Amruthadhaare: ಅಮ್ಮ ಮನೆಗೆ ಬರೋ ಸುದ್ದಿ ಕೇಳಿ ಮಗುವಂತಾದ್ರು ಡುಮ್ಮ ಸಾರ್; ಭಾಗ್ಯಮ್ಮ, ಸುಧಾ ಬರ್ತಾರ ಇಲ್ವಾ? ಅಮೃತಧಾರೆ ಧಾರಾವಾಹಿ ಕಥೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಅಮ್ಮ ಮನೆಗೆ ಬರೋ ಸುದ್ದಿ ಕೇಳಿ ಮಗುವಂತಾದ್ರು ಡುಮ್ಮ ಸಾರ್; ಭಾಗ್ಯಮ್ಮ, ಸುಧಾ ಬರ್ತಾರ ಇಲ್ವಾ? ಅಮೃತಧಾರೆ ಧಾರಾವಾಹಿ ಕಥೆ

Amruthadhaare: ಅಮ್ಮ ಮನೆಗೆ ಬರೋ ಸುದ್ದಿ ಕೇಳಿ ಮಗುವಂತಾದ್ರು ಡುಮ್ಮ ಸಾರ್; ಭಾಗ್ಯಮ್ಮ, ಸುಧಾ ಬರ್ತಾರ ಇಲ್ವಾ? ಅಮೃತಧಾರೆ ಧಾರಾವಾಹಿ ಕಥೆ

  • Amruthadhaare Serial Today Episode: ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಗೌತಮ್‌ ದಿವಾನ್‌ ತನ್ನ ತಾಯಿ ಮತ್ತು ತಂಗಿ ಮನೆಗೆ ಬರುತ್ತಾರೆ ಎಂದು ಕಾತರದಿಂದ ಕಾಯುತ್ತಿದ್ದಾರೆ. ಅಕ್ಕರೆಯ ಅಮ್ಮ ಮನೆಗೆ ಬರೋ ಸುದ್ದಿ ಕೇಳಿ,ಮಗುವಂತಾದ್ರು ಡುಮ್ಮ ಸಾರ್ ಎಂದು ಜೀ ಕನ್ನಡ ವಾಹಿನಿ ಇಂದಿನ ಅಮೃತಧಾರೆ ಸೀರಿಯಲ್‌ನ ಎಪಿಸೋಡ್‌ನ ಪ್ರಮೋ ಪ್ರಕಟಿಸಿದೆ.  

ಇಂದಿನ ಅಮೃತಧಾರೆ ಧಾರಾವಾಹಿಯ ಸಂಚಿಕೆಯಲ್ಲಿ ಗೌತಮ್‌ ಅವರ ಕಾತರ, ನಿರೀಕ್ಷೆಯನ್ನು ನೋಡಬಹುದು. ಎಲ್ಲರೂ ಗೌತಮ್‌ ತಾಯಿ ಮತ್ತು ತಂಗಿ ಬರುವುದನ್ನು ನೋಡಲು ಕಾಯುತ್ತಿದ್ದಾರೆ. ಒಂದು ಕಡೆ ಅಜ್ಜಮ್ಮ ಮತ್ತು ಪಾರ್ಥ ಕಾಯುತ್ತಿದ್ದಾರೆ. 
icon

(1 / 11)

ಇನ್ನೊಂದೆಡೆ ಮಲ್ಲಿ ಮತ್ತು ಭೂಮಿಕಾ ಕೂಡ ಗೌತಮ್‌ ಅಮ್ಮ ಮತ್ತು ತಂಗಿಯ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಈ ಸಮಯದಲ್ಲಿ ಮಲ್ಲಿ "ಅಕ್ಕೋರೆ, ಭಾವನವರು ಎಳೆಗರು ಹಸುವಿಗಾಗಿ ಕೊರಳು ಎತ್ತಿ ಕಾಯುವಂತೆ ಕಾಣಿಸುತ್ತಿದ್ದಾರೆ" ಎಂದು ಹೇಳುತ್ತಾರೆ. 
icon

(2 / 11)

ಬೆಳಗ್ಗಿನಿಂದ ಒಂದು ಕಡೆ ಅವರು ನಿಂತಿಲ್ಲ. ಅಮ್ಮನಿಗಾಗಿ ಚಡಪಡಿಸುತ್ತಿದ್ದಾರೆ ಎಂದು ಭೂಮಿಕಾ ಹೇಳುತ್ತಾರೆ. ಈ ಮೂಲಕ ಎಲ್ಲರೂ ಕಾತರದಿಂದ ಕಾಯುವ ದೃಶ್ಯದ ಪ್ರಮೋವನ್ನು ಜೀ ಕನ್ನಡ ಪ್ರಕಟಿಸಿದೆ. 
icon

(3 / 11)

ಇದೇ ಸಮಯದಲ್ಲಿ ಶಕುಂತಲಾ ಗ್ಯಾಂಗ್‌ನ ಮನಸ್ಸಿನೊಳಗೆ ಬೆಂಕಿ ಎದ್ದಿದೆ. ಅಳಿಮಯ್ಯ ಮುಗೀತು ನಮ್ಮ ಕಥೆ ಎಂದು ಮನೆಹಾಳ ಮಾವನ ಆತಂಕದ ಮಾತು ಇರುತ್ತದೆ. ಶಕುಂತಲಾದೇವಿ ಮತ್ತು ಜೈದೇವ್‌ ಮುಖದಲ್ಲಿಯೂ ಆತಂಕ ಕಾಣಿಸಿದೆ.
icon

(4 / 11)

ಆ ಸಮಯದಲ್ಲಿ ಇನ್‌ಸ್ಪೆಕ್ಟರ್‌ ಬರುತ್ತಾರೆ. ಎಲ್ಲಿ ಸರ್‌ ನನ್ನ ತಾಯಿ ಮತ್ತು ತಂಗಿ ಎಂದು ಕೇಳುತ್ತಾರೆ. ಇನ್‌ಸ್ಪೆಕ್ಟರ್‌ ಏನೋ ಹೇಳಲು ಪ್ರಯತ್ನ ಪಡುವ ದೃಶ್ಯದೊಂದಿಗೆ ಪ್ರಮೋ ಮುಕ್ತಾಯಗೊಂಡಿದೆ. ಈ ಮೂಲಕ ಇಂದಿನ ಎಪಿಸೋಡ್‌ನಲ್ಲಿ ಗೌತಮ್‌ ತಂದೆ ಮತ್ತು ತಂಗಿ ಬರುತ್ತಾರೋ ಅಥವಾ ಇನ್ನೇನಾದರೂ ಆಗುತ್ತ ಎಂಬ ಕುತೂಹಲ ಎದ್ದಿದೆ.
icon

(5 / 11)

ಈ ಪ್ರಮೋಗೆ ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. ಖಂಡಿತಾ ಬರೋದಿಲ್ಲ ಎಂದು ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. "ಗೌತಮ್ ಅವರ ಇವತ್ತು ಅಮ್ಮ ಮನೆಗೆ ಬಂದರೆಈ ಧಾರಾವಾಹಿಯ ನಿರ್ದೇಶಕರು ತುಂಬಾ ಬುದ್ಧಿವಂತ ಅಂತ...... ಅವರು ಇವತ್ತು ಬರದೆ ಹೋದರೆ ಈ ಧಾರಾವಾಹಿಯ ನಿರ್ದೇಶಕರು ಶತ ಮೂರ್ಖರು ಅಂತ.... ಈ ನಿರ್ದೇಶಕರು ಹೇಗೆ ಅನ್ನುವುದನ್ನು ತಿಳಿದುಕೊಳ್ಳಲು ಇವತ್ತು ತಪ್ಪದೇ ಈ ಧಾರಾವಾಹಿಯನ್ನು ನೀಡುತ್ತೇವೆ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಒಟ್ಟಾರೆ ಎಲ್ಲರಲ್ಲಿಯೂ ಗೌತಮ್‌ ತಾಯಿ ಮತ್ತು ತಂಗಿಯ ಭೇಟಿಯನ್ನು ನೋಡುವ ಕಾತರ ಕಾಣಿಸುತ್ತಿದೆ. 
icon

