ಜನಸೇನಾಗೆ 24 ಕ್ಷೇತ್ರ ಬಿಟ್ಟುಕೊಟ್ಟ ಟಿಡಿಪಿ; ವರ್ಕೌಟ್ ಆಗುತ್ತಾ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಪ್ಲಾನ್ -TDP Janasena Alliance
- ಟಿಡಿಪಿ, ಜನಸೇನಾ ಮೈತ್ರಿ ಆಂಧ್ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಿಸಿವೆ. 94 ಕ್ಷೇತ್ರಗಳಲ್ಲಿ ಟಿಡಿಪಿ, 24 ಕ್ಷೇತ್ರಗಳಲ್ಲಿ ಜನಸೇನಾ ಸ್ಪರ್ಧಿಸಲಿದೆ. ನಾಯ್ಡು ಅವರ ಈ ಪ್ಲಾನ್ ವರ್ಕೌಟ್ ಆಗುತ್ತಾ ಕಾದುನೋಡಬೇಕು.
- ಟಿಡಿಪಿ, ಜನಸೇನಾ ಮೈತ್ರಿ ಆಂಧ್ರ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಘೋಷಿಸಿವೆ. 94 ಕ್ಷೇತ್ರಗಳಲ್ಲಿ ಟಿಡಿಪಿ, 24 ಕ್ಷೇತ್ರಗಳಲ್ಲಿ ಜನಸೇನಾ ಸ್ಪರ್ಧಿಸಲಿದೆ. ನಾಯ್ಡು ಅವರ ಈ ಪ್ಲಾನ್ ವರ್ಕೌಟ್ ಆಗುತ್ತಾ ಕಾದುನೋಡಬೇಕು.
(1 / 7)
ಆಂಧ್ರ ಪ್ರದೇಶದ ವಿಧಾನಸಭೆ ಚುನವಣೆಗಾಗಿ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಮತ್ತು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಇಂದು (ಫೆಬ್ರವರಿ 24, ಶನಿವಾರ) ತೆಲುಗು ದೇಶಂ ಪಕ್ಷ ಮತ್ತು ಜನಸೇನಾ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ.
(2 / 7)
ಚಂದ್ರಬಾಬು ನಾಯ್ಡು ಮತ್ತು ಪವನ್ ಕಲ್ಯಾಣ್ ಅವರ ಮೈತ್ರಿ ಪಕ್ಷ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲುವಿಗಾಗಿ ಶತಪ್ರಯತ್ನ ನಡೆಸುತ್ತಿದ್ದಾರೆ. ಈಗಾಲೇ 118 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಿದ್ದಾರೆ.
(3 / 7)
118 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಎರಡೂ ಪಕ್ಷಗಳಿಗೆ ಆದ್ಯತೆ ನೀಡಲಾಗಿದೆ, ಹೆಚ್ಚಾಗಿ ಹೊಸ ಅಭ್ಯರ್ಥಿಗಳು, ಯುವಕರು, ಹಿಂದುಳಿದ ವರ್ಗ, ಎಸ್ಸಿ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ.
(4 / 7)
ಮೊದಲ ಪಟ್ಟಿಯಲ್ಲಿ 94 ಅಭ್ಯರ್ಥಿಗಳು ತೆಲುಗು ದೇಶಂ ಪಕ್ಷದಿಂದ ಸ್ಪರ್ಧಿಸಲಿದ್ದಾರೆ. ಉಳಿದಂತೆ 24 ಸ್ಥಾನಗಳಲ್ಲಿ ಜನಸೇನಾ ಅಭ್ಯರ್ಥಿಗಳು ಕಣಕ್ಕಿಳಿಯಲಿದ್ದಾರೆ. ಈ ಪೈಕಿ 5 ಕ್ಷೇತ್ರಗಳಿಗೆ ಹೆಸರುಗಳನ್ನು ಘೋಷಿಸಲಾಗಿದೆ. ಈ ಪಟ್ಟಿಯಲ್ಲಿ ಸ್ನಾತಕೋತ್ತರ ಪದವಿ ಹೊಂದಿರುವ 28 ಅಭ್ಯರ್ಥಿಗಳು, ಪದವಿ ಪಡೆದ 50 ಅಭ್ಯರ್ಥಿಗಳು, ಮೂವರು ವೈದ್ಯರು, ಇಬ್ಬರು ಪಿಎಚ್‌ಡಿ ಹಾಗೂ ಓರ್ವ ಐಎಎಸ್ ಅಧಿಕಾರಿ ಇದ್ದಾರೆ.
