Amruthadhaare: ಚಮಕ್‌ಚಲ್ಲೋ ದಿಯಾಳಿಗೆ ಜೈದೇವ್‌ ತಾಳಿ ಕಟ್ಟುವ ಶುಭವೇಳೆ ಎಂಟ್ರಿ ನೀಡಿದ್ಲು ಮಲ್ಲಿ; ಅಮೃತಧಾರೆಯಲ್ಲಿ ಮತ್ತೊಂದು ಮದುವೆ ಕಥೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಚಮಕ್‌ಚಲ್ಲೋ ದಿಯಾಳಿಗೆ ಜೈದೇವ್‌ ತಾಳಿ ಕಟ್ಟುವ ಶುಭವೇಳೆ ಎಂಟ್ರಿ ನೀಡಿದ್ಲು ಮಲ್ಲಿ; ಅಮೃತಧಾರೆಯಲ್ಲಿ ಮತ್ತೊಂದು ಮದುವೆ ಕಥೆ

Amruthadhaare: ಚಮಕ್‌ಚಲ್ಲೋ ದಿಯಾಳಿಗೆ ಜೈದೇವ್‌ ತಾಳಿ ಕಟ್ಟುವ ಶುಭವೇಳೆ ಎಂಟ್ರಿ ನೀಡಿದ್ಲು ಮಲ್ಲಿ; ಅಮೃತಧಾರೆಯಲ್ಲಿ ಮತ್ತೊಂದು ಮದುವೆ ಕಥೆ

  • Amruthadhaare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊ ಬಿಡುಗಡೆಯಾಗಿದೆ. ಈ ಪ್ರೊಮೊದಲ್ಲಿ ಮಲ್ಲಿ ಮತ್ತು ಭೂಮಿಕಾ ದೇವಸ್ಥಾನಕ್ಕೆ ಬಂದಿದ್ದಾರೆ. ಅದೇ ದೇವಸ್ಥಾನದಲ್ಲಿ ದಿಯಾಳಿಗೆ ತಾಳಿ ಕಟ್ಟಲು ಜೈದೇವ್‌ ರೆಡಿಯಾಗಿದ್ದಾನೆ. ಮುಂದೆ ಏನಾಯ್ತು ತಿಳಿಯೋಣ ಬನ್ನಿ.

ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರೊಮೊ ಬಿಡುಗಡೆಯಾಗಿದೆ. ಈ ಪ್ರೊಮೊದಲ್ಲಿ ಮಲ್ಲಿ ಮತ್ತು ಭೂಮಿಕಾ ದೇವಸ್ಥಾನಕ್ಕೆ ಬಂದಿದ್ದಾರೆ. ಅದೇ ದೇವಸ್ಥಾನದಲ್ಲಿ ದಿಯಾಳಿಗೆ  ತಾಳಿ ಕಟ್ಟಲು ಜೈದೇವ್‌ ರೆಡಿಯಾಗಿದ್ದಾನೆ.
icon

(1 / 13)

ಫ್ಲ್ಯಾಷ್‌ಬ್ಯಾಕ್‌: ಇನ್ನೊಂದೆಡೆ ದಿಯಾ ಮತ್ತು ಜೈದೇವ್‌ ಇದ್ದಾರೆ. ದಿಯಾ ಬೇಸರದಲ್ಲಿ ಮಾತನಾಡುತ್ತಾಳೆ. "ನಾನು ಗರ್ಲ್‌ ಫ್ರೆಂಡ್‌ ಆಗಲು ಬೇಕು. ಹೆಂಡತಿಯಾಗಲು ಬೇಡ ಅಲ್ವಾ" ಎಂದು ದಿಯಾ ಹೇಳುತ್ತಾಳೆ. ಒಟ್ಟಾರೆ ಮದುವೆಗೆ ಸಾಕಷ್ಟು ಒತ್ತಾಯ ಮಾಡುತ್ತಾಳೆ. ಕೊನೆಗೆ ಮದುವೆಯಾಗಲು ಒಪ್ಪುತ್ತಾನೆ. "ಮದುವೆ ಯಾವಾಗ ಅಂತ ನಾನು ಯೋಚನೆ ಮಾಡಿ ಹೇಳುವೆ. ನೀನು ರೆಡಿಯಾಗಿರು" ಎಂದು ಹೇಳುತ್ತಾನೆ. ಇದು ನಿನ್ನೆಯ ಸಂಚಿಕೆಯಲ್ಲಿ ನಡೆದದ್ದು.
icon

(2 / 13)

ಅಮೃತಧಾರೆಯ ಹೊಸ ಪ್ರೊಮೊದಲ್ಲಿ ಜೈದೇವ್‌ ಮತ್ತು ದಿಯಾಳ ಮದುವೆ ಸಿದ್ಧತೆಯ ಬಗ್ಗೆ ತೋರಿಸಲಾಗಿದೆ. ಬಹುಶಃ ಈ ಮದುವೆ ಎಪಿಸೋಡ್‌ ಇನ್ನೂ ಹಲವು ದಿನಗಳು ಕಾಲ ಇರಬಹುದು. ಅದಕ್ಕೆ ಪೂರ್ವಭಾವಿಯಾಗಿ ಈ ಪ್ರೊಮೊ ಬಿಡುಗಡೆ ಮಾಡಿರಬಹುದು.
icon

(3 / 13)

ಜೈದೇವ್‌ ದಿಯಾಳನ್ನು ಮದುವೆಯಾಗಲು ನಿರ್ಧರಿಸಿದ್ದಾನೆ. ದೇವಾಲಯಕ್ಕೆ ಬರಲು ಹೇಳಿದ್ದಾನೆ. ಇಬ್ಬರು ಮದುವೆ ಡ್ರೆಸ್‌ನಲ್ಲಿ ಕುಳಿತಿದ್ದಾರೆ. ಇಬ್ಬರ ಮುಖದಲ್ಲಿಯೂ ಖುಷಿ ಕಾಣಿಸುತ್ತದೆ. ತಾಳಿ ಕಟ್ಟುವ ಶುಭವೇಳೆ ಕನಸು ಕಾಣುತ್ತಿದ್ದಾರೆ. ಆದರೆ...
icon

(4 / 13)

ಅದೇ ದೇವಸ್ಥಾನಕ್ಕೆ ಮಲ್ಲಿ ಮತ್ತು ಭೂಮಿಕಾ ಬಂದಿದ್ದಾರೆ. ಇಬ್ಬರೂ ದೇವಾಲಯದಲ್ಲಿ ಪ್ರಸಾದ ತೆಗೆದುಕೊಂಡಿದ್ದಾರೆ. "ಅಕ್ಕೋರೆ ಸ್ವಲ್ಪ ಹೊತ್ತು ಕೂತುಬಿಟ್ಟು ಹೋಗೋಣ" ಎಂದು ಮಲ್ಲಿ ಹೇಳುತ್ತಾಳೆ.
icon

(5 / 13)

ಅದರಂತೆ, ಅವರು ದೇವಾಲಯದಲ್ಲಿ ಕುಳಿತಿದ್ದಾರೆ. ಸ್ವಲ್ಪ ಹೊತ್ತಲ್ಲಿ ಮಲ್ಲಿ "ಪ್ರದಕ್ಷಿಣೆ ಹಾಕಿಕೊಂಡು ಬರೋಣ್ವ" ಎನ್ನುತ್ತಾಳೆ. ಭೂಮಿಕಾ ಪ್ರೆಗ್ನೆಂಟ್‌ ಆಗಿರುವ ಕಾರಣ ಆಕೆ ಬರೋದಿಲ್ಲ. ಹೀಗೆ ಮಲ್ಲಿ ದೇಗುಲಕ್ಕೆ ಪ್ರದಕ್ಷಿಣೆ ಹಾಕಲು ಒಬ್ಬಳೇ ಹೋಗುತ್ತಾಳೆ.
icon

(6 / 13)

ನನಗ್ಯಾಕೋ ಸುಸ್ತಾಗ್ತ ಇದೆ. ನಾನು ಇಲ್ಲೇ ಕುಳಿತಿರುವೆ, ನೀನು ಹೋಗಿ ಬಾ ಎಂದು ಭೂಮಿಕಾ ಹೇಳುತ್ತಾರೆ. ಹೀಗೆ ಮಲ್ಲಿ ದೇಗುಲಕ್ಕೆ ಪ್ರದಕ್ಷಿಣೆ ಹಾಕಲು ಒಬ್ಬಳೇ ಹೋಗುತ್ತಾಳೆ.
icon

(7 / 13)

ಆಗ ಅಲ್ಲೊಂದು ಮದುವೆ ನಡೆಯುತ್ತಿರುವುದು ಮಲ್ಲಿಗೆ ಕಾಣಿಸುತ್ತದೆ. ಮಧುಮಗನ ಸ್ಥಾನದಲ್ಲಿ ಜೈದೇವ್‌ ಕುಳಿತಿರುವುದನ್ನು ನೋಡಿ ಮಲ್ಲಿಗೆ ಆಘಾತವಾಗುತ್ತದೆ. ಜೈದೇವ್‌ ಇನ್ನೂ ಈಕೆಯನ್ನು ನೋಡಿಲ್ಲ. ಇವಿಷ್ಟು ಅಂಶಗಳು ಪ್ರೊಮೊದಲ್ಲಿ ಕಾಣಿಸಿದೆ.
icon

(8 / 13)

ಒಟ್ಟಾರೆ ಇನ್ನು ಕೆಲವು ಸಂಚಿಕೆಗಳಲ್ಲಿ ಜೈದೇವ್‌ನ ಎರಡನೇ ಮದುವೆ ಪ್ರಸಂಗ ನಡೆಯುವ ಸೂಚನೆಯಿದೆ. ಅಂತಿಮವಾಗಿ ಮಲ್ಲಿ ಇದಕ್ಕೆ ಬ್ರೇಕ್‌ ಹಾಕುವ ಸೂಚನೆಯಿದೆ.
icon

(9 / 13)

ದಿಯಾ ಮತ್ತು ಜೈದೇವ್‌ ಅಕ್ರಮ ಸಂಬಂಧ ಹಲವು ಸಮಯದಿಂದ ನಡೆಯುತ್ತಿದ್ದಾಳೆ. ಈ ವಿಚಾರ ಮಲ್ಲಿಗೆ ತಿಳಿದಿದೆ. ಜೈದೇವ್‌ ಮನೆಗೆ ತಡವಾಗಿ ಬರುವುದು, ರಾತ್ರಿ ಕೆಲವೊಮ್ಮೆ ಬಾರದೆ ಇರುವುದು ಇದೇ ಕಾರಣಕ್ಕೆ ಎಂದು ಆಕೆಗೆ ಅನುಮಾನವಿದೆ. ಒಂದು ಬಾರಿ ರೆಡ್‌ಹ್ಯಾಂಡ್‌ ಆಗಿ ಇವರಿಬ್ಬರು ಜತೆಯಾಗಿರುವುದನ್ನೂ ಈಕೆ ನೋಡಿದ್ದಾಳೆ. ಈಗ ಇವರಿಬ್ಬರ ಮದುವೆಯೇ ಈಕೆಯ ಕಣ್ಣೆದುರು ಕಾಣಿಸಿದೆ. ಇದಕ್ಕೆ ಹೇಗೆ ಮಲ್ಲಿ ಅಂತ್ಯ ಹಾಡಲಿದ್ದಾಳೆ ಎಂದು ಕಾದು ನೋಡಬೇಕಿದೆ.
icon

(10 / 13)

ಅಂದಹಾಗೆ ಈಗ ಮಲ್ಲಿ ಪಾತ್ರದಾರಿ ಬದಲಾಗಿದ್ದಾರೆ. ಈ ಮೊದಲು ರಾಧಾ ಭಗವತಿ ಈ ಪಾತ್ರವನ್ನು ಮಾಡುತ್ತಿದ್ದರು. ಹೊಸ ನಟಿ ರಾಧಾ ಭಗವತಿ ಶೈಲಿಯನ್ನೇ ಕಾಪಿ ಮಾಡುವುದು ವೀಕ್ಷಕರಿಗೆ ಅಷ್ಟೇನೂ ಇಷ್ಟವಾದಂತೆ ಇಲ್ಲ. ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚಿಸುತ್ತಿದ್ದಾರೆ.
icon

(11 / 13)

ಈ ಪ್ರೊಮೊಗೆ ಸೋಷಿಯಲ್‌ ಮೀಡಿಯಾಗಳಲ್ಲಿ ವೀಕ್ಷಕರು ನಾನಾ ಬಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. "ಇವರ ಮದುವೆ ಕೂಡಾ ನಡಿಯೋಲ್ಲ!ಆದ್ರೂ ನಡಿದೆ ಇರೋ ಮದುವೆಗೆಲ್ಲ ಯಾಕೆ ಇಷ್ಟೆಲ್ಲಾ ಪ್ರೇಕ್ಷ್ಕರಿಗೆಲ್ಲ ಹಿಂಸೆ ಕೊಟ್ಟು ಹುಚ್ಚು ಹಿಡಿಸ್ತೀರಾ" "ಬಹುಪತ್ನಿತ್ವ ಈಗಿನ ಕಾಲಕ್ಕೆ ಬೇಕಾದ ಕಥಾವಸ್ತುವೇ? ಅರ್ಥವಾಗದ ರೀತಿಯಲ್ಲಿ ಸ್ಟೋರಿ ನಿರ್ಮಾಣವಾಗುತ್ತಿದೆ" "ಸೀಕ್ರೇಟ್‌ ಮದುವೆ ಆಗುವವರು ಹೀಗೆ, ಭೂಮಿಕಾ ಮನೆ ಪಕ್ಕದ ದೇವಸ್ಥಾನದಲ್ಲಿ ಯಾಕೆ ರಾಜಾರೋಷವಾಗಿ ಮದುವೆಯಾಗುತ್ತಾರೆ" ಎಂದು ಜನರು ಕಾಮೆಂಟ್‌ ಮಾಡಿದ್ದಾರೆ.
icon

(12 / 13)

ಅಮೃತಧಾರೆ ಮಾತ್ರವಲ್ಲ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡದಲ್ಲಿ ಸೀತಾರಾಮ, ಭಾಗ್ಯಲಕ್ಷ್ಮಿ, ಅಣ್ಣಯ್ಯ ಸೇರಿದಂತೆ ಹಲವು ಸೀರಿಯಲ್‌ನಲ್ಲಿ ಇಂದೇನಾಗಲಿದೆ ಎಂಬ ವಿವರ, ನಿನ್ನೆಯ ಎಪಿಸೋಡ್‌ ಕಥೆಗಳು ಸೇರಿದಂತೆ ಕಿರುತೆರೆ ಜಗತ್ತಿನ ಸೀರಿಯಲ್‌, ರಿಯಾಲಿಟಿ ಶೋ, ಕಲಾವಿದರ ಫೋಟೋಗಳು ಸೇರಿದಂತೆ ಹಲವು ಮಾಹಿತಿಗಳನ್ನು ನೀವು ಪಡೆಯಬಹುದು.
icon

(13 / 13)

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು