Air Force Day: ವಾಯುಪಡೆ ದಿನ ಆಚರಿಸಿದ ಐಎಎಫ್‌, ಏರ್‌ಫೋರ್ಸ್‌ ಸಿಬ್ಬಂದಿಗಳ ಸಂಭ್ರಮ, ಸಾಹಸ, ನೆನಪಿನ ಚಿತ್ರಗಳನ್ನು ನೋಡಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Air Force Day: ವಾಯುಪಡೆ ದಿನ ಆಚರಿಸಿದ ಐಎಎಫ್‌, ಏರ್‌ಫೋರ್ಸ್‌ ಸಿಬ್ಬಂದಿಗಳ ಸಂಭ್ರಮ, ಸಾಹಸ, ನೆನಪಿನ ಚಿತ್ರಗಳನ್ನು ನೋಡಿ

Air Force Day: ವಾಯುಪಡೆ ದಿನ ಆಚರಿಸಿದ ಐಎಎಫ್‌, ಏರ್‌ಫೋರ್ಸ್‌ ಸಿಬ್ಬಂದಿಗಳ ಸಂಭ್ರಮ, ಸಾಹಸ, ನೆನಪಿನ ಚಿತ್ರಗಳನ್ನು ನೋಡಿ

  • ಭಾರತೀಯ ವಾಯುಪಡೆಯು ಆರಂಭವಾಗಿ ಇಂದು ಭರ್ತಿ 90 ವರ್ಷಗಳಾಗಿವೆ. ಅಕ್ಟೋಬರ್‌ 8, 1932ರಂದು ಐಎಎಫ್‌ ಸ್ಥಾಪನೆಯಾಗಿತ್ತು. ಐಎಎಫ್‌ಗೆ ತೊಂಬತ್ತು ವರ್ಷಗಳಾದ ಪ್ರಯುಕ್ತ ಚಂಡೀಗಢದ ಸುಖ್ನಾ ಲೇಕ್‌ನಲ್ಲಿ ಏರ್‌ ಫೋರ್ಸ್‌ ಡೇ ನಡೆಯುತ್ತಿದೆ. ದೆಹಲಿಯ ಹೊರಭಾಗದಲ್ಲಿ ವಾಯುಪಡೆ ದಿನ ಆಚರಿಸುತ್ತಿರುವುದು ಇದೇ ಮೊದಲು.

ಚಂಡೀಗಢದ ಏರ್‌ ಫೋರ್ಸ್‌ ಸ್ಟೇಷನ್‌ನಲ್ಲಿ ವಾಯುಪಡೆ ದಿನದ ಪ್ರಯುಕ್ತ ನಡೆಯುತ್ತಿರುವ ಪಥಸಂಚಲನ.
icon

(1 / 9)

ಚಂಡೀಗಢದ ಏರ್‌ ಫೋರ್ಸ್‌ ಸ್ಟೇಷನ್‌ನಲ್ಲಿ ವಾಯುಪಡೆ ದಿನದ ಪ್ರಯುಕ್ತ ನಡೆಯುತ್ತಿರುವ ಪಥಸಂಚಲನ.(PTI)

ಏರ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್‌, ವೆಸ್ಟರ್ನ್‌ ಏರ್‌ ಕಮಾಂಡ್‌, ಏರ್‌ ಮಾರ್ಷಲ್‌ ಶ್ರೀಕುಮಾರ್‌ ಪ್ರಭಾಕರಣ್‌ ಸೇರಿದಂತೆ ಹಿರಿಯ ಐಎಎಫ್‌ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.
icon

(2 / 9)

ಏರ್‌ ಆಫೀಸರ್‌ ಕಮಾಂಡಿಂಗ್‌ ಇನ್‌ ಚೀಫ್‌, ವೆಸ್ಟರ್ನ್‌ ಏರ್‌ ಕಮಾಂಡ್‌, ಏರ್‌ ಮಾರ್ಷಲ್‌ ಶ್ರೀಕುಮಾರ್‌ ಪ್ರಭಾಕರಣ್‌ ಸೇರಿದಂತೆ ಹಿರಿಯ ಐಎಎಫ್‌ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.(PTI)

