Flower Rangoli: ಈ ಬಾರಿ ಚೌತಿಗೆ ಗಣಪನ ಮಂಟಪದ ಎದುರು ಹೂವಿನ ರಂಗೋಲಿ ಹಾಕಿ ಹಬ್ಬದ ಮೆರುಗನ್ನುಇನ್ನಷ್ಟು ಹೆಚ್ಚಿಸಿ
Flower Rangoli: ನೀವು ಈ ಬಾರಿ ಚೌತಿಯ ಮೆರುಗು ಹೆಚ್ಚಿಸಲು ಇಷ್ಟಪಡುತ್ತಿದ್ದರೆ ಹೂವಿನ ರಂಗೋಲಿಯನ್ನು ಹಾಕಿ. ಇದು ನಿಮಗೆ ಖುಷಿ ಜೊತೆಗೆ ಹಬ್ಬದ ಸಡಗರವನ್ನು ಹೆಚ್ಚಿಸುವಲ್ಲಿ ಮುಖ್ಯಪಾತ್ರ ವಹಿಸುತ್ತದೆ. ನೀವೂ ಕೂಡ ನಾವು ಇಲ್ಲಿ ನೀಡಿದ ವಿಧಾನದಲ್ಲಿ ರಂಗೋಲಿ ಹಾಕಿ.
(1 / 7)
ನೀವೂ ನಿಮ್ಮ ಮನೆಯಲ್ಲಿ ಗಣಪತಿ ಕೂರಿಸುತ್ತಿದ್ದರೆ, ದೇವರ ಮುಂದೆ ಹಾಕಲು ಈ ಬಾರಿ ಹೂವಿನ ರಂಗೋಲಿ ಐಡಿಯಾಗಳನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ. ಗುಲಾಬಿ ಹಾಗೂ ಸೇವಂತಿಗೆ ಹೂವುಗಳನ್ನು ಬಳಸಿಕೊಂಡು ಈ ರೀತಿಯಲ್ಲಿ ನೀವು ರಂಗೋಲಿ ಹಾಕಬಹುದು.
(2 / 7)
ಬಿಳಿ ಸೇವಂತಿಗೆ ಹೂಗಳು ಸಿಕ್ಕಿದಲ್ಲಿ ಅದರ ದಳಗಳನ್ನು ಮಧ್ಯದಲ್ಲಿ ಗೋಲಾಕಾರವಾಗಿ ಹಾಕಿ ಸುತ್ತಲೂ ಬೇರೆ ಬಣ್ಣದ ಎಸಳುಗಳನ್ನು ಬಳಸಿದರೆ ಇನ್ನಷ್ಟು ಅಂದವಾಗಿ ಕಾಣುತ್ತದೆ. ಮನೆಯಲ್ಲಿ ರಂಗೋಲಿ ಇದ್ದರೆ ಹಬ್ಬದ ಕಳೆ ಹೆಚ್ಚು.
(3 / 7)
ಇನ್ನು ಚೆಂಡು ಹೂವುಗಳು ಲಭ್ಯವಿದ್ದಲ್ಲಿ ಅವುಗಳನ್ನು ಬಳಸಿಕೊಂಡು ಬೇಕಾದರೂ ನೀವು ರಂಗೋಲಿ ಹಾಕಬಹುದು. ಇವುಗಳನ್ನು ಹಾಕುವುದು ತುಂಬಾ ಸುಲಭವಾಗಿರುತ್ತದೆ. ಎಸಳುಗಳನ್ನು ಕೀಳಬೇಕು ಎಂಬ ಪ್ರಮೇಯವೇ ಇಲ್ಲ.
(4 / 7)
ಬರಿ ಹೂವುಗಳಿಂದ ಮಾತ್ರವಲ್ಲ ಅಲ್ಲಲ್ಲಿ ಹಸಿರು ಬಣ್ಣದ ಎಲೆಗಳಿಂದಲೂ ಅಲಂಕಾರ ಮಾಡಬಹುದು. ಇದು ಸಹ ತುಂಬಾ ಸೊಗಸಾಗಿ ಕಾಣುತ್ತದೆ. ಹೂವಿನಿಂದ ಹೂವಿನ ಆಕಾರದಲ್ಲೇ ರಂಗೋಲಿ ರಚಿಸಬಹುದು ಇದನ್ನು ಗಮನಿಸಿ. ಇದರಂತೆ ರಚಿಸಿ.
(5 / 7)
ಹಸಿರು ಎಲೆಗಳು ಹೂಗಳ ಬಣ್ಣ ಎದ್ದು ಕಾಣುವಂತೆ ಮಾಡುತ್ತದೆ. ಆದ್ದರಿಂದ ಹೀಗೆ ಹೂವಿನ ಎದುರು ಅಥವಾ ಹಿಂಬಾಗದಲ್ಲಿ ಎಲೆಗಳನ್ನು ಬಳಸಿ ರಂಗೋಲಿ ರಚಿಸಿ. ಹೀಗೆ ಮಾಡುವಾಗ ನೆಲದ ಬಣ್ಣ ಕೂಡ ಮುಖ್ಯವಾಗುತ್ತದೆ.
(6 / 7)
ಕರವೀರ ಪತ್ರೆ ಎಂದು ಕರೆಯಲಾಗುವ ಈ ಉದ್ದ ಎಲೆಗಳನ್ನು ಬಳಸಿಕೊಂಡು ನೀವು ರಂಗೋಲಿ ಹಾಕಬಹುದು ಇದು ಕೂಡ ತುಂಬಾ ಅಂದವಾಗಿ ಕಾಣುತ್ತದೆ.
ಇತರ ಗ್ಯಾಲರಿಗಳು