200 ಸಂಚಿಕೆ ಪೂರೈಸಿದ ಅಣ್ಣಯ್ಯ ಧಾರಾವಾಹಿ; ನಿನ್ನೆ ಏನಾಯ್ತು ಅಂತೀರಾ, ಇಲ್ಲಿದೆ ಚಾಟಿಯೇಟು ಮತ್ತು ಸರ್ಟಿಫಿಕೇಟ್‌ ಸ್ಟೋರಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  200 ಸಂಚಿಕೆ ಪೂರೈಸಿದ ಅಣ್ಣಯ್ಯ ಧಾರಾವಾಹಿ; ನಿನ್ನೆ ಏನಾಯ್ತು ಅಂತೀರಾ, ಇಲ್ಲಿದೆ ಚಾಟಿಯೇಟು ಮತ್ತು ಸರ್ಟಿಫಿಕೇಟ್‌ ಸ್ಟೋರಿ

200 ಸಂಚಿಕೆ ಪೂರೈಸಿದ ಅಣ್ಣಯ್ಯ ಧಾರಾವಾಹಿ; ನಿನ್ನೆ ಏನಾಯ್ತು ಅಂತೀರಾ, ಇಲ್ಲಿದೆ ಚಾಟಿಯೇಟು ಮತ್ತು ಸರ್ಟಿಫಿಕೇಟ್‌ ಸ್ಟೋರಿ

ಜೀ ಕನ್ನಡ ವಾಹಿನಿಯ ಅಣ್ಣಯ್ಯ ಧಾರಾವಾಹಿ ಆರಂಭವಾಗಿ ಇಂದಿಗೆ (ಮೇ 16) 200 ಸಂಚಿಕೆಗಳಾಗಿವೆ. ಅಣ್ಣ ಮತ್ತು ತಂಗಿಯರ ಈ ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ತಲುಪುವಲ್ಲಿ ಯಶಸ್ವಿಯಾಗಿದೆ. ಅಣ್ಣಯ್ಯ ಸೀರಿಯಲ್‌ನಲ್ಲಿ ನಿನ್ನೆ ಏನಾಯ್ತು ಎಂದು ತಿಳಿಯೋಣ ಬನ್ನಿ.

ಮೆಡಿಕಲ್‌ ಸರ್ಟಿಫಿಕೇಟ್‌ ಸ್ಟೋರಿ: ಗೆಳತಿ ಕೀರ್ತಿಗೆ ಈಗಾಗಲೇ ಮೆಡಿಕಲ್‌ ಲೈಸನ್ಸ್‌ ಸಿಕ್ಕಿರುವ ವಿಚಾರ ತಿಳಿದ ಪಾರು ಬಹುಶ: ತವರು ಮನೆ ಅಡ್ರೆಸ್‌ಗೆ ನನ್ನ ಲೈಸನ್ಸ್‌ ಬಂದಿರಬಹುದು ಎಂದುಕೊಳ್ಳುತ್ತಾಳೆ. ಲೈಸನ್ಸ್‌ ತೆಗೆದುಕೊಂಡು ಬರಲು ಶಿವು ಮಾವನ ಮನೆಗೆ ಹೋಗುತ್ತಾನೆ. ಆದರೆ ವೀರಭದ್ರ, ತನಗೆ ಯಾವ ಲೈಸನ್ಸ್‌ ಬಂದಿಲ್ಲವೆಂದು ಸುಳ್ಳು ಹೇಳುತ್ತಾನೆ. ಶಿವು ಜೊತೆ ಸುಶೀಲಾ ಮಾತನಾಡಬಾರದು ಎಂಬ ಕಾರಣಕ್ಕೆ ಅವಳು ಕಾಫಿ ಮಾಡಲು ಹೋದಾಗ ಅಡುಗೆ ಮನೆ ಬಾಗಿಲು ಹಾಕಿ ಬರುತ್ತಾನೆ.
icon

(1 / 11)

ಅಡುಗೆ ಮನೆಗೆ ಇದ್ದ ಮತ್ತೊಂದು ಬಾಗಿಲಿನಿಂದ ಸುಶೀಲಾ ಹೊರಗೆ ಬರುತ್ತಾಳೆ. ಆಗಲೇ ಬಂದು ಶಿವು ಜೊತೆ ಮಾತನಾಡಬೇಡ ಎಂದು ಏಕೆ ಧಮ್ಕಿ ಹಾಕಿ ಬಂದ್ರಿ? ಅಷ್ಟೇ ಅಲ್ಲದೆ ಅಡುಗೆ ಮನೆ ಬಾಗಿಲು ಹಾಕಿಕೊಂಡು ಬಂದಿದ್ದೀರ ಎಂದು ಸುಶೀಲಾ ಕೇಳುತ್ತಾಳೆ. ಆ ಮಾತು ಕೇಳಿ ಶಿವು ಆಶ್ಚರ್ಯಗೊಳ್ಳುತ್ತಾನೆ.
icon

(2 / 11)

ಸುಶೀಲಾ ತಮಾಷೆಯಾಗಿ ಮಾತನಾಡುತ್ತಾಳೆ. ಅಡುಗೆ ಮನೆಯಲ್ಲಿ ಒಗ್ಗರಣೆ ಘಾಟು ಮನೆಯೆಲ್ಲಾ ತುಂಬಿಕೊಳ್ಳಬಾರದು ಎಂದು ಬಾಗಿಲು ಹಾಕಿಕೊಂಡು ಬಂದೆ ಎಂದು ವೀರಭದ್ರ ಹೇಳುತ್ತಾನೆ. ಸುಳ್ಳು ಹೇಳುವುದಕ್ಕೂ ಮಿತಿ ಇರುತ್ತದೆ ಎಂದು ಸುಶೀಲಾ ಕೋಪಗೊಳ್ಳುತ್ತಾಳೆ.
icon

(3 / 11)

ಛತ್ರಿ ಜೊತೆ ಹೋಗುತ್ತಿದ್ದ ಶಿವುನನ್ನು ಸುಶೀಲಾ ತಡೆಯುತ್ತಾಳೆ. ನೀನು ಇಲ್ಲಿಗೆ ಬಂದ ಉದ್ಧೇವನ್ನೇ ಮರೆತೆಯಲ್ಲ ಶಿವು ಎನ್ನುತ್ತಾಳೆ. ಹೌದು ನಾನು ಪಾರ್ವತಿ ಲೈಸನ್ಸ್‌ ಪಡೆಯಲು ಬಂದೆ ಎಂದು ಶಿವು ಹೇಳುತ್ತಾನೆ.
icon

(4 / 11)

 ಪಾರ್ವತಿ ಲೈಸನ್ಸ್‌ ಆಗಲೇ ಬಂತು. ಆದರೆ ಮಗಳು ಕ್ಲಿನಿಕ್‌ ಇಡಬಾರದು, ಡಾಕ್ಟರ್‌ ಆಗಬಾರದು ಎಂಬ ಕಾರಣಕ್ಕೆ ನಿನ್ನ ಮಾವ ಅದನ್ನು ಹರಿದುಹಾಕಿದ್ದಾರೆ. ಇಷ್ಟು ದಿನ ನೀನು ದೇವರು ಅಂದುಕೊಂಡಿದ್ದ ನಿಮ್ಮ ಮಾವ ರಾಕ್ಷಸನಂಥವರು ಎಂದು ವೀರಭದ್ರ ಹರಿದ ಸರ್ಟಿಫೀಕೇಟನ್ನು ತೋರಿಸುತ್ತಾಳೆ. ಅದನ್ನು ನೋಡಿ ಶಿವು ಕೆಂಡಾಮಂಡಲವಾಗುತ್ತಾನೆ. ಆದರೆ ಇಷ್ಟೆಲ್ಲಾ ವೀರಭದ್ರನ ಕನಸಾಗಿರುತ್ತದೆ.
icon

(5 / 11)

ಲೈಸನ್ಸ್‌ ಹರಿದುಹಾಕಿರುವ ವಿಚಾರ ಗೊತ್ತಾದರೆ ಶಿವು ಹೇಗೆ ಪ್ರತಿಕ್ರಿಯಿಸುತ್ತಾನೆ ಅನ್ನೋದನ್ನು ನೆನೆದು ವೀರಭದ್ರ ಭಯಗೊಳ್ಳುತ್ತಾನೆ. ನೀನು ಕೇಳಿದ ಲೈಸನ್ಸ್‌ ಯಾವುದೂ ಬಂದಿಲ್ಲ ಶಿವು. ನನ್ನ ಮಗಳಿಗೆ ಒಳ್ಳೆಯದು ಮಾಡಲು ಸ್ವಲ್ಪ ಅವಕಾಶ ಸಿಕ್ಕರೂ ಸಾಕು ಅಂತದಲ್ಲಿ ಲೈಸನ್ಸ್‌ ಬಂದರೆ ನಾನು ಕೊಡದೆ ಇರುತ್ತೀನಾ ಎಂದು ವೀರಭದ್ರ ಹೇಳುತ್ತಾನೆ. ಶಿವು ಬೇಸರದಿಂದಲೇ ಮನೆಗೆ ವಾಪಸ್‌ ಆಗುತ್ತಾನೆ. ಪಾರು ಕೂಡಾ ವಿಚಾರ ತಿಳಿದು ಶಿವುಗೆ ಸಮಾಧಾನ ಮಾಡುತ್ತಾಳೆ.
icon

(6 / 11)

 ಲೈಸನ್ಸ್‌ ಇಲ್ಲಿಗೂ ಬಂದಿಲ್ಲ, ಅಪ್ಪನ ಮನೆಗೂ ಹೋಗಿಲ್ಲ ಎಂದರೆ ಬಹುಶ: ಅದು ಪೋಸ್ಟ್‌ ಆಫೀಸಿಗೆ ವಾಪಸ್‌ ಹೋಗಿರಬಹುದು ಎನ್ನುತ್ತಾಳೆ. ಅದು ನನ್ನ ಕೈಗೆ ಸಿಕ್ಕಾಗಲೇ ನನಗೆ ಸಮಾಧಾನ ಎಂದು ಶಿವು ಹೇಳುತ್ತಾನೆ. ಲೈಸನ್ಸ್‌ ಕಳೆದುಹೋದರೆ ಮತ್ತೊಂದು ಪಡೆಯಲು ಸಾಧ್ಯವಿಲ್ಲವೇ ಎಂದು ರಾಣಿ ಕೇಳುತ್ತಾಳೆ. ಇಲ್ಲ, ಈಗ ನಕಲಿ ವೈದ್ಯರು ಹೆಚ್ಚಾಗಿದ್ದಾರೆ ಎಂಬ ಕಾರಣಕ್ಕೆ ಅದು ಸುಲಭವಾಗಿ ದೊರೆಯುವುದಿಲ್ಲ. ಮತ್ತೊಂದು ಬೇಕೆಂದರೆ ಅದು ಬಹಳ ವರ್ಷಗಳೇ ಬೇಕಾಗುತ್ತದೆ ಎಂದು ಪಾರು ಹೇಳುತ್ತಾಳೆ.
icon

(7 / 11)

ಚಾಟಿಯೇಟು ಸ್ಟೋರಿ: ರತ್ನ ಸ್ಕೂಲ್‌ಗೆ ಹೋಗುವ ದಾರಿಯಲ್ಲಿ ಮಾರಮ್ಮನನ್ನು ಹೊರುವವರು ಚಾಟಿಯಿಂದ ಯಾವುದೋ ವ್ಯಕ್ತಿಗೆ ಹೊಡೆಯುತ್ತಿರುತ್ತಾರೆ. ದೇವರ ಹೆಸರಿನಲ್ಲಿ ಮತ್ತೊಬ್ಬರಿಗೆ ಹೊಡೆಯುವುದು ತಪ್ಪು ಹೊಡೆಯುವುದನ್ನು ನಿಲ್ಲಿಸಿ ಎಂದು ರೇಗುತ್ತಾಳೆ. ಹೊಡೆಸಿಕೊಳ್ಳುತ್ತಿದ್ದ ವ್ಯಕ್ತಿ ಬಳಿ ಹೋಗಿ ಮೇಲೆ ಏಳಿ ಎಂದು ಎಬ್ಬಿಸುತ್ತಾಳೆ. ಆದರೆ ಅದು ಪರಶು ಎಂದು ತಿಳಿದು ಶಾಕ್‌ ಆಗುತ್ತಾಳೆ.
icon

(8 / 11)

ರತ್ನಳನ್ನು ನೋಡಿ ಪರಶು ಏನೂ ಮಾತನಾಡದೆ ಮೇಲೆ ಎದ್ದು ಚಾಟಿ ಏಟು ಹೊಡೆದವರ ಬಳಿ ಹೋಗಿ ದುಡ್ಡು ಕೊಟ್ಟು ಅವರಿಗೆ ನಮಸ್ಕರಿಸಿ ತಲೆ ತಗ್ಗಿಸಿಕೊಂಡು ಅಲ್ಲಿಂದ ಹೋಗುತ್ತಾನೆ. ಪರಶು ವರ್ತನೆ ನೋಡಿ ರತ್ನ ಆಶ್ಚರ್ಯಗೊಳ್ಳುತ್ತಾಳೆ. ಇವನು ನಿಜಕ್ಕೂ ಪರಶುನೇನಾ ಎಂದು ತನ್ನಲ್ಲೇ ಪ್ರಶ್ನೆ ಕೇಳಿಕೊಳ್ಳುತ್ತಾಳೆ.
icon

(9 / 11)

ದೇವಿಯನ್ನು ಹೊರುವವರ ಬಳಿ ಹೋಗಿ, ಕ್ಷಮಿಸಿ ಆಗಲೇ ನಿಮ್ಮ ಬಳಿ ಬಹಳ ಏರುದನಿಯಲ್ಲಿ ಮಾತನಾಡಿದೆ, ನೀವು ಅವರಿಗೆ ಏಕೆ ಹೊಡೆದದ್ದು ಎಂದು ಕೇಳುತ್ತಾಳೆ. ಅವರು ಯಾವುದೋ ಹುಡುಗಿಯ ಕೈ ಹಿಡಿದು ಎಳೆದಿದ್ದೇನೆ, ಅವರ ಮನೆಯವರ ಬಳಿ ಕೆಟ್ಟದಾಗಿ ನಡೆದುಕೊಂಡಿದ್ದೇನೆ. ದೇವರ ಬಳಿ ಕ್ಷಮೆ ಕೇಳಿದರೂ ನನಗೆ ಸಮಾಧಾನ ಆಗುತ್ತಿಲ್ಲ, ಆದ್ದರಿಂದ ಚಾಟಿಯಿಂದ ಹೊಡೆಸಿಕೊಳ್ಳುವುದಾಗಿ ಹರಕೆ ಕಟ್ಟಿಕೊಂಡಿರುವುದಾಗಿ ನನ್ನ ಬಳಿ ಹೇಳಿದರು. ಈಗ ಚಾಟಿ ಏಟು ಹೊಡೆಸಿಕೊಂಡು ಹರಕೆ ತೀರಿಸಿದ್ದಾರೆ ಎಂದು ಹೇಳುತ್ತಾರೆ.
icon

(10 / 11)

 ಆ ಮಾತು ಕೇಳಿ ರತ್ನಳಿಗೆ ಪರಶುನನ್ನು ನಂಬುವುದೋ, ಬಿಡುವುದೋ ಎಂಬ ಗೊಂದಲ ಶುರುವಾಗುತ್ತದೆ. ಇಂದಿನ 200ನೇ ಸಂಚಿಕೆಯಲ್ಲಿ ಈ ಕಥೆ ಮುಂದುವರೆಯಲಿದೆ.
icon

(11 / 11)

ಆ ಮಾತು ಕೇಳಿ ರತ್ನಳಿಗೆ ಪರಶುನನ್ನು ನಂಬುವುದೋ, ಬಿಡುವುದೋ ಎಂಬ ಗೊಂದಲ ಶುರುವಾಗುತ್ತದೆ. ಇಂದಿನ 200ನೇ ಸಂಚಿಕೆಯಲ್ಲಿ ಈ ಕಥೆ ಮುಂದುವರೆಯಲಿದೆ.

Praveen Chandra B

TwittereMail
ಪ್ರವೀಣ್ ಚಂದ್ರ ಪುತ್ತೂರು: 'ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ'ದಲ್ಲಿ ಸಹಾಯಕ ಸುದ್ದಿ ಸಂಪಾದಕ. ಒನ್‌ ಇಂಡಿಯಾ, ವಿಜಯ ಕರ್ನಾಟಕದಲ್ಲಿ ಒಟ್ಟು 16 ವರ್ಷಗಳ ಅನುಭವ. ಆನ್‌ಲೈನ್‌ ಪತ್ರಿಕೋದ್ಯಮದಲ್ಲಿ ಎತ್ತರದ ಸಾಧನೆ ಮಾಡುವ ಕನಸು. ಡಿಜಿಟಲ್‌ ಜಗತ್ತಿನಲ್ಲಿ ಹೊಸತನ್ನು ಕಲಿಯುವ ಆಸಕ್ತಿ. ಮನರಂಜನೆ, ಶಿಕ್ಷಣ, ಉದ್ಯೋಗ, ತಂತ್ರಜ್ಞಾನ, ವಾಣಿಜ್ಯ, ಕರ್ನಾಟಕ, ದೇಶ- ವಿದೇಶ, ಸಿನಿಮಾ, ಷೇರುಪೇಟೆ, ಜೀವನಶೈಲಿ... ಹಲವು ವಿಚಾರಗಳ ಬಗ್ಗೆ ತಳಸ್ಪರ್ಶಿಯಾಗಿ ಬರೆಯಬಲ್ಲರು. ಎಸ್‌ಇಒ ತಂತ್ರಗಳನ್ನು ಪತ್ರಿಕೋದ್ಯಮದ ಹದಕ್ಕೆ ಪಳಗಿಸುವ ಸಾಮರ್ಥ್ಯ ರೂಢಿಸಿಕೊಂಡವರು. ಇಮೇಲ್: praveen.chandra@htdigital.in

ಇತರ ಗ್ಯಾಲರಿಗಳು