Chaya Singh: 'ಇದು ಹಣದ ವಿಚಾರವಲ್ಲ, ನಮಗೆ ನಿಮ್ಮ ಹಣ ಬೇಡ'; ಪತಿ ಕೃಷ್ಣಾ ಜತೆ ಅಮೃತಧಾರೆ ಧಾರಾವಾಹಿ ನಟಿ ಛಾಯಾ ಸಿಂಗ್
- Actress Chaya Singh and Krishna: ಕನ್ನಡದ ಜನಪ್ರಿಯ ಧಾರಾವಾಹಿ ಅಮೃತಧಾರೆಯಲ್ಲಿ ಭೂಮಿಕಾಳಾಗಿ ಕಿರುತೆರೆ ವೀಕ್ಷಕರ ಹೃದಯ ಕದ್ದಿರುವ ನಟಿ ಛಾಯಾ ಸಿಂಗ್ ಅವರು ತನ್ನ ಪತಿಯನ್ನು ಭೇಟಿಯಾಗಿದ್ದಾರೆ. ಗಂಡ ಮತ್ತು ಹೆಂಡತಿ ಭೇಟಿಯಾಗುವುದರಲ್ಲಿ ವಿಶೇಷ ಏನಿದೆ ಎಂದು ನೀವು ಕೇಳಬಹುದು. ಮುಂದೆ ಓದಿ.
- Actress Chaya Singh and Krishna: ಕನ್ನಡದ ಜನಪ್ರಿಯ ಧಾರಾವಾಹಿ ಅಮೃತಧಾರೆಯಲ್ಲಿ ಭೂಮಿಕಾಳಾಗಿ ಕಿರುತೆರೆ ವೀಕ್ಷಕರ ಹೃದಯ ಕದ್ದಿರುವ ನಟಿ ಛಾಯಾ ಸಿಂಗ್ ಅವರು ತನ್ನ ಪತಿಯನ್ನು ಭೇಟಿಯಾಗಿದ್ದಾರೆ. ಗಂಡ ಮತ್ತು ಹೆಂಡತಿ ಭೇಟಿಯಾಗುವುದರಲ್ಲಿ ವಿಶೇಷ ಏನಿದೆ ಎಂದು ನೀವು ಕೇಳಬಹುದು. ಮುಂದೆ ಓದಿ.
(1 / 11)
Actress Chaya Singh and Krishna: ಕನ್ನಡದ ಜನಪ್ರಿಯ ಧಾರಾವಾಹಿ ಅಮೃತಧಾರೆಯಲ್ಲಿ ಭೂಮಿಕಾಳಾಗಿ ಕಿರುತೆರೆ ವೀಕ್ಷಕರ ಹೃದಯ ಕದ್ದಿರುವ ನಟಿ ಛಾಯಾ ಸಿಂಗ್ ಅವರು ತನ್ನ ಪತಿಯನ್ನು ಭೇಟಿಯಾಗಿದ್ದಾರೆ. ಗಂಡ ಮತ್ತು ಹೆಂಡತಿ ಭೇಟಿಯಾಗುವುದರಲ್ಲಿ ವಿಶೇಷ ಏನಿದೆ ಎಂದು ನೀವು ಕೇಳಬಹುದು. ಆದರೆ, ಇವರ ವಿಚಾರದಲ್ಲಿ ವಿಶೇಷ ಇದೆ. ಇವರಿಬ್ಬರು ತಮ್ಮ ವೃತ್ತಿಜೀವನಕ್ಕೆ ಸಮಯ ನೀಡುವ ಸಲುವಾಗಿ ಸಾಕಷ್ಟು ಸಮಯ ದೂರದೂರ ಇರುತ್ತಾರೆ.
(2 / 11)
Actress Chaya Singh and Krishna: ನಟ ಕೃಷ್ಣಾ ಅವರು ಚೆನ್ನೈನಲ್ಲಿ ಬಿಝಿ ಇರುತ್ತಾರೆ. ನಟಿ ಛಾಯಾ ಸಿಂಗ್ ಬೆಂಗಳೂರಿನಲ್ಲಿ ಸೀರಿಯಲ್ ಅಥವಾ ಸಿನಿಮಾ ಶೂಟಿಂಗ್‌ನಲ್ಲಿ ಬಿಝಿ ಇರುತ್ತಾರೆ. ಇವರಿಬ್ಬರು ಕೆಲವೊಮ್ಮೆ ಭೇಟಿಯಾಗುವಾಗ "ಎರಡು ವರ್ಷ" ಆಗುತ್ತದೆ ಎಂದು ಇತ್ತೀಚೆಗೆ ಯೂಟ್ಯೂಬ್ ಸಂದರ್ಶನದಲ್ಲಿ ಹೇಳಿದ್ದರು.
