ಕಮಲ್‌ ಹಾಸನ್‌, ಸಾರಿಕಾ ಡಿವೋರ್ಸ್‌ ಬಳಿಕ ಮಗಳು ಶ್ರುತಿ ಹಾಸನ್‌ ಪಟ್ಟ ಕಷ್ಟ ಅಷ್ಟಿಷ್ಟಲ್ಲ; ಮರ್ಸಿಡಿಸ್‌ನಿಂದ ಲೋಕಲ್‌ ಟ್ರೈನ್‌ಗೆ ಶಿಫ್ಟ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಮಲ್‌ ಹಾಸನ್‌, ಸಾರಿಕಾ ಡಿವೋರ್ಸ್‌ ಬಳಿಕ ಮಗಳು ಶ್ರುತಿ ಹಾಸನ್‌ ಪಟ್ಟ ಕಷ್ಟ ಅಷ್ಟಿಷ್ಟಲ್ಲ; ಮರ್ಸಿಡಿಸ್‌ನಿಂದ ಲೋಕಲ್‌ ಟ್ರೈನ್‌ಗೆ ಶಿಫ್ಟ್‌

ಕಮಲ್‌ ಹಾಸನ್‌, ಸಾರಿಕಾ ಡಿವೋರ್ಸ್‌ ಬಳಿಕ ಮಗಳು ಶ್ರುತಿ ಹಾಸನ್‌ ಪಟ್ಟ ಕಷ್ಟ ಅಷ್ಟಿಷ್ಟಲ್ಲ; ಮರ್ಸಿಡಿಸ್‌ನಿಂದ ಲೋಕಲ್‌ ಟ್ರೈನ್‌ಗೆ ಶಿಫ್ಟ್‌

ನಟಿ ಶ್ರುತಿ ಹಾಸನ್‌ ತನ್ನ ಬಾಲ್ಯದಲ್ಲಿ ಅನುಭವಿಸಿದ ಕಷ್ಟಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ವಿಶೇಷವಾಗಿ ಅಪ್ಪ ಕಮಲ್‌ ಹಾಸನ್‌ ಮತ್ತು ಸಾರಿಕಾ ಪರಸ್ಪರ ದೂರವಾದ ಬಳಿಕ ತನ್ನ ಬದುಕಿನಲ್ಲಿ ಸಾಕಷ್ಟು ಬದಲಾವಣೆಯಾಯಿತು. ಮರ್ಸಿಡಿಸ್‌ ಬೆಂಝ್‌ನಿಂದ ಲೋಕಲ್‌ ಟ್ರೇನ್‌ಗೆ ಶಿಫ್ಟ್‌ ಆದೆ ಎಂದು ಅವರು ಹೇಳಿದ್ದಾರೆ.

ಅಪ್ಪ - ಅಮ್ಮ ವಿವಾಹ ವಿಚ್ಛೇದನ ಪಡೆದರೆ ಅದು ಅವರ ಮಕ್ಕಳ ಮೇಲೆ ಬೀರುವ ಪರಿಣಾಮ ಘೋರವಾಗಿರುತ್ತಾರೆ. ಅದು ಶ್ರೀಮಂತರೇ ಆಗಿರಲಿ, ಬಡವರೇ ಆಗಿರಲಿ, ಅಪ್ಪ ಅಮ್ಮ ದೂರವಾದ ಬಳಿಕ ಸಾಕಷ್ಟು ನೋವು, ಕಷ್ಟ ಅನುಭವಿಸುತ್ತಾರೆ. ಖ್ಯಾತ ನಟಿ ಶ್ರುತಿ ಹಾಸನ್‌ ಬದುಕು ಇದಕ್ಕೆ ಹೊರತಾಗಿಲ್ಲ.
icon

(1 / 10)

ಫಿಲ್ಮ್‌ ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಶ್ರುತಿ ಹಾಸನ್‌ ತನ್ನ ಬದುಕಿನ ಬವಣೆಗಳ ಕುರಿತು ಮಾತನಾಡಿದ್ದಾರೆ. "ಬಾಲ್ಯದ ಬದುಕು ನನ್ನ ದೃಷ್ಟಿಕೋನವನ್ನು ಹೇಗೆ ಮರುರೂಪಿಸಿತ್ತು ಎಂದು ಯೋಚಿಸಿದರೆ ಅಚ್ಚರಿಯಾಗುತ್ತದೆ. ಎಲ್ಲರೂ ನನ್ನನ್ನು ಸಾಕಷ್ಟು ಸವಲತ್ತು ಪಡೆದವಳು ಎನ್ನುತ್ತಾರೆ. ಇಂತಹ ಊಹೆ ಸಾಮಾನ್ಯ. ಆದರೆ, ನನ್ನನ್ನು ನಾನು ಪಾಲನೆ ಮಾಡುವುದು ನನಗೆ ಶಕ್ತಿ ಮತ್ತು ಧೈರ್ಯವನ್ನು ನೀಡಿದೆ" ಎಂದು ಶ್ರುತಿ ಹಾಸನ್‌ ಹೇಳಿದ್ದಾರೆ.
icon

(2 / 10)

ಸಿನಿಮಾ ತಾರೆಯರ ಕುಟುಂಬದಲ್ಲಿ ಜನಿಸಿದ್ದರಿಂದ ಶ್ರುತಿ ಹಾಸನ್‌ಗೆ ಅಹಂ ಬಂದಿಲ್ಲ. ಆದರೆ, ಆಕೆಯ  ಹೆತ್ತವರ ವಿಚ್ಛೇದನ ಮತ್ತು ಅದರ ಪರಿಣಾಮಗಳು ಘೋರವಾಗಿತ್ತು. "ನನ್ನನ್ನು ಅಸಹಾಯಕಳಾಗಿ ಮಾಡಿತ್ತು"  ಎಂದು ಅವರು ಹೇಳಿದ್ದಾರೆ.
icon

