Amulya Jagdish: ಅಥರ್ವ್-ಆಧವ್ ಮೊದಲ ವರ್ಷದ ಹುಟ್ಟುಹಬ್ಬ.. ಫ್ಯಾಮಿಲಿ ಜೊತೆ ಆದಿಚುಂಚನಗಿರಿಗೆ ಭೇಟಿ ನೀಡಿದ ಅಮೂಲ್ಯ ದಂಪತಿ: ಫೋಟೋಗಳು
- ಗೋಲ್ಡನ್ ಗರ್ಲ್ ಅಮೂಲ್ಯ ಈಗ ಚಿತ್ರರಂಗದಿಂದ ದೂರ ಉಳಿದಿದ್ದರೂ ಅವರು ಅಭಿಮಾನಿಗಳು ಹಾಗೂ ಅವರ ಮನಸ್ಸಿನಿಂದ ದೂರ ಸರಿದಿಲ್ಲ.
- ಗೋಲ್ಡನ್ ಗರ್ಲ್ ಅಮೂಲ್ಯ ಈಗ ಚಿತ್ರರಂಗದಿಂದ ದೂರ ಉಳಿದಿದ್ದರೂ ಅವರು ಅಭಿಮಾನಿಗಳು ಹಾಗೂ ಅವರ ಮನಸ್ಸಿನಿಂದ ದೂರ ಸರಿದಿಲ್ಲ.
(1 / 11)
ಸಿನಿಮಾಗಳಲ್ಲಿ ನಟಿಸುತ್ತಿಲ್ಲವಾದರೂ ಅಮೂಲ್ಯ ಮಾತ್ರ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿದ್ದಾರೆ. ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಚಂದ್ರ ತಮ್ಮ ಫ್ಯಾಮಿಲಿ ಫೋಟೋ, ವಿಡಿಯೋಗಳನ್ನು ಫ್ಯಾನ್ಸ್ ಜೊತೆ ಹಂಚಿಕೊಳ್ಳುತ್ತಲೇ ಇದ್ದಾರೆ. (PC: jagdishrchandra Instagram)
(2 / 11)
ಇಂದು ಅಮೂಲ್ಯ ಹಾಗೂ ಜಗದೀಶ್ ಮಕ್ಕಳ ಮೊದಲ ವರ್ಷದ ಹುಟ್ಟುಹಬ್ಬ. ಈ ವಿಶೇಷ ದಿನದಂದು ಈ ದಂಪತಿ, ಕುಟುಂಬದೊಂದಿಗೆ ಆದಿಚುಂಚನಗಿರಿಗೆ ತೆರಳಿದ್ದಾರೆ.
(3 / 11)
ಕಳೆದ ವರ್ಷ ಮಹಾಶಿವರಾತ್ರಿಯಂದೇ ಅಮೂಲ್ಯ, ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು.
(4 / 11)
ಇಂದು ಅಥರ್ವ ಹಾಗೂ ಆಧವ್ಗೆ ಒಂದು ವರ್ಷ ತುಂಬಿದ್ದು ಇಬ್ಬರೂ ಮಕ್ಕಳಿಗೆ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು ಆಶೀರ್ವಾದ ಮಾಡಿದ್ದಾರೆ.
(5 / 11)
ಆದಿಚುಂಚನಗಿರಿಗೆ ಭೇಟಿ ನೀಡಿದ ಫೋಟೋಗಳನ್ನು ಅಮೂಲ್ಯ ಪತಿ ಜಗದೀಶ್ ಚಂದ್ರ, ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
(6 / 11)
''ಇಂದು ನಮ್ಮ ಮಕ್ಕಳಾದ ಅಥರ್ವ್ - ಆಧವ್ ಮೊದಲ ವರ್ಷದ ಜನ್ಮದಿನದ ಅಂಗವಾಗಿ ನಾಗಮಂಗಲದಲ್ಲಿರುವ ಶ್ರೀ ಆದಿಚುಂಚನಗಿರಿ ಮಠಕ್ಕೆ ತೆರಳಿ, ಶ್ರೀ ಕಾಲಭೈರವೇಶ್ವರ ದೇವರಿಗೆ ಪೂಜೆ ಸಲ್ಲಿಸಿ, ದರ್ಶನ ಪಡೆಯಲಾಯಿತು. ಪರಮಪೂಜ್ಯ ಡಾ| ಶ್ರೀ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಲಾಯಿತು.''
(7 / 11)
''ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಪರಮ ಪೂಜ್ಯ ಡಾ| ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆಯಲಾಯಿತು. ಬಳಿಕ, ಮಠದ ಶಾಲಾ ಮಕ್ಕಳಿಗೆ ಸಿಹಿ ಹಂಚಿ, ಮಕ್ಕಳ ಜನ್ಮದಿನವನ್ನು ಆಚರಿಸಲಾಯಿತು.'' ಎಂದು ಜಗದೀಶ್ ಚಂದ್ರ ಬರೆದುಕೊಂಡಿದ್ದಾರೆ.
(8 / 11)
ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳು ಅಮೂಲ್ಯ ಮಕ್ಕಳ ಬರ್ತ್ಡೇಗೆ ಶುಭ ಕೋರುತ್ತಿದ್ದಾರೆ. ರಾಗಿಣಿ ಪ್ರಜ್ವಲ್, ಅದ್ವಿತಿ ಶೆಟ್ಟಿ, ಹರ್ಷಿಕಾ ಪೂಣಚ್ಚ, ಕಾರುಣ್ಯ ರಾಮ್ ಹಾಗೂ ಇನ್ನಿತರರು ಮಕ್ಕಳ ಹುಟ್ಟುಹಬ್ಬಕ್ಕೆ ಶುಭ ಹಾರೈಸಿದ್ದಾರೆ.
ಇತರ ಗ್ಯಾಲರಿಗಳು