ಅಮೃತಧಾರೆ ಧಾರಾವಾಹಿಯಿಂದ ಮತ್ತೊಂದು ವಿಕೆಟ್ ಪತನ!? ಜೀ ಕನ್ನಡ ಬಿಟ್ಟು ಕಲರ್ಸ್ ಕನ್ನಡಕ್ಕೆ ಹೊರಟು ನಿಂತ ಮಲ್ಲಿ
- ಜೀ ಕನ್ನಡದ ಅಮೃತಧಾರೆ ಸೀರಿಯಲ್‌ನಲ್ಲಿ ಇತ್ತೀಚೆಗಷ್ಟೇ ಎರಡು ಬದಲಾವಣೆಗಳಾಗಿದ್ದವು. ಜೀವನ್ ಮತ್ತು ಮಹಿಮಾ ಪಾತ್ರಗಳಿಗೆ ಹೊಸಬರ ಆಗಮನ ವೀಕ್ಷಕರಿಗೆ ಬೇಸರ ತರಿಸಿತ್ತು. ಇದೀಗ ಅಕ್ಕೊರೆ ಎಂದು ಬಾಯ್ತುಂಬ ಕರಿಯುತ್ತಿದ್ದ ಮಲ್ಲಿ ಪಾತ್ರಕ್ಕೂ ಬೇರೆಯವರ ಆಗಮನದ ಸಾಧ್ಯತೆ ಇದೆ. ಇತ್ತ ಕಲರ್ಸ್‌ನ ಕನ್ನಡದ ಭಾರ್ಗವಿ LLB ಸೀರಿಯಲ್‌ನಲ್ಲಿ ನಾಯಕಿಯಾಗಿದ್ದಾರೆ ರಾಧಾ ಭಗವತಿ.

(1 / 8)
ಜೀ ಕನ್ನಡದಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಸಂಪಾದಿಸಿದೆ ಅಮೃತಧಾರೆ ಸೀರಿಯಲ್. ಗಟ್ಟಿ ಕಥೆಯ ಹಿನ್ನೆಲೆಯಲ್ಲಿ ಟಿಆರ್‌ಪಿಯಲ್ಲಿಯೂ ತನ್ನ ನಾಗಾಲೋಟ ಮುಂದುವರಿಸಿದೆ.
(Instagram\ Radha Bhagavati)(2 / 8)
ಛಾಯಾ ಸಿಂಗ್, ರಾಜೇಶ್ ನಟರಂಗ ಮುಖ್ಯಭೂಮಿಕೆಯಲ್ಲಿರುವ ಈ ಸೀರಿಯಲ್, ಕಿರುತೆರೆ ಪ್ರಿಯರ ಇಷ್ಟದ ಧಾರಾವಾಹಿಗಳಲ್ಲಿ ಒಂದು.
(3 / 8)
ಹೀಗೆ ಸಾಗುತ್ತಿದ್ದ ಇದೇ ಸೀರಿಯಲ್‌ನಲ್ಲಿ ಇತ್ತೀಚೆಗಷ್ಟೇ ಅಚ್ಚರಿಯ ಬದಲಾವಣೆಯೊಂದು ಘಟಿಸಿತು. ಜೀವನ್ ಮತ್ತು ಮಹಿಮಾ ಪಾತ್ರಧಾರಿಗಳು ಬದಲಾದರು.
(4 / 8)
ಸೀರಿಯಲ್‌ನಲ್ಲಿ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಸಿಗದ ಕಾರಣಕ್ಕೆ, ಶಶಿ ಹೆಗಡೆ ಮತ್ತು ಸಾರಾ ಅಣ್ಣಯ್ಯ ಈ ನಿರ್ಧಾರಕ್ಕೆ ಬಂದ್ರಾ? ಈ ಬಗ್ಗೆ ಈ ಇಬ್ಬರೂ ಸ್ಪಷ್ಟನೆ ನೀಡಿಲ್ಲ.
(5 / 8)
ಈಗ ಇದೇ ಸೀರಿಯಲ್‌ನಿಂದ ಮತ್ತೊಂದು ಪ್ರಮುಖ ಪಾತ್ರ ಮಲ್ಲಿ. ಇದೇ ಮಲ್ಲಿ ಪಾತ್ರವೂ ಇದೀಗ ಬದಲಾಗುವ ಸಾಧ್ಯತೆ ಹೆಚ್ಚಿದೆ. ಅದಕ್ಕೆ ಕಾರಣ; ಮತ್ತದೇ ಸ್ಕ್ರೀನ್ ಸ್ಪೇಸ್ ಇರಬಹುದು ಎನ್ನಲಾಗುತ್ತಿದೆ.
(6 / 8)
ಈ ಗ್ಯಾಪ್‌ನಲ್ಲಿಯೇ ಮಲ್ಲಿ ಅಲಿಯಾಸ್ ರಾಧಾ ಭಗವತಿ ಇದೀಗ ಜೀ ಕನ್ನಡದಿಂದ ನೇರವಾಗಿ ಕಲರ್ಸ್‌ನತ್ತ ಮುಖ ಮಾಡಿದ್ದಾರೆ. ಭಾರ್ಗವಿ ಎಲ್ಎಲ್‌ಬಿ ಸೀರಿಯಲ್‌ನಲ್ಲಿ ನಾಯಕಿಯಾಗಿದ್ದಾರೆ.
(7 / 8)
ಕಳೆದ ವಾರವಷ್ಟೇ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ನ ಮೊದಲ ಪ್ರೋಮೋ ಬಿಡುಗಡೆ ಆಗಿದ್ದು, ಟೈಟಲ್ ರೋಲ್‌ನಲ್ಲಿ ರಾಧಾ ನಟಿಸುತ್ತಿದ್ದಾರೆ. ಅವರಿಗಿಲ್ಲಿ ಲಾಯರ್ ಪಾತ್ರ.
ಇತರ ಗ್ಯಾಲರಿಗಳು