Aero India: ಬೆಂಗಳೂರು ಬಾನಂಗಳದಲ್ಲಿ ಬಾನಾಡಿಗಳಂತೆ ಹಾರಾಡಿದ ಭಾರತೀಯ ವಾಯುಪಡೆ ವಿಮಾನಗಳು, ಏರೋ ಇಂಡಿಯಾ ಪ್ರದರ್ಶನದ ತಯಾರಿ, ಆಕರ್ಷಕ ಫೋಟೋಸ್
Aero India 2025: ಬೆಂಗಳೂರು ಯಲಹಂಕ ವಾಯು ನೆಲೆಯಲ್ಲಿ ಫೆ 10 ರಿಂದ 14ರ ತನಕ ಏರೋ ಇಂಡಿಯಾ ಪ್ರದರ್ಶನ ನಡೆಯಲಿದೆ. ಇದಕ್ಕೆ ಪೂರ್ವಭಾವಿಯಾಗಿ ಬೆಂಗಳೂರು ಬಾನಂಗಳದಲ್ಲಿ ಭಾರತೀಯ ವಾಯುಪಡೆ ವಿಮಾನಗಳು ಬಾನಾಡಿಗಳಂತೆ ಹಾರಾಡಿ ನೋಡುಗರನ್ನು ರೋಮಾಂಚನಗೊಳಿಸಿವೆ. ಏರೋ ಇಂಡಿಯಾ ಪ್ರದರ್ಶನದ ತಯಾರಿ ನಡೆದಿದ್ದು, ಆಕರ್ಷಕ ಫೋಟೋಸ್ ಇಲ್ಲಿವೆ.
(1 / 11)
ಏರೋ ಇಂಡಿಯಾ 2025: ಭಾರತೀಯ ವಾಯುಪಡೆಯ ಸೂರ್ಯ ಕಿರಣ್ ಏರೋಬ್ಯಾಟಿಕ್ ಟೀಮ್ ಗುರುವಾರ (ಫೆ 6) ಏರೋ ಇಂಡಿಯಾ ಪ್ರದರ್ಶನಕ್ಕೆ ಪೂರ್ವಭಾವಿ ಅಭ್ಯಾಸ ನಡೆಸಿತು. ಬೆಂಗಳೂರು ಬಾನಂಗಳದಲ್ಲಿ ಭಾರತೀಯ ವಾಯುಪಡೆ ವಿಮಾನಗಳು ಬಾನಾಡಿಗಳಂತೆ ಹಾರಾಡಿ ತಾಲೀಮು ಮೂಲಕವೇ ನೋಡುಗರನ್ನು ರೋಮಾಂಚನಗೊಳಿಸಿವೆ.
(ANI)(2 / 11)
ಏರೋ ಇಂಡಿಯಾ 2025: ಬೆಂಗಳೂರು ಯಲಹಂಕ ವಾಯು ನೆಲೆಯಲ್ಲಿ ಫೆ 10 ರಿಂದ 14ರ ತನಕ ಏರೋ ಇಂಡಿಯಾ ಪ್ರದರ್ಶನ ನಡೆಯಲಿದೆ.
(ANI)(3 / 11)
ಏರೋ ಇಂಡಿಯಾ 2025: ಬೆಂಗಳೂರಿನಲ್ಲಿ ನಡೆಯಲಿರುವ ಏರೋ ಇಂಡಿಯಾ ಪ್ರದರ್ಶನವು ಜಾಗತಿಕ ನಾಯಕರನ್ನು, ರಕ್ಷಣಾ ಪರಿಣತರು, ನವೋದ್ಯಮಿಗಳನ್ನು ಆಹ್ವಾನಿಸುತ್ತಿದ್ದು, "ದ ರನ್‌ವೇ ಟು ಎ ಬಿಲಿಯನ್ ಅಪೋರ್ಚುನಿಟೀಸ್' (ಶತಕೋಟಿ ಅವಕಾಶಗಳಿಗೆ ಒಂದು ಉಡಾವಣಾ ವೇದಿಕೆ) ಎಂಬ ಈ ಸಲದ ಥೀಮ್ ಅನ್ನು ಸಾಕಾರಗೊಳಿಸುವ ನಿರೀಕ್ಷೆ ಇದೆ.
(ANI)(4 / 11)
ಏರೋ ಇಂಡಿಯಾ 2025: ಬೆಂಗಳೂರು ಯಲಹಂಕದಲ್ಲಿ ವಾಯುಪಡೆ ವಿಮಾನಗಳು ನಡೆಸುತ್ತಿದ್ದ ಅಂತಿಮ ಹಂತದ ತಾಲೀಮು ಪ್ರದರ್ಶನ ವೀಕ್ಷಿಸುವುದಕ್ಕಾಗಿ ಜನ ಸೇರಿದ್ದರು.
(PTI)(5 / 11)
ಏರೋ ಇಂಡಿಯಾ 2025: ಬೆಂಗಳೂರು ಯಲಹಂಕದ ವಾಯುನೆಲೆಯಲ್ಲಿ ಏರೋ ಇಂಡಿಯಾ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ಗುರುವಾರ ವಾಯುಪಡೆಯ ಹೆಲಿಕಾಪ್ಟರ್‌ಗಳು ಕೂಡ ಅಂತಿಮ ತಾಲೀಮಿ ಪ್ರದರ್ಶನ ನೀಡಿದವು.
(PTI)(6 / 11)
ಏರೋ ಇಂಡಿಯಾ 2025: ಭಾರತೀಯ ವಾಯುಪಡೆಯ ಪ್ಯಾರಾಗ್ಲೈಡರ್ ಒಬ್ಬರು ಏರ್ ಶೋಕ್ಕಾಗಿ ಪೂರ್ವಭಾವಿ ತಾಲೀಮು ನಡೆಸಿದರು.
(PTI)(7 / 11)
ಬೆಂಗಳೂರಿನ ಯಲಹಂಕದಲ್ಲಿ ನಡೆಯುತ್ತಿದ್ದ ಏರೋ ಇಂಡಿಯಾ ಪ್ರದರ್ಶನಕ್ಕೆ ಪೂರ್ವಭಾವಿಯಾಗಿ ಭಾರತೀಯ ವಾಯುಪಡೆ ನಡೆಸಿದ ತಾಲೀಮನ್ನು ಬಾಲಕನೊಬ್ಬ ನೋಡಿದ್ದು ಹೀಗೆ..
(PTI)(8 / 11)
ಏರೋ ಇಂಡಿಯಾ 2025: ಬೆಂಗಳೂರು ಯಲಹಂಕದಲ್ಲಿ ಫೆ 10 ರಿಂದ ಶುರುವಾಗಲಿರುವ ಏರೋ ಇಂಡಿಯಾ ಪ್ರದರ್ಶನಕ್ಕೆ ಮೊದಲು ಗುರುವಾರ (ಫೆ 6) ಭಾರತೀಯ ವಾಯುಪಡೆಯ ಏರೋಬ್ಯಾಟಿಕ್ ತಂಡ ತಾಲೀಮು ನಡೆಸಿತು.
(PTI)(9 / 11)
ಏರೋ ಇಂಡಿಯಾ 2025 ಬೆಂಗಳೂರು-ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿದ್ದು, ಇದು ಭಾರತ ನಡೆಸುತ್ತ ಬಂದಿರುವ ಪ್ರಮುಖ ಏರೋಸ್ಪೇಸ್ ಮತ್ತು ರಕ್ಷಣಾ ಪ್ರದರ್ಶನವಾಘಿದೆ. ಇದರಲ್ಲಿ ಜಾಗತಿಕ ಮಟ್ಟದ ರಕ್ಷಣಾ ಉತ್ಪಾದಕರು ಭಾಗವಹಿಸುತ್ತಾರೆ.
(PTI)(10 / 11)
ಏರೋ ಇಂಡಿಯಾ ಪ್ರದರ್ಶನಕ್ಕೆ ರಕ್ಷಣಾ ವಲಯದ ಹೆಚ್ಚಿನ ಪ್ರಮುಖರು, ವಿಮಾನಯಾನಕ್ಕೆ ಸಂಬಂಧಿಸಿದ ಪ್ರಮುಖರು, ಸಾರ್ವಜನಿಕರು ಆಗಮಿಸುವ ನಿರೀಕ್ಷೆ ಇದ್ದು, ರಕ್ಷಣಾ ಸಚಿವಾಲಯ ಇದಕ್ಕೆ ಬೇಕಾದ ಸಿದ್ಧತೆ ನಡೆಸಿದೆ.
(PTI)ಇತರ ಗ್ಯಾಲರಿಗಳು