ಕೋಳಿ ಸಾರು, ಮಲೆನಾಡು ಮತ್ತು ನಿಗೂಢ ಕೊಲೆ; ಕನ್ನಡದ ಸೀಟ್ ಎಡ್ಜ್ ಥ್ರಿಲ್ಲರ್ ಸಿನಿಮಾ ಶೀಘ್ರದಲ್ಲಿ ಒಟಿಟಿಗೆ
ಸ್ಯಾಂಡಲ್‌ವುಡ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ರೋಚಕ ಎನಿಸುವ ಸೀಟ್ ಎಡ್ಜ್ ಥ್ರಿಲ್ಲರ್ ಸಿನಿಮಾಗಳು ಪ್ರೇಕ್ಷಕರನ್ನು ಮತ್ತು ಒಟಿಟಿ ವೀಕ್ಷಕರನ್ನು ಸೆಳೆಯುತ್ತಿವೆ. ಅದರಂತೆ, ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ತೆರೆಕಂಡು ಮಿಶ್ರ ಪ್ರತಿಕ್ರಿಯೆ ಪಡೆದ ಚಿತ್ರವೀಗ ಇನ್ನೇನು ಶೀಘ್ರದಲ್ಲಿ ಒಟಿಟಿಗೆ ಆಗಮಿಸಲಿದೆ. ಮಲನಾಡ ಹಳ್ಳಿಯಲ್ಲಿನ ಒಂದು ನಿಗೂಢ ಕೊಲೆಯ ಕಥಾನಕವಿದು.
(1 / 10)
ಸ್ಯಾಂಡಲ್‌ವುಡ್‌ನಲ್ಲಿಯೂ ಇತ್ತೀಚಿನ ದಿನಗಳಲ್ಲಿ ರೋಚಕ ಎನಿಸುವ ಸೀಟ್ ಎಡ್ಜ್ ಥ್ರಿಲ್ಲರ್ ಸಿನಿಮಾಗಳು ಪ್ರೇಕ್ಷಕರನ್ನು ಮತ್ತು ಒಟಿಟಿ ವೀಕ್ಷಕರನ್ನು ಸೆಳೆಯುತ್ತಿವೆ. ಅದರಂತೆ, ಇತ್ತೀಚೆಗಷ್ಟೇ ಚಿತ್ರಮಂದಿರಗಳಲ್ಲಿ ತೆರೆಕಂಡು ಮಿಶ್ರ ಪ್ರತಿಕ್ರಿಯೆ ಪಡೆದ ಚಿತ್ರವೀಗ ಇನ್ನೇನು ಶೀಘ್ರದಲ್ಲಿ ಒಟಿಟಿಗೆ ಆಗಮಿಸಲಿದೆ.
( images\ Saregama Kannada)(2 / 10)
ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಮರ್ಡರ್ ಮಿಸ್ಟರಿ ಸಿನಿಮಾಗಳು ಬಂದಿವೆ. ಬರುತ್ತಲೇ ಇವೆ. ಇದೀಗ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ʻಅಜ್ಞಾತವಾಸಿʼ ಸಿನಿಮಾ ಒಟಿಟಿಗೆ ಆಗಮಿಸುವ ಸನಿಹದಲ್ಲಿದೆ.
(3 / 10)
ಮಲೆನಾಡಿನಲ್ಲಿ ನಡೆಯುವ ಕಥೆ. ಸಣ್ಣ ಹಳ್ಳಿಯೊಂದರಲ್ಲಿ ನಡೆಯುವ ಕಾಲ್ಪನಿಕ ಕಥೆಯೇ ಈ ʻಅಜ್ಞಾತವಾಸಿʼ. ಹಳ್ಳಿಯಲ್ಲಿ ಪೊಲೀಸ್ ಸ್ಟೇಷನ್ ಸ್ಥಾಪನೆಯಾಗಿ 25 ವರ್ಷವಾಗಿರುತ್ತದೆ. ಯಾವುದೇ ಸಣ್ಣ ಕೇಸ್ ಕೂಡ ಅಲ್ಲಿ ರಿಪೋರ್ಟ್ ಆಗಿರುವುದಿಲ್ಲ.
(4 / 10)
ಹೀಗಿರುವಾಗಲೇ 1997ರಲ್ಲಿ ಕೊಲೆ ಪ್ರಕರಣವೊಂದು ದಾಖಲಾಗುತ್ತದೆ. ಅನುಭವಿ ಇಲ್ಲದ ಪೊಲೀಸ್ ಅಲ್ಲಿಗೆ ಬಂದಾಗ ಈ ಕೇಸ್‌ಗೆ ಹೇಗೆ ಟ್ವಿಸ್ಟ್ ಸಿಗುತ್ತದೆ ಎಂಬುದೇ ʻಅಜ್ಞಾತವಾಸಿʼ ಸಿನಿಮಾದ ಕಥೆ.
