Ganesha Tempels; ಗೌರಿ ಗಣೇಶ ಹಬ್ಬಕ್ಕೆ ಬೆಂಗಳೂರಲ್ಲೇ ಇದ್ದೀರಾ, ಗಣಪನ ದರ್ಶನಕ್ಕೆ ದೊಡ್ಡ ಗಣಪತಿ ಸೇರಿ ಆಯ್ದ 10 ದೇಗುಲಗಳಿವು - ಚಿತ್ರನೋಟ
Ganesha Tempels near me in Bengaluru; ಬೆಂಗಳೂರಿಗೆ ಬೆಂಗಳೂರು ಈಗ ಗೌರಿ ಗಣೇಶ ಹಬ್ಬಕ್ಕೆ ಸಿದ್ಧವಾಗುತ್ತಿದೆ. ಜನರೂ ಹಬ್ಬದ ಮೂಡ್‌ಗೆ ಹೋಗಿದ್ದು, ಗಣೇಶನ ಹಬ್ಬಕ್ಕೆ ಯಾವ ದೇವಸ್ಥಾನಕ್ಕೆ ಹೋಗುವುದು ಎಂಬಿತ್ಯಾದಿ ವಿಚಾರದಲ್ಲಿದೆ. ಈ ಸಲ ಗಣೇಶ ಹಬ್ಬಕ್ಕೆ ಬೆಂಗಳೂರಲ್ಲೇ ಇದ್ದೀರಾ, ಹಾಗಾದರೆ. ಗಣಪನ ದರ್ಶನಕ್ಕೆ ದೊಡ್ಡ ಗಣೇಶ ಸೇರಿ ಆಯ್ದ 10 ದೇಗುಲಗಳ ಕಿರುನೋಟ.
(1 / 10)
ದಕ್ಷಿಣ ಬೆಂಗಳೂರಿನ ಪ್ರಸಿದ್ಧ ದೇವಸ್ಥಾನ ದೊಡ್ಡ ಗಣೇಶನ ದೇವಸ್ಥಾನ. ಬೆಂಗಳೂರಿನ ಅತಿದೊಡ್ಡ ಕಡ್ಲೆಕಾಯಿ ಪರಿಷೆ ಆಗೋ ಜಾಗವೂ ಇದೇ. ಬುಲ್ ಟೆಂಪಲ್ ಅಂತಾನೇ ಫೇಮಸ್ ಈ ಜಾಗ. ಇಲ್ಲಿನ ಗಣೇಶನೂ ಹೆಸರಿಗೆ ತಕ್ಕಂತೆ ದೊಡ್ಡ ಗಾತ್ರದ ದೇವರು. ಬರೋಬ್ಬರಿ 18 ಅಡಿ ಎತ್ತರ ಮತ್ತು 16 ಅಡಿ ಅಗಲ. ಈ ಗಣಪನ ಬೆಣ್ಣೆ ಅಲಂಕಾರಕ್ಕೆ 100 ಕಿಲೋ ಬೆಣ್ಣೆ ಬೇಕು. ಈ ಸಲದ ಗಣೇಶ ದರ್ಶನ ಇಲ್ಲಿಂದಲೇ ಶುರುಮಾಡಬಹುದು ನೋಡಿ. ದೊಡ್ಡ ಗಣೇಶ ದೇವಸ್ಥಾನದ ಟೈಮಿಂಗ್ಸ್ - ಬೆಳಗ್ಗೆ 6:30 ರಿಂದ ರಾತ್ರಿ 8:30 ರ ತನಕ.
(2 / 10)
ಬೆಂಗಳೂರು ನಗರ ಕೇಂದ್ರದಿಂದ ಹೊರಗೆ ಮೈಸೂರು ಹೆದ್ದಾರಿಯಲ್ಲಿ ಕೆಂಗೇರಿಗೆ ಸಮೀಪ ಇರುವ ದೇವಸ್ಥಾನವೇ ಪಂಚಮುಖಿ ಗಣೇಶ ದೇವಾಸ್ಥಾನ. ಇಲ್ಲಿ ಐದು ಮುಖಗಳನ್ನು ಹೊಂದಿರುವ 30 ಅಡಿ ಎತ್ತರದ ಗಣೇಶನ ಪ್ರತಿಮೆ ಇದೆ. ದೇವಾಲಯದ ಒಳಗೆ 6 ಅಡಿ ಐದು ಮುಖದ ಗಣೇಶನ ವಿಗ್ರಹವಿದೆ. ನಾಲ್ಕು ಮುಖಗಳು ನಾಲ್ಕು ದಿಕ್ಕಿನಲ್ಲಿ ಕಂಡು ಬಂದರೆ ಐದನೆಯ ಮುಖ ಮೇಲ್ಭಾಗದಲ್ಲಿದೆ. ದೇವಾಲಯದ ಸಮಯ- ಬೆಳಗ್ಗೆ 6ರಿಂದ ರಾತ್ರಿ 9.(SM)
(3 / 10)
ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನಲ್ಲಿರುವ ಗಣಪತಿ ದೇವಸ್ಥಾನ ಇದು.108 ಗಣೇಶನ ದೇವಾಲಯ ಎಂದೇ ಪ್ರಸಿದ್ಧ. ಹೊರಗಿನಿಂದ ಸಾಮಾನ್ಯ ದೇವಾಲಯದಂತೆ ಇರುವ ಈ ದೇವಸ್ಥಾನದ ಒಳಗೆ ಹೋದ ಬಳಿಕ ಗರ್ಭಗುಡಿ ದರ್ಶನ ಮಾಡಿದರೆ ಅಲ್ಲಿ ಮುಖ್ಯ ಗಣಪತಿ ವಿಗ್ರಹದ ಜೊತೆಗೆ 108 ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲೂ ಗಣೇಶ ಚತುರ್ಥಿ ಸಂಭ್ರಮ ಸಡಗರಗಳೊಂದಿಗೆ ಆಚರಿಸಲ್ಪಡುತ್ತದೆ.
(4 / 10)
ಕಸ್ತೂರ್ಬಾ ರಸ್ತೆಯಲ್ಲಿರುವ ವಾಹನ (ಸಂಚಾರ) ಗಣೇಶ ದೇವಸ್ಥಾನ. ಈ ಹಿಂದೆ ಪಾತಾಳ (ಭೂಗತ) ಗಣೇಶನ ದೇವಸ್ಥಾನ ಎಂದು ಕರೆಯಲಾಗುತ್ತಿತ್ತು, ಈಗ ಟ್ರಾಫಿಕ್ ಗಣೇಶ ದೇವಸ್ಥಾನ, ಅಪಘಾತ ತಡೆಯುವ ಗಣೇಶ ದೇವಸ್ಥಾನ ಎಂದೆಲ್ಲ ಜನ ಗುರುತಿಸುತ್ತಾರೆ. 600 ವರ್ಷಗಳಷ್ಟು ಹಳೆಯದಾದ ಈ ದೇವಸ್ಥಾನ ಇದು. ಅರಸರ ಆಳ್ವಿಕೆ ಇದ್ದಾಗ ಈ ದೇವಸ್ಥಾನಕ್ಕೆ ಆನೆ, ಎತ್ತು, ಕುದುರೆಗಳನ್ನು ತಂದು ಪೂಜೆ ಮಾಡಿಸಿ ಕೊಂಡೊಯ್ಯುತ್ತಿದ್ದರು ಎಂಬ ಪ್ರತೀತಿ ಇದೆ. ಮೈಸೂರು ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ತಮ್ಮ ರೋಲ್ಸ್ ರಾಯ್ಸ್ ಕಾರು ಅಪಘಾತವಾದ ನಂತರ ಸರಿಪಡಿಸಿ ಈ ಗಣೇಶನ ಆಶೀರ್ವಾದ ಪಡೆದಿದ್ದರು ಎಂಬ ಉಲ್ಲೇಖವೂ ಇದೆ.
(5 / 10)
ಬೆಂಗಳೂರಿನ ಪದ್ಮನಾಭನಗರ ದೇವೇಗೌಡ ಪೆಟ್ರೋಲ್ ಬಂಕ್ ಪಕ್ಕದಲ್ಲೇ ಇರುವ ಶ್ರೀ ಭಾನು ತಿರುಮಲೆ ಬೆಟ್ಟದ ಮೇಲೆ ಬನಗಿರಿ ವರಸಿದ್ಧಿ ವಿನಾಯಕ ದೇವಾಲಯ ಇರೋದು. ದೇವಾಲಯದೊಳಗೆ ಮೂರು ಗರ್ಭಗುಡಿಗಳಿದ್ದು, ಮಧ್ಯದ್ದರಲ್ಲಿ ದ್ಮಪೀಠದ ಮೇಲೆ ಕುಳಿತ ಗಣಪತಿ ದೇವರಿದ್ದಾರೆ. 1988ರಲ್ಲಿ ಈ ದೇವಾಲಯ ನಿರ್ಮಾಣವಾಗಿದ್ದು, ವಿಶೇಷ ಶೈಲಿಯಿಂದ ಗಮನಸೆಳೆದಿದೆ. ಇಲ್ಲಿ ಏಳು ಕುದುರೆಗಳ ರಥವೇರಿದ ಸೂರ್ಯದೇವರ ಗೋಪುರದ ಪುಟ್ಟ ಗುಡಿ ಕೂಡ ಇದೆ
(6 / 10)
ಜಯನಗರ 4ನೇ ಬ್ಲಾಕ್‌ನಲ್ಲಿರುವ ಶಕ್ತಿ ಗಣಪತಿ ದೇವಸ್ಥಾನ ರಾಜಕಾರಣಿಗಳ ಅಚ್ಚುಮೆಚ್ಚಿನ ದೇವರು. ಹೀಗಾಗಿ ಪವರ್ ಗಣೇಶ ಎಂಬ ಹೆಸರೂ ಈ ದೇವರಿಗೆ ಇದೆ. ವಜ್ರದ ಕವಚ ಮತ್ತು ಕಿರೀಟ ಧಾರಣೆ ಮಾಡಿದ ಗಣಪತಿಯ ದರ್ಶನವೇ ಚಂದ. ಈ ಗಣೇಶನಿಗೆ ಪೂಜೆ ಸಲ್ಲಿಸಿದರೆ ಸಂಪತ್ತು, ಅಧಿಕಾರ ಸಿಗುವುದೆಂಬ ನಂಬಿಕೆ ಜನರದ್ದು.ಈ ದೇವರಿಗೆ ದಿನಕ್ಕೊಂದು ಅಲಂಕಾರ ಇರುತ್ತದೆ.
(7 / 10)
ಕೆಆರ್ ಪುರಂನಲ್ಲಿ ಮುಖ್ಯರಸ್ತೆಯಲ್ಲಿ ಇರುವ ಗಣಪತಿ ದೇವಾಲಯವೇ ಕಟ್ಟೆ ವಿನಾಯಕ ದೇವಾಲಯ. ಹಬ್ಬ ಹರಿದಿನಗಳಲ್ಲಿ ಇಲ್ಲಿ ಭಕ್ತರ ದಂಡೇ ದೇವರ ದರ್ಶನಕ್ಕಾಗಿ ಕಾಯುತ್ತಿರುತ್ತದೆ. ಬೆಂಗಳೂರು ಸುತ್ತಮುತ್ತಲಿನ ಪುರಾತನ ಗಣೇಶ ದೇವಾಲಯಗಳಲ್ಲಿ ಇದು ಕೂಡ ಪ್ರಮುಖವಾದುದು.
(8 / 10)
ಕೋರಮಂಗಲ ಭಾಗದ ಪ್ರಮುಖ ಗಣಪತಿ ದೇವಸ್ಥಾನ ಇದು ಟೆಕ್ಕಿ ಗಣೇಶ ದೇವಸ್ಥಾನ ಎಂದು ಗುರುತಿಸುತ್ತಾರೆ. ಪ್ರಸನ್ನ ಗಣಪತಿ ದೇವಸ್ಥಾನ ಎಂದು ಜನಜನಿತ. 1979ರಲ್ಲಿ ನಿರ್ಮಾಣವಾದ ಈ ದೇವಸ್ಥಾನಕ್ಕೆ ಐಟಿ ಉದ್ಯೋಗಿಗಳು ಹೆಚ್ಚು ಭೇಟಿ ನೀಡಿ ಆರಾಧಿಸುವ ಕಾರಣ ಟೆಕ್ಕಿ ಗಣೇಶ ಎಂಬ ಹೆಸರು ಬಂತು. ಕೋರಮಂಗಲದ ಕೆಎಚ್‌ಬಿ ಕಾಲನಿ 5ನೇ ಬ್ಲಾಕ್‌ನಲ್ಲಿ ಈ ದೇವಸ್ಥಾನವಿದ್ದು, ಗಣೇಶನ ಹಬ್ಬಕ್ಕೆ ವಿಶೇಷ ಪೂಜೆ ಪುನಸ್ಕಾರಗಳು ನಡೆಯುತ್ತವೆ.
(9 / 10)
ದಕ್ಷಿಣ ಬೆಂಗಳೂರಿನಲ್ಲಿ ವಿಶೇಷವಾಗಿ ಗಿರಿನಗರ ಭಾಗದಲ್ಲಿ ಜನರು ಹೆಚ್ಚು ಆರಾಧಿಸುವ ಗಣಪತಿ ದೇವರು, ಗಿರಿನಗರ ಟೆಂಪಲ್ ಸ್ಟ್ರೀಟ್‌ನಲ್ಲಿ ಶೃಂಗೇರಿ ಶಾರಾದ ಮಠ, ಆಂಜನೇಯ ಸ್ವಾಮಿ ದೇವಸ್ಥಾನ, ಲಕ್ಷ್ಮೀ ವೆಂಕಟರಮಣಸ್ವಾಮಿ ದೇವಸ್ಥಾನವಾದ ಬಳಿಕ ಶ್ರೀ ಮಹಾಗಣಪತಿ ದೇವಸ್ಥಾನ ಇದೆ. ಇಲ್ಲಿ ಗಣೇಶ ಚತುರ್ಥಿಗೆ ಗಣಪತಿ ಹವನ ಸೇರಿ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ.
ಇತರ ಗ್ಯಾಲರಿಗಳು