(3 / 10)

"ನಾನು ಸಿನಿಮಾ ಕ್ಷೇತ್ರಕ್ಕೆ ಬಂದಾಗ ನಾನು  ಏನೆಲ್ಲ ಕಷ್ಟಪಟ್ಟೆ ಎಂದು ಯಾರಿಗೂ ತಿಳಿದಿರಲಿಲ್ಲ. ಹೆತ್ತವರು ಡಿವೋರ್ಸ್‌ ಪಡೆದ ಬಳಿಕ ನಾನು ದೀನಳಾದೆ. ನನ್ನ ತಾಯಿ ಬೇರೆಯಾಗಲು ಬಯಸಿದಾಗ ನಾವು ಚೆನ್ನೈನಿಂದ ಮುಂಬೈಗೆ ಶಿಫ್ಟ್‌ ಆದೆವು. ಆ ಬದುಕು ಆರಾಮವಾಗಿರಲಿಲ್ಲ. ಅದರಿಂದ ನಾನು ಕಲಿತ ಪಾಠಗಳ ಕುರಿತು ಹೆಮ್ಮೆ ಇದೆ. ಮರ್ಸಿಡಿಸ್‌ನಿಂದ ಬದುಕು ಲೋಕಲ್‌ ಟ್ರೇನ್‌ಗೆ ಹೋಗಲು ಹೆಚ್ಚು ಸಮಯ ಬೇಕಿಲ್ಲ ಎಂದು ಕಲಿತೆ" ಎಂದು ಶ್ರುತಿ ಹೇಳಿದ್ದಾರೆ.
icon

(4 / 10)

ನನ್ನ ಬದುಕಿನ ಕಷ್ಟಗಳು, ಅನುಭವಗಳು ಕೆಲಸಲದಲಿ ಹೇಗೆ ಸ್ಪೂರ್ತಿ ನೀಡಿತ್ತು ಎಂದು ಅವರು ಹೇಳಿದ್ದಾರೆ. "ನಾನು ಸಿನಿಮಾ ಕ್ಷೇತ್ರಕ್ಕೆ ಬರುವ ಸಮಯದಲ್ಲಿ ದೂರವಾದ ತಂದೆಯೊಂದಿಗೆ ಮತ್ತೆ ಸಂಪರ್ಕ ಸಾಧಿಸಿಕೊಂಡೆ" ಎಂದರು.
icon

(5 / 10)

"ಸ್ವಾತಂತ್ರ್ಯವನ್ನು ಹೊಂದಲು, ಸ್ವಂತ ಹಣವನ್ನು ಸಂಪಾದಿಸಲು, ನನ್ನ ಸ್ವಂತ ಸ್ಥಾನವನ್ನು ಹೊಂದುವ ಕುರಿತು ನನಗೆ ಸಾಕಷ್ಟು ಹಂಬಲವಿತ್ತು" ಎಂದು ಅವರು ಹೇಳಿದ್ದಾರೆ.
icon

(6 / 10)

ಕಮಲ್ ಹಾಸನ್ ಮತ್ತು ಸಾರಿಕಾ 1988ರಲ್ಲಿ ವಿವಾಹವಾದರು. 2004ರಲ್ಲಿ ವಿಚ್ಛೇದನ ಪಡೆದರು. ಅವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮಕ್ಕಳ ಹೆಸರು ಶ್ರುತಿ ಮತ್ತು ಅಕ್ಷರಾ ಹಾಸನ್. ಇಬ್ಬರೂ ಚಲನಚಿತ್ರ ಮತ್ತು ಸಂಗೀತದಲ್ಲಿ ವೃತ್ತಿಜೀವನ ಮಾಡುತ್ತಿದ್ದಾರೆ.
icon

(7 / 10)

ಶ್ರುತಿ ಹಾಸನ್‌ ನಟನೆಯ ಮುಂದಿನ ಸಿನಿಮಾ ಕೂಲಿ. ಲೋಕೇಶ್ ಕನಕರಾಜ್ ನಿರ್ದೇಶನದ ಮತ್ತು ಸನ್ ಪಿಕ್ಚರ್ಸ್ ನಿರ್ಮಾಣದ ಆಕ್ಷನ್ ಥ್ರಿಲ್ಲರ್ ಇದಾಗಿದೆ.
icon

(8 / 10)

ಈ ಚಿತ್ರದಲ್ಲಿ ರಜನಿಕಾಂತ್, ಸತ್ಯರಾಜ್ ರಿಂದ ಸೌಬಿನ್ ಶಾಹಿರ್, ಸಂದೀಪ್ ಕಿಶನ್ ಮತ್ತು ದಕ್ಷಿಣ ನಟಿ ರೇಬಾ ಮೋನಿಕಾ ಜಾನ್  ಮುಂತಾದವರು ನಟಿಸುತ್ತಿದ್ದಾರೆ.
icon

(9 / 10)

ಶ್ರುತಿ ಹಾಸನ್‌ 1986ರ ಜನವರಿ 28ರಂದು ಜನಿಸಿದರು. ತೆಲುಗು, ತಮಿಳು ಮತ್ತು ಹಿಂದಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಎರಡು ಫಿಲ್ಮ್‌ ಫೇರ್‌ ಸೌತ್‌ ಅವಾರ್ಡ್‌, ಏಳು ಇಂಡಿಯನ್‌ ಇಂಟರ್‌ನ್ಯಾಷನಲ್‌ ಮೂವಿ ಅವಾರ್ಡ್‌ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.
icon

(10 / 10)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು