ಅಮೃತಧಾರೆ ಧಾರಾವಾಹಿಯಲ್ಲಿ ಮಹಾ ತಿರುವು: ತಾಯಿ, ತಂಗಿಯ ಭೇಟಿಗೆ ಗೌತಮ್‌ನ ದೇವಾಲಯಕ್ಕೆ ಕರೆತಂದ ಭೂಮಿಕಾ; ಡುಮ್ಮಸಾರ್‌ಗೆ ಸರ್‌ಪ್ರೈಸ್‌
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಮೃತಧಾರೆ ಧಾರಾವಾಹಿಯಲ್ಲಿ ಮಹಾ ತಿರುವು: ತಾಯಿ, ತಂಗಿಯ ಭೇಟಿಗೆ ಗೌತಮ್‌ನ ದೇವಾಲಯಕ್ಕೆ ಕರೆತಂದ ಭೂಮಿಕಾ; ಡುಮ್ಮಸಾರ್‌ಗೆ ಸರ್‌ಪ್ರೈಸ್‌

ಅಮೃತಧಾರೆ ಧಾರಾವಾಹಿಯಲ್ಲಿ ಮಹಾ ತಿರುವು: ತಾಯಿ, ತಂಗಿಯ ಭೇಟಿಗೆ ಗೌತಮ್‌ನ ದೇವಾಲಯಕ್ಕೆ ಕರೆತಂದ ಭೂಮಿಕಾ; ಡುಮ್ಮಸಾರ್‌ಗೆ ಸರ್‌ಪ್ರೈಸ್‌

  • Amruthadhaare Kannada Serial today Episode: ಜೀ ಕನ್ನಡ ವಾಹಿನಿಯ ಧಾರಾವಾಹಿಗಳೆಲ್ಲ ಹೊಸ ವರ್ಷದ ಆರಂಭದಲ್ಲಿ ಮಹಾ ತಿರುವಿನತ್ತ ಮುಖ ಮಾಡಿವೆ. ಅಮೃತಧಾರೆ ಧಾರಾವಾಹಿಯೂ ಮಹಾ ತಿರುವಿನತ್ತ ಹೊರಳಿದೆ. ಗೌತಮ್‌ ಮತ್ತು ಭೂಮಿಕಾ ದೇವಾಲಯಕ್ಕೆ ಬಂದಿದ್ದಾರೆ. ಅಲ್ಲಿಗೆ ಸುಧಾ ಮತ್ತು ಭಾಗ್ಯಮ್ಮ ಬರಲಿದ್ದಾರೆ. 

ಅಮೃತಧಾರೆ ಧಾರಾವಾಹಿಯೂ ಮಹಾ ತಿರುವಿನತ್ತ ಹೊರಳಿದೆ. ಗೌತಮ್‌ ಮತ್ತು ಭೂಮಿಕಾ ದೇವಾಲಯಕ್ಕೆ ಬಂದಿದ್ದಾರೆ. ಅಲ್ಲಿಗೆ ಸುಧಾ ಮತ್ತು ಭಾಗ್ಯಮ್ಮ ಬರಲಿದ್ದಾರೆ. ಡುಮ್ಮಸಾರ್‌ಗೆ ತನ್ನ ಅಮ್ಮ ಮತ್ತು ತಂಗಿಯನ್ನು ಭೇಟಿಯಾಗುವ ಸುಯೋಗ ದೊರಕುವುದೇ? 
icon

(1 / 11)

ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯಲ್ಲಿ ಸುಧಾ ಮೋಸ ಮಾಡಿದ್ದಾಳೆ ಎಂದು ತಿಳಿದ ಗೌತಮ್‌ ಕುಪಿತಗೊಂಡಿದ್ದನು. ಆಕೆಗೆ ಮಾತನಾಡಲು ಅವಕಾಶ ನೀಡದೆ ಮನೆಯಿಂದ ಹೋಗುವಂತೆ ತಿಳಿಸಿದ್ದ. ಎಲ್ಲರೂ ಮನೆಯೊಳಗೆ ಹೋದರೂ ಭೂಮಿಕಾ ಹೋಗಿರಲಿಲ್ಲ. ಸುಧಾಳ ಬಳಿ ಮಾತನಾಡಿದ್ದಳು. ಆ ಸಮಯದಲ್ಲಿ ಭೂಮಿಕಾಗೆ ಭಾಗ್ಯಮ್ಮ ಕಂಡಿದ್ದರು.
icon

(2 / 11)

ಭಾಗ್ಯಮ್ಮನ ಮುಖ ನೋಡಿದಾಗ ಆಕೆ ಬೇರೆ ಯಾರೂ ಅಲ್ಲ. ಗೌತಮ್‌ ಇಷ್ಟು ವರ್ಷ ಕಾಯುತ್ತಿದ್ದ ಆತನ ಅಮ್ಮ ಎಂಬ ಸತ್ಯ ಭೂಮಿಕಾಗೆ ಗೊತ್ತಾಯ್ತು. ಸುಧಾ ಕೂಡ ಗೌತಮ್‌ ತಂಗಿ ಎಂಬ ವಿಚಾರ ತಿಳಿದುಬಂತು. ಈ ಸಮಯದಲ್ಲಿ ಗೌತಮ್‌ಗೆ ನೇರವಾಗಿ ಈ ವಿಷಯವನ್ನು ಭೂಮಿಕಾ ತಿಳಿಸಿರಲಿಲ್ಲ. ಅಮ್ಮ ಮತ್ತು ತಂಗಿಯನ್ನು ಗೌತಮ್‌ಗೆ ದೇವಾಲಯದಲ್ಲಿ ಭೇಟಿ ಮಾಡಿಸಲು ಉದ್ದೇಶಿಸಿದ್ದಳು.
icon

(3 / 11)

ಮನೆಗೆ ಬಂದು ಕೋಪದಲ್ಲಿದ್ದ ಗೌತಮ್‌ ಜತೆ ಮಾತನಾಡಿದ್ದಳು. ಸುಧಾಳ ಪರವಾಗಿ ಮಾತನಾಡುವುದನ್ನು ಗೌತಮ್‌ ಸಹಿಸುತ್ತ ಇರಲಿಲ್ಲ. ಆದರೂ ಸುಧಾಳಿಗೆ ಮಾತನಾಡಲು ಅವಕಾಶ ನೀಡಬೇಕಿತ್ತು ಎಂದು ಭೂಮಿಕಾ ಹೇಳಿದಾಗ ಗೌತಮ್‌ ಮಾತನಾಡಲಿಲ್ಲ. ನಾಳೆ ನಾವಿಬ್ಬರು ದೇವಸ್ಥಾನಕ್ಕೆ ಹೋಗೋಣ ಎಂದು ಡುಮ್ಮಸರ್‌ನ ಭೂಮಿಕಾ ಒಪ್ಪಿಸಿದ್ದಾಳೆ. 
icon

(4 / 11)

ಇನ್ನೊಂದೆಡೆ ಶಕುಂತಲಾ ಗ್ಯಾಂಗ್‌ ಟೆನ್ಷನ್‌ನಲ್ಲಿದೆ. ಸುಧಾ ಮತ್ತು ಆಕೆಯ ತಾಯಿ ಎಲ್ಲಿಗೆ ಹೋದ್ರು ಎಂಬ ಪ್ರಶ್ನೆ ಅವರನ್ನು ಕಾಡಿದೆ. ಭೂಮಿಕಾ ಜತೆ ಏನಾದರೂ ಸುಧಾ ಸತ್ಯ ಹೇಳಿದ್ಲ ಎಂಬ ಅನುಮಾನ ಕಾಡುತ್ತಿದೆ. ಇದೇ ಸಮಯದಲ್ಲಿ ಭೂಮಿಕಾಳ ಬಳಿ ಈ ಕುರಿತು ಪ್ರಶ್ನಿಸಿದ್ದಾರೆ. ಅವರು ಆಟೋದಲ್ಲಿ ಹೋದ್ರು ಎಂದು ಭೂಮಿಕಾ ಹೇಳಿದಾಗ "ಭಾಗ್ಯಮ್ಮಳನ್ನು ಭೂಮಿಕಾ ನೋಡಿದ್ಲ" ಎಂಬ  ಅನುಮಾನ ಅವರನ್ನು ಕಾಡುತ್ತದೆ. 
icon

(5 / 11)

ಜೈದೇವ್‌, ಮಾಮ್ಸ್‌ ಅನುಮಾನದಿಂದ ಭೂಮಿಕಾ ಮತ್ತು ಗೌತಮ್‌ನನ್ನು ಫಾಲೋ ಮಾಡಿದ್ದಾರೆ. ಭೂಮಿಕ ಮತ್ತು ಗೌತಮ್‌ ಮರುದಿನ ದೇವಾಲಯಕ್ಕೆ ಬಂದಿದ್ದಾರೆ. "ನಿಮಗೆ ಇವತ್ತು ಒಂದು ಸರ್‌ಪ್ರೈಸ್‌ ದೊರಕಲಿದೆ" ಎಂದು ಭೂಮಿಕಾ ಹೇಳಿದ್ದಾರೆ. ಏನು ಸರ್‌ಪ್ರೈಸ್‌ ಎಂಬ ಅಚ್ಚರಿ ಆತನಲ್ಲಿದೆ.
icon

(6 / 11)

ಇನ್ನೊಂದೆಡೆ ಭೂಮಿಕಾಳ ಬಗ್ಗೆ ಆನಂದ್‌ ತಲೆ ಕೆಡಿಸಿಕೊಂಡಿದ್ದಾನೆ. ಸುಧಾಳ ಪರವಾಗಿ ಭೂಮಿಕಾ ಯಾಕೆ ಮಾತನಾಡಿದ್ದಾಳೆ ಎಂದುಕೊಳ್ಳುತ್ತಾನೆ. ಆದರೆ, ಭೂಮಿಕಾ ಏನೇ ಮಾಡಿದ್ರು ಅದಕ್ಕೆ ಕಾರಣ ಇರುತ್ತದೆ ಎಂದು ಅಪರ್ಣ ಹೇಳುತ್ತಾಳೆ. ಬಹುಶಃ ಸುಧಾ ಮತ್ತು ಭಾಗ್ಯಮ್ಮಳನ್ನು ಕರೆತರುವ ಜವಾಬ್ದಾರಿಯನ್ನು ಆನಂದ್‌ಗೆ ಭೂಮಿಕಾ ವಹಿಸಿರಬಹುದು. ಇಂದಿನ ಸಂಚಿಕೆಯಲ್ಲಿ ಇಷ್ಟೇ ಮಾಹಿತಿ ದೊರಕಲಿದೆ.
icon

(7 / 11)

ನಾಳೆಯ ಸಂಚಿಕೆಯಲ್ಲಿ (ಜನವರಿ 2) ಗೌತಮ್‌ ತನ್ನ ತಾಯಿಯನ್ನು ಭೇಟಿಯಾಗಬಹುದೇ? ಶಕುಂತಲಾ ಗ್ಯಾಂಗ್‌ ಇದಕ್ಕೆ ಅಡ್ಡಗಾಲು ಹಾಕುವುದೇ? ಎಂಬ ಸಂದೇಹ ಪ್ರೇಕ್ಷಕರಲ್ಲಿ ಇದೆ. ಜೀ ಕನ್ನಡ ವಾಹಿನಿಯ ಸೀರಿಯಲ್‌ಗಳು ಮಹಾ ತಿರುವಿನಲ್ಲಿರುವಾಗ ಅಮೃತಧಾರೆಯಲ್ಲೂ ಏನಾದರೂ ರೋಚಕ ಘಟನೆ ನಡೆಯುವ ಸಾಧ್ಯತೆಯನ್ನು ಅಲ್ಲಗೆಳೆಯುವಂತೆ ಇಲ್ಲ. ಅಲ್ಲವೇ?.
icon

(8 / 11)

ಅಮೃತಧಾರೆ ಧಾರಾವಾಹಿಯ ಇಂದಿನ ಪ್ರಮೋಗೂ ಪ್ರೇಕ್ಷಕರೂ ನೂರಾರು ಕಾಮೆಂಟ್‌ ಮಾಡಿದ್ದಾರೆ. ಈ ಬಾರಿ ನಿರ್ದೇಶಕರು ಅಮ್ಮ ಮತ್ತು ಗೌತಮ್‌ನನ್ನು ಭೇಟಿ ಮಾಡಿಸಲೇಬೇಕು. ಇಲ್ಲವಾದರೆ ಈ ಸೀರಿಯಲ್‌ ನೋಡೋದೇ ಇಲ್ಲ ಎಂದೆಲ್ಲ ಕಾಮೆಂಟ್‌ ಮಾಡಿದ್ದಾರೆ. ಇನ್ನು ಕೆಲವರು "ಜೈದೇವ್‌ ಏನೋ ಮಾಡಿ ಈ ಭೇಟಿ ತಪ್ಪಿಸಬಹುದು" ಎಂದು ಊಹಿಸಿದ್ದಾರೆ.  
icon

(9 / 11)

ಹೊಸ ವರ್ಷದ ಸಂಭ್ರಮದ ಈ ಸಮಯದಲ್ಲಿ ಗೌತಮ್‌ ದಿವಾನ್‌ ಮತ್ತು ಭೂಮಿಕಾ ಹೊಸ ಉಡುಗೆಯಲ್ಲಿ ಕ್ಯೂಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಸುಧಾ ಮತ್ತು ಭಾಗ್ಯಮ್ಮರನ್ನು ಇದೇ ರೀತಿ ರೆಡಿಯಾಗಿ ದೇವಾಲಯಕ್ಕೆ ಬರಬಹುದೇ? ಭೂಮಿಕಾ ಪ್ಲ್ಯಾನ್‌ ಏನು ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ. 
icon

(10 / 11)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ  ಸೀತಾರಾಮ, ಭಾಗ್ಯಲಕ್ಷ್ಮಿ, ಅಣ್ಣಯ್ಯ ಸೇರಿದಂತೆ ಹಲವು ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು.
icon

(11 / 11)

ಇತರ ಗ್ಯಾಲರಿಗಳು