ಮತ್ತೆ ಪುಟಿದೆದ್ದ ಅಣ್ಣಯ್ಯ, ಕುಸಿದ ನಾ ನಿನ್ನ ಬಿಡಲಾರೆ ಸೀರಿಯಲ್; ಹೀಗಿದೆ ಜೀ ಕನ್ನಡದ ಧಾರಾವಾಹಿಗಳ ಟಿಆರ್‌ಪಿ ರೇಟಿಂಗ್ಸ್
- Zee Kannada Serial TRP: ಕನ್ನಡ ಕಿರುತೆರೆಯ 11ನೇ ವಾರದ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ. ಆ ಪೈಕಿ ಅಣ್ಣಯ್ಯ ಸೀರಿಯಲ್ ಮೊದಲ ಸ್ಥಾನದಲ್ಲಿ ಬಂದು ಕೂತರೆ, ನಾ ನಿನ್ನ ಬಿಡಲಾರೆ ಸೀರಿಯಲ್ ಮೊದಲ ಸ್ಥಾನದಿಂದ ಕೆಳಕ್ಕೆ ಇಳಿದಿದೆ. ಹಾಗಾದರೆ, ಇನ್ನುಳಿದ ಸೀರಿಯಲ್‌ಗಳ ಕಥೆ ಏನು? ಪಡೆದ ಟಿಆರ್‌ಪಿ ಎಷ್ಟು? ಇಲ್ಲಿದೆ ಮಾಹಿತಿ
- Zee Kannada Serial TRP: ಕನ್ನಡ ಕಿರುತೆರೆಯ 11ನೇ ವಾರದ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ. ಆ ಪೈಕಿ ಅಣ್ಣಯ್ಯ ಸೀರಿಯಲ್ ಮೊದಲ ಸ್ಥಾನದಲ್ಲಿ ಬಂದು ಕೂತರೆ, ನಾ ನಿನ್ನ ಬಿಡಲಾರೆ ಸೀರಿಯಲ್ ಮೊದಲ ಸ್ಥಾನದಿಂದ ಕೆಳಕ್ಕೆ ಇಳಿದಿದೆ. ಹಾಗಾದರೆ, ಇನ್ನುಳಿದ ಸೀರಿಯಲ್‌ಗಳ ಕಥೆ ಏನು? ಪಡೆದ ಟಿಆರ್‌ಪಿ ಎಷ್ಟು? ಇಲ್ಲಿದೆ ಮಾಹಿತಿ
(1 / 10)
ಕನ್ನಡ ಕಿರುತೆರೆಯ 11ನೇ ವಾರದ ಟಿಆರ್‌ಪಿ ರೇಟಿಂಗ್ಸ್ ಹೊರಬಿದ್ದಿದೆ. ಆ ಪೈಕಿ ಅಣ್ಣಯ್ಯ ಸೀರಿಯಲ್ ಮೊದಲ ಸ್ಥಾನದಲ್ಲಿ ಬಂದು ಕೂತರೆ, ನಾ ನಿನ್ನ ಬಿಡಲಾರೆ ಸೀರಿಯಲ್ ಮೊದಲ ಸ್ಥಾನದಿಂದ ಕೆಳಕ್ಕೆ ಇಳಿದಿದೆ.
(Zee5)(2 / 10)
ಅಣ್ಣಯ್ಯ ಧಾರಾವಾಹಿಯ ಕನ್ಸಿಸ್ಟನ್ಸಿ ಓಟಕ್ಕೆ ಮತ್ತೆ ಗೆಲುವು ದಕ್ಕಿದೆ. ಅಂದರೆ, 11ನೇ ವಾರ 8.4 ಟಿಆರ್‌ಪಿ ಪಡೆದು ಮೊದಲ ಸ್ಥಾನ ಅಲಂಕರಿಸಿದ್ದಾನೆ ಅಣ್ಣಯ್ಯ.
(3 / 10)
ಇನ್ನು ಸದಾ ಮೊದಲ ಮೂರು ಸ್ಥಾನಗಳಲ್ಲಿಯೇ ಏರಿಳಿತ ಕಾಣುತ್ತಿದ್ದ ಶ್ರಾವಣಿ ಸುಬ್ರಮಣ್ಯ ಇದೀಗ ಎಂದಿನಂತೆ ಎರಡನೇ ಸ್ಥಾನದಲ್ಲಿ ಮುಂದುವರಿದಿದೆ. 7.7 ಟಿವಿಆರ್ ಪಡೆದು, ಹೆಚ್ಚು ವೀಕ್ಷಕ ಬಳಗವನ್ನು ಪಡೆದಿದೆ ಈ ಸೀರಿಯಲ್.
(4 / 10)
ಕಳೆದ ಎರಡ್ಮೂರು ವಾರಗಳಿಂದ ನಂಬರ್ 1 ಸ್ಥಾನದಲ್ಲಿಯೇ ಮುಂದುವರಿಯುತ್ತಿದ್ದ ಹೊಸ ಸೀರಿಯಲ್ ನಾ ನಿನ್ನ ಬಿಡಲಾರೆ. ಇದೀಗ ಈ ಸೀರಿಯಲ್ 11ನೇ ವಾರದ ಟಿಆರ್‌ಪಿ ಲೆಕ್ಕಾಚಾರದಲ್ಲಿ 7.5 ಟಿವಿಆರ್ ಪಡೆದು ಕುಸಿತ ಕಂಡಿದೆ. ಮೊದಲ ಸ್ಥಾನದ ಬದಲು ಮೂರನೇ ಸ್ಥಾನಕ್ಕೆ ಇಳಿಕೆಯಾಗಿದೆ.
(5 / 10)
ಲಕ್ಷ್ಮೀ ನಿವಾಸ ಸೀರಿಯಲ್ 7.2 ಟಿಆರ್‌ಪಿ ಪಡೆದು ನಾಲ್ಕನೇ ಸ್ಥಾನದಲ್ಲಿದೆ. ಈ ಮೊದಲ ಹೆಚ್ಚು ಕಾಲ ನಂಬರ್ 1 ಸ್ಥಾನದಲ್ಲಿಯೇ ಈ ಸೀರಿಯಲ್ ಮುಂದುವರಿದಿತ್ತು. ಸದ್ಯ ಶ್ರೀಲಂಕಾ ಪ್ರವಾಸದ ಏಪಿಸೋಡ್‌ಗಳು ನೋಡುಗರನ್ನು ಸೆಳೆದಿವೆ.
(6 / 10)
ಅಮೃತಧಾರೆ ಸೀರಿಯಲ್ 6.9 ಟಿವಿಆರ್ ಪಡೆಯುವ ಮೂಲಕ ಐದನೇ ಸ್ಥಾನದಲ್ಲಿದೆ. ಒಂದಷ್ಟು ಅಚ್ಚರಿಗಳ ಗುಚ್ಛವೇ ಈ ಸೀರಿಯಲ್‌ನಲ್ಲಿ ತೆರೆದರೂ, ಟಾಪ್ ಮೂರಕ್ಕೆ ಲಗ್ಗೆ ಇಡಲು ಈ ಸೀರಿಯಲ್ ಒದ್ದಾಡುತ್ತಿದೆ.
(7 / 10)
ಆರಂಭದಲ್ಲಿ ಕಡಿಮೆ ಟಿಆರ್‌ಪಿ ಪಡೆದಿದ್ದ ಬ್ರಹ್ಮಗಂಟು ಸೀರಿಯಲ್ ಇದೀಗ ಚೇತರಿಕೆ ಹಾದಿಯಲ್ಲಿದೆ. ವಾರದಿಂದ ವಾರಕ್ಕೆ ಪ್ರಗತಿ ಕಾಣುತ್ತಿದ್ದು, 11ನೇ ವಾರದ ಟಿಆರ್‌ಪಿಯಲ್ಲಿ ಬ್ರಹ್ಮಗಂಟು ಧಾರಾವಾಹಿ 6.6 ಟಿವಿಆರ್ ಪಡೆದು ಆರನೇ ಸ್ಥಾನದಲ್ಲಿದೆ.
(8 / 10)
ಜೀ ಕನ್ನಡದ ಪುಟ್ಟಕ್ಕನ ಮಕ್ಕಳು ಧಾರಾವಾಹಿ, 11ನೇ ವಾರದ ಟಿಆರ್‌ಪಿಯಲ್ಲಿ 4.6 ಟಿಆರ್‌ಪಿ ಪಡೆದು ಏಳನೇ ಸ್ಥಾನದಲ್ಲಿದೆ.
(9 / 10)
ಶ್ರೀರಸ್ತು ಶುಭಮಸ್ತು ಸೀರಿಯಲ್ 3.2 ಟಿಆರ್‌ಪಿ ಪಡೆದು ಮುಂದಡಿ ಇರಿಸಿದ್ದು, ಮೊದಲಿಗಿಂತ ಚೇತರಿಕೆ ಹಾದಿಯಲ್ಲಿದೆ.
ಇತರ ಗ್ಯಾಲರಿಗಳು