ಟಿ20 ಕ್ರಿಕೆಟ್‌ನಲ್ಲಿ 14 ವರ್ಷ ಹಳೆಯ ದಾಖಲೆ ಮುರಿದ ರಶೀದ್ ಖಾನ್; ಅಫ್ಘಾನಿಸ್ತಾನ ನಾಯಕನಾಗಿ ವಿಶೇಷ ಮೈಲಿಗಲ್ಲು
- ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅಫ್ಘಾನಿಸ್ತಾನ ನಾಯಕ ರಶೀದ್ ಖಾನ್ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದರು. 4-0-19-3 ಬೌಲಿಂಗ್ ಅಂಕಿ-ಅಂಶಗಳೊಂದಿಗೆ 14 ವರ್ಷಗಳ ಹಳೆಯ ಟಿ20 ದಾಖಲೆಯನ್ನು ಮುರಿದರು. ಇದು ಟಿ20ಯಲ್ಲಿ ಅಫ್ಘಾನಿಸ್ತಾನ ನಾಯಕನ ಅತ್ಯುತ್ತಮ ದಾಖಲೆಯಾಗಿದೆ. ಆ ಮೂಲಕ ಅವರು 4 ವರ್ಷಗಳ ಹಳೆಯ ದಾಖಲೆ ಮುರಿದಿದ್ದಾರೆ.

(1 / 5)
ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಾರ್ಚ್ 15ರಂದು ನಡೆದ ಐರ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ, ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ನಾಯಕ ರಶೀದ್ ಖಾನ್ 14 ವರ್ಷಗಳ ಹಳೆಯ ದಾಖಲೆ ಮುರಿದರು. ಅವರು 4 ಓವರ್ ಬೌಲಿಂಗ್ ಮಾಡಿದ ಅವರು 19 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದರು. ಟಿ20 ಯಲ್ಲಿ ಅಫ್ಘಾನಿಸ್ತಾನ ನಾಯಕನ ಅತ್ಯುತ್ತಮ ಅಂಕಿ-ಅಂಶವಾಗಿದೆ.
(2 / 5)
ಇದಕ್ಕೂ ಮುನ್ನ 2010ರ ಫೆಬ್ರವರಿಯಲ್ಲಿ ನಡೆದ ವಿಶ್ವ ಟಿ20 ಕ್ವಾಲಿಫೈಯರ್ ಫೈನಲ್ ಪಂದ್ಯದಲ್ಲಿ ನವರೋಜ್ ಮಂಗಲ್ 4-0-23-3 ಅಂಕಿ-ಅಂಶಗಳೊಂದಿಗೆ ಬೌಲಿಂಗ್ ಮಾಡಿದ್ದರು. ಇದು ಅಫ್ಘಾನಿಸ್ತಾನ ನಾಯಕನೊಬ್ಬನ ಈ ಹಿಂದಿನ ಉತ್ತಮ ದಾಖಲೆಯಾಗಿತ್ತು.
(3 / 5)
ಇದರೊಂದಿಗೆ ರಶೀದ್ ಖಾನ್ ಮತ್ತೊಂದು ಮೈಲಿಗಲ್ಲು ತಲುಪಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 350 ವಿಕೆಟ್ ಪಡೆದ ಮೊದಲ ಅಫ್ಘಾನಿಸ್ತಾನ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
(4 / 5)
ಶನಿವಾರ ನಡೆದ ಪಂದ್ಯದಲ್ಲಿ ಐರ್ಲೆಂಡ್ ತಂಡದ ಪಾಲ್ ಸ್ಟಿರ್ಲಿಂಗ್, ಕರ್ಟಿಸ್ ಕ್ಯಾಂಪ್ಫರ್ ಮತ್ತು ಗರೆಥ್ ಡೆಲಾನಿ ಅವರ ವಿಕೆಟ್ ಪಡೆದ ರಶೀದ್ ಖಾನ್, ಈ ದಾಖಲೆ ಬರೆದರು. ಐರ್ಲೆಂಡ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 149 ರನ್ ಗಳಿಸಿತು.
ಇತರ ಗ್ಯಾಲರಿಗಳು