ಮನೆಯಲ್ಲಿ ಅಪ್ಪನ ಆತ್ಮದ ಓಡಾಟ! ಮೈ ಜುಂ ಎನಿಸುವ ವಿಚಿತ್ರ ಅನುಭವ ಬಿಚ್ಚಿಟ್ಟ ಅಶ್ವಿತಿ ಶೆಟ್ಟಿ- ಅದ್ವಿತಿ ಶೆಟ್ಟಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಮನೆಯಲ್ಲಿ ಅಪ್ಪನ ಆತ್ಮದ ಓಡಾಟ! ಮೈ ಜುಂ ಎನಿಸುವ ವಿಚಿತ್ರ ಅನುಭವ ಬಿಚ್ಚಿಟ್ಟ ಅಶ್ವಿತಿ ಶೆಟ್ಟಿ- ಅದ್ವಿತಿ ಶೆಟ್ಟಿ

ಮನೆಯಲ್ಲಿ ಅಪ್ಪನ ಆತ್ಮದ ಓಡಾಟ! ಮೈ ಜುಂ ಎನಿಸುವ ವಿಚಿತ್ರ ಅನುಭವ ಬಿಚ್ಚಿಟ್ಟ ಅಶ್ವಿತಿ ಶೆಟ್ಟಿ- ಅದ್ವಿತಿ ಶೆಟ್ಟಿ

  • ಚಂದನವನದ ಅವಳಿ ಸಹೋದರಿಯರಾದ ನಟಿ ಅಶ್ವಿತಿ ಶೆಟ್ಟಿ ಮತ್ತು ಅದ್ವಿತಿ ಶೆಟ್ಟಿ ಅಪ್ಪನ ನಿಧನದ ಬಳಿಕ, ತಮ್ಮ ಮನೆಯಲ್ಲಿ ನಡೆದ ವಿಸ್ಮಯಗಳನ್ನು ಬಿಚ್ಚಿಟ್ಟಿದ್ದಾರೆ. ಅಪ್ಪ ಸತ್ತ ದಿನವೇ ಅವರ ಆತ್ಮವನ್ನು ಕಂಡ ಬಗ್ಗೆ, ಮನೆಯಲ್ಲಿನ ಒಂದಷ್ಟು ವಿಚಿತ್ರ ಅನುಭವಗಳ ಬಗ್ಗೆ ಮಾತನಾಡಿದ್ದಾರೆ.

ಚಂದನವನದ ಅವಳಿ ಸಹೋದರಿಯರು ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ, ಕಿರುತೆರೆಯಲ್ಲಿಯೂ ಗಮನ ಸೆಳೆದಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿಯೂ ಸಕ್ರಿಯರಿರುವ ಇವರು, ಇದೀಗ ರಾಜೇಶ್‌ ಗೌಡ ಯೂಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಅಪ್ಪನ ನಿಧನದ ದಿನ ಆದ ಒಂದಷ್ಟು ವಿಚಿತ್ರ ಅನುಭವಗಳ ಬಗ್ಗೆ ಮಾತನಾಡಿದ್ದಾರೆ. ಅಶ್ವಿತಿ ಅವರ ಮಾತಿನ ಧಾಟಿಯಲ್ಲಿಯೇ ಇಲ್ಲಿದೆ ಅದರ ವಿವರ.
icon

(1 / 11)

(instagram)

 “ಅಪ್ಪ ತೀರಿಕೊಂಡ ದಿನ ನಾವು ಅವರ ಆತ್ಮವನ್ನು ನೋಡಿದ್ವಿ. ಅಪ್ಪ ಸತ್ತಾಗ ಮನೆಯಲ್ಲಿ ಅವರ ಫೇವರೇಟ್‌ ಕುರ್ಚಿ ಮೇಲೆಯೇ ಅವರನ್ನು ಕೂರಿಸಿದ್ವಿ. ಆವತ್ತಿನ ಅಪ್ಪನ ಕಾರ್ಯ ಎಲ್ಲವೂ ಮುಗಿದ ಮೇಲೆ ಆ ಚೇರ್‌ನ್ನು ಯಾರೋ ಅಡುಗೆ ಮನೆಯ ಒಳಗಡೆ ಇಟ್ಟು ಬಿಟ್ಟಿದ್ದರು.
icon

(2 / 11)

