Ambareesh 71st Birthday: ಜೇಬಿನಿಂದ ಹಣ ತೆಗೆದು ಎಂದಿಗೂ ದುಡ್ಡು ಎಣಿಸದೆ ಕಷ್ಟದಲ್ಲಿದ್ದವರಿಗೆ ನೀಡುತ್ತಿದ್ದ ಕಲಿಯುಗ ಕರ್ಣ ಅಂಬರೀಶ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ambareesh 71st Birthday: ಜೇಬಿನಿಂದ ಹಣ ತೆಗೆದು ಎಂದಿಗೂ ದುಡ್ಡು ಎಣಿಸದೆ ಕಷ್ಟದಲ್ಲಿದ್ದವರಿಗೆ ನೀಡುತ್ತಿದ್ದ ಕಲಿಯುಗ ಕರ್ಣ ಅಂಬರೀಶ್‌

Ambareesh 71st Birthday: ಜೇಬಿನಿಂದ ಹಣ ತೆಗೆದು ಎಂದಿಗೂ ದುಡ್ಡು ಎಣಿಸದೆ ಕಷ್ಟದಲ್ಲಿದ್ದವರಿಗೆ ನೀಡುತ್ತಿದ್ದ ಕಲಿಯುಗ ಕರ್ಣ ಅಂಬರೀಶ್‌

ಇಂದು, ಕನ್ನಡ ಚಿತ್ರರಂಗದ ರೆಬೆಲ್‌ ಸ್ಟಾರ್‌, ಅಭಿಮಾನಿಗಳ ಪ್ರೀತಿಯ ಅಂಬಿ, ಮಂಡ್ಯದ ಗಂಡು ಅಂಬರೀಶ್‌ ಅವರ 71ನೇ ಜನ್ಮದಿನ.

ಅಭಿಮಾನಿಗಳು ಅನ್ನದಾನ, ಅನಾಥಾಶ್ರಮದಲ್ಲಿ ಹಣ್ಣು ಹಂಪಲು ವಿತರಣೆ, ಸಿಹಿ ಹಂಚುವ ಮೂಲಕ ಅಂಬರೀಶ್‌ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಇಂದು  ಕುಟುಂಬದವರು, ಸಂಬಂಧಿಕರು ಸಮಾಧಿ ಬಳಿ ತೆರಳಿ ಅಂಬಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಇಟ್ಟು ಪೂಜೆ ಸಲ್ಲಿಸಲಿದ್ದಾರೆ. 
icon

(1 / 13)

ಅಭಿಮಾನಿಗಳು ಅನ್ನದಾನ, ಅನಾಥಾಶ್ರಮದಲ್ಲಿ ಹಣ್ಣು ಹಂಪಲು ವಿತರಣೆ, ಸಿಹಿ ಹಂಚುವ ಮೂಲಕ ಅಂಬರೀಶ್‌ ಹುಟ್ಟುಹಬ್ಬ ಆಚರಿಸುತ್ತಿದ್ದಾರೆ. ಇಂದು  ಕುಟುಂಬದವರು, ಸಂಬಂಧಿಕರು ಸಮಾಧಿ ಬಳಿ ತೆರಳಿ ಅಂಬಿಗೆ ಇಷ್ಟವಾದ ತಿಂಡಿ ತಿನಿಸುಗಳನ್ನು ಇಟ್ಟು ಪೂಜೆ ಸಲ್ಲಿಸಲಿದ್ದಾರೆ. (PC: Sumalatha Ambareesh Rebel Fans)

ಅಂಬರೀಶ್‌, ಕಲಿಯುಗ ಕರ್ಣ ಎಂದೇ ಹೆಸರಾಗಿದ್ದರು. ಚಿತ್ರರಂಗದಲ್ಲಿ, ವೈಯಕ್ತಿಕ ಜೀವನದಲ್ಲಿ, ರಾಜಕೀಯ ಜೀವನದಲ್ಲೇ ಆಗಲಿ, ಯಾರೊಂದಿಗೂ ಶತ್ರುತ್ವ ಕಟ್ಟಿಕೊಳ್ಳದೆ ಎಲ್ಲರೊಂದಿಗೆ ಪ್ರೀತಿಯಿಂದ ಬೆರೆಯುತ್ತಿದ್ದ ಅಜಾತ ಶತ್ರು ಅವರು. 
icon

