Annayya Serial: ಪತ್ನಿಯರ ಮುಂದೆ ಬಯಲಾಯ್ತು ವೀರಭದ್ರನ ಗುಟ್ಟು; ಶಿವು ಪ್ರೀತಿ ಪಡೆದುಕೊಳ್ಳಲು ಪಾರು ಚಡಪಡಿಕೆ
- Annayya Serial: ವೀರಭದ್ರ ರಶ್ಮಿ ಮದುವೆ ಮುರಿಯಲು ಪ್ರಯತ್ನಿಸುತ್ತಿದ್ದಾನೆ ಎಂಬ ವಿಚಾರ ಈಗ ಅವನ ಪತ್ನಿಯರಿಗೆ ಗೊತ್ತಾಗಿದೆ. ಇತ್ತ ಪಾರು ಶಿವು ಪ್ರೀತಿ ಪಡೆದುಕೊಳ್ಳಲು ಚಡಪಡಿಸುತ್ತಿದ್ದಾಳೆ.
- Annayya Serial: ವೀರಭದ್ರ ರಶ್ಮಿ ಮದುವೆ ಮುರಿಯಲು ಪ್ರಯತ್ನಿಸುತ್ತಿದ್ದಾನೆ ಎಂಬ ವಿಚಾರ ಈಗ ಅವನ ಪತ್ನಿಯರಿಗೆ ಗೊತ್ತಾಗಿದೆ. ಇತ್ತ ಪಾರು ಶಿವು ಪ್ರೀತಿ ಪಡೆದುಕೊಳ್ಳಲು ಚಡಪಡಿಸುತ್ತಿದ್ದಾಳೆ.
(1 / 8)
ಯಾಕೋ ವೀರಭದ್ರ ತನ್ನ ತವರಿಗೆ ಕೇಡು ಬಯಸುತ್ತಿದ್ದಾನೆ ಎಂದು ವೀರಭದ್ರನ ಮೊದಲನೇ ಪತ್ನಿ ಅಂದರೆ ಪಾರು ತಾಯಿಗೆ ಅನುಮಾನ ಬಂದಿತ್ತು.
(Zee Kannada)(2 / 8)
ವೀರಭದ್ರನ ಫೊನ್ ರಿಂಗಾಗುತ್ತದೆ. ಆಗ ಅವಳೇ ಕಾಲ್ ರಿಸೀವ್ ಮಾಡಿ ಮಾತಾಡುತ್ತಾಳೆ. ಆಗ ಅವಳಿಗೆ ಆಘಾತಕಾರಿ ವಿಷಯ ತಿಳಿಯುತ್ತದೆ. ವರದಕ್ಷಿಣೆ ವಿಚಾರವನ್ನು ಆತ ಮಾತಾಡುತ್ತಾನೆ.
(Zee Kannada)(3 / 8)
ಕಾಲ್ ರಿಸೀವ್ ಮಾಡಿ ಒಂದೂ ಮಾತಾಡದೇ ಅವಳಿ ನಿಂತು ಕೇಳಿಸಿಕೊಂಡಾಗ ಶಾಕ್ ಆಗುತ್ತದೆ. ತನ್ನ ಗಂಡನೇ ರಶ್ಮಿ ಮದುವೆ ಮುರಿಯಲು ಪ್ರಯತ್ನಿಸುತ್ತಿರುವುದು ಎಂದು ಅವಳಿಗೆ ಅರ್ಥವಾಗುತ್ತದೆ.
(Zee Kannada)(4 / 8)
ಇತ್ತ ಪಾರು ಶಿವು ಯಾವತ್ತಿದ್ದರೂ ನನ್ನವನೇ, ಅವನ ಹಾಗೂ ನನ್ನ ನಡುವೆ ಯಾರೂ ಬರಬಾರದು ಆ ರೀತಿ ನಾನು ನೋಡಿಕೊಳ್ಳುತ್ತೇನೆ ಎಂದು ಅಂದುಕೊಳ್ಳುತ್ತಾ ಇರುತ್ತಾಳೆ.
(Zee Kannada)(5 / 8)
ಅಷ್ಟರಲ್ಲೇ ಯಾರೋ ಮನೆ ಬಾಗಿಲು ತಟ್ಟುತ್ತಾರೆ. ಹೊರಗಡೆ ಬಂದು ನೋಡಿದರೆ ಪಾರುಗೆ ಶಾಕ್ ಕಾದಿರುತ್ತದೆ.
(Zee Kannada)(7 / 8)
ಪಾರುಗೆ ಈಗ ನಿಜವಾಗಿಯೂ ಶಿವು ಮೇಲೆ ಪ್ರೀತಿ ಆಗಿದೆ. ಈ ಹಿಂದೆ ಅವಳು ತನ್ನ ತಂದೆ ಮುಂದೆ ಮಾತ್ರ ನಾಟಕ ಮಾಡುತ್ತಿದ್ದಳು. ಈಗ ಸ್ವತಃ ಅವಳೇ ಶಿವು ಪ್ರೀತಿಯಲ್ಲಿ ಮುಳುಗಿದ್ದಾಳೆ.
(Zee Kannada)ಇತರ ಗ್ಯಾಲರಿಗಳು