"ರಾತ್ರಿ ನಾವು ಹೀಗೆ ಸೋಫಾ ಮೇಲೆ ಕೂತುಕೊಂಡಿದ್ದಾಗ, ಯಾರೋ ಕಿಚನ್‌ ಒಳಗೆ ಹೋದಂತೆ ಆಯ್ತು. ಅಷ್ಟಕ್ಕೂ ಅದು ನಮ್ಮ ಅಪ್ಪನೇ. ಅವರು ಸತ್ತಾಗ ಧರಿಸಿದ್ದ ಅದೇ ಪಂಚೆ ಮತ್ತು ಶರ್ಟ್‌ನಲ್ಲಿ ಹೇಗೆ ಕಾಣಿಸಿದ್ದರೋ, ಅದೇ ರೀತಿ ಅವರ ನೆರಳನ್ನು ನೋಡಿದ್ವಿ. ಅವರ ತಲೆಗೆ ಕಟ್ಟಿದ್ದೂ ಸಹ ನೋಡಿದೆ"
icon

(3 / 11)

"ಅರೇ ಕ್ಷಣ ನಾನು ಸ್ತಬ್ಧಳಾದೆ. ಎಲ್ಲರೂ ಮಾತನಾಡ್ತಿದ್ದಾರೆ. ನನಗೆ ಮಾತೇ ಬರ್ತಿಲ್ಲ. ಕೊಂಚ ಸುಧಾರಿಸಿಕೊಂಡ ಬಳಿಕ ನಾನು ಅಡುಗೆ ಮನೆ ಒಳಗೆ ಹೋದೆ. ಅಲ್ಲಿ ಅಪ್ಪನ ಇಷ್ಟದ ಚೇರ್‌ ಇತ್ತು. ಹೊರಗಡೆ ಬಂದು, ಆ ಚೇರ್‌ಅನ್ನು ಅಡುಗೆ ಮನೆಯ ಒಳಗೆ ಇಟ್ಟಿದ್ದು ಯಾರು ಎಂದು ಕೇಳಿದೆ"
icon

(4 / 11)

“ಯಾಕಂದ್ರೆ, ಅವರ ಆತ್ಮ ಹೊರಗಿಂದ ಬಂದು ಅವರ ಇಷ್ಟದ ಕುರ್ಚಿ ಮೇಲೆ ಕೂತಿದೆ. ನನ್ನ ಮಾತು ಕೇಳಿ ಮನೆಯವರೆಲ್ಲ, ಏನಾಯ್ತು ಇವಳಿಗೆ ಎಂದು ಬೆರಗುಗಣ್ಣಿನಿಂದ ನೋಡಿದ್ರು. ಆ ರಾತ್ರಿ ಆ ಘಟನೆ ಬಗ್ಗೆ ನಾನು ಯಾರ ಬಳಿಯೂ ಹೇಳಿಕೊಂಡಿಲ್ಲ”
icon

(5 / 11)

"ಮಾರನೇ ದಿನ ಎಲ್ಲರಿಗೂ ಹೇಳಿದೆ. ನಾನು ಅಪ್ಪನನ್ನು ನೋಡಿದೆ. ಅವರ ನಿಧನದ ಬಳಿಕ 11 ದಿನ ಅವರ ಆತ್ಮ ನಮ್ಮ ಸುತ್ತಲೇ ಇರುತ್ತೆ. ಅದರ ಸಾಕಷ್ಟು ಅನುಭವ ನಮಗಾಗಿದೆ. ಅಪ್ಪ ಹಾಕ್ತಿದ್ದ ಪೌಡರ್‌ ವಾಸನೆ ಅವರು ಹೋದ ಮೇಲೂ ಬರುತ್ತಿತ್ತು. ನಮ್ಮ ಮನೆ ನಾಯಿಗೂ ಅದರ ಅನುಭವ ಆಗಿದೆ"
icon

(6 / 11)

“ಅಮ್ಮ ತುಂಬ ಧೈರ್ಯವಂತೆ. ಅಪ್ಪ ಎಲ್ಲಿ ಮಲುಗುತ್ತಿದ್ದರೋ, ಅಮ್ಮನೂ ಅಲ್ಲೆ ಮಲಗಿದ್ರು. ಹೀಗಿರುವಾಗ ಅಡುಗೆ ಮನೆಯಿಂದ ಅಮ್ಮ ಹೊರಗಡೆ ಬರ್ತಿದ್ದಂಗೆ, ಆ ನಾಯಿ ಕೊಟ್ಟ ಲುಕ್‌ ನೋಡಿ ಅಮ್ಮ ಜೋರಾಗಿ ಕಿರುಚಿದ್ದರು”
icon