(2 / 13)

'ತಾಯಿಗೊಬ್ಬ ಕರ್ಣ' ಚಿತ್ರದ ಮೂಲಕ ಅಂಬರೀಶ್‌ಗೆ ಕಲಿಯುಗ ಕರ್ಣ ಎಂದು ಹೆಸರು ಬಂತು ಎಂದು ಬಹಳಷ್ಟು ಜನರು ತಪ್ಪು ತಿಳಿದಿದ್ದಾರೆ. ಮಹಾಭಾರತದ ಕರ್ಣನಂತೆ ಅಂಬರೀಶ್‌ ತೆರೆ ಮೇಲೆ ಮಾತ್ರವಲ್ಲ ತೆರೆ ಹಿಂದೆ ಕೂಡಾ ಹೀರೋ ಆಗಿದ್ದರು.
icon

(3 / 13)

ಕಷ್ಟ ಎಂದು ಬರುತ್ತಿದ್ದವರಿಗೆ ಹಿಂದು ಮುಂದು ಯೋಚಿಸದೆ ಸಹಾಯ ಮಾಡುವ ಗುಣ ಅವರಿಗೆ ಇತ್ತು, ಅದೇ ಕಾರಣದಿಂದ ಅಂಬರೀಶ್‌ಗೆ ಕಲಿಯುಗ ಕರ್ಣ ಎಂದು ಎಲ್ಲರೂ ಕರೆಯುತ್ತಿದ್ದರು. 
icon

(4 / 13)

ತಾವು ನಟಿಸಿದ ಬಹುತೇಕ ಸಿನಿಮಾಗಳ ನಿರ್ಮಾಪಕರು ಅಂಬರೀಶ್‌ ಅವರಿಗೆ ನೀಡಬೇಕಿದ್ದ ಬಾಕಿ ಸಂಭಾವನೆ ನೀಡದಿದ್ದರೂ ಅಂಬರೀಶ್‌ ಎಂದಿಗೂ ಹಣ ನೀಡುವಂತೆ ಅವರನ್ನು ಕಾಡಿದವರಲ್ಲ. 
icon

(5 / 13)

ಹಾಗೇ ತಮ್ಮ ಬಳಿ ಕಷ್ಟ ಎಂದು ಬಂದವರಿಗೆ ಅಂಬರೀಶ್‌ ಒಂದು ಕ್ಷಣವೂ ಯೋಚನೆ ಮಾಡದೆ ಜೇಬಿನಿಂದ ಹಣ ತೆಗೆದುಕೊಡುತ್ತಿದ್ದರು ಎಂದು ಅವರನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ. ಆದರೆ ಅವರು ಕೊಡುವ ಹಣವನ್ನು ಎಂದಿಗೂ ಎಣಿಸುತ್ತಿರಲಿಲ್ಲ. 
icon

(6 / 13)

ಅಂಬರೀಶ್‌ ಮಾತು ಎಷ್ಟು ಒರಟಾದರೂ ಅವರ ಮನಸ್ಸು ಮಾತ್ರ ಬೆಣ್ಣೆಯಂತೆ, ಕಷ್ಟದಲ್ಲಿದ್ದವರಿಗೆ ಸ್ಪಂದಿಸುತ್ತಿದ್ದ ಹೃದಯ ಅವರದ್ದು. 
icon

(7 / 13)

