ಶೂಟಿಂಗ್ ತ್ಯಜಿಸಲು ನಿರ್ಧರಿಸಿದ್ದಾಕೆ ಈಗ ಫೈನಲ್ಗೆ ಲಗ್ಗೆ; ಮನು ಭಾಕರ್ ಚಿನ್ನದ ಪದಕದ ಸ್ಪರ್ಧೆ ಇಂದು ಎಷ್ಟೊತ್ತಿಗೆ?
- Manu Bhakar: ಪ್ಯಾರಿಸ್ ಒಲಿಂಪಿಕ್ಸ್ನ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸುತ್ತಿನಲ್ಲಿ ಭಾರತದ ಶೂಟರ್ ಮನು ಭಾಕರ್ ಫೈನಲ್ ಪ್ರವೇಶಿಸಿದ್ದಾರೆ. ಅವರ ಚಿನ್ನದ ಪದಕದ ಸ್ಪರ್ಧೆ ಎಷ್ಟೊತ್ತಿಗೆ? ಇಲ್ಲಿದೆ ವಿವರ.
- Manu Bhakar: ಪ್ಯಾರಿಸ್ ಒಲಿಂಪಿಕ್ಸ್ನ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸುತ್ತಿನಲ್ಲಿ ಭಾರತದ ಶೂಟರ್ ಮನು ಭಾಕರ್ ಫೈನಲ್ ಪ್ರವೇಶಿಸಿದ್ದಾರೆ. ಅವರ ಚಿನ್ನದ ಪದಕದ ಸ್ಪರ್ಧೆ ಎಷ್ಟೊತ್ತಿಗೆ? ಇಲ್ಲಿದೆ ವಿವರ.
(1 / 5)
ಟೊಕಿಯೊ ಒಲಿಂಪಿಕ್ಸ್ನಲ್ಲಿ ಕನಸು ಭಗ್ನಗೊಂಡ ಮೂರು ವರ್ಷಗಳ ನಂತರ ಶೂಟರ್ ಮನು ಭಾಕರ್ ಅವರು 2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ. ಮಹಿಳೆಯರ 10 ಏರ್ ಪಿಸ್ತೂಲ್ ರೈಫಲ್ ಅರ್ಹತಾ ಸುತ್ತಿನಲ್ಲಿ 22 ವರ್ಷದ ಭಾರತೀಯ ಆಟಗಾರ್ತಿ ಫೈನಲ್ಗೆ ಅರ್ಹತೆ ಪಡೆದುಕೊಂಡಿದ್ದು, ಈ ವಿಭಾಗದ ಫೈನಲ್ ಸ್ಪರ್ಧೆ ಜುಲೈ 28ರ ಭಾನುವಾರ ಮಧ್ಯಾಹ್ನ 3:30ಕ್ಕೆ (ಭಾರತೀಯ ಕಾಲಮಾನ) ಪ್ರಾರಂಭವಾಗಲಿದೆ. ಮನು ಚಿನ್ನದ ಪದಕಕ್ಕಾಗಿ ಹೋರಾಟ ನಡೆಸಲಿದ್ದಾರೆ.
(2 / 5)
ಜುಲೈ 27ರ ಶನಿವಾರ ನಡೆದ ಅರ್ಹತಾ ಸುತ್ತಿನಲ್ಲಿ ಮನು 580 ಅಂಕ ಗಳಿಸಿದರು. ಹಂಗೇರಿಯ ವೆರೋನಿಕಾ ಮೇಜರ್ (582) ಮೊದಲ ಸ್ಥಾನ ಪಡೆದರು. ದಕ್ಷಿಣ ಕೊರಿಯಾ ದಓ ಯೆ ಜಿನ್ (582) ಎರಡನೇ ಸ್ಥಾನ ಪಡೆದರು. ಮನು 580 ಅಂಕ ಪಡೆದು ಮೂರನೇ ಸ್ಥಾನ ಪಡೆದರು.
(3 / 5)
ಮನು ಆರು ಸಿರೀಸ್ಗಳಲ್ಲಿ ಕ್ರಮವಾಗಿ 97, 97, 98, 96, 96 ಮತ್ತು 96 ಅಂಕ ಗಳಿಸಿದರು. ಆದರೆ ಭಾರತದ ಮತ್ತೊಬ್ಬ ಶೂಟರ್ ರಿದಮ್ ಸಾಂಗ್ವಾನ್ 573 ಅಂಕ ಗಳಿಸಿ 15ನೇ ಸ್ಥಾನ ಪಡೆದರು. ಇದರೊಂದಿಗೆ ಫೈನಲ್ಗೆ ಅರ್ಹತೆ ಪಡೆಯಲು ವಿಫಲರಾದರು.
(4 / 5)
ಕಳೆದ ಟೊಕಿಯೊ ಒಲಿಂಪಿಕ್ಸ್ನಲ್ಲಿ ಶೂಟಿಂಗ್ನ 3 ವಿಭಾಗಗಳಲ್ಲಿ ಸ್ಪರ್ಧಿಸಿದ್ದ ಮನು, ಒಂದರಲ್ಲೂ ಫೈನಲ್ ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಆಗಲೂ ನೆಚ್ಚಿನ ಅಥ್ಲೀಟ್ ಆಗಿದ್ದರು. ಆದರೆ ಅವರ ಪದಕ ಗೆಲ್ಲುವ ಕನಸು ಭಗ್ನಗೊಂಡಿತ್ತು. ತನ್ನ ಮೊದಲ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲಲು ಸಾಧ್ಯವಾಗದ್ದಕ್ಕೆ ಶೂಟಿಂಗ್ ತ್ಯಜಿಸಲು ನಿರ್ಧರಿಸಿದ್ದರಂತೆ.
ಇತರ ಗ್ಯಾಲರಿಗಳು