(7 / 11)

"ಅಪ್ಪ ಆಸ್ಪತ್ರೆಯಲ್ಲಿ ಇರಬೇಕಾದ್ರೆ, ಅಮ್ಮನಿಗೆ ಒಂದು ಲುಕ್‌ ಕೊಡ್ತಿದ್ರು. ಎರಡೂ ಕಣ್ಣನ್ನ ಒಂದೇ ಕಡೆ ಹೊರಳಿಸಿದ್ರು. ಅದೇ ಥರ ನಮ್ಮನೆ ನಾಯಿ ಅಮ್ಮನಿಗೂ ಲುಕ್‌ ಕೊಟ್ಟಿತ್ತು. ಅದನ್ನು ನೋಡಿ ಅಮ್ಮ ಜೋರಾಗಿ ಕಿರುಚಿದ್ರು"
icon

(8 / 11)

“ತಕ್ಷಣ ಅಣ್ಣ ಬಂದ. ಆಗ ಅಲ್ಲೆಲ್ಲ ಅಪ್ಪ ಹಾಕ್ತಿದ್ದ ಪೌಡರ್‌ ವಾಸನೆ ಬರಲು ಶುರುವಾಯ್ತು. ಅಷ್ಟೊತ್ತಿಗೆ ನಮ್ಮನೆ ನಾಯಿ, ನನ್ನ ಮೇಲೆ ಬಂದು, ತೊಡೆ ಮೇಲೆ ಮಲಗಿತು. ಎದೆ ಮೇಲೆ ತಲೆ ಇಟ್ಟು ಮಲಗಿತು. ಅಮ್ಮನ ಬಳಿಯೂ ಹಾಗೇ ಮಾಡಿತು”
icon

(9 / 11)

“ಅದೇ ಮೊದಲು ನಮ್ಮ ನಾಯಿ ಹಾಗೆಲ್ಲ ಮಾಡಿದ್ದು. ಯಾವತ್ತೂ ಅಪ್ಪನ ರೂಮಿಗೆ ಹೋಗದ ನಾಯಿ, ಆವತ್ತು ಅಪ್ಪನ ಕೋಣೆಗೆ ಹೋಗಿ ಬಂದಿದೆ. ಅಷ್ಟೇ ಅಲ್ಲ ಅಪ್ಪನಿಗೆ ವಿಡಿಯೋ ಶೂಟ್‌ ಮಾಡುವುದು ಇಷ್ಟ ಆಗುತ್ತಿರಲಿಲ್ಲ. ಕಣ್ಣಲ್ಲೇ ಲುಕ್‌ ಕೊಡೋರು. ಅಪ್ಪ ಹೋದ ಮೇಲೆ ಆವತ್ತು ನಾನು ವಿಡಿಯೋ ಆನ್‌ ಮಾಡಿದೆ. ನಮ್ಮನೆ ನಾಯಿಯೂ ಅಪ್ಪನ ರೀತಿಯಲ್ಲಿಯೇ ಲುಕ್‌ ಕೊಟ್ಟಿತು”
icon

(10 / 11)

"ಮನೆ ಹೊರಗಡೆ ಗಾರ್ಡನ್‌ ಏರಿಯಾದಲ್ಲಿ, ಅಪ್ಪ ಬದುಕಿದ್ದಾಗ ಗಿಡಗಳಿಗೆ ನೀರು ಹಾಕ್ತಿದ್ರು. ಅವು ಹೋದ ಮೇಲೆ, ನಾಯಿ ಗಾರ್ಡನ್‌ನಲ್ಲಿಯೇ ಕೂತು, 360 ಡಿಗ್ರಿ ಸುತ್ತಲೂ ನೋಡುತ್ತಿತ್ತು. ಸರಿಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಾವು ಆ ನಾಯಿಯನ್ನೇ ಗಮನಿಸಿದ್ದೇವೆ" ಎಂದು ಅಶ್ವಿತಿ ಮತ್ತು ಅದ್ವಿತಿ ಹೇಳಿಕೊಂಡಿದ್ದಾರೆ.
icon

(11 / 11)

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು