ಉಫ್, ಇಷ್ಟೊಂದು ಹೇಗಪ್ಪಾ ತಿನ್ನೋದು; ಹೊಸ ಅಳಿಯನ ಉಪಚಾರಕ್ಕೆ 100ಬಗೆ ಭಕ್ಷ್ಯ, ವೈರಲ್ ಆಯ್ತು ಕಾಕಿನಾಡ ಆಷಾಢದ ಆತಿಥ್ಯ ಇಲ್ನೋಡಿ Viral Photos-andhra pradesh news kakinada family treats son in law with a feast of 100 food items photos have gone viral uks ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಉಫ್, ಇಷ್ಟೊಂದು ಹೇಗಪ್ಪಾ ತಿನ್ನೋದು; ಹೊಸ ಅಳಿಯನ ಉಪಚಾರಕ್ಕೆ 100ಬಗೆ ಭಕ್ಷ್ಯ, ವೈರಲ್ ಆಯ್ತು ಕಾಕಿನಾಡ ಆಷಾಢದ ಆತಿಥ್ಯ ಇಲ್ನೋಡಿ Viral Photos

ಉಫ್, ಇಷ್ಟೊಂದು ಹೇಗಪ್ಪಾ ತಿನ್ನೋದು; ಹೊಸ ಅಳಿಯನ ಉಪಚಾರಕ್ಕೆ 100ಬಗೆ ಭಕ್ಷ್ಯ, ವೈರಲ್ ಆಯ್ತು ಕಾಕಿನಾಡ ಆಷಾಢದ ಆತಿಥ್ಯ ಇಲ್ನೋಡಿ Viral Photos

ಹತ್ತಾರು ಭಕ್ಷ್ಯಗಳನ್ನು ನೋಡಿದ ಕೂಡಲೇ ನೆನಪಾಗುವುದು ಮಾಯಾ ಬಜಾರ್ ಸಿನಿಮಾದ “ವಿವಾಹ ಭೋಜನವಿದು, ವಿಚಿತ್ರ ಭಕ್ಷ್ಯಗಳಿವು…” ಎಂಬ ಹಾಡು. ಇದೇಕೆ ನೆನಪಾಯಿತು ಅಂತೀರಾ, ಉಫ್, ಇಷ್ಟೊಂದು ಹೇಗಪ್ಪಾ ತಿನ್ನೋದು ಎನ್ನುವಂತಹ ಆತಿಥ್ಯ ಭಾನುವಾರ ಗಮನಸೆಳೆಯಿತು. ಕಾಕಿನಾಡ ಆಷಾಢದ ಆತಿಥ್ಯದಲ್ಲಿ ಹೊಸ ಅಳಿಯನ ಉಪಚಾರಕ್ಕೆ 100 ಬಗೆಯ ಭಕ್ಷ್ಯಗಳ ಫೋಟೋ ವೈರಲ್ ಆಯ್ತು ನೋಡಿ.

ಗೋದಾವರಿ ಭಾಗದ ಜನರ ಆತಿಥ್ಯ ಎಂದರೆ ನೆನಪಾಗುವುದು ಭಕ್ಷ್ಯ ವೈವಿಧ್ಯ. ಅಂದ ಹಾಗೆ ಇಂದು (ಆಗಸ್ಟ್ 11) ಕಾಕಿನಾಡದಲ್ಲಿ ಹೊಸ ಅಳಿಯನಿಗೆ ಆಷಾಢದ ಆತಿಥ್ಯಕ್ಕೆ ಸಿದ್ಧಪಡಿಸಿಟ್ಟ 100 ಬಗೆ ಬಗೆಯ ಭಕ್ಷ್ಯಗಳು ಗಮನಸೆಳೆದವು. ಸೋಷಿಯಲ್ ಮೀಡಿಯಾದಲ್ಲಿ ಈ ಭೋಜನದ ಫೋಟೋಸ್, ವಿಡಿಯೋ ವೈರಲ್‌ ಆಗಿವೆ.
icon

(1 / 7)

ಆತಿಥ್ಯ ಎಂದ ಕೂಡಲೇ ಆಂಧ್ರದವರಿಗೆ ನೆನಪಾಗುವುದು ಗೋದಾವರಿ ಭಾಗದ ಜನರ ಆತಿಥ್ಯ. ಅದು ವೈವಿಧ್ಯಮಯವಾಗಿರುವಂಥದ್ದು. ಹೊಸದಾಗಿ ಮದುವೆಯಾದವರು ವರ್ಷ ತುಂಬುವುದರೊಳಗೆ ಅತ್ತೆ ಮನೆಗೆ ಬಂದಾಗ ಅಳಿಯನಿಗೆ ಆತಿಥ್ಯ ನೀಡುವ ಪರಿಪಾಠ ಇದೆ. ಅದರ ಭಾಗವಾಗಿ ಅಳಿಯ ಭಾನುವಾರ ಅತ್ತೆ ಮನೆಗೆ ಬಂದಿದ್ದರು.  
icon

(2 / 7)

ಕಾಕಿನಾಡ ಜಿಲ್ಲೆಯ ಕಿರ್ಲಂಪುಡಿ ಮಂಡಲದ ತಾಮರದ ಗ್ರಾಮದ ಕುಟುಂಬ ಈ ರೀತಿಯಾಗಿ ಹೊಸ ಅಳಿಯನಿಗೆ ಅದ್ದೂರಿ ಆತಿಥ್ಯ ನೀಡಿದೆ. ನೂರು ಬಗೆಯ ತಿನಿಸುಗಳೊಂದಿಗೆ ಮೆಗಾ ಔತಣವನ್ನು ಏರ್ಪಡಿಸಿದ್ದು ಊರ ಜನರ ಗಮನಸೆಳೆಯಿತು.
icon

(3 / 7)

ತಾಮರದ ಗ್ರಾಮದ ರತ್ನಕುಮಾರಿ ಹಾಗೂ ಕಾಕಿನಾಡದ ರವಿತೇಜ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ವಿವಾಹವಾಗಿದ್ದರು. ಆಷಾಢದ ನಂತರ ಮೊಟ್ಟಮೊದಲ ಬಾರಿಗೆ ಅತ್ತೆಯ ಮನೆಗೆ ಬಂದಾಗ ಅತ್ತೆಯವರು ನೂರು ಬಗೆಯ ಖಾದ್ಯಗಳೊಂದಿಗೆ ಊಟವನ್ನು ಸಿದ್ಧಪಡಿಸಿದರು. ಅದರ ಒಂದು ನೋಟ ಇದು.
icon

(4 / 7)

ವಿವಿಧ ಬಗೆಯ ತಿನಿಸುಗಳು, ಸಿಹಿತಿಂಡಿಗಳು, ಬಿಸಿಬಿಸಿ ಖಾದ್ಯ, ಹಣ್ಣುಗಳು ಹೀಗೆ ನೂರಾರು ಬಗೆಯ ಖಾದ್ಯಗಳನ್ನು ಅಳಿಯನ ಮುಂದೆ ಇಡುತ್ತಾರೆ. ಬಿರಿಯಾನಿ, ಪುಳಿಯೋಗರೆ, ಪರಮಾನ್ನ, ಲೆಮನ್ ರೈಸ್, ಗ್ರೀನ್ ರೈಸ್ ಮುಂತಾದವನ್ನೂ ಉಣಬಡಿಸಲಾಗುತ್ತದೆ. ಅಲ್ಲದೆ ಮೀನು, ಏಡಿ, ಮಟನ್, ಚಿಕನ್, ಸಿಗಡಿ ಮುಂತಾದ ಮಾಂಸಾಹಾರ ವೈರಟಿಯೂ ಇತ್ತು. 
icon

(5 / 7)

ಗುಲಾಬ್ ಜಾಮ್, ಮಿಠಾಯಿ, ರಸಗುಲ್ಲ, ಲಡ್ಡು, ಚಾಲಿವಿಡಿ, ಜಹಾಂಗೀರ್‌, ಕಾಜಾ, ಪುತ್ಥರೆಕುಲು, ಕೇಕ್, ಚೇಗೋಡಿಯಾ,, ಚಕ್ಕಿದಾಸ್, ಕರಪುಬೂಂದಿ ಮುಂತಾದವೂ ಇದ್ದವು. 
icon

(6 / 7)

ಸೇಬು, ದಾಳಿಂಬೆ, ಡ್ರ್ಯಾಗನ್ ಫ್ರೂಟ್, ಸಿಹಿ ಗೆಣಸು ಮತ್ತು ದ್ರಾಕ್ಷಿಯಂತಹ ಹಣ್ಣುಗಳೂ ಇದ್ದವು. ಈ ಔತಣಕ್ಕೆ ಅಳಿಯ ರವಿತೇಜ ಫುಲ್ ಫಿದಾ ಆಗಿದ್ದು ಸಂತಸ ವ್ಯಕ್ತಪಡಿಸಿದ್ದಾರೆ.   
icon

(7 / 7)

ಇತರ ಗ್ಯಾಲರಿಗಳು