Tulip Festival: ದೆಹಲಿಯ ಟುಲಿಪ್ ಉತ್ಸವದ ಬಗ್ಗೆ ನಿಮಗೆಷ್ಟು ಗೊತ್ತು?: ಇಲ್ಲಿದೆ ನೋಡಿ ಮಾಹಿತಿ..
- ಶಾಂತಿ ಪಥ ಮತ್ತು ಅದರ ಸುತ್ತಮುತ್ತಲಿನ ಹಲವಾರು ವೃತ್ತಗಳು ನೆದರ್‌ಲ್ಯಾಂಡ್‌ನಿಂದ ಆಮದು ಮಾಡಿಕೊಳ್ಳಲಾದ ಸಾವಿರಾರು ಕೆಂಪು ಮತ್ತು ಬಿಳಿ ಟುಲಿಪ್‌ಗಳಿಂದ ಅಲಂಕರಿಸಲ್ಪಟ್ಟಿವೆ.
- ಶಾಂತಿ ಪಥ ಮತ್ತು ಅದರ ಸುತ್ತಮುತ್ತಲಿನ ಹಲವಾರು ವೃತ್ತಗಳು ನೆದರ್‌ಲ್ಯಾಂಡ್‌ನಿಂದ ಆಮದು ಮಾಡಿಕೊಳ್ಳಲಾದ ಸಾವಿರಾರು ಕೆಂಪು ಮತ್ತು ಬಿಳಿ ಟುಲಿಪ್‌ಗಳಿಂದ ಅಲಂಕರಿಸಲ್ಪಟ್ಟಿವೆ.
(1 / 8)
ದೆಹಲಿಯ ಶಾಂತಿಪಥದ ಹುಲ್ಲುಹಾಸಿನಲ್ಲಿ, ಹೊಸ ದೆಹಲಿ ಮುನ್ಸಿಪಲ್ ಕೌನ್ಸಿಲ್ (ಎನ್‌ಡಿಎಂಸಿ) 13 ದಿನಗಳ ಟುಲಿಪ್ ಉತ್ಸವವನ್ನು ವಸಂತ ಋತುವನ್ನು ಘೋಷಿಸಲು ಆಯೋಜಿಸಿದೆ. ಫೆಬ್ರುವರಿ 14 ರಂದು ಆರಂಭವಾದ ಈ ಉತ್ಸವವು, ಫೆಬ್ರವರಿ 26ರವರೆಗೆ ನಡೆಯಲಿದೆ.(PTI)
(3 / 8)
ಎನ್‌ಡಿಎಂಸಿ ವತಿಯಿಂದ ಜನವರಿ ಮೊದಲ ವಾರದಲ್ಲಿ ನೆದರ್‌ಲ್ಯಾಂಡ್‌ನಿಂದ 1.24 ಲಕ್ಷ ಟುಲಿಪ್ ಗಿಡಗಳನ್ನು ತಂದು ಶಾಂತಿಪಥ ಉದ್ಯಾನವನದಲ್ಲಿ ನೆಡಲಾಗಿದೆ.(PTI)
(4 / 8)
"ಎನ್‌ಡಿಎಂಸಿ ಪ್ರದೇಶದ ಪ್ರತಿಯೊಂದು ಸ್ಥಳದಲ್ಲೂ ಟುಲಿಪ್ ಹೂವುಗಳೊಂದಿಗೆ ನಗರದ ಸೌಂದರ್ಯವನ್ನು ಹೆಚ್ಚಿಸಿದೆ. ಅಲ್ಲದೇ ಟುಲಿಪ್‌ಗಳ ಗಿಡಗಳ ಪ್ರಮಾಣವನ್ನು ದ್ವಿಗುಣಗೊಳಿಸಲಾಗಿದೆ.." ಎಂದು ನವದೆಹಲಿ ಮುನ್ಸಿಪಲ್ ಕೌನ್ಸಿಲ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.(PTI)
(5 / 8)
ಸುಮಾರು ಹದಿನೈದು ದಿನಗಳ ಕಾಲ ನಡೆಯುವ ಟುಲಿಪ್ ಉತ್ಸವದಲ್ಲಿ, ಛಾಯಾಗ್ರಹಣ ಸ್ಪರ್ಧೆಗಳನ್ನು ಕೂಡ ಆಯೋಜನೆ ಮಾಡಲಾಗಿದೆ.(PTI)
(6 / 8)
ಸುಂದರ್ ನರ್ಸರಿಯ ಲ್ಯಾಂಡ್‌ಸ್ಕೇಪಿಂಗ್‌ಗೆ ಸಂಬಂಧಿಸಿದ ಎನ್‌ಜಿಒ ಗಿವ್ ಮಿ ಟ್ರೀಸ್ ಟ್ರಸ್ಟ್, ಟುಲಿಪ್ ವಾಕ್ ಕಲ್ಪನೆಯನ್ನು ಜಾರಿಗೆ ತಂದಿದೆ.(PTI)
(7 / 8)
ಎನ್‌ಡಿಎಂಸಿಯು 'ಹೆರಿಟೇಜ್ ಫೋಟೋಗ್ರಫಿ ಕ್ಲಬ್' ಸಹಯೋಗದೊಂದಿಗೆ ಛಾಯಾಗ್ರಹಣ ಉತ್ಸಾಹಿಗಳಿಗೆ ಟುಲಿಪ್‌ಗಳ ಚಿತ್ರಗಳನ್ನು ಕ್ಲಿಕ್ ಮಾಡಿ ಮತ್ತು ಅವುಗಳನ್ನು ಸ್ಪರ್ಧೆಗೆ ಸಲ್ಲಿಸಲು ಆಹ್ವಾನಿಸಿದೆ.(HT Photo)
ಇತರ ಗ್ಯಾಲರಿಗಳು