ಇದು ಹೊಸ ಅಧ್ಯಾಯ, ಆದರೆ ಬಿಡಕ್ಕಾಗುತ್ತಾ ಹಳೆ ಸಂಪ್ರದಾಯ; ಆರ್ಸಿಬಿ ಸೋತ ಬೆನ್ನಲ್ಲೇ ಮೊದಲ ಪಂದ್ಯ ದೇವರಿಗೆ ಎಂದ ಫ್ಯಾನ್ಸ್
- CSK vs RCB IPL 2024: ಇದು ಹೊಸ ಅಧ್ಯಾಯ, ಆದರೆ ಬಿಡಕ್ಕಾಗುತ್ತಾ ಹಳೆ ಸಂಪ್ರದಾಯ, ಮೊದಲ ಪಂದ್ಯ ದೇವರಿಗೆ ಕಣಯ್ಯ ಎಂದು ಸೋತ ಬೆನ್ನಲ್ಲೇ ಆರ್ಸಿಬಿ ಅಭಿಮಾನಿಗಳು ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.
- CSK vs RCB IPL 2024: ಇದು ಹೊಸ ಅಧ್ಯಾಯ, ಆದರೆ ಬಿಡಕ್ಕಾಗುತ್ತಾ ಹಳೆ ಸಂಪ್ರದಾಯ, ಮೊದಲ ಪಂದ್ಯ ದೇವರಿಗೆ ಕಣಯ್ಯ ಎಂದು ಸೋತ ಬೆನ್ನಲ್ಲೇ ಆರ್ಸಿಬಿ ಅಭಿಮಾನಿಗಳು ತಮಗೆ ತಾವೇ ಸಮಾಧಾನ ಮಾಡಿಕೊಳ್ಳುತ್ತಿದ್ದಾರೆ.
(1 / 7)
17ನೇ ಆವೃತ್ತಿಯ ಐಪಿಎಲ್ನ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 6 ವಿಕೆಟ್ಗಳಿಂದ ಸೋಲನುಭವಿಸಿತು.
(PTI)(2 / 7)
ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಫಾಫ್ ಡು ಪ್ಲೆಸಿಸ್ ಪಡೆಯು ಮೊದಲು ಬ್ಯಾಟಿಂಗ್ ನಡೆಸಿತು. 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತು.
(PTI)(3 / 7)
174 ರನ್ಗಳ ಬೆನ್ನಟ್ಟಿದ ಋತುರಾಜ್ ಗಾಯಕ್ವಾಡ್ ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ 18.4 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಗೆದ್ದು ಬೀಗಿತು. ಪಂದ್ಯ ಸೋತರೂ ಆರ್ಸಿಬಿ ಅಭಿಮಾನಿಗಳು ಈ ಸಲ ಕಪ್ ನಮ್ದೇ ಎಂದು ಹೇಳುತ್ತಿದ್ದಾರೆ.
(AFP)(4 / 7)
ಇದು ಹೊಸ ಅಧ್ಯಾಯ, ಆದರೆ ಬಿಡಕ್ಕಾಗುತ್ತಾ ಹಳೆ ಸಂಪ್ರದಾಯ, ಮೊದಲ ಪಂದ್ಯ ದೇವರಿಗೆ ಕಣಯ್ಯ ಎಂದು ಸೋತ ಬೆನ್ನಲ್ಲೇ ಆರ್ಸಿಬಿ ಅಭಿಮಾನಿಗಳು ಫೋಸ್ಟ್ ಮಾಡುತ್ತಿದ್ದಾರೆ.
(AP)(5 / 7)
ಹೊಸ ಅಧ್ಯಾಯ ಎಂದು ಹೇಳಲು ಕಾರಣ ಇದೆ. ಇತ್ತೀಚೆಗೆ ಮುಗಿದ ಅನ್ಬಾಕ್ಸ್ ಈವೆಂಟ್ನಲ್ಲಿ ಇದು ಆರ್ಸಿಬಿಯ ಹೊಸ ಅಧ್ಯಾಯ ಎಂದು ಹೇಳಿದ್ದರು. ಹಾಗಾಗಿ ಇನ್ಮುಂದೆ ಆರ್ಸಿಬಿ ಹಣೆಬರಹ ಬದಲಾಗಲಿದೆ ಎಂದು ನಿರೀಕ್ಷಿಸಲಾಗಿತ್ತು.
(PTI)(6 / 7)
ಆದರೆ ಹೊಸ ಅಧ್ಯಾಯ ಶುರುವಾದರೂ ಆರ್ಸಿಬಿ 16 ವರ್ಷಗಳಿಂದ ಬಂದ ತನ್ನ ಹಳೆಯ ಸಂಪ್ರದಾಯ ಮುಂದುವರೆಸಿಕೊಂಡು ಹೋಗಿದೆ. ಆರ್ಸಿಬಿ ಮೊದಲ ಪಂದ್ಯವನ್ನು ದೇವರಿಗೆ ಅರ್ಪಿಸಿದೆ.
(PTI)ಇತರ ಗ್ಯಾಲರಿಗಳು