Annayya Serial: ಶಿವು ಪರವಾಗಿ ಬೀದಿಯಲ್ಲಿ ಜಗಳ ಮಾಡಿದ ಪಾರುಗೆ ದೃಷ್ಟಿ ತೆಗೆದ ನಾದಿನಿಯರು; ಅರಿವಿಲ್ಲದೇ ಪ್ರೀತಿಯಲ್ಲಿ ಮುಳುಗಿದ ಪಾರು
- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು, ಶಿವು ಪ್ರೀತಿಯಲ್ಲಿ ಮುಳುಗಿದ್ದಾಳೆ. ಆದರೆ ಅವಳಿಗೆ ಇದರ ಬಗ್ಗೆ ಅರಿವಿಲ್ಲ. ತನಗೇ ಗೊತ್ತಿಲ್ಲದ ಹಾಗೇ ಅವಳು ಮಾವ ಶಿವು ಬಗ್ಗೆ ತುಂಬಾ ಕಾಳಜಿ ಹೊಂದಿದ್ದಾಳೆ.
- Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಪಾರು, ಶಿವು ಪ್ರೀತಿಯಲ್ಲಿ ಮುಳುಗಿದ್ದಾಳೆ. ಆದರೆ ಅವಳಿಗೆ ಇದರ ಬಗ್ಗೆ ಅರಿವಿಲ್ಲ. ತನಗೇ ಗೊತ್ತಿಲ್ಲದ ಹಾಗೇ ಅವಳು ಮಾವ ಶಿವು ಬಗ್ಗೆ ತುಂಬಾ ಕಾಳಜಿ ಹೊಂದಿದ್ದಾಳೆ.
(1 / 8)
ಪಾರು ಹಾಗೂ ಶಿವು ಮದುವೆಯಾದ ಸಂದರ್ಭ ಸರಿ ಇರಲಿಲ್ಲ. ಆದರೆ ಅವರ ಜೀವನ ಈಗ ಚೆನ್ನಾಗಿದೆ. ಶಿವು ಅಂದುಕೊಳ್ಳದೇ ಇದ್ದರೂ ಅವನ ಜೀವನದಲ್ಲಿ ಕೆಲವು ಬದಲಾವಣೆ ಆಗಿದೆ.
(Zee Kannada)(2 / 8)
ಶಿವು ಬಗ್ಗೆ ಅಂಗಡಿಯಲ್ಲಿ ಯಾರೋ ಏನೋ ಹೇಳಿದ್ರು ಅಂತ, ಪಾರು ತುಂಬಾ ಸಿಟ್ಟಾಗಿ..ಕೈಯ್ಯಲ್ಲಿ ಪೊರಕೆ ಹಿಡಿದುಕೊಂಡು ಬೈದಿದ್ದಾಳೆ. ಊರವರೆಲ್ಲ ಅದನ್ನು ನೋಡಿದ್ದಾರೆ.
(Zee Kannada)(3 / 8)
ಅದೇ ಕಾರಣಕ್ಕೆ ಮನೆಯಲ್ಲಿ ಆ ಬಗ್ಗೆ ಮಾತಾಡುತ್ತಿದ್ದಾರೆ. ಆದರೆ ರಾಣಿ ಹೇಳಿರುವ ಮಾತು ಮಾತ್ರ ಪಾರು ಹೃದಯಕ್ಕೆ ನಾಟುವಂತಿದೆ.
(Zee Kannada)(4 / 8)
ಪಾರು ತಾನು ಯಾಕೆ ಎಲ್ಲರ ಮುಂದೆ ಆ ರೀತಿ ವರ್ತನೆ ಮಾಡಿದ್ದೆ? ಎಂದು ಆಲೋಚನೆ ಮಾಡುತ್ತಾ ಇರುತ್ತಾಳೆ.. ಆಗ ರಾಣಿ ಅವಳಿಗೆ ಸಮಾಧಾನ ಮಾಡಿದ್ದಾಳೆ.
(Zee Kannada)(5 / 8)
ರಶ್ಮಿಯಂತೂ ಅತ್ತಿಗೆ ಮಾಡಿದ ಕಾರ್ಯ ಮೆಚ್ಚಿಕೊಂಡಿದ್ದಾಳೆ. ಅತ್ತಿಗೆ ನೀನು ಮಾಡಿದ್ದು ಸರಿಯೇ ಇದೆ ಎಂದು ಹೇಳಿದ್ದಾಳೆ.
(Zee Kannada)(6 / 8)
ಪಾರುಗೆ ಎಲ್ಲರೂ ಸೇರಿ ದೃಷ್ಟಿ ತೆಗೆದಿದ್ದಾರೆ. ಯಾರ ದೃಷ್ಟಿಯೂ ಅತ್ತಿಗೆಗೆ ತಾಗದಿರಲಿ ಎಂದು ಹೇಳುತ್ತಿದ್ದಾರೆ.
(Zee Kannada)(7 / 8)
ಆದರೆ ರಾಣಿ ಹೇಳಿದ ಮಾತಿನ ಪ್ರಕಾರ ಪಾರು ತನ್ನ ಮಾವ ಶಿವುನನ್ನು ಮನಸಾರೆ ಪ್ರೀತಿಸಲು ಆರಂಭಿಸಿದ್ದಾಳೆ. ಆಲೋಚನೆ ಮಾಡಿದಾಗ ಪಾರುಗೆ ಹಳೆ ದಿನಗಳು ನೆನಪಾಗಿದೆ.
(Zee Kannada)ಇತರ ಗ್ಯಾಲರಿಗಳು