Annayya Serial: ಶಿವು ಪಾರು ಸಂಸಾರದ ಗುಟ್ಟು ರಟ್ಟು; ಮಂಜಿ ಉಪಾಯಕ್ಕೆ ಪ್ರಣಯ ಪಕ್ಷಿಗಳು ಒಂದಾಗಲೇಬೇಕು
- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಹಾಗೂ ಶಿವು ಇಬ್ಬರೂ ನಾಟಕ ಮಾಡುತ್ತಾ ಬದುಕುತ್ತಿದ್ದಾರೆ ಎಂದು ಮಂಜಿಗೆ ಅರ್ಥವಾಗಿದೆ. ರಾಣಿ ಕೂಡ ಅವಳ ಜತೆ ಸೇರಿದ್ದಾಳೆ.
- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು ಹಾಗೂ ಶಿವು ಇಬ್ಬರೂ ನಾಟಕ ಮಾಡುತ್ತಾ ಬದುಕುತ್ತಿದ್ದಾರೆ ಎಂದು ಮಂಜಿಗೆ ಅರ್ಥವಾಗಿದೆ. ರಾಣಿ ಕೂಡ ಅವಳ ಜತೆ ಸೇರಿದ್ದಾಳೆ.
(1 / 8)
ರಾಣಿ ಮಂಜಿ ಸಹಾಯ ಪಡೆದುಕೊಂಡು ಅಣ್ಣ ಹಾಗೂ ಅತ್ತಿಗೆಯನ್ನು ಒಂದು ಮಾಡುವ ಪ್ರಯತ್ನದಲ್ಲಿದ್ದಾಳೆ. ಅವಳಿಗೆ ಮಂಜಿ ಸಹಾಯ ಮಾಡುತ್ತಿದ್ದಾಳೆ.
(Zee Kannada)(2 / 8)
ಮಂಜಿಗೆ ಮೊದಲು ಶಿವು ಮೇಲೆ ಆಸೆ ಇದ್ದರೂ, ಅವನ ಮದುವೆ ಆದಾಗಿನಿಂದ ಅವಳು ಅವನ ಸಂಸಾರ ಹಾಳು ಮಾಡುವ ಯಾವ ಕೆಲಸವನ್ನೂ ಮಾಡಿಲ್ಲ,
(Zee Kannada)(3 / 8)
ಶಿವು ಹಾಗೂ ಪಾರು ಕೋಣೆಯಲ್ಲಿ ಅವಳು ಗುಟ್ಟಾಗಿ ಹೋದಾಗ, ಅವಳಿಗೆ ಅವರಿಬ್ಬರು ಬೇರೆ ಬೇರೆ ಮಲಗಿಕೊಳ್ಳುತ್ತಿರುವುದು ಕಾಣಿಸುತ್ತದೆ.
(Zee Kannada)(4 / 8)
ಅದೇ ವಿಚಾರವನ್ನು ಅವಳು ಬಂದು ರಾಣಿ ಬಳಿ ಹೇಳುತ್ತಾಳೆ. ಆದರೆ ರಾಣಿ ಹೇಳುತ್ತಾಳೆ “ಅತ್ತಿಗೆಗೆ ಅಣ್ಣನ ಮೇಲೆ ಪ್ರೀತಿ ಇದೆ. ಆದರೆ ತೋರಿಸಿಕೊಳ್ಳುತ್ತಿಲ್ಲ” ಎಂದು.
(Zee Kannada)(5 / 8)
ಮರುದಿನವೇ ಇನ್ನೊಂದು ಉಪಾಯ ಮಾಡುತ್ತಾರೆ. ಮಂಜಿ ಬೇಕು ಎಂದೇ ಶಿವುಗೆ ಹತ್ತಿರ ಆದಂತೆ ನಾಟಕ ಮಾಡುತ್ತಾಳೆ.
(Zee Kannada)(6 / 8)
ಅಣ್ಣಯ್ಯನ ಅಂಗಿ ಗುಂಡಿ ಸರಿ ಇರುವುದಿಲ್ಲ. ಅದನ್ನು ಮಂಜಿ ಗಮನಿಸುತ್ತಾಳೆ. ಪಾರು ಇರುವಾಗಲೇ ಅವಳು ಅಣ್ಣಯ್ಯನ ಹತ್ತಿರ ಹೋಗುತ್ತಾಳೆ.
(Zee Kannada)(7 / 8)
ಮಂಜಿಯ ಮಾತು, ಅವಳ ನಡವಳಿಕೆ ಇದನ್ನೆಲ್ಲ ನೋಡುತ್ತಿದ್ದರೆ ಪಾರುಗೆ ತಾನು ಮಾವನನ್ನು ಕಳೆದುಕೊಳ್ಳುತ್ತೇನೆ ಎಂದು ಅನಿಸುತ್ತಿತ್ತು.
(Zee Kannada)ಇತರ ಗ್ಯಾಲರಿಗಳು