OTT News: ಅಕ್ವಾಮ್ಯಾನ್‌ನಿಂದ ಫಾಸ್ಟ್‌ ಎಕ್ಸ್‌ವರೆಗೆ ಒಟಿಟಿಯಲ್ಲಿ ವೀಕ್ಷಿಸಲೇಬೇಕಾದ 2023ರ 5 ಬಿಗ್ ಬಜೆಟ್‌ ಸಿನಿಮಾಗಳು ಹೀಗಿವೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Ott News: ಅಕ್ವಾಮ್ಯಾನ್‌ನಿಂದ ಫಾಸ್ಟ್‌ ಎಕ್ಸ್‌ವರೆಗೆ ಒಟಿಟಿಯಲ್ಲಿ ವೀಕ್ಷಿಸಲೇಬೇಕಾದ 2023ರ 5 ಬಿಗ್ ಬಜೆಟ್‌ ಸಿನಿಮಾಗಳು ಹೀಗಿವೆ

OTT News: ಅಕ್ವಾಮ್ಯಾನ್‌ನಿಂದ ಫಾಸ್ಟ್‌ ಎಕ್ಸ್‌ವರೆಗೆ ಒಟಿಟಿಯಲ್ಲಿ ವೀಕ್ಷಿಸಲೇಬೇಕಾದ 2023ರ 5 ಬಿಗ್ ಬಜೆಟ್‌ ಸಿನಿಮಾಗಳು ಹೀಗಿವೆ

  • ಕಳೆದ ವರ್ಷ ಹಾಲಿವುಡ್‌ ಮತ್ತು ಭಾರತೀಯ ಚಿತ್ರೋದ್ಯಮದಲ್ಲಿ ಒಂದಕ್ಕಿಂತ ಒಂದು ವಿಭಿನ್ನ ಸಿನಿಮಾಗಳು ತೆರೆಕಂಡಿವೆ. ಅದರಲ್ಲೂ ನೂರಾರು ಕೋಟಿ ಬಜೆಟ್‌ನಲ್ಲಿ ಸಾಕಷ್ಟು ಸಿನಿಮಾಗಳು ತೆರೆಗೆ ಬಂದಿವೆ. ಆ ಪೈಕಿ ಆಯ್ದ ಐದು ಸಿನಿಮಾಗಳು ಯಾವ ಒಟಿಟಿಯಲ್ಲಿ ಸ್ಟ್ರೀಮ್‌ ಆಗುತ್ತಿವೆ ಎಂಬುದರ ಮಾಹಿತಿ ಇಲ್ಲಿದೆ.

ಅಕ್ವಮ್ಯಾನ್ ಜಿಯೊಸಿನಿಮಾದಲ್ಲಿ ಲಭ್ಯ: ಸೂಪರ್‌ ಹೀರೋ ಪರಿಕಲ್ಪನೆಯ ಅಕ್ವಾಮ್ಯಾನ್‌ ಅಂಡ್‌ ದಿ ಲಾಸ್ಟ್‌ ಕಿಂಗ್‌ಡಮ್‌ ಸಿನಿಮಾ ಕಳೆದ ವರ್ಷದ ಬಿಡುಗಡೆಯಾಗಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿತ್ತು. ಜೇಮ್ಸ್‌ ವ್ಯಾನ್‌ ನಿರ್ದೇಶನದ ಈ ಸಿನಿಮಾವನ್ನು ಡಿಸಿ ಸ್ಟುಡಿಯೋಸ್ ಸಂಸ್ಥೆ ನಿರ್ಮಾಣ ಮಾಡಿತ್ತು. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾ, ಬಾಕ್ಸ್‌ ಆಫೀಸ್‌ನಲ್ಲಿ ಹಾಕಿದ ಬಂಡವಾಳಕ್ಕಿಂತಯ ದುಪ್ಪಟ್ಟು ಗಳಿಕೆ ಕಂಡಿತ್ತು. 2023ರ ಡಿಸೆಂಬರ್‌ನಲ್ಲಿ ಈ ಸಿನಿಮಾ ರಿಲೀಸ್‌ ಆಗಿತ್ತು. ಈ ಚಿತ್ರ ಜಿಯೋ ಸಿನಿಮಾ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು. 
icon

(1 / 5)

ಫಾಸ್ಟ್ ಎಕ್ಸ್  ಜಿಯೊಸಿನಿಮಾದಲ್ಲಿ ಲಭ್ಯ: ಅಮೆರಿಕನ್ ಆಕ್ಷನ್ ಥ್ರಿಲ್ಲರ್‌ ಫಾಸ್ಟ್‌ ಎಕ್ಸ್‌ ಚಿತ್ರ ಸಹ ಯಶಸ್ವಿ ಹಾಲಿವುಡ್‌ ಸಿನಿಮಾಗಳಲ್ಲೊಂದು. ವಿನ್‌ ಡಿಸೆಲ್‌ ನಾಯಕನಾಗಿ ನಟಿಸಿರುವ ಈ ಸಿನಿಮಾ ಫಾಸ್ಟ್‌ ಅಂಡ್‌ ಫ್ಯೂರಿಯಸ್‌ ಫ್ರಾಂಚೈಸಿಯ 10ನೇ ಕಂತಾಗಿದೆ. 34 ಕೋಟಿ ಅಮೆರಿಕನ್‌ ಡಾಲರ್‌ನಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ವಿನ್‌ ಡಿಸೆಲ್‌ ಜತೆಗೆ ಮಿಷೆಲ್ ರೊಡ್ರಿಗಸ್, ಟೈರೀಸ್ ಗಿಬ್ಸನ್, ಕ್ರಿಸ್ ಬ್ರಿಡ್ಜಸ್, ಜಾನ್‌ ಸೀನಾ ಮತ್ತಿತರರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಲೂಯಿಸ್‌ ಲೆಟ್ರಿರಿಯರ್‌ ಈ ಸಿನಿಮಾ ನಿರ್ದೇಶನ ಮಾಡಿದ್ದಾರೆ. ಈ ಹೈ ಆಕ್ಷನ್‌ ಸಿನಿಮಾವನ್ನು ಜಿಯೋ ಸಿನಿಮಾ ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು. 
icon

(2 / 5)

ಇಂಡಿಯಾನಾ ಜೋನ್ಸ್ ಡಿಸ್ನೀ+ಹಾಟ್ ಸ್ಟಾರ್‌ನಲ್ಲಿ ಲಭ್ಯ: ಜೇಮ್ಸ್ ಮ್ಯಾನ್‌ಗೋಲ್ಡ್ ನಿರ್ದೇಶನದ ಇಂಡಿಯಾನಾ ಜೋನ್ಸ್  ಅದ್ಭುತ ಅಮೆರಿಕನ್ ಸಾಹಸೀ ಸಿನಿಮಾ. ಕ್ಯಾಥ್ಲೀನ್ ಕೆನಡಿ, ಫ್ರಾಂಕ್ ಮಾರ್ಷಲ್ ಮತ್ತು ಸಿಮೋನ್ ಎಮ್ಯಾನ್ಯುಯೆಲ್ ನಿರ್ಮಾಣದ ಈ ಸಿನಿಮಾ ಅದ್ಭುತ ಅಮೆರಿಕನ್ ಸಾಹಸೀ ಕಳೆದ ವರ್ಷ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗಿದ್ದ ಈ ಸಿನಿಮಾ  ಅಷ್ಟೇ ಪ್ರಮಾಣದ ಗಳಿಕೆ ಮಾಡಿತ್ತು. 1969ರ ಕಾಲಘಟ್ಟದಲ್ಲಿ ಸಾಗುವ ಈ ಕಥೆಯಲ್ಲಿ ಆಕ್ಷನ್‌ ಅಡ್ವೆಂಚರ್‌ ಏರಿಳಿತಗಳೇ ಚಿತ್ರದ ಹೈಲೈಟ್.‌ ಈ ಸಿನಿಮಾ ಡಿಸ್ನಿ ಪ್ಲಸ್‌ ಹಾಟ್‌ಸ್ಟಾರ್‌ನಲ್ಲಿ ವೀಕ್ಷಿಸಬಹುದು. 
icon

(3 / 5)

ಲಿಯೊ ನೆಟ್ ಫ್ಲಿಕ್ ನಲ್ಲಿ ಲಭ್ಯ: ಲೋಕೇಶ್ ಕನಗರಾಜ್ ನಿರ್ಮಾಣ ಮತ್ತು ಸೆವೆನ್ ಸ್ಕ್ರೀನ್ ಸ್ಟುಡಿಯೊ ನಿರ್ಮಾಣದ ಲಿಯೋ ಸಿನಿಮಾ ಸಹ ದೊಡ್ಡ ಬಜೆಟ್‌ನಲ್ಲಿ ನಿರ್ಮಾಣವಾಗಿರುವ ಸಿನಿಮಾ. ದಳಪತಿ ವಿಜಯ್‌ ನಾಯಕನಾಗಿ ನಟಿಸಿರುವ ಈ ಸಿನಿಮಾದಲ್ಲಿ ಬಹುತಾರಾಗಣವೇ ಇದೆ. ಸಂಜಯ್ ದತ್, ಅರ್ಜುನ್ ಸರ್ಜಾ, ತ್ರಿಶಾ ಮತ್ತಿತರರು ಪ್ರಮುಖ ಪಾತ್ರದಲ್ಲಿದ್ದಾರೆ. ತಮಿಳಿನ ಈ ಸಿನಿಮಾವನ್ನು ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು. 
icon

(4 / 5)

ಜವಾನ್ ನೆಟ್ ಫ್ಲಿಕ್ ನಲ್ಲಿ ಲಭ್ಯ: ಅಟ್ಲಿ ಕುಮಾರ್‌ ನಿರ್ದೇಶನದ ಆಕ್ಷನ್‌ ಸಿನಿಮಾ ಜವಾನ್, ಶಾರುಖ್‌ ಖಾನ್‌ ವೃತ್ತಿ ಜೀವನದಲ್ಲಿ ಹೊಸ ಮೈಲಿಗಲ್ಲು. ಗೌರಿ ಖಾನ್ ನಿರ್ಮಾಣ  ಮತ್ತು ಗೌರವ್ ವರ್ಮಾ ರೆಡ್ ಚಿಲ್ಲೀಸ್ ಎಂಟರ್ಟೈನ್ ಮೆಂಟ್ ಅಡಿಯಲ್ಲಿ 300 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಈ ಸಿನಿಮಾದಲ್ಲಿ ತಂದೆ ಹಾಗೂ ಮಗನ ಡಬಲ್‌ ಶೇಡ್‌ನಲ್ಲಿ ಶಾರುಖ್‌ ಖಾನ್‌ ಕಾಣಿಸಿಕೊಂಡಿದ್ದಾರೆ. ಇನುಳಿದಂತೆ ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ, ಪ್ರಿಯಾಮಣಿ ಮತ್ತು ಸಾನ್ಯಾ ಮಲ್ಹೋತ್ರಾ ನಟಿಸಿದ್ದಾರೆ. ಈ ಸಿನಿಮಾ ನೆಟ್‌ಫ್ಲಿಕ್ಸ್‌ನಲ್ಲಿ ವೀಕ್ಷಿಸಬಹುದು. 
icon

(5 / 5)

ಇತರ ಗ್ಯಾಲರಿಗಳು