Amruthadhaare: ಮಲ್ಲಿ ಹೊಟ್ಟೆಯಲ್ಲಿರುವ ಮಗುವಿಗೆ ಏನಾಯ್ತು? ಭೂಮಿಕಾಳ ಮುಂದೆ ಜೈದೇವ್- ದಿಯಾ ಅಕ್ರಮ ಸಂಬಂಧದ ಕಥೆ - ಅಮೃತಧಾರೆ ಧಾರಾವಾಹಿ
- Amruthadhaare serial: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಗೆ ಮಲ್ಲಿ ವಾಪಸ್ ಬಂದಿರುವುದರಿಂದ ಸೀರಿಯಲ್‌ಗೆ ಹೊಸ ಕಳೆ ಬಂದಿದೆ. ಇದೇ ಸಮಯದಲ್ಲಿ ಮಲ್ಲಿ ಹೊಟ್ಟೆಯಲ್ಲಿ ಮಗು ಇದೆಯೇ? ಜೈದೇವ್ ದಿಯಾ ಅಕ್ರಮ ಸಂಬಂಧದ ಕಥೆಯನ್ನು ಮಲ್ಲಿ ಭೂಮಿಕಾಳಿಗೆ ಹೇಳುವಳೇ- ಇಂದಿನ ಸಂಚಿಕೆಯ ಪ್ರೊಮೊದಲ್ಲಿ ಈ ಕುರಿತು ಒಂದಿಷ್ಟು ವಿವರ ನೀಡಲಾಗಿದೆ.
- Amruthadhaare serial: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಗೆ ಮಲ್ಲಿ ವಾಪಸ್ ಬಂದಿರುವುದರಿಂದ ಸೀರಿಯಲ್‌ಗೆ ಹೊಸ ಕಳೆ ಬಂದಿದೆ. ಇದೇ ಸಮಯದಲ್ಲಿ ಮಲ್ಲಿ ಹೊಟ್ಟೆಯಲ್ಲಿ ಮಗು ಇದೆಯೇ? ಜೈದೇವ್ ದಿಯಾ ಅಕ್ರಮ ಸಂಬಂಧದ ಕಥೆಯನ್ನು ಮಲ್ಲಿ ಭೂಮಿಕಾಳಿಗೆ ಹೇಳುವಳೇ- ಇಂದಿನ ಸಂಚಿಕೆಯ ಪ್ರೊಮೊದಲ್ಲಿ ಈ ಕುರಿತು ಒಂದಿಷ್ಟು ವಿವರ ನೀಡಲಾಗಿದೆ.
(1 / 14)
ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿ: ಗೌತಮ್ ದಿವಾನ್ ಎರಡನೇ ಮದುವೆ, ಭೂಮಿಕಾಳ ಕಣ್ಣೀರಧಾರೆ, ಇದಾದ ಬಳಿಕ ಭೂಮಿಕಾ ಮತ್ತು ಗೌತಮ್‌ನ "ಗರ್ಭಿಣಿ" ಕಾಳಜಿ ಸಂಚಿಕೆಗಳಿಂದ ಪ್ರೇಕ್ಷಕರಿಗೆ ಬೇಸರ ಹುಟ್ಟಿಸಿದ್ದ ಅಮೃತಧಾರೆ ಧಾರಾವಾಹಿಯ ಇತ್ತೀಚಿನ ಸಂಚಿಕೆಗಳ ನಂತರ ಇದೀಗ ಮತ್ತೆ ಹೊಸ ಚೈತನ್ಯ ಕಾಣಿಸಿಕೊಂಡಿದೆ. ನಿರ್ದೇಶಕರು ಮಲ್ಲಿ ವಿಷಯದಲ್ಲಿ ನೀಡಿದ ಟ್ವಿಸ್ಟ್ ವೀಕ್ಷಕರಿಗೆ ಖುಷಿ ನೀಡಿದೆ.
