Amruthadhaare Serial: ದಿವಾನ್ ಗ್ರೂಪ್‌ಗೆ ಕಾಲಿಟ್ಟ ಭೂಪತಿ, ಗೌತಮ್ ಚೇರ್ಮನ್ ಹುದ್ದೆಗೆ ಕಂಟಕ, ಈಗ ಟ್ವಿಸ್ಟ್ ಏನು?! ಅಮೃತಧಾರೆ ಕಥೆ
- Amruthadhaare Serial Today Episode: ಅಮೃತಧಾರೆ ಧಾರಾವಾಹಿ ಮತ್ತೊಂದು ಟ್ವಿಸ್ಟ್ ನೀಡಲು ಹೊರಟಿದೆ. ಜೀ ಕನ್ನಡ ವಾಹಿನಿಯು ಈ ಜನಪ್ರಿಯ ಧಾರಾವಾಹಿಯ ಪ್ರೊಮೊ ಬಿಡುಗಡೆ ಮಾಡಿದೆ. ಇದರಲ್ಲಿ ಗೌತಮ್ ದಿವಾನ್‌ನ ಚೇರ್ಮನ್ ಹುದ್ದೆಗೆ ಸಂಚಕಾರ ಬರುವಂತೆ ಕಾಣಿಸಿದೆ. ಇದೇ ಸಮಯದಲ್ಲಿ ಕಿರುತೆರೆ ವೀಕ್ಷಕರು ಹೊಸ ಟ್ವಿಸ್ಟ್, ಮಹಾ ತಿರುವಿನ ನಿರೀಕ್ಷೆಯಲ್ಲಿದ್ದಾರೆ.
- Amruthadhaare Serial Today Episode: ಅಮೃತಧಾರೆ ಧಾರಾವಾಹಿ ಮತ್ತೊಂದು ಟ್ವಿಸ್ಟ್ ನೀಡಲು ಹೊರಟಿದೆ. ಜೀ ಕನ್ನಡ ವಾಹಿನಿಯು ಈ ಜನಪ್ರಿಯ ಧಾರಾವಾಹಿಯ ಪ್ರೊಮೊ ಬಿಡುಗಡೆ ಮಾಡಿದೆ. ಇದರಲ್ಲಿ ಗೌತಮ್ ದಿವಾನ್‌ನ ಚೇರ್ಮನ್ ಹುದ್ದೆಗೆ ಸಂಚಕಾರ ಬರುವಂತೆ ಕಾಣಿಸಿದೆ. ಇದೇ ಸಮಯದಲ್ಲಿ ಕಿರುತೆರೆ ವೀಕ್ಷಕರು ಹೊಸ ಟ್ವಿಸ್ಟ್, ಮಹಾ ತಿರುವಿನ ನಿರೀಕ್ಷೆಯಲ್ಲಿದ್ದಾರೆ.
(1 / 10)
Amruthadhaare Serial Today Episode: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿ ಇತ್ತೀಚಿನ ಕೆಲವು ಸಂಚಿಕೆಗಳಲ್ಲಿ ಬಿಸ್ನೆಸ್‌ನದ್ದೇ ಸುದ್ದಿ. ದಿವಾನ್ ಗ್ರೂಪ್ ಕಂಪನಿಯ ಚೇರ್ಮನ್ ಆಗಿರುವ ಗೌತಮ್ ದಿವಾನ್ ಸ್ಥಾನಕ್ಕೆ ಕುತ್ತಾಗುವಂತಹ ಸನ್ನಿವೇಶ ಬಂದಿದೆ. ಈ ಸನ್ನಿವೇಶವನ್ನು ಗೌತಮ್ ದಿವಾನ್ ಹೇಗೆ ನಿಭಾಯಿಸುತ್ತಾರೆ? ಈಗ ಎಂಟ್ರಿ ನೀಡಲಿರುವವರು ಭೂಮಿಕಾ ಅಥವಾ ಭಾಗ್ಯಮ್ಮ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ. ಈ ಸೀರಿಯಲ್‌ನಲ್ಲಿ ಮುಂದೆ ಏನಾಗಬಹುದು ಎಂಬ ಅವಲೋಕನ ಇಲ್ಲಿ ಇದೆ.
(2 / 10)
ಅಮೃತಧಾರೆ ಪ್ರೊಮೊದಲ್ಲಿ ಇರುವುದಿಷ್ಟು. ದಿವಾನ್ ಗ್ರೂಪ್ ಕಂಪನಿಯ ಬೋರ್ಡ್ ಆಫ್ ಡೈರೆಕ್ಟರ್ಸ್ ಮೀಟಿಂಗ್ ನಡೆಯುವ ಸಮಯವದು. ಆಗ ಅಲ್ಲಿಗೆ ರಾಜೇಂದ್ರ ಭೂಪತಿ ಎಂಟ್ರಿ ನೀಡುತ್ತಾನೆ. ಗೌತಮ್‌ನ ಬಿಸ್ನೆಸ್ ಅನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಈತ ಬಯಸಿದ್ದಾನೆ.
(3 / 10)
ನೀನು ಯಾಕೆ ಇಲ್ಲಿಗೆ ಬಂದೆ ಎಂದು ಆನಂದ್ ಕೇಳುತ್ತಾನೆ. ಆ ಸಮಯದಲ್ಲಿ ದಿವಾನ್ ಗ್ರೂಪ್ ಕಂಪನಿಯ ಇತರೆ ಸದಸ್ಯರು "ಇವರು ನಮ್ಮ ಕಂಪನಿಯ ಷೇರು ಹೋಲ್ಡರ್" ಎಂದು ಹೇಳುತ್ತಾರೆ. ಈ ಮೂಲಕ ಕಂಪನಿಯಲ್ಲಿ ಗೌತಮ್‌ನನ್ನು ಕೆಳಗಿಳಿಸಲು ಒಳಗಿನವರೇ ಕೈಜೋಡಿಸಿದ್ದು ದಿಟವಾಗಿದೆ.
(4 / 10)
ಈ ಮೀಟಿಂಗ್‌ನಲ್ಲಿ ಗೌತಮ್ ದಿವಾನ್ ತನ್ನ ಕಂಪನಿಯ ಕುರಿತಾದ ಕಾನೂನು ವಿಲ್ ತೋರಿಸಬೇಕಿದೆ. ಆದರೆ, ಅದನ್ನು ಈಗಾಗಲೇ ಶಕುಂತಲಾ ಗ್ಯಾಂಗ್ ಅಡಗಿಸಿಟ್ಟಿದೆ. ಆ ವಿಲ್ ಜೈದೇವ್ ಬಳಿ ಇದೆ. ಆದರೆ, ಇಲ್ಲಿ ಏನಾದರೂ ಟ್ವಿಸ್ಟ್ ನಡೆಯಬಹುದೇ ಎಂಬ ಕುತೂಹಲವೂ ಇದೆ.
(5 / 10)
ಈಗಾಗಲೇ ಗೌತಮ್ ದಿವಾನ್ ತನ್ನ ನೋವನ್ನು ಭಾಗ್ಯಮ್ಮಳ ಬಳಿ ತೋಡಿಕೊಂಡಿದ್ದಾನೆ. ಅಂದರೆ, ತನ್ನ ಅಮ್ಮನ ಮುಂದೆ ದುಃಖ ತೋಡಿಕೊಂಡಿದ್ದಾನೆ. ಈ ವಿಲ್‌ಗೆ ಅಮ್ಮನೇ ವಾರಸುದಾರೆ. ಈಕೆ ಏನೋ ನೆನಪಿಗೆ ಬಂದು ಈ ಮೀಟಿಂಗ್ ಸ್ಥಳಕ್ಕೆ ಭೂಮಿಕಾಳ ಜತೆ ಆಗಮಿಸುವ ಸೂಚನೆ ಇದೆ. ಈ ಮೂಲಕ ಅಮೃತಧಾರೆಯಲ್ಲಿ ಅನಿರೀಕ್ಷಿತ ತಿರುವು ಕಾಣಿಸಿಕೊಳ್ಳಬಹುದು. ಜೈದೇವ್, ಶಕುಂತಲಾ, ಭೂಪತಿ ಇದರಿಂದ ಭಯಗೊಳ್ಳಬಹುದು.
(6 / 10)
ಭಾಗ್ಯಮ್ಮಳಿಗೆ ಹಳೆಯದು ನೆನಪಾಗಲು ಶಾಕ್ ಟ್ರೀಟ್‌ಮೆಂಟ್ ಅಗತ್ಯವಿದೆ. ಹಳೆಯ ಘಟನೆಗಳಂತಹ ಘಟನೆಗಳ ಪುನಾರವರ್ತನೆಯೂ ಬೇಕಿದೆ. ಇದೆಲ್ಲವೂ ಗಮನದಲ್ಲಿಟ್ಟುಕೊಂಡು ಗೌತಮ್ ತನ್ನ ನೋವನ್ನು ಅಮ್ಮನ ಮುಂದೆ ಹೇಳಿಕೊಂಡಿದ್ದಾನೆಯೇ ಎಂಬ ಅನುಮಾನವೂ ವೀಕ್ಷಕರ ಬಳಿ ಇದೆ. ಈ ಕುರಿತಂತೆ ಸೋಷಿಯಲ್ ಮೀಡಿಯಾದಲ್ಲಿ ಜನರು ಚರ್ಚಿಸುತ್ತಿದ್ದಾರೆ. ಈ ಮೀಟಿಂಗ್‌ಗೆ ಭೂಮಿಕಾ ಎಂಟ್ರಿ ನೀಡಲಿದ್ದಾರೆ ಎಂದು ಸಾಕಷ್ಟು ಜನರು ಕಾಮೆಂಟ್ ಮಾಡಿದ್ದಾರೆ.
(7 / 10)
ಭೂಪತಿಯ ಯೋಜನೆಗೆ ಜೈದೇವ್ ಕೂಡ ಕೈಜೋಡಿಸಿದ್ದಾನೆ. ಆತನಿಗೆ ಚೇರ್ಮನ್ ಹುದ್ದೆ ಮೇಲೆ ಕಣ್ಣಿದೆ. ಆದರೆ, ಭೂಪತಿಯ ಆಟಕ್ಕೆಲ್ಲ ಬಗ್ಗುವ ಆಸಾಮಿ ಈತ ಅಲ್ಲ. ಈತ ವಿಲ್ ತನ್ನ ಬಳಿಯೇ ಇಟ್ಟುಕೊಂಡಿದ್ದಾನೆ. ಈ ಮೂಲಕ ಭೂಪತಿಯಿಂದ ಮುಂದೆ ತೊಂದರೆಯಾಗಬಹುದು ಎಂದು ಊಹಿಸಿ ಜಾಣತನ ಮೆರೆದಿದ್ದಾನೆ.
(8 / 10)
ಅಮೃತಧಾರೆ ಧಾರಾವಾಹಿಯಲ್ಲಿ ಏನು ಟ್ವಿಸ್ಟ್ ನಡೆಯಲಿದೆ? ನಿರ್ದೇಶಕರು ಈ ಸೀರಿಯಲ್ ಅನ್ನು ಎತ್ತ ಕೊಂಡೊಯ್ಯಲಿದ್ದಾರೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಇದೆ. ಭಾಗ್ಯಮ್ಮನಿಗೆ ಈಗಾಗಲೇ ಹಳೆಯ ನೆನಪುಗಳು ಇರುವುದು ಸಾಬೀತಾಗಿದೆ. ಶಕುಂತಲಾದೇವಿಯ ಮುಖಕ್ಕೆ ಉಗುಳಿರುವುದೇ ಇದಕ್ಕೆ ಸಾಕ್ಷಿ. ಇದೇ ಸಮಯದಲ್ಲಿ ಕಂಪನಿಯ ವಿಲ್‌ಗೆ ಸಂಬಂಧಪಟ್ಟ ವಿಚಾರಗಳು ಭಾಗ್ಯಮ್ಮನಿಗೆ ನೆನಪಿಗೆ ಬರಬಹುದೇ ಎಂಬ ಕುತೂಹಲ ಎಲ್ಲರಲ್ಲಿಯೂ ಇದೆ.
(9 / 10)
ಒಟ್ಟಾರೆ ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿ ಕಳೆದ ಕೆಲವು ಸಂಚಿಕೆಗಳಿಂದ ಕುತೂಹಲ ಹೆಚ್ಚಿಸಿಕೊಂಡಿದೆ. ಪ್ರೇಕ್ಷಕರಲ್ಲಿ ಮುಂದೆನಾಗಬಹುದು ಎಂಬ ಆತಂಕ ಇದೆ.
ಇತರ ಗ್ಯಾಲರಿಗಳು