ಆಳ್ವಾಸ್ ವಿರಾಸತ್ 2024; ಮೂಡಬಿದಿರೆಯಲ್ಲಿ ವಿರಾಸತ್ ಸಂಭ್ರಮಕ್ಕೆ ಮುನ್ನುಡಿ, ಇಲ್ಲಿವೆ ಕೆಲವು ಆಕರ್ಷಕ ಫೋಟೋಸ್
Alvas Virasat 2024; ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆಯಲ್ಲಿ ಇಂದಿನಿಂದ ಡಿಸೆಂಬರ್ 15ರ ತನಕ ಆಳ್ವಾಸ್ ವಿರಾಸತ್ 2024ರ ಸಂಭ್ರಮ, ಸಡಗರ. ಕೃಷಿ, ಆಹಾರ, ಫಲಪುಷ್ಪ, ಕರಕುಶಲ, ಪ್ರಾಚ್ಯವಸ್ತು, ಚಿತ್ರಕಲೆ ಸೇರಿ ವಿವಿಧ ಮೇಳಗಳಿಗೆ ಚಾಲನೆ ಸಿಕ್ಕಿದೆ. ಕೆಲವು ಆಕರ್ಷಕ ಫೋಟೋಗಳು ಇಲ್ಲಿವೆ. (ವರದಿ- ಹರೀಶ್ ಮಾಂಬಾಡಿ, ಮಂಗಳೂರು)
(1 / 11)
ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕ್ಯಾಂಪಸ್‌ನಲ್ಲಿ ಇಂದು (ಡಿಸೆಂಬರ್ 10) 30ನೇ ವರ್ಷದ ಆಳ್ವಾಸ್ ವಿರಾಸತ್ ಕಾರ್ಯಕ್ರಮಕ್ಕೆ ಚಾಲನೆ ಸಿಕ್ಕಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥ ಡಾ. ಮೋಹನ್ ಆಳ್ವಾ ಅವರು ಸಭಿಕರನ್ನು ಉದ್ದೇಶಿಸಿ ಮಾತನಾಡಿದರು.
(2 / 11)
ಆಳ್ವಾಸ್ ವಿರಾಸತ್ 2024 ಕಾರ್ಯಕ್ರಮ ಡಿಸೆಂಬರ್ 15ರ ತನಕ ನಡೆಯಲಿದ್ದು, ಉಡುಪು, ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟಕ್ಕೂ ಅವಕಾಶ ನೀಡಿದೆ.
(3 / 11)
ಆಳ್ವಾಸ್ ವಿರಾಸತ್ ಕಾರ್ಯಕ್ರಮಕ್ಕೆ ಆಗಮಿಸಿದವರು ಪುಷ್ಪಾಂಲಕಾರ, ವಿವಿಧ ಪ್ರತಿಕೃತಿಗಳಿಗೆ ಮನಸೋಲುತ್ತಿದ್ದು, ಫೋಟೋಗಳನ್ನು ತೆಗೆದುಕೊಳ್ಳುತ್ತಿದ್ದಾರೆ.
(4 / 11)
ವಿದ್ಯಾರ್ಥಿನಿಯರು ಮತ್ತು ಮಹಿಳೆಯರು ತಮ್ಮ ಅಲಂಕಾರಕ್ಕೆ ಬೇಕಾದ ವಸ್ತುಗಳ ಕಡೆಗೆ ಆಕರ್ಷಿತರಾದರೆ, ವಿದ್ಯಾರ್ಥಿಗಳು ಉಡುಪುಗಳ ಕಡೆಗೆ ಆಕರ್ಷಿತರಾದುದು ಕಂಡುಬಂತು.
ಇತರ ಗ್ಯಾಲರಿಗಳು