(5 / 7)
ಅಭ್ಯರ್ಥಿಗಳ ಆಯ್ಕೆಯಲ್ಲಿ ಮೈತ್ರಿ ಪಕ್ಷಗಳು ಸಾಕಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಚಂದ್ರಬಾಬು ಮತ್ತು ಪವನ್ ಹೇಳಿದ್ದಾರೆ. ರಾಜ್ಯಾದ್ಯಂತ 1 ಕೋಟಿ 3 ಲಕ್ಷ 33 ಸಾವಿರಕ್ಕೂ ಹೆಚ್ಚು ಜನರ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡು ಈ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ವಿಧಾನಸಭೆಯಲ್ಲಿ ಆಂಧ್ರಪ್ರದೇಶದ ಜನರ ಆಕಾಂಕ್ಷೆಗಳು ಮತ್ತು ಧ್ವನಿಗಳನ್ನು ಎತ್ತುವವರಿಗೆ ಈ ಪಟ್ಟಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ಹೇಳಿದ್ದಾರೆ.
(6 / 7)
ಚಂದ್ರಬಾಬು ನಾಯ್ಡು ಅವರು ಟಿಡಿಪಿಯಿಂದ 94 ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದಾರೆ. ತೆಕ್ಕಲಿಯಿಂದ ಕಿಂಜರಾಪು ಅಚ್ಚನಾಯ್ಡು, ಮಂಗಳಗಿರಿಯಿಂದ ನಾರಾ ಲೋಕೇಶ್, ಹಿಂದೂಪುರದಿಂದ ನಟ ಹಾಗೂ ಹಾಲಿ ಶಾಸಕ ನಂದಮೂರಿ ಬಾಲಕೃಷ್ಣ ಮತ್ತು ಕುಪ್ಪಂನಿಂದ ನಾರಾ ಚಂದ್ರಬಾಬು ನಾಯ್ಡು ಸ್ಪರ್ಧಿಸಲಿದ್ದಾರೆ.
(7 / 7)
ಟಾಲಿವುಡ್‌ನ ಜನಪ್ರಿಯ ನಟರಾದ ಪವನ್ ಕಲ್ಯಾಣ್ 2014ರ ಮಾರ್ಚ್ 14 ರಂದು ಜನಸೇನಾ ಪಕ್ಷವನ್ನು ಸ್ಥಾಪಿಸಿ ರಾಜಕೀಯಕ್ಕೆ ಎಂಟ್ರಿ ಕೊಡುತ್ತಾರೆ. ಅಂದಿನಿಂದ ಈವರೆಗೆ ಸುಮಾರು 1 ದಶಕದಿಂದ ರಾಜಕೀಯದಲ್ಲಿದ್ದರೂ ಗಳಿಸಿದ್ದಕ್ಕಿಂತ ಹೆಚ್ಚು ನಷ್ಟವನ್ನೇ ಕಂಡಿದ್ದಾರೆ. ಇವರ ಪಕ್ಷದಿಂದ ಇದುವರೆಗೆ ಒಬ್ಬ ಶಾಸನನ್ನೂ ಗೆಲ್ಲಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಆದರೆ ಟಿಡಿಪಿ 2024ರ ವಿಧಾನಸಭೆ ಚುನಾವಣೆಗೆ ಜನಸೇನಾದೊಂದಿಗೆ ಮೈತ್ರಿ ಮಾಡಿಕೊಂಡಿದ್ದು, 24 ವಿಧಾನಸಭೆ ಹಾಗೂ 3 ಲೋಕಸಭಾ ಕ್ಷೇತ್ರಗಳನ್ನು ಬಿಟ್ಟುಕೊಟ್ಟಿದೆ. ಇದು ಎಷ್ಟರ ಮಟ್ಟಿಗೆ ವರ್ಕೌಟ್ ಆಗುತ್ತೆ ಅನ್ನೋದು ಫಲಿತಾಂಶದ ಬಳಿಕ ಗೊತ್ತಾಗಲಿದೆ.
ಇತರ ಗ್ಯಾಲರಿಗಳು