Tomorrow Horoscope: ಆಗಸ್ಟ್ 6ರ ಮಂಗಳವಾರ ಮುತ್ತಿನಂತೆ ಹೊಳೆಯಲಿದೆ ಈ ರಾಶಿಯವರ ಅದೃಷ್ಟ; ನಿಮ್ಮ ದಿನ ಹೇಗಿರಲಿದೆ ನೋಡಿ
- August 6th Horoscope: 2024ರ ಆಗಸ್ಟ್ 6ರ ಭಾನುವಾರ ಅಂದರೆ ನಾಳೆ ನಿಮ್ಮ ದಿನವು ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ ತಂದುಕೊಡಲಿದೆ, ಯಾರು ಆರ್ಥಿಕವಾಗಿ ಸ್ಥಿರವಾಗಿರುತ್ತೀರಿ, ಯಾರು ಎಚ್ಚರದಿಂದ ಇರಬೇಕು? ಎಂಬುದನ್ನು ಈ ಮುಂದೆ ತಿಳಿಯೋಣ.
- August 6th Horoscope: 2024ರ ಆಗಸ್ಟ್ 6ರ ಭಾನುವಾರ ಅಂದರೆ ನಾಳೆ ನಿಮ್ಮ ದಿನವು ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ ತಂದುಕೊಡಲಿದೆ, ಯಾರು ಆರ್ಥಿಕವಾಗಿ ಸ್ಥಿರವಾಗಿರುತ್ತೀರಿ, ಯಾರು ಎಚ್ಚರದಿಂದ ಇರಬೇಕು? ಎಂಬುದನ್ನು ಈ ಮುಂದೆ ತಿಳಿಯೋಣ.
(1 / 13)
ಜ್ಯೋತಿಷ್ಯಶಾಸ್ತ್ರದ ಲೆಕ್ಕಾಚಾರದ ಪ್ರಕಾರ, 2024 ಆಗಸ್ಟ್ 6ರ ಮಂಗಳವಾರ ದಿನವು ಅಂದರೆ ನಾಳೆ ಕೆಲವು ರಾಶಿಯವರಿಗೆ ತುಂಬಾ ಮಂಗಳಕರವಾಗಿರುತ್ತದೆ. ಆದರೆ ಕೆಲವು ರಾಶಿಯವರಿಗೆ ಜೀವನದಲ್ಲಿ ಸಣ್ಣ ಸಮಸ್ಯೆ ಎದುರಿಸಬೇಕಾಗಬಹುದು. ಹಾಗಿದ್ದರೆ ಆಗಸ್ಟ್ 6ರಂದು ಮೇಷದಿಂದ ಮೀನ ರಾಶಿವರೆಗಿನ ಎಲ್ಲಾ ರಾಶಿಯವರಿಗೆ ರಾಶಿ ಭವಿಷ್ಯ ಹೇಗಿರಲಿದೆ? ಯಾವ ರಾಶಿಯವರಿಗೆ ಅದೃಷ್ಟ ಎನ್ನುವುದನ್ನು ತಿಳಿದುಕೊಳ್ಳಿ.
(2 / 13)
ಮೇಷ ರಾಶಿ: ಆಗಸ್ಟ್ 6ರಂದು ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ಆರ್ಥಿಕ ಸ್ಥಿತಿಯಿಂದ ಚಿಂತೆಗೊಳಗಾದವರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಕುಟುಂಬದಿಂದ ಅಪಾರ ಬೆಂಬಲ ಸಿಗಲಿದ್ದು, ಪ್ರಮುಖ ವ್ಯಕ್ತಿಗಳ ಭೇಟಿಗಾಗಿ ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಕೆಲಸದ ಸ್ಥಳದಲ್ಲಿ ಉತ್ತಮ ಹೆಸರು ಸಂಪಾದನೆಯೊಂದಿಗೆ ಯಶಸ್ಸು ಕಾಣುತ್ತೀರಿ. ನೀವು ಉನ್ನತ ಅಧಿಕಾರಿಗಳಿಂದ ಬೆಂಬಲ ಪಡೆಯುತ್ತೀರಿ.
(3 / 13)
ವೃಷಭ ರಾಶಿ: ಈ ರಾಶಿಯವರು ಮಂಗಳವಾರ ಆರ್ಥಿಕ ಲಾಭ ಪಡೆಯುವ ಸಾಧ್ಯತೆ ಇದೆ. ಸಂಜೆಯ ವೇಳೆಗೆ ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಪ್ರಚಂಡ ಏರುಪೇರು ಕಾಣಲಿದೆ. ಇದು ಉದ್ಯಮಿಗಳಿಗೆ ಉತ್ತಮ ಸಮಯ ಎಂದರೂ ತಪ್ಪಾಗಲ್ಲ. ದೀರ್ಘ ಪ್ರಯಾಣ ಬೆಳೆಸುವವರು ಕಷ್ಟದ ಸಮಯ ಎದುರಿಸುವ ಸಾಧ್ಯತೆ ಇದೆ.
(4 / 13)
ಮಿಥುನ ರಾಶಿ: ಆಗಸ್ಟ್ 6ರಂದು ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ನಿಮಗೆ ಅತ್ಯುತ್ತಮ ಅವಕಾಶ ಸಿಗಲಿದೆ. ಹಣದ ಒಳಹರಿವು ಹೆಚ್ಚಾಗಲಿದ್ದು, ಕೌಟುಂಬಿಕ ಪರಿಸ್ಥಿತಿ ಸುಧಾರಿಸಲಿದೆ. ನಿಮ್ಮ ಅದೃಷ್ಟದ ದಿನವಾಗಿದ್ದು, ನಿಮ್ಮ ಆಸೆಗಳೆಲ್ಲವೂ ಈಡೇರಲಿವೆ. ಉದ್ಯಮಿಗಳು ಹೆಚ್ಚಿನ ಆರ್ಥಿಕ ಲಾಭ ಪಡೆಯುವ ಸಾಧ್ಯತೆಗಳಿವೆ.
(5 / 13)
ಕರ್ಕಾಟಕ ರಾಶಿ: ಈ ರಾಶಿಯವರಿಗೆ ಮಂಗಳವಾರ ಮಂಗಳಕರವಾಗಿದ್ದು ಸಂಪತ್ತು ಹರಿದು ಬರಲಿದೆ. ಅದರಲ್ಲೂ ಉದ್ಯಮಿಗಳಿಗಂತೂ ಬಹಳ ಲಾಭದಾಯಕವಾಗಿದೆ. ಏನು ಬೇಕೋ ಅದೆಲ್ಲವೂ ನಿಮಗೆ ಲಭ್ಯವಾಗಲಿದೆ. ವಿದೇಶಿ ಪ್ರಯಾಣ ಬೆಳೆಸಿರುವ ಈ ರಾಶಿಯವರು ಸಂಪೂರ್ಣವಾಗಿ ಆನಂದಿಸುತ್ತಾರೆ.
(6 / 13)
ಸಿಂಹ ರಾಶಿ : ನಿಮ್ಮ ಆರೋಗ್ಯ ಉತ್ತಮವಾಗಿರುತ್ತದೆ. ನೀವು ಸಾಲದಿಂದ ಮುಕ್ತರಾಗಿದ್ದೀರಿ ಎಂದು ನಂಬಲಾಗಿದೆ. ಕೆಲವರು ಬಯಸಿದ ವರ್ಗಾವಣೆ ಪಡೆಯಬಹುದು. ನಿಮಗೆ ಬೇಕಾಗಿರುವ ಮತ್ತು ಪರಿಚಿತ ವ್ಯಕ್ತಿಗಳಿಂದ ಸರ್ಫ್ರೈಸ್ ಪಡೆಯಲಿದ್ದೀರಿ. ಹಣಕಾಸಿನ ಪರಿಸ್ಥಿತಿಯು ಉತ್ತಮವಾಗಿರಲಿದೆ. ವ್ಯಾಪಾರ ಮಾಡುವವರಿಗೆ ಲಾಭದಾಯಕ ದಿನವಾಗಲಿದೆ.
(7 / 13)
ಕನ್ಯಾ ರಾಶಿ: ನೀವು ಅದ್ಭುತ ಬದಲಾವಣೆಗಳನ್ನು ಕಾಣಲಿದ್ದೀರಿ. ನೀವು ಬಯಸಿದ್ದೆಲ್ಲವೂ ಪಡೆಯಲಿದ್ದೀರಿ. ಪ್ರಯಾಣ ಬೆಳೆಸುವ ಸಾಧ್ಯತೆ ಇದೆ. ಕೆಲಸದ ವಿಚಾರಕ್ಕೆ ಸಂಬಂಧಿಸಿದ ಒತ್ತಡಗಳ ಬಗ್ಗೆ ಆಪ್ತರೊಂದಿಗೆ ಪರಸ್ಪರ ಹಂಚಿಕೊಳ್ಳಿ. ಇದು ನಿಮ್ಮ ಕೆಲಸವನ್ನು ಸುಲಭಗೊಳಿಸುತ್ತದೆ. ವಿದೇಶ ಪ್ರಯಾಣ ಕೈಗೊಳ್ಳುವವರಿಗೆ ಒಳ್ಳೆಯ ದಿನವಾಗಿದೆ. ಮಂಗಳವಾರ ನಿಮ್ಮ ಗೌರವ ಮತ್ತಷ್ಟು ಹೆಚ್ಚಾಗಬಹುದು.
(8 / 13)
ತುಲಾ ರಾಶಿ: ನಿಮ್ಮ ಆಸ್ತಿ ಮತ್ತು ಸಂಪತ್ತು ಹೆಚ್ಚಾಗುವ ಸಾಧ್ಯತೆ ಇದೆ. ವೃತ್ತಿಪರ ರಂಗದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವಿರಿ. ಕುಟುಂಬ ಸದಸ್ಯರಿಂದ ಅಪಾರ ಬೆಂಬಲ ಪಡೆಯುತ್ತೀರಿ. ಬಿಕ್ಕಟ್ಟಿನ ಸಮಯದಲ್ಲಿ ನಿಮಗೆ ನೆರವು ಸಿಗಲಿದೆ. ಕೆಲವರು ವಿದೇಶಿ ಪ್ರವಾಸಕ್ಕೂ ಹೋಗುತ್ತಾರೆ. ಕೆಲವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಲು ಆಗಸ್ಟ್ 6ರ ಮಂಗಳವಾರ ಉತ್ತಮ ದಿನವಾಗಿದೆ. ನಿಮ್ಮ ಆರೋಗ್ಯ ಸುಧಾರಿಸುತ್ತದೆ.
(9 / 13)
ವೃಶ್ಚಿಕ ರಾಶಿ: ನೀವು ಉತ್ತಮ ಹಣ ಗಳಿಸುವಲ್ಲಿ ಯಶಸ್ಸು ಕಾಣುತ್ತೀರಿ. ಕೆಲವರು ಹೊಸ ಊರಿಗೆ ಪ್ರಯಾಣಿಸುವ ಸಂಭವ ಇದೆ. ಕೆಲವರಿಗೆ ಆಸ್ತಿಯನ್ನು ಖರೀದಿಸುವ ಅಥವಾ ಪಿತ್ರಾರ್ಜಿತವಾಗಿ ಏನನ್ನಾದರೂ ಪಡೆಯುವ ಸಾಧ್ಯತೆ ಇದೆ. ನೀವು ವಿಶೇಷ ವ್ಯಕ್ತಿಯನ್ನು ಭೇಟಿಯಾಗುವ ಸಾಧ್ಯತೆ ಇದೆ. ನಿಮ್ಮ ಗಳಿಕೆಯೂ ಹೆಚ್ಚಾಗುತ್ತದೆ.
(10 / 13)
ಧನು ರಾಶಿ: ಆರ್ಥಿಕ ಯೋಜನೆಗಳ ಕುರಿತು ಉತ್ತಮ ನಿರ್ಧಾರ ತೆಗೆದುಕೊಳ್ಳುತ್ತೀರಿ. ಕಠಿಣ ಪರಿಸ್ಥಿತಿಯಿಂದ ಹೊರಬರಲು ನೀವು ಆಪ್ತರ ಸಹಾಯ ಪಡೆಯುತ್ತೀರಿ. ಕೆಲವರ ಮದುವೆ ನಿಶ್ಚಯವಾಗಬಹುದು. ವ್ಯಾಪಾರಸ್ಥರಿಗೆ ಶುಭ ದಿನವಾಗಲಿದೆ.
(11 / 13)
ಮಕರ ರಾಶಿ: ನೀವು ಆರ್ಥಿಕವಾಗಿ ಸ್ಥಿರವಾಗಿರುತ್ತೀರಿ. ಹಣದ ವಿಷಯದಲ್ಲಿ ಉತ್ತಮವಾಗಿರುತ್ತೀರಿ. ಕೆಲವರು ದೂರದ ಪ್ರಯಾಣ ಬೆಳೆಸಬಹುದು. ಕೆಲಸದ ಸ್ಥಳದಲ್ಲಿ ಅಧಿಕಾರ ಯೋಗ ಇದೆ. ಕೆಲವರ ಮನೆಗೆ ಅತಿಥಿಗಳು ಬರಬಹುದು. ವಾಹನಗಳ ಬಳಕೆಯಲ್ಲಿ ಎಚ್ಚರಿಕೆ ಅಗತ್ಯ.
(12 / 13)
ಕುಂಭ ರಾಶಿ: ಸಾಮಾನ್ಯ ದಿನಕ್ಕಿಂತ ಹೆಚ್ಚು ಫಿಟ್ ಆಗಿ ಕಾಣುವಿರಿ. ಹೂಡಿಕೆಗೆ ಉತ್ತಮ ದಿನವಾಗಲಿದೆ. ಯಾವುದೇ ಕುಟುಂಬ ವಿವಾದ ಪರಿಹರಿಸಲು ನಿಮ್ಮ ಪಾತ್ರ ಮುಖ್ಯವಾಗಲಿದೆ. ಕೆಲವರು ತಮ್ಮ ಸ್ನೇಹಿತರರೊಂದಿಗೆ ಬೆರೆಯಲು ಅವಕಾಶ ಸಿಗಲಿದೆ. ಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಲಿದ್ದೀರಿ. ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಉತ್ತಮ ಸುಧಾರಣೆ ಕಾಣಲಿದೆ.
ಇತರ ಗ್ಯಾಲರಿಗಳು