(3 / 11)
ನಟಿ ಛಾಯಾ ಸಿಂಗ್ ಮತ್ತು ಕೃಷ್ಣಾ ಅವರದ್ದು ಲವ್ ಸ್ಟೋರಿ. ಇವರಿಬ್ಬರು 2010 ರಲ್ಲಿ ಬಿಡುಗಡೆಯಾಗಿದ್ದ ಅನಂತಪುರಥು ವೀಡು ಎಂಬ ಸಿನಿಮಾದಲ್ಲಿ ಜತೆಯಾಗಿ ನಟಿಸಿದ್ದರು. ಛಾಯಾ ಸಿಂಗ್ ನಾಯಕಿ ಪಾತ್ರದಲ್ಲಿ ನಟಿಸಿದ್ದರು. ಕೃಷ್ಣಾ ಅವರು ವಿಲನ್ ಆಗಿದ್ದರು.
(4 / 11)
ಮೂಲತಃ ಕೃಷ್ಣ ಅವರು ದೆಹಲಿಯವರು. ಛಾಯಾ ಸಿಂಗ್ ನಮ್ಮ ಬೆಂಗಳೂರಿನಲ್ಲಿ ಬೆಳೆದವರು. ಅನಂತಪುರಥು ವೀಡು ಸಿನಿಮಾದಲ್ಲಿ ನಟಿಸುವ ಸಮಯದಲ್ಲಿ ಇವರಿಬ್ಬರು ಆರಂಭದಲ್ಲಿ ಪರಸ್ಪರ ಮಾತನಾಡುತ್ತ ಇರಲಿಲ್ಲ. ಕೃಷ್ಣ ಸೆಟ್‌ನಲ್ಲಿ ಪುಸ್ತಕ ಓದುವುದನ್ನು ಛಾಯಾ ಗಮನಿಸಿದ್ದರು. ಇವರು ಪುಸ್ತಕ ಕೇಳಿದರು. ಹೀಗೆ ಮೊದಲ ಮಾತು ಆರಂಭವಾಗಿತ್ತು.
(5 / 11)
ಸ್ನೇಹ ಪ್ರೇಮವಾಗಿ ಇವರಿಬ್ಬರ ಮದುವೆ 2012ರಲ್ಲಿ ನಡೆದಿತ್ತು. ಕೃಷ್ಣ ಅವರು ಆ ಸಮಯದಲ್ಲಿಯೇ ನಟನೆಯಲ್ಲಿ ಜನಪ್ರಿಯತೆ ಪಡೆದಿದ್ದರು. ದೈವಮಗಲ್ ಎಂಬ ಸೀರಿಯಲ್ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದರು. ರನ್, ನಯಗಿ, ಸೆಲ್ವಿ ಸಹನ, ಅರುವಿ ಹೀಗೆ ಹಲವು ಸೀರಿಯಲ್‌ಗಳಲ್ಲಿ ಇವರು ನಟಿಸಿದ್ದಾರೆ.
(6 / 11)
ಅದೆಲ್ಲ ಇರಲಿ, ಅದು ಗೊತ್ತು, ನಮಗೆ 'ಇದು ಹಣದ ವಿಚಾರವಲ್ಲ, ನಮಗೆ ನಿಮ್ಮ ಹಣ ಬೇಡ' ಎಂಬ ವಿಷಯದ ಬಗ್ಗೆ ಹೇಳಿ ಎನ್ನವಿರಾ. ಹೌದು, ಭೂಮಿಕಾ ತನ್ನ ಪತಿಯ ಪಕ್ಕದಲ್ಲಿ ಕುಳಿತು "It's not about the money, money, money We don't need your money, money, money" ಎಂದಿದ್ದಾರೆ. ಇದು ಹಣದ ವಿಷಯವಲ್ಲ, ನಮಗೆ ನಿಮ್ಮ ಹಣ ಬೇಕಿಲ್ಲ ಎಂದಿದ್ದಾರೆ. ಕನೆಕ್ಟ್ ಆಯ್ತಾ?
(7 / 11)
ನಿಮಗೆ ಗಾಯಕಿ ಜೆಸ್ಸಿ ಜೆ (Jessica Ellen Cornish) ಗೊತ್ತಿರಬಹುದು. ಆಕೆಯ ಜನಪ್ರಿಯ ಗೀತೆ "ಪ್ರೈಸ್ ಟ್ಯಾಗ್". ಆ ಹಾಡಿನಲ್ಲಿ ಮೇಲೆ ತಿಳಿಸಿದ ಸಾಲುಗಳು ಬರುತ್ತವೆ. 'ಇದು ಹಣದ ವಿಚಾರವಲ್ಲ, ನಮಗೆ ನಿಮ್ಮ ಹಣ ಬೇಡ' ಎಂಬ ಸಾಲುಗಳು ಆದ ಬಳಿಕ We just wanna make the world dance Forget about the price tag ಎಂಬ ಸಾಲುಗಳು ಬರುತ್ತವೆ.
(8 / 11)
ಜೆಸ್ಟಿ ಜೆಯ ಈ ಹಾಡಿಗೆ ನಟಿ ಛಾಯಾ ಸಿಂಗ್ ಮತ್ತು ಕೃಷ್ಣಾ ಅವರು ರೀಲ್ಸ್ ಮಾಡಿದ್ದಾರೆ. ಛಾಯಾ ಸಿಂಗ್ ಕ್ಯೂಟ್‌ಕ್ಯೂಟಾಗಿ ಕಾಣಿಸಿದ್ದಾರೆ. ತುಂಬಾ ಸಮಯದ ಬಳಿಕ ಇವರಿಬ್ಬರನ್ನು ಒಟ್ಟಿಗೆ ರೀಲ್ಸ್‌ನಲ್ಲಿ ನೋಡಿ ಫ್ಯಾನ್ಸ್ ಮತ್ತು ಅವರ ಆಪ್ತರು ಖುಷಿಗೊಂಡಿದ್ದಾರೆ.
(9 / 11)
ಇವರಿಬ್ಬರು ಭೇಟಿಯಾಗುವುದು ಅಪರೂಪ, ಕಡಿಮೆ ಸಮಯ ಭೇಟಿಯಾದರೂ ಅಗಾಧವಾಗಿ ಒಬ್ಬರನೊಬ್ಬರು ಪ್ರೀತಿಸುತ್ತಾರೆ ಎಂದು ಎಲ್ಲರಿಗೂ ಗೊತ್ತು. ಈ ರೀಲ್ಸ್ ನೋಡಿ ಮುದಗೊಂಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಛಾಯಾ ಸಿಂಗ್ ಖಾತೆಗೆ (chayasingh_16) ಹೋಗಿ ನೀವು ಕೂಡ ಆ ಹಾಡು ನೋಡಿ ಮೋಡಿಗೆ ಒಳಗಾಗಬಹುದು.
(10 / 11)
ಸದ್ಯ ಅಮೃತಧಾರೆ ಧಾರಾವಾಹಿಯಲ್ಲಿ ಇವರು ಭೂಮಿಕಾ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಗೌತಮ್ ದಿವಾನ್ ಪತ್ನಿಯಾಗಿ ಸ್ಟ್ರಾಂಗ್ ವುಮೆನ್ ಕ್ಯಾರೆಕ್ಟರ್ ಇವರದ್ದು. ಜೋಡಿ ಅಂದರೆ ಹೀಗಿರಬೇಕು ಎಂಬಂತೆ ಭೂಮಿಕಾ ಮತ್ತು ಗೌತಮ್ ಇದ್ದಾರೆ. ಸದ್ಯ ಭೂಮಿಕಾ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
(11 / 11)
ಗೌತಮ್ ದಿವಾನ್ ಮನೆಯಲ್ಲಿ ನಡೆಯುತ್ತಿರುವ ಕೆಲವೊಂದು ಘಟನೆಗಳ ವಿವರ ಅವರಿಗೆ ತಿಳಿದಿಲ್ಲ. ಭೂಮಿಕಾಳನ್ನು ಕೊಲೆ ಮಾಡಲು ಜೈದೇವ್ ಪ್ರಯತ್ನಿಸಿದ್ದ. ಶಕುಂತಲಾ ದೇವಿ ಕೂಡ ಜ್ಯೂಸ್‌ಗೆ ವಿಷ ಹಾಕಿದ್ದಳು. ಆದರೆ, ಭೂಮಿಕಾ ಪಾರಾಗಿದ್ದಳು. ಕೆಲವು ಸಂಚಿಕೆಗಳ ಕಾಲ ಅಳುವ ಪಾತ್ರಗಳಲ್ಲಿ ಕಣ್ಣಿರಧಾರೆಯಾಗಿಸಿದ್ದ ಭೂಮಿಕಾ ಈಗ ಮತ್ತೆ ಸೀರಿಯಲ್‌ನೊಳಗಿನ ಕಥೆಯಲ್ಲಿ ಟ್ರ್ಯಾಕ್‌ಗೆ ಬಂದಿದ್ದಾರೆ.
ಇತರ ಗ್ಯಾಲರಿಗಳು