(2 / 14)
ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಪ್ರೊಮೊ ಪ್ರಕಟಿಸಿದೆ. ಈ ಪ್ರೊಮೊದಲ್ಲಿ ಒಂದಿಷ್ಟು ವಿಚಾರಗಳ ಸುಳಿವು ದೊರಕಿದೆ. ಇದೇ ಸಮಯದಲ್ಲಿ ಮಲ್ಲಿ ಗರ್ಭಿಣಿ ಹೌದೋ ಅಲ್ವೋ, ಎಲ್ಲಾದರೂ "ಮಗುವನ್ನು ತೆಗೆಸಿದ್ದಾರೆಯೇ" "ಅಬಾರ್ಷನ್ ಆಯ್ತೇ" ಇತ್ಯಾದಿ ಪ್ರಶ್ನೆಗಳೂ ಮೂಡಿವೆ.
(3 / 14)
ಈ ಹಿಂದೆ ಮಲ್ಲಿಯಾಗಿ ರಾಧಾ ಭಗವತಿ ನಟಿಸುತ್ತಿದ್ದರು. ಈಗ ಅನ್ವಿತಾ ಸಾಗರ್ ಮಲ್ಲಿಯಾಗಿ ಆಗಮಿಸಿದ್ದಾರೆ. ಈ ಸಂದರ್ಭದಲ್ಲಿ ಈಕೆಯ ಹೊಟ್ಟೆಯ ಮೇಲೆ ಸೋಷಿಯಲ್ ಮೀಡಿಯಾದಲ್ಲಿರುವ ಸಾಕಷ್ಟು ಜನರ ಕಣ್ಣು ಬಿದ್ದಿದೆ. ಹೊಟ್ಟೆಯಲ್ಲಿ ಮಗು ಇರುವುದೇ? ಎಂಬ ಸಂದೇಹವೂ ಕಾಡಿದೆ. ಇಂದಿನ ಸಂಚಿಕೆಯ ಪ್ರೊಮೊ ಕೆಲವೊಂದು ಅನುಮಾನಗಳಿಗೆ ಕಾರಣವಾಗಿದೆ.
(4 / 14)
ಜೈದೇವ್‌ನ ಗುಣನಡತೆ ಸರಿಯಾಗಿದೆ ಎಂದು ಮಲ್ಲಿ ಅಂದುಕೊಂಡಿದ್ದಳು. ಆದರೆ, ಆತನ ನವರಂಗಿ ಆಟವನ್ನು ಹೆಚ್ಚು ದಿನ ಮಲ್ಲಿಯಿಂದ ಮುಚ್ಚಿಡಲು ಆಗಿರಲಿಲ್ಲ. ಪ್ರತಿದಿನ ರಾತ್ರಿ ತಡವಾಗಿ ಬರುವುದು, ಕೆಲವೊಮ್ಮೆ ರಾತ್ರಿ ಬಾರದೆ ಇರುವುದು ಇತ್ಯಾದಿ ವರ್ತನೆಗಳನ್ನು ಜೈದೇವ್ ಮಾಡುತ್ತಿದ್ದ.
(5 / 14)
ಕೊನೆಗೆ ಜೈದೇವ್ ಮತ್ತು ದಿಯಾ ಸರಸದಲ್ಲಿ ಇರುವುದನ್ನು ಮಲ್ಲಿ ಕಣ್ಣಾರೆ ಕಂಡಿದ್ದಳು. ಅಲ್ಲಿಯವರೆಗೆ ಜೈದೇವ್ ಇಟ್ಟುಕೊಂಡಿದ್ದ ತುಸು ಭರವಸೆಯೂ ಅಲ್ಲಿಗೆ ಕೊನೆಗೊಂಡಿತ್ತು. ಈ ಸಮಯದಲ್ಲಿ ರಾಧಾ ಭಗವತಿಗೆ ಬೇರೆ ಸೀರಿಯಲ್‌ನಲ್ಲಿ ನಾಯಕಿಯಾಗುವ ಅವಕಾಶ ದೊರಕಿದ್ದಳು. ಅಜ್ಜನ ಮನೆಗೆ ಹೋಗುವ ನೆಪದಲ್ಲಿ ಆ ಮಲ್ಲಿ ಕಾಣೆಯಾಗಿದ್ದಳು.
(6 / 14)
ಈಗ ಹೊಸ ಮಲ್ಲಿ ಬಂದಿದ್ದಾಳೆ. ಆದರೆ, ಹೊಟ್ಟೆಯಲ್ಲಿರುವ ಮಗುವಿನ ಕುರಿತು ಕೆಲವು ಸಂದೇಹಗಳನ್ನು ಪ್ರೇಕ್ಷಕರಿಗೆ ಉಂಟು ಮಾಡಿದ್ದಾಳೆ. ಇಂದಿನ ಪ್ರಮೊದಲ್ಲಿ ಇರುವ ಕೆಲವು ಪ್ರಮುಖ ವಿಷಯಗಳ ವಿವರ ತಿಳಿಯೋಣ.
(7 / 14)
ಮಲ್ಲಿ ಮತ್ತು ಭೂಮಿಕಾ ಮಾತನಾಡುತ್ತಿದ್ದಾರೆ. ಇಬ್ಬರು ತುಂಬಾ ದಿನಗಳ ಬಳಿಕ ಭೇಟಿಯಾಗಿದ್ದಾರೆ. ಹೊಸ ಮಲ್ಲಿ "ಅಕೋರೆ" ಎಂದು ಅಪ್ಪಿಕೊಂಡಿದ್ದಾಳೆ. "ನಿಮಗೆ ಮಗು ಆಗುತ್ತಂತೆ" ಎಂದು ಮಲ್ಲಿಯು ಭೂಮಿಕಾಳಿಗೆ ಕಂಗ್ರಾಟ್ಸ್ ಹೇಳಿದ್ದಾರೆ.
(8 / 14)
ನೀವು ಪ್ರೆಗ್ನೆಂಟ್ ಆದ ಸುದ್ದಿ ಕೇಳಿ ಖುಷಿಯಾಯ್ತು. ನಿಮ್ಮ ಸೇವೆ ಮಾಡಬೇಕೆಂದು ಓಡೋದಿ ಬಂದೆ ಎಂದು ಮಲ್ಲಿ ಹೇಳುತ್ತಾಳೆ. ಅದಕ್ಕೆ ಭೂಮಿಕಾ "ನೀನೂ ಜೈದೇವ್ ಗುಡ್‌ನ್ಯೂಸ್ ನೀಡಬೇಕು" ಎಂದು ಭೂಮಿಕಾ ಹೇಳುತ್ತಾಳೆ. ಆಗ ಮಲ್ಲಿಗೆ "ಜೈದೇವ್ ಮತ್ತು ದಿಯಾಳ" ಆ ದೃಶ್ಯಗಳು ನೆನಪಿಗೆ ಬರುತ್ತವೆ.
(9 / 14)
ಈಕೆಯ ಬದಲಾದ ಮುಖವನ್ನು ನೋಡಿ ಭೂಮಿಕಾ "ಏನಾಯ್ತು" ಎಂದು ಗಾಬರಿಯಿಂದ ಕೇಳುತ್ತಾಳೆ. ಭೂಮಿಕಾಳಿಗೆ ಈಕೆ ಜೈದೇವ್‌ನ ಕಥೆ ಹೇಳಬಹುದೇ? ಈಕೆಯ ಗರ್ಭಕ್ಕೆ ತೊಂದರೆಯಾಗಿರುವುದೇ ಎಂಬ ಅನುಮಾನ ಮೂಡಿದೆ. ಈ ಅನುಮಾನ ಮೂಡಲು ಇನ್ನೊಂದು ಕಾರಣವೂ ಇದೆ.
(10 / 14)
ಈ ಹಿಂದೆ ರಾಧಾ ಭಗವತಿ ಮಲ್ಲಿಯಾಗಿದ್ದಾಗ ದೊಡ್ಡ ಹೊಟ್ಟೆಯಲ್ಲಿದ್ದಳು. ಬಸುರಿ, ಬಸುರು ಎಂದೆಲ್ಲ ದೊಡ್ಡ ಹೊಟ್ಟೆಯನ್ನಿಟ್ಟುಕೊಂಡು ಮೆಲ್ಲಮೆಲ್ಲಗೆ ನಡೆಯುತ್ತಿದ್ದಳು. ಆದರೆ, ಈಗಿನ ಮಲ್ಲಿ ಚಿಗರೆಯಂತೆ ಅತ್ತಿತ್ತ ಓಡುತ್ತಾರೆ. ಹೊಟ್ಟೆಯಲ್ಲಿ ಮಗು ಇರುವ ಯಾವುದೇ ಸೂಚನೆ ಇಲ್ಲ. ಸೀರಿಯಲ್‌ಗಳಲ್ಲಿ ಮಗು ಪಾತ್ರ ನಿಭಾಯಿಸುವುದು ಕಷ್ಟ. ಹೀಗಾಗಿ ನಿರ್ದೇಶಕರು ಐಡಿಯಾ ಮಾಡಿರಬಹುದು ಎಂದೂ ಕೆಲವರು ಹೇಳುತ್ತಿದ್ದಾರೆ.
(11 / 14)
ಒಂದು ಸೀರಿಯಲ್‌ನಲ್ಲಿ ಒಂದು ಪಾತ್ರವನ್ನು ಒಬ್ಬರು ಬಿಟ್ಟು ಹೋದಾಗ, ಆ ಸ್ಥಾನಕ್ಕೆ ಹೊಸ ನಟಿ ಬಂದಾಗ ವೀಕ್ಷಕರಿಗೆ ಅದನ್ನು ಅರಗಿಸಿಕೊಳ್ಳಲು "ಇವಳೇ ಆ ಮಲ್ಲಿ" ಎಂದು ಅರ್ಥಮಾಡಿಕೊಳ್ಳಲು ಒಂದಿಷ್ಟು ಸಮಯ ಬೇಕಾಗುತ್ತದೆ. ಈಗ ಹೊಸ ನಟಿ "ಅಕ್ಕೋರೆ ಅಕ್ಕೋರೆ" ಎಂದರೂ ರಾಧಾ ಭಗವತಿಯ "ಮುಗ್ಧತನ" ಕಾಣಿಸದು. ಇದೇ ಕಾರಣಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಆ ಮಲ್ಲಿಗೂ ಈ ಮಲ್ಲಿಗೂ ಕಂಪೇರ್ ಆರಂಭವಾಗಿದೆ.
(12 / 14)
ಬಣ್ಣ ಬಣ್ಣದ ಬದುಕು, ಸ್ನೇಹಚಕ್ರ, ಮಾಯಾಕನ್ನಡಿ, ಜೀವನ ಯಜ್ಞ ವಿರಾಟ ಪರ್ವ ಹಾಗೂ ತುಳು ಸಿನಿಮಾಗಳಾದ ದಂಡ್, ಪೆಟ್ಕಮ್ಮಿ, ಬಲೆ ಪುದರ್ ದೀಕ ಈ ಪ್ರೀತಿಗ್, ತುಡರ್ ಸೇರಿ ಹಲವು ಸಿನಿಮಾಗಳಲ್ಲಿ ನಟಿಸಿ ಅನುಭವ ಇರುವ ಅನ್ವಿತಾ ಈ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಬಹುದು.
(13 / 14)
ಅಮೃತಧಾರೆಯಲ್ಲಿ ಮಲ್ಲಿಯ ಜನ್ಮ ರಹಸ್ಯವೂ ಬಯಲಾಗುತ್ತಿದೆ. ಮಲ್ಲಿಯ ತಂದೆ ಬೇರೆ ಯಾರೂ ಅಲ್ಲ, ಅದು ರಾಜೇಂದ್ರ ಭೂಪತಿ ಎಂಬ ಸತ್ಯ ಗೌತಮ್ ದಿವಾನ್‌ಗೆ ಗೊತ್ತಾಗಿದೆ. ಇದು ಕೂಡ ಸೀರಿಯಲ್‌ನ ಕುತೂಹಲ ಹೆಚ್ಚಿಸಿದೆ.
ಇತರ ಗ್ಯಾಲರಿಗಳು