(5 / 10)
ಈ ಹಿಂದೆ ʻಗುಲ್ಟುʼ ಸಿನಿಮಾ ಮಾಡಿ ಗೆದ್ದಿದ್ದ ನಿರ್ದೇಶಕ ಜನಾರ್ದನ್ ಚಿಕ್ಕಣ್ಣ, ಕಳೆದ ತಿಂಗಳ ಹಿಂದಷ್ಟೇ ಅಂದರೆ ಏಪ್ರಿಲ್ 11ರಂದು ʻಅಜ್ಞಾತವಾಸಿʼ ಸಿನಿಮಾವನ್ನು ಹಿಡಿದು ಚಿತ್ರಮಂದಿರಕ್ಕೆ ಬಂದಿದ್ದರು. ಇದೀಗ ಇದೇ ಸಿನಿಮಾ ತಿಂಗಳ ಬಳಿಕ ಒಟಿಟಿಗೆ ಆಗಮಿಸಲಿದೆ.
(6 / 10)
ಈಗಾಗಲೇ ಗೋದಿ ಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ, ಸಪ್ತ ಸಾಗರದಾಚೆ ಎಲ್ಲೋ ಸಿನಿಮಾಗಳನ್ನು ನಿರ್ದೇಶನ ಮಾಡಿದ ಹೇಮಂತ್ ಎಂ ರಾವ್, ʻಅಜ್ಞಾತವಾಸಿʼ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
(7 / 10)
ಟ್ರೇಲರ್‌ನಲ್ಲಿಯೇ ಈ ಸಿನಿಮಾ ಕುತೂಹಲ ಮೂಡಿಸಿತ್ತು. ಮಲನಾಡಿನ ಸೊಬಗು, ನಿಗೂಢ ಕೊಲೆ, ಕೋಳಿ ಸಾರು ಸಿನಿಮಾ ನೋಡುವಂತೆ ಮಾಡಿತ್ತು. ಇಂತಿಪ್ಪ ಸಿನಿಮಾದಲ್ಲಿ ರಂಗಾಯಣ ರಘು, ಪಾವನಾ ಗೌಡ, ಸಿದ್ದು ಮೂಲಿಮನೆ, ಶರತ್ ಲೋಹಿತಾಶ್ವ, ರವಿಶಂಕರ್ ಗೌಡ ಸೇರಿ ಇನ್ನೂ ಅನೇಕರು ನಟಿಸಿದ್ದಾರೆ.
(8 / 10)
ಚರಣ್ ರಾಜ್ ಸಂಗೀತ, ಅದ್ವೈತ್ ಗುರುಮೂರ್ತಿ ಕ್ಯಾಮೆರಾ ವರ್ಕ್ ಈ ಸಿನಿಮಾಕ್ಕಿದೆ. ಜನಾರ್ಧನ್ ಚಿಕ್ಕಣ್ಣ ಗುರುಗಳಾದ ಕೃಷ್ಣರಾಜ್ ʻಅಜ್ಞಾತವಾಸಿ; ಚಿತ್ರಕ್ಕೆ ಕಥೆ ಬರೆದ್ದಾರೆ. ಭರತ್ ಎಂ.ಸಿ ಸಂಕಲನಕಾರರಾಗಿ, ಉಲ್ಲಾಸ್ ಹೈದೂರು ಕಲಾ ನಿರ್ದೇಶಕರಾಗಿ ಅಜ್ಞಾತವಾಸಿ ಚಿತ್ರದಲ್ಲಿ ಕಾರ್ಯನಿರ್ವಾಹಿಸಿದ್ದಾರೆ.
(9 / 10)
ಹಾಗಾದರೆ ಇದೇ ಸಿನಿಮಾ ಯಾವಾಗ ಮತ್ತು ಯಾವ ಒಟಿಟಿಗೆ ಬರಲಿದೆ ಎಂಬುದಕ್ಕೆ ಇದೀಗ ಉತ್ತರ ಸಿಕ್ಕಿದೆ. ಜೀ5 ಈ ಚಿತ್ರದ ಡಿಜಿಟಲ್ ಪ್ರಸಾರದ ಹಕ್ಕುಗಳನ್ನು ಪಡೆದುಕೊಂಡಿದ್ದು, ಇದೇ ತಿಂಗಳ 28ರಂದು ಸ್ಟ್ರೀಮಿಂಗ್ ಆರಂಭಿಸಲಿದೆ.
ಇತರ ಗ್ಯಾಲರಿಗಳು