ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ವೃಷಭ ರಾಶಿಯಲ್ಲಿ ಬುಧನ ಸಂಚಾರದಿಂದ ಸಮಸ್ಯೆ; ತುಲಾ ಸೇರಿದಂತೆ ಈ 5 ರಾಶಿಯವರು ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಲೇಬೇಡಿ

ವೃಷಭ ರಾಶಿಯಲ್ಲಿ ಬುಧನ ಸಂಚಾರದಿಂದ ಸಮಸ್ಯೆ; ತುಲಾ ಸೇರಿದಂತೆ ಈ 5 ರಾಶಿಯವರು ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಲೇಬೇಡಿ

ಬುಧ ಸಂಕ್ರಮಣ 2024:  ಈ ವರ್ಷದ ಬುಧನ ಎರಡನೇ ಸಂಕ್ರಮಣವು ಮೇ 31 ರಂದು ಸಂಭವಿಸಲಿದೆ. ಈ ಸಮಯದಲ್ಲಿ, ಈ 5 ರಾಶಿಚಕ್ರದ ಚಿಹ್ನೆಗಳು ತಮ್ಮ ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಆ ರಾಶಿಗಳು ಯಾವುವು? ಯಾವ ರೀತಿ ಮುಂಜಾಗರೂಕತೆ ತೆಗೆದುಕೊಳ್ಳಬೇಕು ನೋಡೋಣ.

2024ರ ಬುಧಗ್ರಹದ ಎರಡನೇ ಸಂಕ್ರಮಣವು ಮೇ ತಿಂಗಳಲ್ಲಿ ನಡೆಯಲಿದೆ.  ಮೇ 31 ಶುಕ್ರವಾರ ಬುಧನು ವೃಷಭ ರಾಶಿ ಪ್ರವೇಶಿಸುತ್ತಾನೆ.  ಬುಧನನ್ನು ಬುದ್ಧಿವಂತಿಕೆಯ ಅಧಿಪತಿ ಎಂದು ಪರಿಗಣಿಸಲಾಗಿದೆ. ರಾಶಿ ಬದಲಾವಣೆ ಸಮಯದಲ್ಲಿ ಬುಧನು ಕೆಲವು ರಾಶಿಚಕ್ರದವರಿಗೆ ಶುಭ ಫಲಿತಾಂಶಗಳನ್ನು ನೀಡದರೆ ಕೆಲವರಿಗೆ ಆರೋಗ್ಯದಲ್ಲಿ ಸಮಸ್ಯೆ ಉಂಟು ಮಾಡುತ್ತಾನೆ.  
icon

(1 / 6)

 ಬುಧ ಸಂಕ್ರಮಣದ ಸಮಯದಲ್ಲಿ ಮೇಷ ರಾಶಿಯ ಜನರು ಬಹಳ ಜಾಗರೂಕರಾಗಿರಬೇಕು. ಈ ಸಮಯದಲ್ಲಿ, ನೀವು ಕೆಲವು ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಾಗುತ್ತದೆ. ಅದು ನಿಮಗೆ ದೀರ್ಘಾವಧಿ ಸಮಸ್ಯೆಗಳನ್ನು ಉಂಟುಮಾಡಬಹುದು. ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸ ಕಂಡರೂ ವೈದ್ಯರನ್ನು ಭೇಟಿ ಮಾಡಿ.  
icon

(2 / 6)

 ಬುಧದ ಈ ಸಂಕ್ರಮಣವು ಮಿಥುನ ರಾಶಿಯವರಿಗೆ ಕೂಡಾ ಆರೋಗ್ಯ ಸಮಸ್ಯೆಗಳನ್ನು ತರಬಹುದು.  ಈ ಅವಧಿಯಲ್ಲಿ ಕಣ್ಣು ಮತ್ತು ಗಂಟಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು. ಆರಂಭದಲ್ಲೇ ಈ ಸಮಸ್ಯೆಗಳನ್ನು ಸರಿಪಡಿಸಿಕೊಂಡರೆ ನಿಮಗೆ ಒಳ್ಳೆಯದು, ಯಾವುದೇ ಕಾರಣಕ್ಕೂ ಸಣ್ಣ ಪುಟ್ಟ ಸಮಸ್ಯೆಯನ್ನೂ ನಿರ್ಲಕ್ಷಿಸಬೇಡಿ. 
icon

(3 / 6)

 ಬುಧನ ಸಂಚಾರದಿಂದ ಸಿಂಹ ರಾಶಿಯವರ ಆರೋಗ್ಯ ಏರು ಪೇರಾಗುತ್ತದೆ. ಈ ಅವಧಿಯಲ್ಲಿ ನೀವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು. ಯಾವುದೇ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ನಿಮ್ಮ ಆರೋಗ್ಯ ಚೆನ್ನಾಗಿದ್ದರೆ, ಎಲ್ಲವೂ ಚೆನ್ನಾಗಿರುತ್ತದೆ,  ನಿಮ್ಮ ಬಗ್ಗೆ ಕಾಳಜಿ ವಹಿಸಿ.
icon

(4 / 6)

 ಬುಧನ ಸಂಚಾರದಿಂದ ಸಿಂಹ ರಾಶಿಯವರ ಆರೋಗ್ಯ ಏರು ಪೇರಾಗುತ್ತದೆ. ಈ ಅವಧಿಯಲ್ಲಿ ನೀವು ಚರ್ಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬಹುದು. ಯಾವುದೇ ಆರೋಗ್ಯ ಸಮಸ್ಯೆಗಳನ್ನು ನಿರ್ಲಕ್ಷಿಸಬೇಡಿ. ನಿಮ್ಮ ಆರೋಗ್ಯ ಚೆನ್ನಾಗಿದ್ದರೆ, ಎಲ್ಲವೂ ಚೆನ್ನಾಗಿರುತ್ತದೆ,  ನಿಮ್ಮ ಬಗ್ಗೆ ಕಾಳಜಿ ವಹಿಸಿ.(Freepik)

ಮೇನಲ್ಲಿ ಬುಧದ ಎರಡನೇ ಸಂಚಾರವು ತುಲಾ ರಾಶಿಯವರಿಗೆ ಕೂಡಾ ಒಳ್ಳೆಯದಲ್ಲ. ಈ ಸಮಯದಲ್ಲಿ ನೀವು ಖಿನ್ನತೆಗೆ ಒಳಗಾಗಬಹುದು. ಯಾವುದೇ ಆರೋಗ್ಯ ಸಂಬಂಧಿತ ವಿಷಯವು ನಿಮಗೆ ಉದ್ವೇಗವನ್ನು ಉಂಟುಮಾಡಬಹುದು, ಇದರಿಂದಾಗಿ ನಿಮ್ಮ ಮನಸ್ಸು ಚಂಚಲವಾಗಬಹುದು. ಆದರೆ ದೈಹಿಕ ಸಮಸ್ಯೆಗಿಂತ ಮಾನಸಿಕ ಸಮಸ್ಯೆ ಬಹಳ ಅಪಾಯಕಾರಿ, ಆದ್ದರಿಂದ ತಾಳ್ಮೆಯಿಂದ ಇರಿ. ಎಲ್ಲದಕ್ಕೂ ಹೆದರಿ ಮಾನಸಿಕ ಒತ್ತಡ ಹೆಚ್ಚು ಮಾಡಿಕೊಳ್ಳದಿರಿ. 
icon

(5 / 6)

ಬುಧನ ರಾಶಿಚಕ್ರ ಬದಲಾವಣೆಯಿಂದ ವೃಶ್ಚಿಕ ರಾಶಿಯವರಿಗೆ ಕೂಡಾ ಕೆಲವೊಂದು ಸಮಸ್ಯೆಗಳು ಎದುರಾಗಬಹುದು. ಹವಾಮಾನ ಬದಲಾವಣೆಗಳು ಮತ್ತು ವಿಪರೀತ ಶಾಖದಿಂದಾಗಿ,  ಶೀತ ಮತ್ತು ಶಾಖದ ಸಮಸ್ಯೆಗಳಿಂದ ಬಳಲಬಹುದು. ಇದರಿಂದ ನೀವು ಇನ್ನಷ್ಟು ಸೋಂಕಿಗೆ ಒಳಗಾಗಬಹುದು. ನಿಮ್ಮ ಹಾಗೂ ನಿಮ್ಮವರ ಆರೋಗ್ಯದ ಕಡೆ ಗಮನ ನೀಡಿ. 
icon

(6 / 6)

ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು