Amulya Kids Photoshoot: ಈ ಸಲ ಕಪ್ ನಮ್ದೆ ಎಂದ ಅಥರ್ವ್, ಆಧವ್: ಪತಿ ಮಕ್ಕಳೊಂದಿಗೆ ಅಮೂಲ್ಯ ಹೊಸ ಫೋಟೋಶೂಟ್
- ಸ್ಯಾಂಡಲ್ವುಡ್ ಗೋಲ್ಡನ್ ಗರ್ಲ್ ಅಮೂಲ್ಯ ಹಬ್ಬ, ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಫೋಟೋಶೂಟ್ ಮಾಡಿಸಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಬಂದಿದ್ದಾರೆ.
- ಸ್ಯಾಂಡಲ್ವುಡ್ ಗೋಲ್ಡನ್ ಗರ್ಲ್ ಅಮೂಲ್ಯ ಹಬ್ಬ, ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಫೋಟೋಶೂಟ್ ಮಾಡಿಸಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಲೇ ಬಂದಿದ್ದಾರೆ.
(1 / 9)
ಇದೀಗ ಅವರು ಹೊಸ ಫೋಟೋಗಳನ್ನು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಈ ಫೋಟೋಗಳು ಗಮನ ಸೆಳೆಯುತ್ತಿವೆ. ಪತಿ ಹಾಗೂ ಮಕ್ಕಳೊಂದಿಗೆ ಆರ್ಸಿಬಿ ಥೀಮ್ ಫೋಟೋಶೂಟ್ ಮಾಡಿಸಿದ್ದಾರೆ. (PC: Amulya Instagram)
(4 / 9)
ಅಮೂಲ್ಯ ಹಾಗೂ ಜಗದೀಶ್ ಇಬ್ಬರೂ ಆರ್ಸಿಬಿ ಅಭಿಮಾನಿಗಳಾಗಿದ್ದು, ಈ ವಿಭಿನ್ನ ಫೋಟೋಶೂಟ್ ಮಾಡಿಸುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಫೋಟೋಗಳು ವೈರಲ್ ಆಗುತ್ತಿದ್ದು. ನೆಟಿಜನ್ಸ್ ಬಹಳ ಇಷ್ಟಪಡುತ್ತಿದ್ದಾರೆ.
(5 / 9)
ಇತ್ತೀಚೆಗೆ ಅಮೂಲ್ಯ ತಮ್ಮ ಅವಳಿ ಮಕ್ಕಳ ಮೊದಲ ವರ್ಷದ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ್ದರು. ಈ ಬರ್ತ್ಡೇ ಪಾರ್ಟಿಗೆ ಸ್ಯಾಂಡಲ್ವುಡ್ ಗಣ್ಯರು ಆಗಮಿಸಿದ್ದರು.
(6 / 9)
ಅಮೂಲ್ಯ, ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ಗಣೇಶ್ ಹಾಗೂ ಶಿಲ್ಪಾ ದಂಪತಿ ನೋಡಿದ ಜಗದೀಶ್ ಚಂದ್ರ ಅವರನ್ನು ಮದುವೆಯಾದರು. 2017 ರಲ್ಲಿ ಆದಿಚುಂಚನಗಿರಿ ಮಠದಲ್ಲಿ ಮದುವೆ ನೆರವೇರಿತ್ತು.
(7 / 9)
2022 ಮಾರ್ಚ್ 1 ಮಹಾ ಶಿವರಾತ್ರಿಯಂದು ಬೆಂಗಳೂರಿನ ಜಯನಗರದ ಕ್ಲೈಡ್ ನೈಟ್ ಆಸ್ಪತ್ರೆಯಲ್ಲಿ ಅಮೂಲ್ಯ ಅವಳಿ ಗಂಡು ಮಕ್ಕಳಿಗೆ ಜನ್ಮ ನೀಡಿದ್ದರು.
(8 / 9)
2107 ರಲ್ಲಿ 'ಮುಗುಳು ನಗೆ' ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ ನಂತರ ಅಮೂಲ್ಯ ಬೇರೆ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ಸದ್ಯಕ್ಕೆ ಅವರು ಮಕ್ಕಳ ಆರೈಕೆಯೆಡೆ ಗಮನ ಹರಿಸುತ್ತಿದ್ದಾರೆ.
ಇತರ ಗ್ಯಾಲರಿಗಳು