ಪಥಸಂಚಲನದ ಬಳಿಕ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌. ಚೌದರಿ ಅವರು ಪೆರೇಡ್‌ ಅನ್ನು ಪರಿಶೀಲಿಸಿದ್ದಾರೆ. ಚಂಡೀಗಢದ ವಾಯುಪಡೆಯ ಸ್ಟೇಷನ್‌ನಲ್ಲಿ ಇಂದು ಸಂಭ್ರಮ, ಸಡಗರ, ಸಾಹಸದ ಕ್ಷಣಗಳು ನಡೆಯುತ್ತಿವೆ. ಸಾವಿರಾರು ಜನರು ಆಕಾಶದಲ್ಲಿ ಲೋಹದ ಹಕ್ಕಿಗಲ ಕಲರವ ನೋಡಲು ನೆರೆದಿದ್ದಾರೆ.
icon

(3 / 9)

ಪಥಸಂಚಲನದ ಬಳಿಕ ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌. ಚೌದರಿ ಅವರು ಪೆರೇಡ್‌ ಅನ್ನು ಪರಿಶೀಲಿಸಿದ್ದಾರೆ. ಚಂಡೀಗಢದ ವಾಯುಪಡೆಯ ಸ್ಟೇಷನ್‌ನಲ್ಲಿ ಇಂದು ಸಂಭ್ರಮ, ಸಡಗರ, ಸಾಹಸದ ಕ್ಷಣಗಳು ನಡೆಯುತ್ತಿವೆ. ಸಾವಿರಾರು ಜನರು ಆಕಾಶದಲ್ಲಿ ಲೋಹದ ಹಕ್ಕಿಗಲ ಕಲರವ ನೋಡಲು ನೆರೆದಿದ್ದಾರೆ.(PTI)

ಇಂದು ಆಗಸದಲ್ಲಿ 80ಕ್ಕೂ ಹೆಚ್ಚು ಮಿಲಿಟರಿ ಏರ್‌ಕ್ರಾಫ್ಟ್‌ಗಳು ಮತ್ತು ಹೆಲಿಕಾಪ್ಟರ್‌ಗಳು ಭಾಗವಹಿಸಲಿವೆ. ಆಕಾಶದಲ್ಲಿ ವಾಯುಪಡೆಯ ವಿಮಾನಗಳ ಮಾರ್ದನಿ ಕಣ್ತುಂಬಿಕೊಳ್ಳಲು ಎಲ್ಲರೂ ಕಾತರರಾಗಿದ್ದಾರೆ.
icon

(4 / 9)

ಇಂದು ಆಗಸದಲ್ಲಿ 80ಕ್ಕೂ ಹೆಚ್ಚು ಮಿಲಿಟರಿ ಏರ್‌ಕ್ರಾಫ್ಟ್‌ಗಳು ಮತ್ತು ಹೆಲಿಕಾಪ್ಟರ್‌ಗಳು ಭಾಗವಹಿಸಲಿವೆ. ಆಕಾಶದಲ್ಲಿ ವಾಯುಪಡೆಯ ವಿಮಾನಗಳ ಮಾರ್ದನಿ ಕಣ್ತುಂಬಿಕೊಳ್ಳಲು ಎಲ್ಲರೂ ಕಾತರರಾಗಿದ್ದಾರೆ.(PTI)

ವಿವಿಧ ಬಗೆಯ ಸಾಹಸ ಪ್ರದರ್ಶನಗಳಿಗೆ ಚಂಡೀಗಢದ ಆಕಾಶ ಇಂದು ಸಾಕ್ಷಿಯಾಗಲಿದೆ. 
icon

(5 / 9)

ವಿವಿಧ ಬಗೆಯ ಸಾಹಸ ಪ್ರದರ್ಶನಗಳಿಗೆ ಚಂಡೀಗಢದ ಆಕಾಶ ಇಂದು ಸಾಕ್ಷಿಯಾಗಲಿದೆ. (PTI)

