Archery at Olympics: ಆರ್ಚರಿಯಲ್ಲಿ ಕ್ವಾರ್ಟರ್ಫೈನಲ್ನಲ್ಲೇ ಮುಗ್ಗರಿಸಿದ ಭಾರತ ಮಹಿಳಾ ತಂಡ
- Paris Olympics 2024: ಭಾರತದ ಅಂಕಿತಾ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ 51-52, 49-54, 48-53 ಸೆಟ್ಗಳಿಂದ ನೆದರ್ಲೆಂಡ್ಸ್ ವಿರುದ್ಧ ಹೀನಾಯ ಸೋಲು ಕಂಡಿದ್ದಾರೆ.
- Paris Olympics 2024: ಭಾರತದ ಅಂಕಿತಾ ಭಕತ್, ಭಜನ್ ಕೌರ್ ಮತ್ತು ದೀಪಿಕಾ ಕುಮಾರಿ 51-52, 49-54, 48-53 ಸೆಟ್ಗಳಿಂದ ನೆದರ್ಲೆಂಡ್ಸ್ ವಿರುದ್ಧ ಹೀನಾಯ ಸೋಲು ಕಂಡಿದ್ದಾರೆ.
(1 / 7)
2024ರ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಮಹಿಳೆಯರ ಆರ್ಚರಿಯಲ್ಲಿ ಭಾರತ ಆರ್ಚರಿ ತಂಡ ನಿರಾಸೆ ಮೂಡಿಸಿದ್ದು, ಕ್ವಾರ್ಟರ್ ಫೈನಲ್ನಲ್ಲಿ ನೆದರ್ಲೆಂಡ್ಸ್ ವಿರುದ್ಧ ಹೀನಾಯ ಸೋಲನುಭವಿಸಿದೆ. 6-0 ಅಂತರದಿಂದ ಭಾರತ ತಂಡ ಡಚ್ಚರಿಗೆ ಶರಣಾಯಿತು.
(2 / 7)
ದೀಪಿಕಾ ಕುಮಾರಿ, ಅಂಕಿತಾ ಭಕತ್ ಮತ್ತು ಭಜನ್ ಕೌರ್ ಅವರನ್ನೊಳಗೊಂಡ 4ನೇ ಶ್ರೇಯಾಂಕದ ಭಾರತ ತಂಡವು ಮೂರು ಸೆಟ್‌ಗಳಲ್ಲಿ ಗಳಿಸಿದ್ದು 51, 49 ಮತ್ತು 48 ಅಂಕ ಮಾತ್ರ. ಈ ಪೈಕಿ 5 ಬಾರಿ 10 ಅಂಕಗಳನ್ನು ಸಂಪಾದಿಸಿತು.
(3 / 7)
ನೆದರ್ಲೆಂಡ್ಸ್ ತಂಡದ ಕ್ವಿಂಟ್ ರಾಫಿನ್, ಗ್ಯಾಬಿ ಸ್ಕ್ಲೋಸರ್ ಮತ್ತು ಲಾರಾ ವಾನ್ ಡೆರ್ ವಿಂಕೆಲ್ ಅವರು ಕೇವಲ 3 ಬಾರಿ 10 ಅಂಕಗಳನ್ನು ಗಳಿಸಿದರು. ಆದರೆ ಸತತ 9 ಅಂಕಗಳನ್ನು ಗಳಿಸಿ ತಂಡದ ಗೆಲುವಿನಲ್ಲಿ ನೆರವಾದರು. ಆ ಮೂಲಕ 140 ಕೋಟಿ ಭಾರತೀಯರ ಕನಸನ್ನು ನುಚ್ಚು ನೂರು ಮಾಡಿದರು.
(4 / 7)
ಮೊದಲ ಸೆಟ್ ಅನ್ನು ಭಾರತ 51-52 ಅಂಕಗಳಿಂದ ಕಳೆದುಕೊಂಡಿತು. ಭಜನ್ ಮೊದಲ ಸೆಟ್ನಲ್ಲಿ 2 ಬಾಣಗಳಲ್ಲಿ 10 ಮತ್ತು 9 ಅಂಕ ಗಳಿಸಿದರೆ, ದೀಪಿಕಾ 7 ಮತ್ತು 9 ಅಂಕ, ಅಂಕಿತಾ 2 ಬಾಣಗಳೊಂದಿಗೆ 7 ಮತ್ತು 9 ಅಂಕ ಗಳಿಸಿದರು.
(REUTERS)(5 / 7)
ಎರಡನೇ ಸೆಟ್ ಅನ್ನೂ ಭಾರತ 49-54 ಅಂತರದಿಂದ ಕಳೆದುಕೊಂಡಿತು. ನೆದರ್ಲೆಂಡ್ಸ್ 4-0 ಅಂತರದಲ್ಲಿ ಮುನ್ನಡೆ ಸಾಧಿಸಿತು. ಎರಡನೇ ಸೆಟ್ನಲ್ಲಿ ಭಜನ್ ಎರಡು ಬಾಣಗಳಲ್ಲಿ 10 ಮತ್ತು 9 ಅಂಕ, ದೀಪಿಕಾ 8 ಮತ್ತು 6 ಅಂಕ, ಅಂಕಿತಾ 10 ಮತ್ತು 6 ಅಂಕ ಗಳಿಸಿದರು.
(6 / 7)
ಮೂರನೇ ಸೆಟ್ನಲ್ಲಿ ಭಾರತ 48-53 ರಿಂದ ಕಳೆದುಕೊಂಡು ಹಿನ್ನಡೆ ಅನುಭವಿಸಿತು. ಹಾಗಾಗಿ, ನೆದರ್ಲೆಂಡ್ಸ್ ಕ್ವಾರ್ಟರ್ ಫೈನಲ್ನಲ್ಲಿ 6-0 ಸೆಟ್ ಪಾಯಿಂಟ್ಗಳಿಂದ ಮಣಿಸಿ ಸೆಮಿಫೈನಲ್ಗೆ ಅರ್ಹತೆ ಪಡೆಯಿತು. 2ನೇ ಸೆಟ್ನಲ್ಲಿ ಭಜನ್ ಎರಡು ಬಾಣಗಳಲ್ಲಿ 10 ಮತ್ತು 8 ಅಂಕ, ದೀಪಿಕಾ 8 ಮತ್ತು 10 ಅಂಕ, ಅಂಕಿತಾ 2 ಬಾಣಗಳೊಂದಿಗೆ 4 ಮತ್ತು 8 ಅಂಕ ಗಳಿಸಿ ನಿರಾಸೆ ಮೂಡಿಸಿದರು.
ಇತರ ಗ್ಯಾಲರಿಗಳು