Amruthadhaare: ರಾಜೇಂದ್ರ ಭೂಪತಿ ಮಗಳು ಮಲ್ಲಿನಾ? ಅಮೃತಧಾರೆ ಧಾರಾವಾಹಿಯಲ್ಲಿ ಅನಿರೀಕ್ಷಿತ ಟ್ವಿಸ್ಟ್, ರಾಧಾ ಭಗವತಿ ಪಾತ್ರಕ್ಕೆ ಅನ್ವಿತಾ
- Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಪಾತ್ರ ಕಳೆದ ಹಲವು ದಿನಗಳಿಂದ ಕಾಣೆಯಾಗಿತ್ತು. ರಾಧಾ ಭಗವತಿ ಹೊಸ ಸೀರಿಯಲ್‌ಗೆ ನಾಯಕಿಯಾದ ತಕ್ಷಣ ಆ ಸ್ಥಾನ ಬೇರೆ ಯಾರೂ ತುಂಬಿರಲಿಲ್ಲ. ಮಲ್ಲಿ ಪಾತ್ರ ಮಾಯಾವಾಗುವ ಆತಂಕದ ಸಮಯದಲ್ಲಿ ಸೀರಿಯಲ್ ನಿರ್ದೇಶಕರು ಹೊಸ ಟ್ವಿಸ್ಟ್ ನೀಡಿದ್ದಾರೆ.
- Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಪಾತ್ರ ಕಳೆದ ಹಲವು ದಿನಗಳಿಂದ ಕಾಣೆಯಾಗಿತ್ತು. ರಾಧಾ ಭಗವತಿ ಹೊಸ ಸೀರಿಯಲ್‌ಗೆ ನಾಯಕಿಯಾದ ತಕ್ಷಣ ಆ ಸ್ಥಾನ ಬೇರೆ ಯಾರೂ ತುಂಬಿರಲಿಲ್ಲ. ಮಲ್ಲಿ ಪಾತ್ರ ಮಾಯಾವಾಗುವ ಆತಂಕದ ಸಮಯದಲ್ಲಿ ಸೀರಿಯಲ್ ನಿರ್ದೇಶಕರು ಹೊಸ ಟ್ವಿಸ್ಟ್ ನೀಡಿದ್ದಾರೆ.
(1 / 12)
Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಪಾತ್ರ ಕಳೆದ ಹಲವು ದಿನಗಳಿಂದ ಕಾಣೆಯಾಗಿತ್ತು. ರಾಧಾ ಭಗವತಿ ಹೊಸ ಸೀರಿಯಲ್‌ಗೆ ನಾಯಕಿಯಾದ ತಕ್ಷಣ ಆ ಸ್ಥಾನ ಬೇರೆ ಯಾರೂ ತುಂಬಿರಲಿಲ್ಲ. ಮಲ್ಲಿ ಪಾತ್ರ ಮಾಯಾವಾಗುವ ಆತಂಕದ ಸಮಯದಲ್ಲಿ ಸೀರಿಯಲ್ ನಿರ್ದೇಶಕರು ಹೊಸ ಟ್ವಿಸ್ಟ್ ನೀಡಿದ್ದಾರೆ. ಮಲ್ಲಿ ಪಾತ್ರಕ್ಕೆ ಹೊಸ ನಟಿ ಆಗಮಿಸಿದ್ದಾಳೆ. ಈಕೆ ರಾಜೇಂದ್ರ ಭೂಪತಿ ಮಗಳು ಎಂಬ ಸುಳಿವು ನೀಡಲಾಗಿದೆ.
(2 / 12)
ಇಲ್ಲಿಯವರೆಗೆ ಮಲ್ಲಿ ಎಂದರೆ ಅಕ್ಕೋರೆ ಅಕ್ಕೋರೆ ಎನ್ನುವ ಪಾತ್ರಕ್ಕೆ ಸೀಮಿತವಾಗಿತ್ತು. ಈಗ ಮಲ್ಲಿ ಪಾತ್ರಕ್ಕೆ ಹೊಸ ಪವರ್ ನೀಡಲಾಗಿದೆ. ಹೌದು, ಮಲ್ಲಿ ಬೇರೆ ಯಾರೂ ಅಲ್ಲ. ರಾಜೇಂದ್ರ ಭೂಪತಿ ಮಗಳು ಎಂಬ ಸೂಚನೆಯನ್ನು ಜೀ ಕನ್ನಡ ವಾಹಿನಿಯ ಇಂದಿನ ಪ್ರೊಮೊ ನೀಡಿದೆ.
(3 / 12)
ಮಲ್ಲಿ ಬಸುರಿಯಾಗಿದ್ದಳು. ಜೈದೇವ್‌ನ ಎಲ್ಲಾ ನವರಂಗಿ ಆಟವನ್ನು ತಿಳಿದು ಕುದ್ದು ಹೋಗಿದ್ದಳು. ಇಂತಹ ಸಮಯದಲ್ಲಿ ಈಕೆ ತನ್ನ ತಾತನ ಮನೆಗೆ ಹೋಗಿದ್ದಳು. ಅಸಲಿಗೆ, ನಟಿ ರಾಧಾ ಭಗವತಿ ಅವರು ಬೇರೆ ಸೀರಿಯಲ್‌ನ ನಾಯಕಿ ನಟಿಯಾಗಿದ್ದರು. ಮಲ್ಲಿ ಪಾತ್ರ ತೆರೆಮರೆಗೆ ಸರಿದಿತ್ತು. ರಾಧಾ ಭಗವತಿ ಭಾರ್ಗವಿ ಎಲ್‌ಎಲ್‌ಬಿ ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ.
(4 / 12)
ಇಂದಿನ ಪ್ರೊಮೊದಲ್ಲಿ ಮಲ್ಲಿ ಮತ್ತೆ ಪ್ರತ್ಯಕ್ಷವಾಗಿದ್ದಾಳೆ. ಆದರೆ, ಮಲ್ಲಿ ರಾಧಾ ಭಗವತಿ ಅಲ್ಲ. ಶಿವಮೊಗ್ಗದ ಅನ್ವಿತಾ ಸಾಗರ್ ಅವರು ಮಲ್ಲಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಕನ್ನಡದ ಹಲವು ಸೀರಿಯಲ್ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ.
(5 / 12)
ಬಣ್ಣ ಬಣ್ಣದ ಬದುಕು, ಸ್ನೇಹಚಕ್ರ, ಮಾಯಾಕನ್ನಡಿ, ಜೀವನ ಯಜ್ಞ ವಿರಾಟ ಪರ್ವ ಹಾಗೂ ತುಳು ಸಿನಿಮಾಗಳಾದ ದಂಡ್, ಪೆಟ್ಕಮ್ಮಿ, ಬಲೆ ಪುದರ್ ದೀಕ ಈ ಪ್ರೀತಿಗ್, ತುಡರ್ ಸೇರಿ ಹಲವು ಸಿನಿಮಾಗಳಲ್ಲಿ ಅನ್ವಿತಾ ಸಾಗರ್ ನಟಿಸಿದ್ದಾರೆ.
(6 / 12)
ಉದಯ ವಾಹಿನಿಯಲ್ಲಿನ 'ಅಣ್ಣ ತಂಗಿ' ಧಾರಾವಾಹಿಯಲ್ಲಿ ಜ್ಯೋತಿ ಪಾತ್ರದಲ್ಲಿ ನಟಿಸಿದರೆ, ಜೀ ಕನ್ನಡದಲ್ಲಿನ ಗಟ್ಟಿಮೇಳ ಧಾರಾವಾಹಿಯಲ್ಲಿ ಆಧ್ಯಾ ಎಂಬ ಪಾತ್ರದಲ್ಲಿಯೂ ಕಾಣಿಸಿಕೊಂಡಿದ್ದರು. ಇತ್ತೀಚೆಗಷ್ಟೇ ಮುಕ್ತಾಯವಾಗಿದ್ದ ಜೀ ಎಂಟರ್ಟೈನರ್ಸ್ ಶೋನಲ್ಲಿಯೂ ಭಾಗವಹಿಸಿದ್ದರು. ಈಗ ಮತ್ತೆ ಜೀ ಕುಟುಂಬ ಸೇರಿದ್ದಾರೆ. ಇವರ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ.
(7 / 12)
ಅಮೃತಧಾರೆ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್: ಮಲ್ಲಿ ಪಾತ್ರಕ್ಕೆ ಪಾತ್ರದಾರಿ ಮಾತ್ರ ಬದಲಾಗಿಲ್ಲ. ಹೊಸದೊಂದು ಟ್ವಿಸ್ಟ್ ಕೂಡ ಇದೆ. ಮಲ್ಲಿಯ ತಾತಾ ಹಳೆ ಫೋಟೋಗಳನ್ನು ನೋಡುತ್ತಿದ್ದಾರೆ. ಭೂಪತಿ ಮತ್ತು ಆತನ ಹೆಂಡತಿ, ಮಗಳ ಫೋಟೋ ಇದೆ.
(8 / 12)
ಅಂದರೆ, ತಾತಾ ಸಾಕುತ್ತಿರುವ ಮಲ್ಲಿ ಬೇರೆ ಯಾರೂ ಅಲ್ಲ. ಭೂಪತಿ ಮಗಳು. ಆಕೆ ಕೆಲಸದವಳು, ಬಡವಳು ಅಲ್ಲ. ರಾಜೇಂದ್ರ ಭೂಪತಿ ಎಂಬ ಅಗರ್ಭ ಶ್ರೀಮಂತನ ಮಗಳು. ಜೈದೇವ್ ದಿಯಾಳ ಹಿಂದೆ ಹೋಗುತ್ತಿದ್ದಾನೆ. ಮಲ್ಲಿ ಭೂಪತಿ ಮಗಳು ಎಂದು ತಿಳಿದರೆ ಆತನ ವರ್ತನೆ ಬದಲಾಗಬಹುದೇ?
(9 / 12)
ರಾಜೇಂದ್ರ ಭೂಪತಿ ತನ್ನ ಮಗಳು ಸತ್ತು ಹೋಗಿದ್ದಾಳೆ ಎಂದುಕೊಂಡಿದ್ದಾನೆ. ಅದೇ ಕೋಪದಲ್ಲಿ ಗೌತಮ್ ದಿವಾನ್ ಮೇಲೆ ಹಗೆ ಸಾಧಿಸುತ್ತಿದ್ದಾನೆ. ಇದೀಗ ಮಲ್ಲಿಯನ್ನು ನೋಡಲು ಗೌತಮ್ ಬಂದಿದ್ದಾರೆ. ಅವರ ಕಣ್ಣಿಗೆ ಹಳೆಯ ಪೋಟೋಗಳು ಕಾಣಿಸಿವೆ.
(10 / 12)
ಮಲ್ಲಿ ಸ್ಥಾನಕ್ಕೆ ಅನ್ವಿತಾ ಬಂದಿರುವ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಹಲವು ರೀತಿಯ ಕಾಮೆಂಟ್‌ಗಳು ಬಂದಿವೆ. "ಅಯ್ಯೋ "ಅಕ್ಕೊರೆ" ಹೊಸ ಮಲ್ಲಿ ಬಂದ್ರು ಇವರನ್ನ ಮಲ್ಲಿ ಅಂತ imagine ಮಾಡ್ಕೋಳೋಕ್ಕು ಕಷ್ಟ ಆಗುತ್ತೆ ಇವರು allready ಗಟ್ಟಿಮೇಳ ಸಿರಿಯಲ್ ಆದ್ಯ ಅಂತ ರಿಜಿಸ್ಟ್ರಾರ್ ಆಗಿದ್ದಾರೆ ಬೇರೆ ಯಾರು ಸಿಗಲಿಲ್ವ ಸೂಟ್ ಆಗೋರು" "ಅಬ್ಬಾ ಏನ್ ಟ್ವಿಸ್ಟ್" ಎಂದು ಕೆಲವರು ಕಾಮೆಂಟ್ ಮಾಡಿದ್ದಾರೆ.
(11 / 12)
ಇನ್ನೊಂದೆಡೆ ಭೂಮಿಕಾಳಿಗೆ ಮೈಕ್ರೋಫೋನ್ ಇರುವ ಸರ ದೊರಕಿದೆ. ಶಕುಂತಲಾದೇವಿ ಇದರ ಹಿಂದೆ ಇದ್ದಾರೆ ಎಂಬ ಅನುಮಾನ ಈಕೆಗೆ. ಇನ್ನೊಂದೆಡೆ ಗೌತಮ್‌ಗೆ ಮಲ್ಲಿಯ ರಹಸ್ಯ ತಿಳಿಯುತ್ತಿದೆ. ಅಮೃತಧಾರೆ ಧಾರಾವಾಹಿ ಮತ್ತೆ ರೋಚಕ ಹಾದಿಯತ್ತ ತಿರುಗಿದೆ. ಪ್ರೇಕ್ಷಕರಿಗೆ ಈ ಸೀರಿಯಲ್ ಬಗ್ಗೆ ಮತ್ತೆ ಕುತೂಹಲ ಹೆಚ್ಚಾಗಿದೆ. ಇಂದು ರಾತ್ರಿ ಪ್ರಸಾರವಾಗುವ ಅಮೃತಧಾರೆ ಧಾರಾವಾಹಿಯಲ್ಲಿ ವೀಕ್ಷಕರಿಗೆ ಹೆಚ್ಚಿನ ವಿವರ ದೊರಕಲಿದೆ.
ಇತರ ಗ್ಯಾಲರಿಗಳು