(6 / 11)

ಈ ಪ್ರಮೋಗೆ ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. ಖಂಡಿತಾ ಬರೋದಿಲ್ಲ ಎಂದು ಸಾಕಷ್ಟು ಜನರು ಕಾಮೆಂಟ್‌ ಮಾಡಿದ್ದಾರೆ. "ಗೌತಮ್ ಅವರ ಇವತ್ತು ಅಮ್ಮ ಮನೆಗೆ ಬಂದರೆ
ಈ ಧಾರಾವಾಹಿಯ ನಿರ್ದೇಶಕರು ತುಂಬಾ ಬುದ್ಧಿವಂತ ಅಂತ...... ಅವರು ಇವತ್ತು ಬರದೆ ಹೋದರೆ ಈ ಧಾರಾವಾಹಿಯ ನಿರ್ದೇಶಕರು ಶತ ಮೂರ್ಖರು ಅಂತ.... ಈ ನಿರ್ದೇಶಕರು ಹೇಗೆ ಅನ್ನುವುದನ್ನು ತಿಳಿದುಕೊಳ್ಳಲು ಇವತ್ತು ತಪ್ಪದೇ ಈ ಧಾರಾವಾಹಿಯನ್ನು ನೀಡುತ್ತೇವೆ" ಎಂದು ಒಬ್ಬರು ಕಾಮೆಂಟ್‌ ಮಾಡಿದ್ದಾರೆ. ಒಟ್ಟಾರೆ ಎಲ್ಲರಲ್ಲಿಯೂ ಗೌತಮ್‌ ತಾಯಿ ಮತ್ತು ತಂಗಿಯ ಭೇಟಿಯನ್ನು ನೋಡುವ ಕಾತರ ಕಾಣಿಸುತ್ತಿದೆ. 

ಇದಕ್ಕೂ ಮೊದಲು ಜೈದೇವ್‌ಗೆ ಭಾಗ್ಯಮ್ಮನ ಮನೆ ದೊರಕಿತ್ತು. ಮನೆಯೊಳಗೆ ಭಾಗ್ಯಮ್ಮ ಇರುವುದನ್ನು ಖಾತ್ರಿ ಪಡಿಸಿಕೊಂಡಿದ್ದನು. ರಾತ್ರಿ ಆ ಮನೆಗೆ ಬೆಂಕಿ ಹಚ್ಚಲು ಪ್ಲ್ಯಾನ್‌ ಮಾಡಿದ್ದನು. ಅದೇ ರೀತಿ ರೌಡಿಗಳ ಮೂಲಕ ಮನೆಗೆ ಬೆಂಕಿ ಹಾಕಿದ್ದನು.
icon

(7 / 11)

ಆದರೆ, ಜೈದೇವ್‌ಗೆ ಎಂದಿನಂತೆ ಈ ಬಾರಿಯೂ ಸೋಲಾಗಿದೆ. ಹೆಲ್ತ್‌ ಚೆಕಪ್‌ಗೆ ಭಾಗ್ಯಮ್ಮಳನ್ನು ಅದೇ ರಾತ್ರಿ ಸುಧಾ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಹೀಗಾಗಿ, ಮನೆಯೊಳಗೆ ಬೆಂಕಿಗೆ ಆಹುತಿಯಾಗುವುದು ತಪ್ಪಿದೆ. ಭಾಗ್ಯಮ್ಮ, ಸುಧಾ ಮತ್ತು ಮಗು ಸೇಫ್‌ ಆಗಿದೆ. ಇದಾದ ಬಳಿಕ ಗೌತಮ್‌ಗೆ ಇನ್‌ಸ್ಪೆಕ್ಟರ್‌ ಕಾಲ್‌ ಮಾಡಿ ಅಮ್ಮ ಮತ್ತು ತಂಗಿ ಬಗ್ಗೆ ಮಾಹಿತಿ ದೊರಕಿದೆ ಎಂದಿದ್ದಾರೆ. 
icon

(8 / 11)

ನಿಮ್ಮ ತಾಯಿ ಮತ್ತು ತಂಗಿಯ ಬಗ್ಗೆ ಗೊತ್ತಿರುವವರು ಸಿಕ್ಕಿದ್ದಾರೆ. ಸಂಜೆಯೊಳಗೆ ಬರ್ತೇವೆ ಎಂದು ಪೊಲೀಸ್‌ ಮಾಹಿತಿ ನೀಡಿದ್ದಾರೆ. ಈ ಸುದ್ದಿ ಕೇಳಿ ಗೌತಮ್‌ ಖುಷಿಯಾಗಿದ್ದಾರೆ.ಅಮ್ಮ ಮತ್ತು ತಂಗಿ ಬರುತ್ತಿದ್ದಾರೆ ಎಂದು ಖುಷಿಯಿಂದ ಭೂಮಿಕಾಳಲ್ಲಿ ಹೇಳಿದ್ದಾರೆ. ಇಬ್ಬರೂ ಸಂಭ್ರಮಿಸಿದ್ದಾರೆ. ಈ ಸುದ್ದಿಯನ್ನು ಶಕುಂತಲಾ ದೇವಿಗೂ ಹೇಳಿದ್ದಾರೆ. ಇಂದಿನ ಸಂಚಿಕೆಯಲ್ಲಿ ಎಲ್ಲರೂ ಅಮ್ಮ ಮತ್ತು ತಂಗಿಯ ಆಗಮನಕ್ಕೆ ಕಾಯುತ್ತಿದ್ದಾರೆ. ಇನ್‌ಸ್ಪೆಕ್ಟರ್‌ ಏನು ಹೇಳುತ್ತಾರೆ ಎಂದು ಎಲ್ಲರೂ ಕಾಯುತ್ತಿದ್ದಾರೆ. 
icon

(9 / 11)

ಗೌತಮ್‌ ತಾಯಿ ಮತ್ತು ತಂಗಿಯ ಕಥೆ: ಇನ್ನೊಂದೆಡೆ ಗೌತಮ್‌ಗೆ ಡಿಟೆಕ್ಟಿವ್‌ ತಾಯಿ ಮತ್ತು ತಂಗಿಯ ಕುರಿತು ಸಾಕಷ್ಟು ಮಾಹಿತಿ ನೀಡುತ್ತಾರೆ. ತಮ್ಮ ಊರಿನಿಂದ ಹೊರಟಾಗ ಅಮ್ಮ ಮತ್ತು ತಂಗಿ ಇದ್ದ ಬಸ್‌ ಅಪಘಾತಗೊಂಡಿರುತ್ತದೆ. ಅವರಿಬ್ಬರು ಬದುಕಿರುತ್ತಾರೆ. ಅವರಿಬ್ಬರು ಒಂದು ಆಶ್ರಮದಲ್ಲಿದ್ದರು. ಆಶ್ರಮದಿಂದ ಮೂರು ವರ್ಷದ ಹಿಂದೆ ಬೆಂಗಳೂರಿಗೆ ಬಂದಿದ್ದರು. ಈಗ ಬೆಂಗಳೂರಲ್ಲಿಯೇ ಇದ್ದಾರೆ. ಎಲ್ಲಿ ಇದ್ದಾರೆ ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ ಎಂಬ ವಿವರವನ್ನು ಇತ್ತೀಚೆಗೆ ಡಿಟೆಕ್ಟಿವ್‌ ನೀಡಿರುತ್ತಾರೆ. ಹೀಗಾಗಿ, ಅಮ್ಮ ಮತ್ತು ತಂಗಿಯ ಹುಡುಕಾಟಕ್ಕೆ ವೇಗ ದೊರಕಿದೆ. ತನ್ನ ಸ್ನೇಹಿತ ಐಜಿಯ ನೆರವನ್ನೂ ಗೌತಮ್‌ ಪಡೆದಿದ್ದಾರೆ. 
icon

(10 / 11)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಬೃಂದಾವನ, ಸೀತಾರಾಮ ಮದುವೆ, ಭಾಗ್ಯಲಕ್ಷ್ಮಿ, ಅಣ್ಣಯ್ಯ ಸೇರಿದಂತೆ ಹಲವು ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು. 
icon

(11 / 11)

ಇತರ ಗ್ಯಾಲರಿಗಳು