ರಾಷ್ಟ್ರಪತಿ ದ್ರೌಪದಿ ಮುರ್ಮು, ರಕ್ಷಣಾ ಸಚಿವರಾದ ರಾಜನಾಥ್‌ ಸಿಂಗ್‌ ಸೇರಿದಂತೆ ಹಲವು ಪ್ರಮುಖರು ಏರಿಯಲ್‌ ಶೋನಲ್ಲಿ ಭಾಗವಹಿಸಲಿದ್ದಾರೆ. 
icon

(6 / 9)

ರಾಷ್ಟ್ರಪತಿ ದ್ರೌಪದಿ ಮುರ್ಮು, ರಕ್ಷಣಾ ಸಚಿವರಾದ ರಾಜನಾಥ್‌ ಸಿಂಗ್‌ ಸೇರಿದಂತೆ ಹಲವು ಪ್ರಮುಖರು ಏರಿಯಲ್‌ ಶೋನಲ್ಲಿ ಭಾಗವಹಿಸಲಿದ್ದಾರೆ. (AFP)

ಇಂಗ್ಲೆಂಡ್‌ನ ರಾಯಲ್‌ ಏರ್‌ ಫೋರ್ಸ್‌ಗೆ ಬೆಂಬಲ ನೀಡುವ ಶಾಖೆಯಾಗಿ 1932ರಲ್ಲಿ ಭಾರತೀಯ ವಾಯುಪಡೆಯನ್ನು ಸ್ಥಾಪಿಸಲಾಗಿತ್ತು. ಈ ತೊಂಬತ್ತು ವರ್ಷಗಳಲ್ಲಿ ಜಗತ್ತೇ ಬೆರಗಾಗಿ ನೋಡುವಂತೆ ಭಾರತೀಯ ವಾಯುಪಡೆಯು ರಕ್ಷಣಾ ಕ್ಷೇತ್ರದಲ್ಲಿ ಮುಂದುವರೆದಿದೆ.
icon

(7 / 9)

ಇಂಗ್ಲೆಂಡ್‌ನ ರಾಯಲ್‌ ಏರ್‌ ಫೋರ್ಸ್‌ಗೆ ಬೆಂಬಲ ನೀಡುವ ಶಾಖೆಯಾಗಿ 1932ರಲ್ಲಿ ಭಾರತೀಯ ವಾಯುಪಡೆಯನ್ನು ಸ್ಥಾಪಿಸಲಾಗಿತ್ತು. ಈ ತೊಂಬತ್ತು ವರ್ಷಗಳಲ್ಲಿ ಜಗತ್ತೇ ಬೆರಗಾಗಿ ನೋಡುವಂತೆ ಭಾರತೀಯ ವಾಯುಪಡೆಯು ರಕ್ಷಣಾ ಕ್ಷೇತ್ರದಲ್ಲಿ ಮುಂದುವರೆದಿದೆ.(PTI)

ವಾಯುಪಡೆ ದಿನದ ಮುನ್ನ ದಿನಾ ಚೀಫ್‌ ಆಫ್‌ ಡಿಫೆನ್ಸ್‌ ಸ್ಟಾಫ್‌ (ಸಿಡಿಎಸ್‌) ಜನರಲ್‌ ಅನಿಲ್‌ ಚೌಹ್ವಾನ್‌, ನೌಕಾಪಡೆಯ ಮುಖ್ಯಸ್ಥರಾದ ಆರ್‌. ಹರಿಕುಮಾರ್‌, ಏರ್‌ ಸ್ಟಾಫ್‌ ಚೀಫ್‌, ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌. ಚೌಧರಿ, ಆರ್ಮಿ ಸ್ಟಾಫ್‌ ಜನರಲ್‌ ಮನೋಜ್‌ ಪಾಂಡೆ ಅವರು ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.
icon

(8 / 9)

ವಾಯುಪಡೆ ದಿನದ ಮುನ್ನ ದಿನಾ ಚೀಫ್‌ ಆಫ್‌ ಡಿಫೆನ್ಸ್‌ ಸ್ಟಾಫ್‌ (ಸಿಡಿಎಸ್‌) ಜನರಲ್‌ ಅನಿಲ್‌ ಚೌಹ್ವಾನ್‌, ನೌಕಾಪಡೆಯ ಮುಖ್ಯಸ್ಥರಾದ ಆರ್‌. ಹರಿಕುಮಾರ್‌, ಏರ್‌ ಸ್ಟಾಫ್‌ ಚೀಫ್‌, ಏರ್‌ ಚೀಫ್‌ ಮಾರ್ಷಲ್‌ ವಿ.ಆರ್‌. ಚೌಧರಿ, ಆರ್ಮಿ ಸ್ಟಾಫ್‌ ಜನರಲ್‌ ಮನೋಜ್‌ ಪಾಂಡೆ ಅವರು ನವದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು.(Indian Air Force Twitter)

