Cotton Clothes: ಮತ್ತೆ ಬಂತು ಹಳೇ ಟ್ರೆಂಡ್; ಈಗ ಕಾಟನ್ ಬಟ್ಟೆಗಳದ್ದೇ ದರ್ಬಾರ್, ನೀವೂ ಈ ರೀತಿ ಬಟ್ಟೆಗಳನ್ನೇ ಚೂಸ್ ಮಾಡಿ ನೋಡಿ
- Cotton Clothes: ನೀವು ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀಲ್ಸ್ ಮತ್ತು ಫೋಟೋಶೂಟ್ ಗಮನಿಸಿರಬಹುದು. ಹೆಚ್ಚಾಗಿ ಹೆಂಗಳೆಯರು ಈಗ ಕಾಟನ್ ಬಟ್ಟೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಯಾಕೆಂದರೆ ಈಗ ಅದೇ ಟ್ರೆಂಡ್.
- Cotton Clothes: ನೀವು ಇತ್ತೀಚಿನ ದಿನದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹಲವು ರೀಲ್ಸ್ ಮತ್ತು ಫೋಟೋಶೂಟ್ ಗಮನಿಸಿರಬಹುದು. ಹೆಚ್ಚಾಗಿ ಹೆಂಗಳೆಯರು ಈಗ ಕಾಟನ್ ಬಟ್ಟೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಯಾಕೆಂದರೆ ಈಗ ಅದೇ ಟ್ರೆಂಡ್.
(1 / 8)
ತುಂಬಾ ಚೆನ್ನಾಗಿ ಡ್ರೆಸ್ ಮಾಡಿಕೊಳ್ಳಬೇಕು ಅಂತ ಯಾರಿಗೆ ಆಸೆ ಇರುವುದಿಲ್ಲ ಹೇಳಿ. ಹಾಗೇ ಈಗಿನ ಕಾಲದ ಟ್ರೆಂಡ್ ಟ್ರ್ಯಾಕ್ ಮಾಡೋದು ತುಂಬಾ ಜನರಿಗೆ ಇಷ್ಟ. ಮೊದಲು ಬೇಡ ಬೇಡ ಎಂದು ಬಿಟ್ಟ ಕಾಟನ್ ಬಟ್ಟೆ ಈಗ ತುಂಬಾ ಟ್ರೆಂಡಿಯಾದ ಲುಕ್ಕನ್ನು ನೀಡುತ್ತಿದೆ.
(2 / 8)
ಎಲ್ಲರೂ ಈಗ ಕಾಟನ್ ಬಟ್ಟೆಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಅದು ಅಲ್ಲದೆ ಮಾಡರ್ನ್ ವೇರ್ ಕೂಡ ಈಗ ಕಾಟನ್ ಬಟ್ಟೆಯಲ್ಲಿ ಬರುತ್ತದೆ. ಕಾಟನ್ ಬಟ್ಟೆಯ ಆಯ್ಕೆಗೆ ಇನ್ನೂ ಒಂದು ವಿಶೇಷ ಸ್ಥಾನವಿದೆ.
(3 / 8)
ಯಾಕೆಂದರೆ ಇದು ಉಡಲು ಅಥವಾ ತೊಡಲು ತುಂಬಾ ಮೆತ್ತಗಿನ ಅನುಭವ ನೀಡುತ್ತದೆ. ಹೆಚ್ಚಾಗಿ ಟೀಚರ್ಸ್ ಪ್ರತಿದಿನ ಸೀರೆ ಉಡುತ್ತಾರೆ. ಅಂಥವರೆಲ್ಲರೂ ಇದನ್ನೇ ಆಯ್ಕೆ ಮಾಡುತ್ತಿದ್ದಾರೆ.
(4 / 8)
ಸಾಮಾನ್ಯವಾಗಿ ಬೂದುಬಣ್ಣ ನೀಲಿ ಮತ್ತು ಬಿಳಿ ಬಣ್ಣದ ಕಾಟನ್ ಬಟ್ಟೆಗಳನ್ನ ಇತ್ತೀಚಿನ ದಿನಗಳಲ್ಲಿ ಹೆಂಗಳೆಯರು ಹೆಚ್ಚಾಗಿ ಬಳಸುತ್ತಿದ್ದಾರೆ. ನೀವು ಕೂಡ ಇನ್ನು ಮುಂದಿನ ದಿನದಲ್ಲಿ ಕಾಟನ್ ಬಟ್ಟೆಯನ್ನೇ ಹಾಕಿಕೊಳ್ಳಬೇಕು ಎಂದು ಆಲೋಚನೆ ಮಾಡುತ್ತಿದ್ದರೆ ಇವುಗಳು ನಿಮ್ಮ ಬೆಸ್ಟ್ ಆಯ್ಕೆ ಆಗುತ್ತದೆ.
(5 / 8)
ನಾವಿಲ್ಲಿ ನೀಡಲಾದ ಮತ್ತು ಇದೇ ತರದ ಬಟ್ಟೆಗಳನ್ನು ಆಯ್ಕೆ ಮಾಡಿಕೊಂಡರೆ ನಿಮ್ಮ ಲುಕ್ ಟ್ರೆಂಡಿಯಾಗಿರುತ್ತದೆ. ನೀಲಿಯ ಸೀರೆ ಅದರ ಮೇಲೆ ಬಿಳಿ ಚುಕ್ಕೆ ಹಾಗೂ ಅದಕ್ಕೆ ಬಿಳಿ ಬಣ್ಣದ ರವಿಕೆ ಇದ್ದರೆ ತುಂಬಾ ಚೆನ್ನಾಗಿ ಕಾಣಿಸುತ್ತದೆ. ಅಥವಾ ಈ ರೀತಿಯ ಚೂಡಿದಾರ್ ಕೂಡ ಒಪ್ಪುತ್ತದೆ.
(6 / 8)
ವೈಟ್ ಕಲರ್ ಕಾಟನ್ ಬಟ್ಟೆ ಮೇಲೆ ಪೇಂಟಿಂಗ್ ಚಿತ್ರವಿರುವ ಡ್ರೆಸ್ ಗಳು ಕೂಡ ತುಂಬಾ ಟ್ರೆಂಡಿಯಾಗಿ ಕಾಣುತ್ತದೆ. ಅಥವಾ ಸಿಲ್ವರ್ ಬಣ್ಣದ ಬಾರ್ಡರ್ ಇರುವ ಕೆಲವು ಸೀರೆಗಳು ತುಂಬಾ ಚೆನ್ನಾಗಿ ಕಾಣುತ್ತದೆ.
ಇತರ ಗ್ಯಾಲರಿಗಳು