Amruthadhaare: ಮಾತಿನ ಮಲ್ಲ ಕ್ಯಾಬ್ ಚಾಲಕನಿಗೂ ಸುಧಾಳಿಗೂ ಏನೋ ಕನೆಕ್ಷನ್; ಅಮೃತಧಾರೆ ಧಾರಾವಾಹಿಗೆ ಎಂಟ್ರಿ ಕೊಟ್ಟ ಹೊಸ ಪಾತ್ರದಾರಿಯ ರಹಸ್ಯ
- Amruthadhaare serial: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಎಂಟೆಕ್ ಓದಿರುವ ಕ್ಯಾಬ್ ಚಾಲಕನಿಗೂ ಸುಧಾಳಿಗೂ ಏನೋ ನಂಟಿರುವ ಸೂಚನೆ ದೊರಕಿದೆ. ಪಟಪಟನೆ ಮಾತನಾಡುತ್ತಿರುವ ಈ ಚಾಲಕನಿಗೆ ಏನೋ ನೆನಪಾಗಿದೆ. ಈಕೆಯ ಹೆಸರು ಗೊತ್ತಾದರೆ ಆತನಿಗೆ ಹಳೆಯ ವಿಷಯಗಳು ನೆನಪಾಗಬಹುದು.
- Amruthadhaare serial: ಜೀ ಕನ್ನಡ ವಾಹಿನಿಯ ಅಮೃತಧಾರೆ ಧಾರಾವಾಹಿಯ ನಿನ್ನೆಯ ಸಂಚಿಕೆಯಲ್ಲಿ ಎಂಟೆಕ್ ಓದಿರುವ ಕ್ಯಾಬ್ ಚಾಲಕನಿಗೂ ಸುಧಾಳಿಗೂ ಏನೋ ನಂಟಿರುವ ಸೂಚನೆ ದೊರಕಿದೆ. ಪಟಪಟನೆ ಮಾತನಾಡುತ್ತಿರುವ ಈ ಚಾಲಕನಿಗೆ ಏನೋ ನೆನಪಾಗಿದೆ. ಈಕೆಯ ಹೆಸರು ಗೊತ್ತಾದರೆ ಆತನಿಗೆ ಹಳೆಯ ವಿಷಯಗಳು ನೆನಪಾಗಬಹುದು.
(1 / 9)
Amruthadhaare serial Yesterday Episode: ಕ್ಯಾಬ್ ಚಾಲಕ ಗೌತಮ್ ದಿವಾನ್ ಮನೆಯಿಂದ ಹೊರಗೆ ಬಂದಿದ್ದಾನೆ. ಆಗ ಲಚ್ಚಿಯನ್ನು ಹುಡುಕುತ್ತ ಸುಧಾ ಹೊರಗೆ ಬಂದಿದ್ದಾರೆ. "ಹಲೋ ಮೇಡಂ" ಎಂದು ಕರೆಯುತ್ತಾನೆ. "ಇವನ ಕೈಯಲ್ಲಿ ಸಿಕ್ಕಿ ಹಾಕಿಕೊಂಡರೆ ಮುಗೀತು" ಎಂದು ಸುಧಾ ಎಸ್ಕೆಪ್ ಆಗಲು ನೋಡುತ್ತಾರೆ.
(2 / 9)
"ನಿಮ್ಮನ್ನು ನೋಡಿದಾಗ ಈ ಫೇಸ್‌ಕಟ್ ಅನ್ನು ಎಲ್ಲೋ ನೋಡಿದ್ದೇನೆ ಎಂದು ಅನಿಸುತ್ತದೆ. ಆದರೆ, ಸರಿಯಾಗಿ ಸಿಗ್ನಲ್ ಕನೆಕ್ಟ್ ಆಗ್ತಾ ಇಲ್ಲ" ಎನ್ನುತ್ತಾನೆ. "ನಿಮ್ಮ ಕೆಲಸ ಏನಿದೆ ನೋಡಿ" ಎಂದು ಸುಧಾ ಕೋಪದಿಂದ ಹೇಳುತ್ತಾರೆ. "ಹೆಸರು ಕೇಳಿದ್ರೆ ಒಳ್ಳೆ ಕಿಡ್ನಿ ಕೇಳಿದವರ ರೀತಿ ಆಡ್ತಿದ್ದೀರಿ ಅಲ್ವಾ ಮೇಡಂ" ಎನ್ನುತ್ತಾನೆ.
(3 / 9)
ಆದರೂ ಸುಧಾಳ ಕೋಪ ಕಡಿಮೆಯಾಗುವುದಿಲ್ಲ. ಒಮ್ಮೆ ಬಿಪಿ ಚೆಕ್ ಮಾಡಿಕೊಳ್ಳಿ ಎನ್ನುತ್ತಾನೆ. ಆಗ ಲಚ್ಚಿ ಬರುತ್ತಾಳೆ. ಖುಷಿಯಿಂದ ಕ್ಯಾಬ್ ಚಾಲಕನ ಬಳಿ ಮಾತನಾಡುತ್ತಾಳೆ. ಮಗುವಿಗೆ ಚಾಕೋಲೇಟ್ ನೀಡುತ್ತಾನೆ.
(4 / 9)
ಮತ್ತೆ ಆಕೆಯ ಹೆಸರು ಕೇಳುತ್ತಾನೆ. ಆಕೆಯ ಕೋಪದ ಮುಖ ನೋಡಿ ಸುಮ್ಮನಾಗುತ್ತಾನೆ. ಆದರೆ, ಈಕೆಯನ್ನು ಎಲ್ಲೋ ನೋಡಿದ್ದೇನೆ ಎಂದು ಆತನಿಗೆ ಅನಿಸುತ್ತದೆ. ಈಕೆ ಹೆಸರು ಹೇಳದೆ ಇರುವುದರಿಂದ ಸದ್ಯಕ್ಕೆ ಇವಳು ಯಾರು ಎಂದು ಆತನಿಗೆ ತಿಳಿಯುವುದಿಲ್ಲ.
(5 / 9)
ಬಹುಶಃ ಈತನ ಬಾಲ್ಯದ ಗೆಳತಿ ಈಕೆ ಆಗಿರಬಹುದು. ಈಗ ಗುರುತು ಸಿಗದೆ ಇರಬಹುದು. ಈತನ ಊರು ಪಾಂಡವಪುರ ಸಮೀಪ ಯಾವುದೋ ಹಳ್ಳಿ. ಸುಧಾಳಿಗೂ ಪಾಂಡವಪುರಕ್ಕೂ ನಂಟಿದೆ. ಹೀಗಾಗಿ ಬಾಲ್ಯದ ಸಂಬಂಧ, ಅನುಬಂಧದ ಕಥೆ ಇರಬಹುದು. ಮುಂದೆ ಈತನೇ ಈಕೆಯ ಗಂಡ ಆಗಬಹುದು.
(6 / 9)
ಹೊಸ ಪಾತ್ರವೊಂದನ್ನು ಸೀರಿಯಲ್‌ಗೆ ಎಂಟ್ರಿ ನೀಡಿಸಿರುವುದರ ಹಿಂದೆ ಬೇರೆ ಏನೋ ಕಥೆಯೂ ಇರಬಹುದು. ವಿಶೇಷವಾಗಿ ಭಾಗ್ಯಮ್ಮ ಮತ್ತು ಸುಧಾಳ ಹಿಂದಿನ ಕಥೆಯನ್ನು ಈತನ ಮೂಲಕ ತಿಳಿಸುವ ಯೋಜನೆಯೂ ಸೀರಿಯಲ್ ಕಥೆಯಲ್ಲಿ ಇರಬಹುದು.
(7 / 9)
ಈತ ಇವರಿಗೆ ಪರಿಚಯವಾಗಿರುವುದೇ ಆಕಸ್ಮಿಕ. ಜೈದೇವ್ ಕಳುಹಿಸಿದ ಗೂಂಡಾಗಳು ಭೂಮಿ̧ಕಾ, ಸುಧಾ ಮತ್ತು ಲಚ್ಚಿಗೆ ಕಾರು ಡಿಕ್ಕಿ ಹೊಡೆಸಬೇಕೆಂದಿದ್ದರು. ಆ ಕ್ಷಣದಲ್ಲಿ ಈತ ಬಂದು ಕಾಪಾಡಿದ್ದ. ಗೂಂಡಾಗಳು ಮಾತನಾಡುವುದನ್ನು ಈತ ಕೇಳಿಸಿಕೊಂಡಿದ್ದ. ಹೀಗಾಗಿ, ಸರಿಯಾದ ಸಮಯಕ್ಕೆ ಬಂದು ಕಾಪಾಡಿದ್ದ.
(8 / 9)
ಈತ ಭೂಮಿಕಾಳ ಬಳಿ ಕೆಲಸವನ್ನೂ ಕೇಳಿದ್ದಾನೆ. ಕೆಲಸ ಕಳೆದುಕೊಂಡು ಕ್ಯಾಬ್ ಓಡಿಸುತ್ತಿದ್ದೇನೆ ಎಂದಿದ್ದಾನೆ. ಎಂಟೆಕ್ ಓದಿರುವ ಈತನಿಗೆ ಕೆಲಸ ಕೊಡುವಂತೆ ಗೌತಮ್ ಬಳಿ ಶಿಫಾರಸು ಕೂಡ ಮಾಡಿದ್ದಾರೆ. ಈತನ ಬಗ್ಗೆ ಹೆಚ್ಚಿನ ವಿವರ ಸದ್ಯದಲ್ಲಿಯೇ ತಿಳಿಯುವ ಸೂಚನೆ ಇದೆ.
ಇತರ ಗ್ಯಾಲರಿಗಳು