ಕನ್ನಡ ಸುದ್ದಿ  /  Photo Gallery  /  Ashish Nehra Rejects Team India Coaching Offer Bcci Rohit Sharma Agarkar Want Rahul Dravid Contract To Be Extended Jra

ಟೀಮ್‌ ಇಂಡಿಯಾ ಕೋಚಿಂಗ್ ಆಫರ್ ತಿರಸ್ಕರಿಸಿದ ನೆಹ್ರಾ; ಮತ್ತೆ ದ್ರಾವಿಡ್‌ ಕಡೆ ಮುಖ ಮಾಡಿದ ಬಿಸಿಸಿಐ

  • Ashish Nehra: ಭಾರತ ಕ್ರಿಕೆಟ್‌ ತಂಡದ ಮುಂದಿನ ಕೋಚ್‌ ಆಗಲು ಬಿಸಿಸಿಐ ನೀಡಿದ ಆಫರ್‌ ಅನ್ನು ಮಾಜಿ ವೇಗಿ ಆಶಿಶ್‌ ನೆಹ್ರಾ ತಿರಸ್ಕರಿಸಿದ್ದಾರೆ. ಹೀಗಾಗಿ ಮುಂದಿನ ಟಿ20 ವಿಶ್ವಕಪ್‌ವರೆಗೆ ರಾಹುಲ್ ದ್ರಾವಿಡ್ ಅವರನ್ನೇ ಟೀಂ ಇಂಡಿಯಾದ ಮುಖ್ಯ ಕೋಚ್ ಆಗಿ ಮುಂದುವರೆಸಲು ಬಿಸಿಸಿಐ ಬಯಸಿದೆ.

ಏಕದಿನ ವಿಶ್ವಕಪ್‌ ಮುಕ್ತಾಯದ ಅವಧಿಗೆ, ಹಾಲಿ ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಕೋಚಿಂಗ್‌ ಅವಧಿ ಕೂಡಾ ಅಂತ್ಯವಾಗಿದೆ. ಹೀಗಾಗಿ ರಾಷ್ಟ್ರೀಯ ತಂಡದ ಕೋಚ್ ಆಗುವ ಬಿಸಿಸಿಐ ಪ್ರಸ್ತಾಪವನ್ನು ಆಶಿಶ್ ನೆಹ್ರಾ ತಿರಸ್ಕರಿಸಿದ್ದಾರೆ. ನೆಹ್ರಾ ಅವರು ಭಾರತ ತಂಡಕ್ಕೆ ಟಿ20 ಮಾದರಿಯಲ್ಲಿ ಕೋಚ್ ಆಗಬೇಕೆಂದು ಬಿಸಿಸಿಐ ಬಯಸಿತ್ತು. ಕಳೆದ ವಿಶ್ವಕಪ್ ಫೈನಲ್ ಬಳಿಕ ಭಾರತೀಯ ಕ್ರಿಕೆಟ್ ಮಂಡಳಿಯು ಈ ವಿಷಯವನ್ನು ಪರಿಗಣಿಸುವಂತೆ ನೆಹ್ರಾ ಬಳಿ ಕೇಳಿಕೊಂಡಿತ್ತು. ಆದರೆ ಅವರು ಒಪ್ಪಲಿಲ್ಲ ಎಂದು ವರದಿಯಾಗಿದೆ.
icon

(1 / 6)

ಏಕದಿನ ವಿಶ್ವಕಪ್‌ ಮುಕ್ತಾಯದ ಅವಧಿಗೆ, ಹಾಲಿ ಕೋಚ್‌ ರಾಹುಲ್‌ ದ್ರಾವಿಡ್‌ ಅವರ ಕೋಚಿಂಗ್‌ ಅವಧಿ ಕೂಡಾ ಅಂತ್ಯವಾಗಿದೆ. ಹೀಗಾಗಿ ರಾಷ್ಟ್ರೀಯ ತಂಡದ ಕೋಚ್ ಆಗುವ ಬಿಸಿಸಿಐ ಪ್ರಸ್ತಾಪವನ್ನು ಆಶಿಶ್ ನೆಹ್ರಾ ತಿರಸ್ಕರಿಸಿದ್ದಾರೆ. ನೆಹ್ರಾ ಅವರು ಭಾರತ ತಂಡಕ್ಕೆ ಟಿ20 ಮಾದರಿಯಲ್ಲಿ ಕೋಚ್ ಆಗಬೇಕೆಂದು ಬಿಸಿಸಿಐ ಬಯಸಿತ್ತು. ಕಳೆದ ವಿಶ್ವಕಪ್ ಫೈನಲ್ ಬಳಿಕ ಭಾರತೀಯ ಕ್ರಿಕೆಟ್ ಮಂಡಳಿಯು ಈ ವಿಷಯವನ್ನು ಪರಿಗಣಿಸುವಂತೆ ನೆಹ್ರಾ ಬಳಿ ಕೇಳಿಕೊಂಡಿತ್ತು. ಆದರೆ ಅವರು ಒಪ್ಪಲಿಲ್ಲ ಎಂದು ವರದಿಯಾಗಿದೆ.(PTI)

ಸದ್ಯ ನೆಹ್ರಾ ಅವರು ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದ ಮುಖ್ಯ ಕೋಚ್‌ ಆಗಿದ್ದಾರೆ. ಅತ್ತ ಹಾರ್ದಿಕ್ ಪಾಂಡ್ಯ ಹಠಾತ್ತನೆ ಗುಜರಾತ್ ಶಿಬಿರವನ್ನು ತೊರೆದರೂ, ನೆಹ್ರಾ ಮಾತ್ರ ಮುಂದಿನ ಋತುವಿಗೂ ಮುನ್ನ ಟೈಟಾನ್ಸ್ ಬಳಗದ ಜವಾಬ್ದಾರಿಯನ್ನು ಬಿಟ್ಟುಕೊಡಲು ಒಪ್ಪಿಲ್ಲ. ರಾಷ್ಟ್ರೀಯ ತಂಡದ ಕೋಚ್ ಆಗಿರುವವರು ಐಪಿಎಲ್‌ನಿಂದ ದೂರ ಉಳಿಯಬೇಕು. ಹೀಗಾಗಿ ನೆಹ್ರಾ ಅವರು ಬಿಸಿಸಿಐ ಆಫರ್‌ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.
icon

(2 / 6)

ಸದ್ಯ ನೆಹ್ರಾ ಅವರು ಐಪಿಎಲ್‌ನಲ್ಲಿ ಗುಜರಾತ್‌ ಟೈಟಾನ್ಸ್‌ ತಂಡದ ಮುಖ್ಯ ಕೋಚ್‌ ಆಗಿದ್ದಾರೆ. ಅತ್ತ ಹಾರ್ದಿಕ್ ಪಾಂಡ್ಯ ಹಠಾತ್ತನೆ ಗುಜರಾತ್ ಶಿಬಿರವನ್ನು ತೊರೆದರೂ, ನೆಹ್ರಾ ಮಾತ್ರ ಮುಂದಿನ ಋತುವಿಗೂ ಮುನ್ನ ಟೈಟಾನ್ಸ್ ಬಳಗದ ಜವಾಬ್ದಾರಿಯನ್ನು ಬಿಟ್ಟುಕೊಡಲು ಒಪ್ಪಿಲ್ಲ. ರಾಷ್ಟ್ರೀಯ ತಂಡದ ಕೋಚ್ ಆಗಿರುವವರು ಐಪಿಎಲ್‌ನಿಂದ ದೂರ ಉಳಿಯಬೇಕು. ಹೀಗಾಗಿ ನೆಹ್ರಾ ಅವರು ಬಿಸಿಸಿಐ ಆಫರ್‌ ತಿರಸ್ಕರಿಸಿದ್ದಾರೆ ಎನ್ನಲಾಗಿದೆ.(IPL)

ನೆಹ್ರಾ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರ ತರಬೇತಿಯತ್ತ ಗಮನ ಹರಿಸಿದ್ದಾರೆ. 2022ರಲ್ಲಿ ಐಪಿಎಲ್‌ಗೆ ಪ್ರವೇಶ ಪಡೆದ ಗುಜರಾತ್ ಟೈಟಾನ್ಸ್‌ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡರು. ಅವರ ಕೋಚಿಂಗ್‌ನಲ್ಲಿ ಟೈಟಾನ್ಸ್ ತಂಡವು ಚೊಚ್ಚಲ ಋತುವಿನಲ್ಲಿಯೇ ಚಾಂಪಿಯನ್ ಆಗಿ ಹೊರಹೊಮ್ಮಿತು. ಕಳೆದ ಋತುವಿನಲ್ಲಿ ನೆಹ್ರಾ ಕೋಚಿಂಗ್‌ನಲ್ಲಿ ಗುಜರಾತ್ ಮತ್ತೊಮ್ಮೆ ಇಂಡಿಯನ್ ಪ್ರೀಮಿಯರ್ ಲೀಗ್‌ನ ಫೈನಲ್‌ ತಲುಪಿತು.
icon

(3 / 6)

ನೆಹ್ರಾ ಕ್ರಿಕೆಟ್‌ನಿಂದ ನಿವೃತ್ತಿ ಪಡೆದ ನಂತರ ತರಬೇತಿಯತ್ತ ಗಮನ ಹರಿಸಿದ್ದಾರೆ. 2022ರಲ್ಲಿ ಐಪಿಎಲ್‌ಗೆ ಪ್ರವೇಶ ಪಡೆದ ಗುಜರಾತ್ ಟೈಟಾನ್ಸ್‌ ತಂಡದ ಮುಖ್ಯ ಕೋಚ್ ಆಗಿ ನೇಮಕಗೊಂಡರು. ಅವರ ಕೋಚಿಂಗ್‌ನಲ್ಲಿ ಟೈಟಾನ್ಸ್ ತಂಡವು ಚೊಚ್ಚಲ ಋತುವಿನಲ್ಲಿಯೇ ಚಾಂಪಿಯನ್ ಆಗಿ ಹೊರಹೊಮ್ಮಿತು. ಕಳೆದ ಋತುವಿನಲ್ಲಿ ನೆಹ್ರಾ ಕೋಚಿಂಗ್‌ನಲ್ಲಿ ಗುಜರಾತ್ ಮತ್ತೊಮ್ಮೆ ಇಂಡಿಯನ್ ಪ್ರೀಮಿಯರ್ ಲೀಗ್‌ನ ಫೈನಲ್‌ ತಲುಪಿತು.(Twitter)

ಸದ್ಯ ನೆಹ್ರಾ ಅವರು ಬಿಸಿಸಿಐ ಪ್ರಸ್ತಾಪ ತಿರಸ್ಕರಿಸಿದ್ದರಿಂದ ದ್ರಾವಿಡ್ ಅವರನ್ನು 2024ರ ಟಿ20 ವಿಶ್ವಕಪ್‌ವರೆಗೆ ಎಲ್ಲಾ ಸ್ವರೂಪಗಳಲ್ಲಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಮುಂದುವರೆಸಲು ಬಿಸಿಸಿಐ ಬಯಸಿದೆ. ಈಗಾಗಲೇ ದ್ರಾವಿಡ್‌ ಅವರ ಅವಧಿ ವಿಸ್ತರಣೆಗೆ ಮುಂದಾಗಿದೆ ಎಂದು ವರದಿಯಾಗಿದೆ. ಆದರೆ, ದ್ರಾವಿಡ್ ಒಪ್ಪಂದ ನವೀಕರಣದ ಕುರಿತು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.
icon

(4 / 6)

ಸದ್ಯ ನೆಹ್ರಾ ಅವರು ಬಿಸಿಸಿಐ ಪ್ರಸ್ತಾಪ ತಿರಸ್ಕರಿಸಿದ್ದರಿಂದ ದ್ರಾವಿಡ್ ಅವರನ್ನು 2024ರ ಟಿ20 ವಿಶ್ವಕಪ್‌ವರೆಗೆ ಎಲ್ಲಾ ಸ್ವರೂಪಗಳಲ್ಲಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಆಗಿ ಮುಂದುವರೆಸಲು ಬಿಸಿಸಿಐ ಬಯಸಿದೆ. ಈಗಾಗಲೇ ದ್ರಾವಿಡ್‌ ಅವರ ಅವಧಿ ವಿಸ್ತರಣೆಗೆ ಮುಂದಾಗಿದೆ ಎಂದು ವರದಿಯಾಗಿದೆ. ಆದರೆ, ದ್ರಾವಿಡ್ ಒಪ್ಪಂದ ನವೀಕರಣದ ಕುರಿತು ಇನ್ನೂ ಅಂತಿಮ ನಿರ್ಧಾರ ಕೈಗೊಂಡಿಲ್ಲ.(twitter\PTI)

ಭಾರತದ ಮುಖ್ಯ ಕೋಚ್ ಆಗಿ ದ್ರಾವಿಡ್ ಅವರೊಂದಿಗಿನ ಬಿಸಿಸಿಐ ಒಪ್ಪಂದವು 2023ರ ವಿಶ್ವಕಪ್‌ವರೆಗೆ ಇತ್ತು. ವಿಶ್ವಕಪ್ ಮುಗಿಯುತ್ತಿದ್ದಂತೆಯೇ ಒಪ್ಪಂದದ ಅವಧಿ ಮುಗಿದಿದೆ. ಸದ್ಯ ವಿವಿಎಸ್ ಲಕ್ಷ್ಮಣ್ ಅವರು ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.
icon

(5 / 6)

ಭಾರತದ ಮುಖ್ಯ ಕೋಚ್ ಆಗಿ ದ್ರಾವಿಡ್ ಅವರೊಂದಿಗಿನ ಬಿಸಿಸಿಐ ಒಪ್ಪಂದವು 2023ರ ವಿಶ್ವಕಪ್‌ವರೆಗೆ ಇತ್ತು. ವಿಶ್ವಕಪ್ ಮುಗಿಯುತ್ತಿದ್ದಂತೆಯೇ ಒಪ್ಪಂದದ ಅವಧಿ ಮುಗಿದಿದೆ. ಸದ್ಯ ವಿವಿಎಸ್ ಲಕ್ಷ್ಮಣ್ ಅವರು ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯಲ್ಲಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.(PTI)

ಟೀಮ್ ಇಂಡಿಯಾದ ಸದ್ಯದ ಕಾಯಂ ನಾಯಕ ರೋಹಿತ್ ಶರ್ಮಾ ಮತ್ತು ರಾಷ್ಟ್ರೀಯ ಆಯ್ಕೆಗಾರ ಅಜಿತ್ ಅಗರ್ಕರ್ ಕೂಡ ದ್ರಾವಿಡ್ ಅವರೇ 2024ರ ಟಿ20 ವಿಶ್ವಕಪ್‌ವರೆಗೆ ಕೋಚ್ ಆಗಿ ಉಳಿಯಬೇಕೆಂಬ ಇರಾದೆ ವ್ಯಕ್ತಪಡಿಸಿದ್ದಾರೆ. ದ್ರಾವಿಡ್ ಒಪ್ಪಂದವನ್ನು ವಿಸ್ತರಿಸಲು ಒಪ್ಪಿಕೊಂಡರೆ, ಬಿಸಿಸಿಐ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಮತ್ತು ಬೌಲಿಂಗ್ ಕೋಚ್ ಪರಶ್ ಮಾಂಬ್ರೆ ಅವರ ಒಪ್ಪಂದಗಳನ್ನು ಸಹ ನವೀಕರಿಸುವ ಸಾಧ್ಯತೆ ಇದೆ.
icon

(6 / 6)

ಟೀಮ್ ಇಂಡಿಯಾದ ಸದ್ಯದ ಕಾಯಂ ನಾಯಕ ರೋಹಿತ್ ಶರ್ಮಾ ಮತ್ತು ರಾಷ್ಟ್ರೀಯ ಆಯ್ಕೆಗಾರ ಅಜಿತ್ ಅಗರ್ಕರ್ ಕೂಡ ದ್ರಾವಿಡ್ ಅವರೇ 2024ರ ಟಿ20 ವಿಶ್ವಕಪ್‌ವರೆಗೆ ಕೋಚ್ ಆಗಿ ಉಳಿಯಬೇಕೆಂಬ ಇರಾದೆ ವ್ಯಕ್ತಪಡಿಸಿದ್ದಾರೆ. ದ್ರಾವಿಡ್ ಒಪ್ಪಂದವನ್ನು ವಿಸ್ತರಿಸಲು ಒಪ್ಪಿಕೊಂಡರೆ, ಬಿಸಿಸಿಐ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಮತ್ತು ಬೌಲಿಂಗ್ ಕೋಚ್ ಪರಶ್ ಮಾಂಬ್ರೆ ಅವರ ಒಪ್ಪಂದಗಳನ್ನು ಸಹ ನವೀಕರಿಸುವ ಸಾಧ್ಯತೆ ಇದೆ.(Reuters)


ಇತರ ಗ್ಯಾಲರಿಗಳು