1932ರಲ್ಲಿ ಅಸ್ತಿತ್ವಕ್ಕೆ ಬಂದ ವಾಯುಸೇನೆಯು ಬ್ರಿಟಿಷ್‌ ಅಧಿಪತ್ಯ ಇರುವಾಗಲೇ ಸೇನೆಗೆ ಸೇರ್ಪಡೆಯಾಯಿತು. ಮೊದಲಿಗೆ ವಾಯುಪಡೆಯನ್ನು ರಾಯಲ್‌ ಇಂಡಿಯನ್‌ ಏರ್‌ಫೋರ್ಸ್‌ ಎಂದು ಕರೆಯಲಾಗುತಿತ್ತು. ಆದರೆ ಸ್ವಾತಂತ್ರ್ಯ ಬಂದ ನಂತರ ರಾಯಲ್‌ ಪದ ತೆಗೆದು ಹಾಕಲಾಯಿತು. ವಾಯುಸೇನೆಯ ನಂಬರ್‌ ಒನ್‌ ಸ್ಕ್ವಾಡ್ರನ್‌ 1933ರಲ್ಲಿ ಕರಾಚಿಯಲ್ಲಿ ಕಾರ್ಯಸ್ಥಿತಿಗೆ ಬಂದಿತು. ಆಗ ಇದ್ದಿದ್ದು ಕೇವಲ ಐದು ಪೈಲಟ್‌ಗಳು. ಕೇವಲ ನಾಲ್ಕು ವಿಮಾನಗಳನ್ನು ಹೊಂದಿದ್ದ ವಾಯುಪಡೆ ಈಗ 2 ಸಾವಿರಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಹೊಂದಿದೆ.
icon

(9 / 9)

1932ರಲ್ಲಿ ಅಸ್ತಿತ್ವಕ್ಕೆ ಬಂದ ವಾಯುಸೇನೆಯು ಬ್ರಿಟಿಷ್‌ ಅಧಿಪತ್ಯ ಇರುವಾಗಲೇ ಸೇನೆಗೆ ಸೇರ್ಪಡೆಯಾಯಿತು. ಮೊದಲಿಗೆ ವಾಯುಪಡೆಯನ್ನು ರಾಯಲ್‌ ಇಂಡಿಯನ್‌ ಏರ್‌ಫೋರ್ಸ್‌ ಎಂದು ಕರೆಯಲಾಗುತಿತ್ತು. ಆದರೆ ಸ್ವಾತಂತ್ರ್ಯ ಬಂದ ನಂತರ ರಾಯಲ್‌ ಪದ ತೆಗೆದು ಹಾಕಲಾಯಿತು. ವಾಯುಸೇನೆಯ ನಂಬರ್‌ ಒನ್‌ ಸ್ಕ್ವಾಡ್ರನ್‌ 1933ರಲ್ಲಿ ಕರಾಚಿಯಲ್ಲಿ ಕಾರ್ಯಸ್ಥಿತಿಗೆ ಬಂದಿತು. ಆಗ ಇದ್ದಿದ್ದು ಕೇವಲ ಐದು ಪೈಲಟ್‌ಗಳು. ಕೇವಲ ನಾಲ್ಕು ವಿಮಾನಗಳನ್ನು ಹೊಂದಿದ್ದ ವಾಯುಪಡೆ ಈಗ 2 ಸಾವಿರಕ್ಕೂ ಹೆಚ್ಚು ಯುದ್ಧ ವಿಮಾನಗಳನ್ನು ಹೊಂದಿದೆ.(Indian Air Force Twitter)


ಇತರ ಗ್ಯಾಲರಿಗಳು