ಅಂಬರೀಶ್‌ ಚಿತ್ರರಂಗಕ್ಕೆ ಬಂದಿದ್ದು 'ನಾಗರಹಾವು' ಚಿತ್ರದ ಮೂಲಕ, ಈ ಸಿನಿಮಾ ನಿರ್ದೇಶಕ ಪುಟ್ಟಣ್ಣ ಕಣಗಾಲ್‌ ಮುಂದೆ 'ಮಸಣದ ಹೂವು' ಸಿನಿಮಾಗಾಗಿ ಅಂಬಿ ಕಾಲ್‌ಶೀಟ್‌ ಕೇಳಿದಾಗ, ನೀವು ನನ್ನನ್ನು ಮನವಿ ಮಾಡುವ ಅವಶ್ಯಕತೆಯೇ ಇಲ್ಲ, ನೀವು ಯಾವ ಪಾತ್ರ ಕೊಟ್ಟರೂ ನಾನು ಮಾಡುತ್ತೇನೆ ಎಂದಿದ್ದರು. ಆ ಚಿತ್ರದಲ್ಲಿ ಅಂಬರೀಶ್‌ ಪಿಂಪ್‌ ಪಾತ್ರದಲ್ಲಿ ಅಭಿನಯಿಸಿದ್ದರು. 
icon

(8 / 13)

ಜನ ಸಾಮಾನ್ಯರು ಮಾತ್ರವಲ್ಲದೆ ಚಿತ್ರರಂಗದ ನಟ-ನಟಿಯರಿಗೆ ಕೂಡಾ ರೆಬೆಲ್‌ ಸ್ಟಾರ್‌ ಸಹಾಯ ಮಾಡಿದ್ದಾರೆ. 
icon

(9 / 13)

ನಟ ಪ್ರಭಾಕರ್‌ ನಿಧನರಾಗುವ ಕೆಲವು ದಿನಗಳ ಮುನ್ನ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರು.  ಹಣ ಕಟ್ಟಲಿಲ್ಲ ಎಂಬ ಕಾರಣಕ್ಕೆ ಆಸ್ಪತ್ರೆಯವರು ಮೃತ ದೇಹ ಕೊಡಲು ನಿರಾಕರಿಸಿದ್ದರು.  ವಿಷಯ ತಿಳಿದದ್ದೇ ತಡ ಅಂಬರೀಶ್‌ ಕೂಡಲೇ ಆಸ್ಪತ್ರೆಗೆ ತೆರಳಿ ಹಣ ನೀಡಿ, ಪ್ರಭಾಕರ್‌ ಅವರ ಮೃತದೇಹವನ್ನು ತಂದು ಮುಂದೆ ನಿಂತು ಅಂತ್ಯಸಂಸ್ಕಾರ ಮಾಡಿದ್ದರು. 
icon

(10 / 13)

ಖಳನಟ ಸುಧೀರ್‌ಗೆ ಕೂಡಾ ಅಂಬರೀಶ್‌ ಹಣದ ಸಹಾಯ ಮಾಡಿದ್ದರು. ಈ ವಿಚಾರವನ್ನು ಅವರ ಪತ್ನಿ ಇಂಟರ್‌ವ್ಯೂಗಳಲ್ಲಿ ಹೇಳಿದ್ದಾರೆ. ಅಂಬರೀಶ್‌ ಮೇಲಿನ ಅಭಿಮಾನ ಹಾಗೂ ಅವರ ಮಾಡಿದ ಸಹಾಯ ನೆನೆದು ಸುಧೀರ್‌, ತಮ್ಮ ಮನೆಗೆ ಅಂಬರೀಶ್‌ ನಿಲಯ ಎಂದು ಹೆಸರಿಟ್ಟರು. 
icon

(11 / 13)

ಬಲಗೈಲಿ ಕೊಟ್ಟದ್ದು ಎಡಗೈಗೆ ತಿಳಿಯಬಾರದು ಎಂಬಂತೆ ಇದ್ದರು ಅಂಬರೀಶ್‌, ತಾವು ಮಾಡಿದ ಸಹಾಯಕ್ಕೆ ಎಂದಿಗೂ ಅವರು ಪ್ರಚಾರ ಬಯಸಿದವರಲ್ಲ. 
icon

(12 / 13)

ಅಂಬರೀಶ್‌ ಇಂದು ನಮ್ಮೊಂದಿಗೆ ಇಲ್ಲ, ಆದರೆ ಕಲಿಯುಗ ಕರ್ಣ ಎಂದಿಗೂ ಅಭಿಮಾನಿಗಳ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಸಿರುತ್ತಾರೆ. 
icon

(13 / 13)

ಇತರ ಗ್ಯಾಲರಿಗಳು