ರಚಿತಾ ರಾಮ್ ಕೆನ್ನೆಯ ಗುಳಿ ಆರ್ಡಿನರಿ ಅಲ್ಲವೆಂದ ರವಿಮಾಮ; ಬುಲ್‌ಬುಲ್‌ಗೆ ಶುಭಹಾರೈಸಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ರಚಿತಾ ರಾಮ್ ಕೆನ್ನೆಯ ಗುಳಿ ಆರ್ಡಿನರಿ ಅಲ್ಲವೆಂದ ರವಿಮಾಮ; ಬುಲ್‌ಬುಲ್‌ಗೆ ಶುಭಹಾರೈಸಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌

ರಚಿತಾ ರಾಮ್ ಕೆನ್ನೆಯ ಗುಳಿ ಆರ್ಡಿನರಿ ಅಲ್ಲವೆಂದ ರವಿಮಾಮ; ಬುಲ್‌ಬುಲ್‌ಗೆ ಶುಭಹಾರೈಸಿದ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌

ನಟಿ ರಚಿತಾ ರಾಮ್‌ ಸ್ಯಾಂಡಲ್‌ವುಡ್‌ಗೆ ಆಗಮಿಸಿ ಹನ್ನೆರಡು ವರ್ಷಗಳಾಗಿವೆ. ನಟಿಯ ಆಪ್ತರು ಈ ಸಂಭ್ರಮವನ್ನು ಆಚರಿಸುತ್ತಿದ್ದಾರೆ. ಇದೀಗ ಜೀ ಕನ್ನಡ ವಾಹಿನಿಯ ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ರಿಯಾಲಿಟಿ ಶೋನಲ್ಲಿಯೂ ನಟಿಗೆ ಅಚ್ಚರಿಯ ಉಡುಗೊರೆ ದೊರಕಿದೆ.

ಜೀಕನ್ನಡ ವಾಹಿನಿಯು ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2ನ ಪ್ರೊಮ ಹಂಚಿಕೊಂಡಿದೆ. ಅದರಲ್ಲಿ ನಟ ದರ್ಶನ್‌ ಧ್ವನಿ ಕೇಳಿ ನಟಿ ಪುನೀತರಾಗಿದ್ದಾರೆ. ರವಿಚಂದ್ರನ್‌ ಕೂಡ ನಟಿಗೆ ಮಾತಿನ ಕಚಗುಳಿ ಇಟ್ಟಿದ್ದಾರೆ.
icon

(1 / 10)

ನಟ ದರ್ಶನ್‌ ಜತೆ ಬುಲ್‌ ಬುಲ್‌ ಸಿನಿಮಾದ ಮೂಲಕ ರಚಿತಾ ರಾಮ್‌ ಸಿನಿಮಾ ರಂಗಕ್ಕೆ ಎಂಟ್ರಿ ನೀಡಿದರು. ಅಂದಿನಿಂದ ಪಡೆದ ಖ್ಯಾತಿಯನ್ನು ನಟಿ ಇಂದಿನವರೆಗೂ ಉಳಿಸಿಕೊಂಡಿದ್ದಾರೆ.
icon

(2 / 10)

ರಚಿತಾ ರಾಮ್‌ ಅವರ ಮೂಲ ಹೆಸರು ಬಿಂದ್ಯಾ ರಾಮ್‌. ಇವರು ಕನ್ನಡ ಧಾರಾವಾಹಿ "ಅರಸಿ" ಮೂಲಕ ನಟನೆ ಆರಂಭಿಸಿದರು.
icon

(3 / 10)

ಟಿವಿ ಸೀರಿಯಲ್‌ನಲ್ಲಿ ಪಡೆದ ಖ್ಯಾತಿ ಬಳಿಕ ಇವರಿಗೆ ದರ್ಶನ್‌ ನಟನೆಯ ಬುಲ್‌ ಬುಲ್‌ ಸಿನಿಮಾದಲ್ಲಿ ನಟಿಸುವ ಅವಕಾಶ ದೊರಕಿತು. ಮೊದಲ ಸಿನಿಮಾದಲ್ಲಿ ಪಡೆದ ಯಶಸ್ಸು ಇವರ ಖ್ಯಾತಿ ಹೆಚ್ಚಿಸಿತು.
icon

(4 / 10)

ಬುಲ್‌ ಬುಲ್‌ ನಂತರ ಇವರು ದಿಲ್‌ ರಂಗೀಲಾ ಮತ್ತು ಅಂಬರೀಶಾ ಸಿನಿಮಾಗಳಲ್ಲಿ ನಟಿಸಿದರು. ರನ್ನ, ರಥಾವರ, ಚಕ್ರವ್ಯೂಹ, ಭರ್ಜರಿ, ಪುಷ್ಪಕ ವಿಮಾನ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.
icon

(5 / 10)

ಸೀತಾರಾಮ ಕಲ್ಯಾಣ, ನಟ ಸಾರ್ವಭೌಮ, ಆಯುಷ್ಮಾನ್‌ಭವ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2 ಜಡ್ಜ್‌ ಸೀಟ್‌ನಲ್ಲಿದ್ದಾರೆ. ಅವರಿಗೆ ಕನ್ನಡ ಚಿತ್ರರಂಗದಲ್ಲಿ ಹನ್ನೆರಡು ವರ್ಷ ಪೂರೈಸಿದ್ದಕ್ಕೆ ಭರ್ಜರಿ ಬ್ಯಾಚುಲರ್ಸ್‌ ವೇದಿಕೆಯಲ್ಲಿ ಸರ್‌ಪ್ರೈಸ್‌ ದೊರಕಿದೆ.
icon

(6 / 10)

ಭರ್ಜರಿ ಬ್ಯಾಚುಲರ್ಸ್‌ ಸೀಸನ್‌ 2ನಲ್ಲಿ ಈ ವಾರ ಡೆಡಿಕೇಷನ್‌ ರೌಂಡ್‌ ನಡೆಯುತ್ತಿದೆ. ಈ ಶೋನಲ್ಲಿ ರಚಿತಾ ರಾಮ್‌ಗೆ ಹಲವು ಅಚ್ಚರಿಗಳು ದೊರಕಿವೆ.
icon

(7 / 10)

ನಟಿ ರಚಿತಾ ರಾಮ್‌ ಕೆನ್ನೆಯ ಗುಳಿ ಬಗ್ಗೆ ರವಿಚಂದ್ರನ್‌ ತಮಾಷೆ ಮಾಡಿದ್ದಾರೆ. ಇದು ಆರ್ಡಿನರಿ ಸುಳಿ ಅಲ್ಲ ಎಂದು ವೇದಿಕೆಯಲ್ಲಿ ಕಾಮೆಂಟ್‌ ಮಾಡಿದಾಗ ರಚಿತಾ ರಾಮ್‌ ನಾಚಿ ನೀರಾಗಿದ್ದಾರೆ.
icon

(8 / 10)

ಸರ್‌ಪ್ರೈಸ್‌ ಇಷ್ಟಕ್ಕೆ ಮುಗಿದಿಲ್ಲ. "ನಮ್ಮ ಬುಲ್‌ ಬುಲ್‌ ಹೀಗೆ ಖುಷಿಖುಷಿಯಾಗಿರಲಿ" ಎಂಬ ಧ್ವನಿ ಕೇಳಿಸಿದೆ. ನಟ ದರ್ಶನ್‌ ಕಳುಹಿಸಿದ ಆಡಿಯೋ ರೆಕಾರ್ಡ್‌ ಪ್ಲೇ ಮಾಡಿದಾಗ ನಟಿ ಅಕ್ಷರಶಃ ಅಚ್ಚರಿಗೆ ಒಳಗಾಗಿದ್ದಾರೆ.
icon

(9 / 10)

ಜೊತೆಗಾರರ ಸಾಧನೆ, ಏಳಿಗೆಗಾಗಿ ಪರಸ್ಪರ ಹರಕೆ, ತ್ಯಾಗಗಳಿಂದ ಸಾರ್ಥಕತೆ ಮೆರೆದ ಬ್ಯಾಚುಲರ‌್ಸ್ & ಏಂಜಲ್ಸ್! ಈ ಎಪಿಸೋಡ್‌ಗಳು ಜೀ ಕನ್ನಡದಲ್ಲಿ ಈ ಶನಿವಾರ ಮತ್ತು ಭಾನುವಾರ ರಾತ್ರಿ ಒಂಬತ್ತು ಗಂಟೆಗೆ ಪ್ರಸಾರವಾಗಲಿದೆ.
icon

(10 / 10)

ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು