ್ಬರು ದಶಕಗಳ ಕಾಲ ಜತೆಯಾಗಿದ್ದರು.
icon

(2 / 11)

ಹೇಮಾ ಮಾಲಿನಿಗೆ ಧರ್ಮೇಂದ್ರನಿಂದ ಇಬ್ಬರು ಮಕ್ಕಳು ಜನಿಸಿದರು. ಇವರ ಹೆಸರು ಈಶಾ ಡಿಯೋಲ್‌ ಮತ್ತು ಅಹನಾ ಡಿಯೋಲ್‌. ನಟಿ ಹೇಮಾ ಮಾಲಿನಿ ಅವರು ಧರ್ಮೇಂದ್ರನನ್ನು ಮದುವೆಯಾಗುವ ಸಮಯದಲ್ಲಿ ಈಕೆಯ ತಾಯಿ ಜಯ ಚಕ್ರವರ್ತಿಗೆ ಬೇರೆ ಆಸೆ ಇತ್ತು. ಮನೆಗೆ ಬೇರೊಬ್ಬ ವ್ಯಕ್ತಿ ಅಳಿಯ ಆಗಬೇಕಿತ್ತೆಂದು ಬಯಸಿದ್ದರು.
icon

(3 / 11)

ಹೇಮಾ ಮಾಲಿನಿಯ ತಾಯಿ ಜಯ ಚಕ್ರವರ್ತಿ ಅವರು ಪ್ರೊಡ್ಯುಸರ್‌ ಮತ್ತು ಕಾಸ್ಟ್ಯೂಮ್‌ ಡಿಸೈನರ್‌ ಆಗಿದ್ದರು. ಡ್ರೀಮ್ ಗರ್ಲ್ (1977), ಸ್ವಾಮಿ (1977), ಮತ್ತು ದಿಲ್ಲಗಿ (1978) ಚಿತ್ರಗಳನ್ನು ನಿರ್ಮಾಣ ಮಾಡಿದ್ದರು.
icon

(4 / 11)

ಜಯ ಚಕ್ರವರ್ತಿಗೆ ಡ್ಯಾನ್ಸರ್‌ ಆಗಬೇಕೆಂಬ ಕನಸಿತ್ತು. ಆದರೆ, ಆ ಆಸೆ ಈಡೇರಲಿಲ್ಲ. ತನ್ನ ಕನಸುಗಳನ್ನು ಮಗಳ ಮೂಲಕ ಈಡೇರಿಸಿದರು. ಹೇಮಾ ಮಾಲಿನಿ ಖ್ಯಾತ ನಟಿಯಾಗಲು ತಾಯಿಯ ಕೊಡುಗೆ, ಪಾತ್ರ ಸಾಕಷ್ಟಿದೆ.
icon

(5 / 11)

ಮೊದಲ ಬಾರಿಗೆ ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಅವರು ತುಮ್‌ ಹಸೀನ್‌ ಮೇನ್‌ ಜವಾನ್‌ (1970) ಚಿತ್ರದಲ್ಲಿ ನಟಿಸಿದರು. ಈ ಸಿನಿಮಾ ಬಿಡುಗಡೆಯಾಗಿ ಹತ್ತು ವರ್ಷ ಕಳೆದ ಬಳಿಕ ಇವರಿಬ್ಬರು ವಿವಾಹವಾಗಿದ್ದರು.
icon

(6 / 11)

(Instagram photos)

ಆ ಸಮಯದಲ್ಲಿ ಧರ್ಮೇಂದ್ರನಿಗೆ ಪ್ರಕಾಶ್‌ ಕೌರ್‌ ಜತೆ ಮದುವೆಯಾಗಿತ್ತು.  ಸನ್ನಿ ಡಿಯೋಲ್‌ ಮತ್ತು ಬಾಬಿ ಡಿಯೋಲ್‌ ಎಂಬ ಇಬ್ಬರು ಮಕ್ಕಳಿದ್ದರು.
icon

(7 / 11)

ನಟಿ ಹೇಮಾ ಮಾಲಿನಿಗೆ ಸರಿಯಾದ ಹುಡುಗನೆಂದು ಜಯ ಚಕ್ರವರ್ತಿ ಭಾವಿಸಿದ್ದರು. ಆತನೇ ಅಳಿಯನಾಗಿ ಬರಬೇಕೆಂದುಕೊಂಡಿದ್ದರು ಎಂದು ಡಿಎನ್‌ಎ ವರದಿ ತಿಳಿಸಿದೆ.
icon

(8 / 11)

ಮಾಯಾಪುರಿ 250ನೇ ಸಂಚಿಕೆಯಲ್ಲಿ ಪ್ರಕಟವಾದ ವರದಿ ಪ್ರಕಾರ ಕನ್ನಡ ನಟ ಮತ್ತು ಬರಹಗಾರ ಗಿರೀಶ್‌ ಕಾರ್ನಾಡ್‌ ತನ್ನ ಮನೆಯ ಅಳಿಯನಾಗಬೇಕೆಂದು ಜಯ ಚಕ್ರವರ್ತಿ ಅಂದುಕೊಂಡಿದ್ದರಂತೆ. ಗಿರೀಶ್‌ ಕಾರ್ನಾಡ್‌ ಅವರು ನಟನೆ, ಸಿನಿಮಾ ನಿರ್ದೇಶನ, ಬರವಣಿಗೆ ಮೂಲಕ ಖ್ಯಾತಿ ಪಡೆದಿದ್ದಾರೆ.
icon

(9 / 11)

ಹೇಮಾ ಮಾಲಿನಿಯ ತಾಯಿಗೆ ಹೇಮಾ ಮಾಲಿನಿ ಮತ್ತು ಗಿರೀಶ್‌ ಕಾರ್ನಾಡ್‌ ಮದುವೆಯ ಮೇಲೆ ತುಂಬಾ ಆಸಕ್ತಿ ಇತ್ತು. 1979ರ ರತ್ನದೀಪ್ ಚಿತ್ರದಲ್ಲಿ ಹೇಮಾ ಮಾಲಿನಿ ಮತ್ತು ಗಿರೀಶ್ ಕಾರ್ನಾಡ್ ಅವರನ್ನು ಒಟ್ಟಿಗೆ ಕೆಲಸ ಮಾಡಲು ಒತ್ತಾಯಿಸಿದರು.
icon

(10 / 11)

ಪ್ರೀತಿ ಎಲ್ಲವನ್ನು ಮೀರಿಸಿತು. ಹೇಮಾ ಮಾಲಿನಿ ಮತ್ತು ಧರ್ಮೇಂದ್ರ ಎಲ್ಲಾ ಅಡೆತಡೆಗಳ ನಡುವೆಯೂ ಪರಸ್ಪರ ವಿವಾಹವಾದರು. ಇಲ್ಲವಾದರೆ ಹೇಮಾ ಮಾಲಿನಿ ಕರ್ನಾಟಕದ ಸೊಸೆಯಾಗಿರುತ್ತಿದ್ದರು.
icon

(11 / 11)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು