Amruthadhaare: ಅಮ್ಮನ ಕೈಹಿಡಿದು ಮನೆಗೆ ಕರೆತಂದ ಗೌತಮ್, ರಾಜೇಶ್ ನಟರಂಗ ನಟನೆಗೆ ಕಣ್ಣಾಲಿಗಳು ತುಂಬಿಬಂತು ಎಂದ ವೀಕ್ಷಕ
- Amruthadhaare Serial: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಹೊಸ ವರ್ಷದ ಮೂರು ದಿನಗಳ ಎಪಿಸೋಡ್‌ಗಳನ್ನು ನೋಡುತ್ತ ಕಿರುತೆರೆ ವೀಕ್ಷಕರು ಅಕ್ಷರಶಃ ಕಣ್ಣೀರಾಗಿದ್ದಾರೆ. ರಾಜೇಶ್ ನಟರಂಗ, ಛಾಯಾ ಸಿಂಗ್ ಸೇರಿದಂತೆ ಸೀರಿಯಲ್ ಕಲಾವಿದರ ನಟನೆಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರು ವಾಹ್ ಎಂದಿದ್ದಾರೆ.
- Amruthadhaare Serial: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ಹೊಸ ವರ್ಷದ ಮೂರು ದಿನಗಳ ಎಪಿಸೋಡ್‌ಗಳನ್ನು ನೋಡುತ್ತ ಕಿರುತೆರೆ ವೀಕ್ಷಕರು ಅಕ್ಷರಶಃ ಕಣ್ಣೀರಾಗಿದ್ದಾರೆ. ರಾಜೇಶ್ ನಟರಂಗ, ಛಾಯಾ ಸಿಂಗ್ ಸೇರಿದಂತೆ ಸೀರಿಯಲ್ ಕಲಾವಿದರ ನಟನೆಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರು ವಾಹ್ ಎಂದಿದ್ದಾರೆ.
(1 / 10)
ಜೀ ಕನ್ನಡ ವಾಹಿನಿಯು ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆಯ ಪ್ರಮೋ ಪ್ರಕಟಿಸಿದೆ. ಈ ಪ್ರಮೋದಲ್ಲಿ ಗೌತಮ್ ದಿವಾನ್ ಭಾವುಕನಾಗಿ ತನ್ನ ತಾಯಿಯನ್ನು ಮನೆಗೆ ಕರೆದುಕೊಂಡು ಬರುವ ದೃಶ್ಯವಿದೆ. ಈ ದೃಶ್ಯ ನೋಡಿ ಕಣ್ಣೀರು ಬರುತ್ತಿದೆ ಎಂದು ಸಾಕಷ್ಟು ಜನರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಕಳೆದ ಮೂರು ದಿನಗಳಿಂದ ಈ ಸೀರಿಯಲ್ ನಮ್ಮನ್ನು ಭಾವುಕಗೊಳಿಸಿದೆ ಎಂದು ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ.
(2 / 10)
ಅಮೃತಧಾರೆ ಧಾರಾವಾಹಿಯಲ್ಲಿ ಹೊಸ ವರ್ಷದ ಆರಂಭದಲ್ಲಿ ಮಹಾತಿರುವು ಕಾಣಿಸಿಕೊಂಡಿತ್ತು. ಈ ಸೀರಿಯಲ್‌ನಲ್ಲಿ ಅಮ್ಮ ಮತ್ತು ಮಗನ ಭೇಟಿಯಾಗದು ಎಂದು ಸಾಕಷ್ಟು ಜನರು ಅಂದುಕೊಂಡಿದ್ದರು. ಇಲ್ಲಿಯವರೆಗೆ ಹಲವು ಬಾರಿ ಇಂತಹ ಭೇಟಿಗಳನ್ನು ಸೀರಿಯಲ್ ನಿರ್ದೇಶಕರು ತಪ್ಪಿಸಿದ್ದರು. ಆದರೆ, ಈ ಬಾರಿ ಅಚ್ಚರಿಯೆಂಬಂತೆ ಯಾವುದೇ ಕಿಡ್ನ್ಯಾಪ್, ಕೋಮಾ ಸೀನ್‌ಗಳು ಇಲ್ಲದೆ ಅಮ್ಮ ಮತ್ತು ಮಗನ ಭೇಟಿಯಾಗಿಸಿದ್ದಾರೆ.
(3 / 10)
ಕಳೆದ ಮೂರು ದಿನಗಳಿಂದ ಅಮೃತಧಾರೆ ಸೀರಿಯಲ್ ಯಾವುದೇ ಸಿನಿಮಾಕ್ಕೆ ಕಡಿಮೆಯಿಲ್ಲದಂತೆ ರಿಚ್ ಆಗಿ ಮೂಡಿ ಬರುತ್ತಿದೆ ಎಂದು ಪ್ರೇಕ್ಷಕರು ಅಭಿಪ್ರಾಯಪಟ್ಟಿದ್ದಾರೆ. ದೇವಾಲಯದಲ್ಲಿ ಅಮ್ಮನ ಮೊದಲ ಬಾರಿಗೆ ಗೌತಮ ನೋಡುವ ಕ್ಷಣ, ಆತನ ಕಣ್ಣು ತುಂಬಿಕೊಳ್ಳುವ ರೀತಿ, ಮುಖದಲ್ಲಿ ವ್ಯಕ್ತವಾಗುವ ಮಧುರ ಭಾವ ಇತ್ಯಾದಿಗಳನ್ನು ನೋಡಿ ಸೀರಿಯಲ್ ಪ್ರೇಕ್ಷಕರು ಕಣ್ಣೀರಾಗಿದ್ದಾರೆ. ಮೂರು ದಿನದ ಹಲವು ಪ್ರಮೋಗಳಲ್ಲಿ "ನಮ್ಮ ಕಣ್ಣು ತುಂಬಿ ಬಂತು" ಎಂದು ಹಲವು ಜನರು ಕಾಮೆಂಟ್ ಮಾಡಿದ್ದಾರೆ.
(4 / 10)
ಇಲ್ಲಿಯವರೆಗೆ ಗೌತಮ್ ಮತ್ತು ಆತನ ತಾಯಿಯ ಭೇಟಿಯಾಗಬಾರದು ಎಂದು ಶಕುಂತಲಾ ಗ್ಯಾಂಗ್ ಬಯಸಿತ್ತು. ಆದರೆ, 2025ರ ಆರಂಭದಲ್ಲಿ ಇದು ಘಟಿಸಿದೆ. ಅಮ್ಮನಿಗಾಗಿ ಕಾಯುತ್ತಿದ್ದ ಗೌತಮ್ ಮಗುವಿನಂತೆ ಆಗಿದ್ದಾರೆ. ಇವರಿಬ್ಬರನ್ನು ಸೇರಿಸಿದ ಕೀರ್ತಿ ಭೂಮಿಕಾಗೆ ದೊರಕಿದೆ.
(5 / 10)
ಸುಧಾಳ ಮೇಲೆ ಆರೋಪ ಹೊರೆಸಿ ಮನೆಯಿಂದ ಹೊರ ಹಾಕುವ ಯೋಜನೆ ಹಾಕಿಕೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ ಶಕುಂತಲಾ ಗ್ಯಾಂಗ್ ಯಶಸ್ವಿಯಾಗಿದ್ದರು. ಎಲ್ಲರೂ ಸುಧಾಳನ್ನು ಮನೆಯಿಂದ ಹೊರಹಾಕಿ ಮನೆಯ ಒಳಗೆ ಹೋಗಿದ್ದರು. ಯಾಕೋ ಅನುಮಾನ ಬಂದು ಸುಧಾಳ ಮಾತು ಕೇಳೋಣ ಎಂದು ಭೂಮಿಕಾ ಹೊರಗೆ ಉಳಿದಿದ್ದರು.
(6 / 10)
ಆ ಸಮಯದಲ್ಲಿ ಸುಧಾ ತಾನು ಬೇಕೆಂದು ಈ ತಪ್ಪು ಮಾಡಿಲ್ಲ. ಅನಿವಾರ್ಯವಾಗಿ ಹೀಗೆ ಮಾಡಬೇಕಾಯಿತು ಎಂದು ಹೇಳಿದ್ದರು. ಅದೇ ಸಮಯದಲ್ಲಿ ಭಾಗ್ಯಮ್ಮ ಮನೆಯಿಂದ ಹೊರಗೆಬಂದು ಟೇರಸ್ ಮೇಲೆ ಬಂದಿದ್ದರು. ಆಕೆ ಬೀಳುವುದನ್ನು ಭೂಮಿಕಾ ತಪ್ಪಿಸಿದ್ದರು. ಆ ಸಮಯದಲ್ಲಿ ಭಾಗ್ಯಮ್ಮನ ಮುಖ ನೋಡಿ ಇವರು ಗೌತಮ್ ತಾಯಿ ಎಂದು ಭೂಮಿಕಾ ತಿಳಿದುಕೊಂಡಿದ್ದರು.
(7 / 10)
ತಕ್ಷಣ ಗೌತಮ್‌ಗೆ ಭೂಮಿಕಾ ಈ ವಿಷಯ ತಿಳಿಸಿರಲಿಲ್ಲ. ದೇವಾಲಯದಲ್ಲಿ ಭೇಟಿ ಮಾಡಿಸೋಣ ಎಂದು ಭೂಮಿಕಾ ಹೇಳಿದ್ದು ವೀಕ್ಷಕರಿಗೆ ಅನುಮಾನ ಹುಟ್ಟಿಸಿತ್ತು. ಮತ್ತೆ ಕಿಡ್ನ್ಯಾಪ್, ಕೋಮಾ ಸೀನ್‌ಗಳು ಪುನಾರವರ್ತನೆಯಗಬಹುದೇ ಎಂದು ಅನುಮಾನ ವ್ಯಕ್ತಪಡಿಸಿದ್ದರು. ಆದರೆ, ಸೀರಿಯಲ್ ನಿರ್ದೇಶಕರು ಈ ಬಾರಿ ಪ್ರೇಕ್ಷಕರ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ.
(8 / 10)
ಅಮೃತಧಾರೆ ಧಾರಾವಾಹಿಯಲ್ಲಿ ರಾಜೇಶ್ ನಟರಂಗ ಅವರ ಅದ್ಭುತ ನಟನೆ ಎಲ್ಲರ ಗಮನ ಸೆಳೆದಿದೆ. ಇದೇ ಸಮಯದಲ್ಲಿ ನಟನೆಯಲ್ಲಿ ಛಾಯಾ ಸಿಂಗ್ ಕೂಡ ಮನಗೆದ್ದಿದ್ದಾರೆ. ತ 'ಕನ್ನಡತಿ' ಸೀರಿಯಲ್ ಅಮ್ಮಮ್ಮ ಖ್ಯಾತಿಯ ಚಿತ್ಕಳಾ ಬಿರಾದಾರ್ ಕೂಡ ಮೂಕವಾಗಿಯೇ ಎಲ್ಲರ ಗಮನ ಸೆಳೆದಿದ್ದಾರೆ. ಸುಧಾಳ ಪಾತ್ರವೂ ಎಲ್ಲರ ಗಮನ ಸೆಳೆದಿದೆ.
(9 / 10)
ಅಮೃತಧಾರೆಯಲ್ಲಿ ಮುಂದೇನಾಗಬಹುದು ಎಂಬ ಕುತೂಹಲವೂ ಇದೆ. ಗೌತಮ್ ತಾಯಿ ಬಂದಿರುವುದು ಸಹಜವಾಗಿ ಶಕುಂತಲಾ ಗ್ಯಾಂಗ್‌ಗೆ ಸಹಿಸಲು ಸಾಧ್ಯವಾಗದು. ಭಾಗ್ಯಮ್ಮನ ಆರೋಗ್ಯ ಸುಧಾರಿಸಿದ ಬಳಿಕ ಶಕುಂತಲಾ ಮಾಡಿರುವ ಅನ್ಯಾಯದ ಕತೆ ಹೊರಗೆ ಬರಬಹುದು.
ಇತರ ಗ್ಯಾಲರಿಗಳು