Amruthadhaare: ಜೈದೇವ್‌ ಪ್ಲಾನ್‌ ಠುಸ್‌, ಸಿಟ್ಟಾದ ಶಕುಂತಲಾದೇವಿ; ಕುತಂತ್ರಿಗಳ ವಿರುದ್ಧ ವಿಚಾರಣೆಗೆ ಮುಂದಾಗ್ತಾನಾ ಗೌತಮ್?
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Amruthadhaare: ಜೈದೇವ್‌ ಪ್ಲಾನ್‌ ಠುಸ್‌, ಸಿಟ್ಟಾದ ಶಕುಂತಲಾದೇವಿ; ಕುತಂತ್ರಿಗಳ ವಿರುದ್ಧ ವಿಚಾರಣೆಗೆ ಮುಂದಾಗ್ತಾನಾ ಗೌತಮ್?

Amruthadhaare: ಜೈದೇವ್‌ ಪ್ಲಾನ್‌ ಠುಸ್‌, ಸಿಟ್ಟಾದ ಶಕುಂತಲಾದೇವಿ; ಕುತಂತ್ರಿಗಳ ವಿರುದ್ಧ ವಿಚಾರಣೆಗೆ ಮುಂದಾಗ್ತಾನಾ ಗೌತಮ್?

  • Amruthadhaare Today Episode: ಅಮೃತಧಾರೆ ಧಾರಾವಾಹಿ ವೀಕ್ಷಕರಿಗೆ ಟ್ವಿಸ್ಟ್‌ ಮೇಲೆ ಟ್ವಿಸ್ಟ್‌ ಕೊಡುತ್ತಿದೆ. ಇನ್ನೇನು ಚೇರ್ಮನ್‌ ಹುದ್ದೆ ಕೈ ತಪ್ಪಿತು ಎನ್ನುವಷ್ಟರಲ್ಲಿಯೇ ಕೊನೇ ಕ್ಷಣದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಭೂಮಿಕಾ ಎಂಟ್ರಿಯಿಂದ ಗೌತಮ್‌ಗೇ ಚೇರ್ಮನ್‌ ಕುರ್ಚಿ ಒಲಿದಿದೆ. ಇದು ಹೇಗೆ ಸಾಧ್ಯ ಎಂದು ಶಕುಂತಲಾದೇವಿ ಕಸಿವಿಸಿಗೊಂಡಿದ್ದಾಳೆ.

ಕೊನೇ ಕ್ಷಣದಲ್ಲಿ ರಾಜೇಂದ್ರ ಭೂಪತಿ ಕೈ ಸೇರುತ್ತಿದ್ದ ಚೇರ್ಮನ್‌ ಕುರ್ಚಿ ಭೂಮಿಕಾ ಎಂಟ್ರಿಯಿಂದ ತಪ್ಪಿದೆ. ಸುಧಾ ಬಳಿಯಿದ್ದ ಶೇರ್‌ಗಳ ಸೂಕ್ತ ದಾಖಲೆ ಪತ್ರಗಳನ್ನು ತೋರಿಸಿ, ಗೌತಮ್‌ ಅವರೇ ಚೇರ್ಮನ್‌ ಆಗಿ ಮುಂದುವರಿಯಲಿದ್ದಾಳೆ ಎಂದಿದ್ದಾಳೆ ಭೂಮಿಕಾ.
icon

(1 / 8)

(Zee Kannada)

ಇದೇ ವಿಚಾರವನ್ನು ಭೂಮಿಕಾ ಬಳಿ ಗೌತಮ್‌ ಚರ್ಚೆ ಮಾಡಿದ್ದಾನೆ. ಕೊನೇ ಕ್ಷಣದಲ್ಲಿ ದೇವರ ಥರ ಬಂದು ಕಾಪಾಡಿದ್ದೀರಾ. ಇದೆಲ್ಲ ಹೇಗೆ ಸಾಧ್ಯ ಆಯ್ತು. ಆ ದಾಖಲೆಗಳು ಎಲ್ಲಿ ಸಿಕ್ಕವು ಎಂದೆಲ್ಲ ಪ್ರಶ್ನೆ ಮಾಡಿದ್ದಾನೆ. 
icon

(2 / 8)

ಸರಿಯಾದ ಸಮಯಕ್ಕೆ ಸಿಕ್ತು ಅಂತ ಖುಷಿ ಪಡಿ. ಆದರೆ ಎಲ್ಲಿ ಸಿಕ್ತು ಅಂತ ಕೇಳುವುದು ಬೇಡ ಎಂದು ಗೌತಮ್‌ಗೆ ಹೇಳಿದ್ದಾಳೆ ಭೂಮಿಕಾ. ಅಷ್ಟಕ್ಕೂ ಆ ದಾಖಲೆ ಭಾಗ್ಯಮ್ಮನ ಬೆಡ್‌ ಕೆಳಗೆ ಸಿಕ್ಕಿದೆ.
icon

(3 / 8)

ಸ್ವತಃ ಜೈದೇವ್‌  ಆ ಫೈಲ್‌ ಯಾರಿಗೂ ಸಿಗಬಾರದು ಎಂದು ಅದನ್ನು ಭಾಗ್ಯಮ್ಮನ ಬೆಡ್‌ ಕೆಳಗೆ ಮುಚ್ಚಿಟ್ಟಿದ್ದ. ಆದರೆ, ಭೂಮಿಕಾ ಭಾಗ್ಯಮ್ಮನ ಕೋಣೆಗೆ ತೆರಳಿದಾಗ, ಅಲ್ಲಿ ಫೈಲ್‌ ಕೈಗೆ ಸಿಕ್ಕಿದೆ. ಫೈಲ್‌ನಲ್ಲಿನ ಅಸಲಿಯತ್ತು ಆಕೆಗೂ ತಿಳಿದಿದೆ.  
icon

(4 / 8)

ಹಾಗೆ ಸಿಕ್ಕ ಫೈಲ್‌ನಲ್ಲಿ ಏನಿದೆ ಎಂದೆಲ್ಲ ವಿವರನ್ನು ಭೂಮಿಕಾ ಮತ್ತು ಸುಧಾ ಒಟ್ಟಿಗೆ ನೋಡಿದ್ದಾರೆ. ಸುಧಾ ಪಾಲಿಗೂ ಶೇ. 25 ಶೇರ್‌ ಇರುವುದು ವಿಲ್‌ನಲ್ಲಿ ಬರೆದಿದೆ. ಇದೇ ದಾಖಲೆ ಹಿಡಿದು, ರಾಜೇಂದ್ರ ಭೂಪತಿ ಪಾಲಾಗುತ್ತಿದ್ದ ಚೇರ್ಮನ್‌ ಪಟ್ಟವನ್ನು ತಪ್ಪಿಸಿದ್ದಾಳೆ ಭೂಮಿಕಾ. 
icon

(5 / 8)

ಇತ್ತ ಜೈದೇವನ ಈ ಕೆಲಸಕ್ಕೆ ಅಮ್ಮ ಶಕುಂತಲಾದೇವಿ ಗರಂ ಆಗಿದ್ದಾಳೆ. ಎಲ್ಲವನ್ನೂ ನೀಟಾಗಿ ಪ್ಲಾನ್‌ ಮಾಡಿದ್ದೆ. ಈಗ ನೋಡಿದರೆ ಹೀಗಾಗಿದೆ ಎಂದು ಜೈದೇವ್‌ ಅಮ್ಮನ ಮುಂದೆ ಅಲವತ್ತುಕೊಳ್ಳುತ್ತಿದ್ದಾನೆ. 
icon

(6 / 8)

ಆ ಗೌತಮ್‌ ಕಡೆಯಿಂದ ಇದೇ ವಿಚಾರಕ್ಕೆ ವಿಚಾರಣೆ ಶುರುವಾದರೆ, ಎಲ್ಲವೂ ನಮ್ಮ ಬುಡಕ್ಕೆ ಬರುತ್ತ ಎಂದು ಗಾಬರಿಗೊಂಡಿದ್ದಾಳೆ ಶಕುಂತಲಾದೇವಿ. 
icon

(7 / 8)

ನಾನು ನಿನಗೆ ಕೊಟ್ಟ ವಿಲ್‌, ಅವಳಿಗೆ ಸಿಗೋ ಹಾಗೆ ಮಾಡಿದ್ದೀಯಾ. ಇಷ್ಟು ವರ್ಷಗಳಲ್ಲಿ ಒಂದೇ ಒಂದು ಕೆಲಸವನ್ನು ನೆಟ್ಟಗೆ ಮಾಡಿಲ್ಲ ನೀನು ಎಂದು ಜೈದೇವ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾಳೆ ಶಕುಂತಲಾದೇವಿ. 
icon

(8 / 8)

Manjunath B Kotagunasi

TwittereMail
ಮಂಜುನಾಥ ಕೊಟಗುಣಸಿ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದಲ್ಲಿ ಚೀಫ್‌ ಕಂಟೆಂಟ್‌ ಪ್ರೊಡ್ಯೂಸರ್‌, ಮನರಂಜನೆ ವಿಭಾಗದಲ್ಲಿ ಕಾರ್ಯನಿರ್ವಹಣೆ. ಈ ಮೊದಲು ವಿಜಯವಾಣಿ, ವಿಶ್ವವಾಣಿ ಪತ್ರಿಕೆಗಳು ಮತ್ತು ಟಿವಿ9 ಸುದ್ದಿವಾಹಿನಿಯ ವಿವಿಧ ವಿಭಾಗಗಳಲ್ಲಿ ಒಟ್ಟು 12 ವರ್ಷ ಕೆಲಸ ಮಾಡಿದ ಅನುಭವ. ಸಿನಿಮಾ ಮೋಹಿ, ಕ್ರಿಕೆಟ್‌ ಪ್ರಿಯ. ಧಾರವಾಡ ಜಿಲ್ಲೆಯ ಕಲಘಟಗಿ ನಿವಾಸಿ.

ಇತರ ಗ್ಯಾಲರಿಗಳು