Telangana Election Result: ತೆಲಂಗಾಣ ಚುನಾವಣೆ ಮೇಲೆ ನಿಚ್ಚಳ ಪ್ರಭಾವ ಬೀರಿದ ಕರ್ನಾಟಕದ ಫಲಿತಾಂಶ
- ಪಂಚರಾಜ್ಯ ಚುನಾವಣೆಯ ಫಲಿತಾಂಶಗಳಲ್ಲಿ ಇಂದು ನಾಲ್ಕು ರಾಜ್ಯಗಳ ಫಲಿತಾಂಶ ಹೊರ ಬಿದಿದ್ದೆ. ಕರ್ನಾಟಕದ ನೆರೆ ರಾಜ್ಯವಾದ ತೆಲಂಗಾಣದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ತೆಲಂಗಾಣದಲ್ಲಿ ಕಾಂಗ್ರೆಸ್ ಪಕ್ಷದ ಗೆಲುವಿಗೆ ಬಹುತೇಕ ಕರ್ನಾಟಕ ವಿಧಾನಸಭಾ ಚುನಾವಣೆಯ ಫಲಿತಾಂಶವೂ ಕಾರಣ ಎನ್ನಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ 7 ಅಂಶಗಳು ಹೀಗಿವೆ.

(1 / 7)
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದ ನಂತರ ಇದು ದಕ್ಷಿಣ ಭಾರತದ ಇತರ ರಾಜ್ಯಗಳಲ್ಲಿಯೂ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿತ್ತು.
(2 / 7)
ತೆಲಂಗಾಣದೊಂದಿಗೆ ಕರ್ನಾಟಕ ಗಡಿ ಹಂಚಿಕೊಂಡಿದೆ. ಹೈದರಾಬಾದ್‌ನೊಂದಿಗೂ ಕನ್ನಡಿಗರಿಗೆ ಅವಿನಾಭಾವ ಸಂಬಂಧವಿದೆ. (Wiki Commons )
(3 / 7)
ಕಲ್ಯಾಣ ಕರ್ನಾಟಕದ ಕಲಬುರ್ಗಿ, ಬೀದರ್, ಬಳ್ಳಾರಿ, ರಾಯಚೂರು ಜಿಲ್ಲೆಗಳ ಸಾವಿರಾರು ಮಂದಿ ಹೈದರಾಬಾದ್ ಸೇರಿದಂತೆ ತೆಲಂಗಾಣದ ವಿವಿಧೆಡೆ ವಾಸವಿದ್ದಾರೆ.
(4 / 7)
ತೆಲಂಗಾಣದ ಸಾವಿರಾರು ಟೆಕಿಗಳು ಮತ್ತು ಇತರ ಉದ್ಯೋಗಿಗಳು ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧೆಡೆ ವಾಸವಿದ್ದಾರೆ.
(5 / 7)
ಎರಡೂ ರಾಜ್ಯಗಳ ನಡುವೆ ಉತ್ತಮ ಬಾಂಧವ್ಯ ಇರುವುದರಿಂದ ರಾಜಕಾರಣದಲ್ಲಿಯೂ ಅದು ಪ್ರತಿಫಲಿಸಬಹುದು ಎಂದು ಅಂದಾಜಿಸಲಾಗಿತ್ತು. ಇದೀಗ ಈ ಲೆಕ್ಕಾಚಾರ ನಿಜವಾಗಿದೆ.
(6 / 7)
ಕರ್ನಾಟಕದ ಗೆಲುವು ತೆಲಂಗಾಣ ಕಾಂಗ್ರೆಸ್ ಕಾರ್ಯಕರ್ತರ ಉತ್ಸಾಹ ಹೆಚ್ಚಿಸಿತ್ತು. ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರು ತೆಲಂಗಾಣದ ಕಾಂಗ್ರೆಸ್ ಘಟಕಕ್ಕೆ ಬಲ ತುಂಬಲು ಶ್ರಮಿಸಿದರು.
ಇತರ ಗ್ಯಾಲರಿಗಳು