Vastu Tips: ಮನೆಯ ವಾತಾವರಣ ಹಿತವೆನಿಸುತ್ತಿಲ್ಲವೆ, ಗೋಡೆ ಮೇಲೆ ಈ 7 ವಿಧದ ಫೋಟೋ, ಪೇಂಟಿಂಗ್ಸ್ ಇವೆಯಾ ಚೆಕ್ ಮಾಡಿ..
ವಾಸ್ತು ಶಾಸ್ತ್ರ ಎಂದು ಕರೆಯಲ್ಪಡುವ ಭಾರತದ ಸಾಂಪ್ರದಾಯಿಕ ವಾಸ್ತುಶಿಲ್ಪ ಮತ್ತು ವಿನ್ಯಾಸ ವಿಧಾನದ ಪ್ರಕಾರ ನಮ್ಮ ವಾಸಸ್ಥಳಗಳಲ್ಲಿ ಧನಾತ್ಮಕ ಶಕ್ತಿ ಕಾಪಾಡಿಕೊಳ್ಳುವುದು ಮುಖ್ಯ. ಮನೆಯ ವಾತಾವರಣ ಹಿತವೆನಿಸುತ್ತಿಲ್ಲವೆ, ಗೋಡೆ ಮೇಲೆ ಈ 7 ವಿಧದ ಫೋಟೋ, ಪೇಂಟಿಂಗ್ಸ್ ಇವೆಯಾ ಚೆಕ್ ಮಾಡಿ..
(1 / 8)
ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಒಡೆದು ಹೋದ ಫ್ರೇಮ್‌ನ ಫೋಟೋಗಳನ್ನು ಇಟ್ಟುಕೊಂಡಿರಬಾರದು. ಹಾಗೊಂದು ವೇಳೆ ಇದ್ದರೆ ಅಂಥವು ಮನೆಯ ವಾತಾವರಣ ಕೆಡಿಸುವುದಲ್ಲದೆ, ಮನಸ್ಸಿನ ನೆಮ್ಮದಿಯನ್ನ ಹಾಳುಮಾಡುತ್ತವೆ. ಆದ್ದರಿಂದ ಇಂಥ ಒಡೆದ ಹೋದ ಫ್ರೇಮ್‌ನ ಫೋಟೋ, ಫೇಂಟಿಂಗ್ ಏನೇ ಇದ್ದರೂ ಅವುಗಳನ್ನು ತೆರೆವುಗೊಳಿಸುವುದು ಉತ್ತಮ.
(perchance.org/ Canva)(2 / 8)
ಮನೆಯ ಗೋಡೆ ಮೇಲೆ ವನ್ಯಜೀವಿಗಳ ವಿಶೇಷವಾಗಿ ವ್ಯಗ್ರರೂಪಿ ಪ್ರಾಣಿಗಳ ಫೋಟೋಗಳನ್ನು ನೇತುಹಾಕಬಾರದು. ಆಕ್ರಮಣ ತೋರುವ ಚಿತ್ರಗಳಿದ್ದರೆ ಅವುಗಳು ಮನೆಯ ವಾತಾವರಣವನ್ನೂ ಅದೇ ಸ್ಥಿತಿಗೆ ಕೊಂಡೊಯ್ಯುತ್ತವೆ. ಇದರ ಬದಲು ಮನಸ್ಸಿಗೆ ನೆಮ್ಮದಿ ಉಂಟುಮಾಡುವ ಚಿತ್ರ, ಫೋಟೋಗಳನ್ನು ಗೋಡೆ ಅಲಂಕಾರಕ್ಕೆ ಬಳಸಿದರೆ ಸೂಕ್ತ ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.
(perchance.org/ Canva)(3 / 8)
ಕೋಪಗೊಂಡಿರುವ ವ್ಯಕ್ತಿಯ ಫೋಟೋ, ಕೋಪ ಭಾವದ ಫೋಟೋಗಳಿದ್ದರೆ ಅವುಗಳು ಕೂಡ ಮನೆಯ ವಾತಾವರಣ ಕೆಡಲು ಕಾರಣವಾಗುತ್ತವೆ. ಅಂಥವನ್ನು ಅಲ್ಲಿಂದ ತೆರವು ಮಾಡುವುದು ಸೂಕ್ತ ಎನ್ನುತ್ತಾರೆ ವಾಸ್ತುಪರಿಣತರು.
(Canva)(4 / 8)
ಒಂಟಿತನ, ಖಿನ್ನತೆ ಕಾರಣವಾಗುವ ಚಿತ್ರಗಳು, ಫೋಟೋಗಳನ್ನು ಕೂಡ ತೆರವು ಮಾಡಿದರೆ ಮನೆಯ ವಾತಾವರಣ ಸುಧಾರಿಸಬಹುದು. ಹಳೆಯ ನೆನಪುಗಳನ್ನು ಕಾಡುವ ಫೋಟೋಗಳಿದ್ದರೆ, ಮೃತರ ಫೋಟೋಗಳಿದ್ದರೆ ಅಂಥವನ್ನೂ ಮನಸ್ಸಿನ ನೆಮ್ಮದಿಗೋಸ್ಕರ ತೆರವುಗೊಳಿಸಬಹುದು ಎನ್ನುತ್ತಾರೆ ವಾಸ್ತು ಶಾಸ್ತ್ರಜ್ಞರು.
(Canva)(5 / 8)
ಅದೇ ರೀತಿ, ಹಾವುಗಳ ಫೋಟೋ ಸಿಕ್ಕಿತು ಎಂದು ಅದನ್ನು ಗೋಡೆ ಅಲಂಕಾರಕ್ಕೆ ಬಳಸಿದರೆ ನೆಗೆಟಿವ್ ಎನರ್ಜಿ ಉಂಟುಮಾಡಲು ಕಾರಣವಾದೀತು.
(perchance.org/ Canva)(6 / 8)
ಗೋಡೆ ಅಲಂಕಾರ ಎಂದು ಸಿಕ್ಕಿ ಸಿಕ್ಕಿದ್ದೆಲ್ಲ ತಂದು ಗೋಡೆಗೆ ತೂಗುಹಾಕಿದರೆ ಅದೊಂದು ರೀತಿ ಕಿರಿಕಿರಿ ಉಂಟು ಮಾಡೀತು. ಮನಸ್ಸಿನ ನೆಮ್ಮದಿ ಕೆಡಿಸೀತು. ಈ ಬಗ್ಗೆ ಎಚ್ಚರವಹಿಸಬೇಕು ಎನ್ನುತ್ತಾರೆ ಪರಿಣತರು.
(Canva)(7 / 8)
ಇನ್ನು. ಪ್ರಾಚೀನ ಕಾಲದ್ದು, ಧಾರ್ಮಿಕ ವಿಚಾರಗಳಿಗೆ ಸಂಬಂಧಿಸಿದ್ದು ಎಂಬಂತಹ ವಸ್ತುಗಳಿದ್ದರೆ ಅವುಗಳನ್ನು ಒಂದೆಡೆ ಜೋಡಿಸಿಡಬೇಕು. ಎದುರು ಕಾಣುವಂತೆ ಇದ್ದರೆ ಅಂಥವು ಕೂಡ ಮನಸ್ಸಿಗೆ ಕಿರಿಕಿರಿ ಉಂಟುಮಾಡಿಯಾವು.
(Canva)ಇತರ ಗ್ಯಾಲರಿಗಳು