ಗುರು, ಶುಕ್ರ ಗ್ರಹಗಳ ಹಿಮ್ಮುಖ ಚಲನೆ, ದ್ವಾದಶ ರಾಶಿಗಳ ಮೇಲೆ ಪರಿಣಾಮ; ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಗುರು, ಶುಕ್ರ ಗ್ರಹಗಳ ಹಿಮ್ಮುಖ ಚಲನೆ, ದ್ವಾದಶ ರಾಶಿಗಳ ಮೇಲೆ ಪರಿಣಾಮ; ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ

ಗುರು, ಶುಕ್ರ ಗ್ರಹಗಳ ಹಿಮ್ಮುಖ ಚಲನೆ, ದ್ವಾದಶ ರಾಶಿಗಳ ಮೇಲೆ ಪರಿಣಾಮ; ಯಾವ ರಾಶಿಗೆ ಲಾಭ, ಯಾರಿಗೆ ನಷ್ಟ

  • ಜ್ಯೋತಿಷ್ಯಶಾಸ್ತ್ರದಲ್ಲಿ ಗ್ರಹಗಳ ಸ್ಥಾನಪಲ್ಲಟಕ್ಕೆ ವಿಶೇಷ ಮಹತ್ವವಿದೆ. ಸೆಪ್ಟೆಂಬರ್ 4ರಂದು ಶುಕ್ರ ಮತ್ತು ಗುರು ಗ್ರಹಗಳು ಹಿಮ್ಮುಖವಾಗಿ ಸಂಚರಿಸಲಿವೆ. ಈ ಬೆಳವಣಿಗೆಯಿಂದ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರಲಿದೆ. ಹಾಗಾದರೆ ಈ ಸ್ಥಾನಪಲ್ಲಟವು ಯಾವ ರಾಶಿಯವರಿಗೆ ಶುಭ, ಯಾರಿಗೆ ಅಶುಭ ನೋಡಿ.

ಸೆಪ್ಟೆಂಬರ್ 4ರಂದು, ಶುಕ್ರ ಮತ್ತು ಗುರು ಗ್ರಹಗಳು ಹಿಮ್ಮುಖವಾಗಿ ಪ್ರಯಾಣಿಸಲಿವೆ. ಅಂದು ಶುಕ್ರನು ಕರ್ಕಾಟಕ ರಾಶಿಯಲ್ಲಿ ಮತ್ತು ಗುರುವು ಮೇಷರಾಶಿಯಲ್ಲಿ ಸಾಗುತ್ತಾನೆ. ಈ ಸಂಚಾರವು ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಮಂಗಳಕರ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತದೆ ಎನ್ನುತ್ತದೆ ಜ್ಯೋತಿಷ್ಯಶಾಸ್ತ್ರ.
icon

(1 / 13)

ಮೇಷ ರಾಶಿ: ಮೇಷ ರಾಶಿಯವರಿಗೆ ಅಸಮಾಧಾನದ ಪರಿಸ್ಥಿತಿ ಎದುರಾಗಲಿದೆ. ಮಾನಸಿಕ ಶಾಂತಿಯ ಕೊರತೆ ಕಾಡಲಿದೆ. ಆದರೆ ನೀವು ಸಾಕಷ್ಟು ಸಂಯಮದಿಂದ ವರ್ತಿಸಬೇಕು. ಮನಸ್ಸು ಶಾಂತವಾಗಲು ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಿ. ಓದಿನಲ್ಲಿ ಯಶಸ್ಸು ಸಿಗಲಿದೆ. ಮಕ್ಕಳಿಂದ ಶುಭಸುದ್ದಿ.
icon

(2 / 13)

ವೃಷಭ ರಾಶಿ: ವೃಷಭ ರಾಶಿಯವರಿಗೆ ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಆತ್ಮಸ್ಥೈರ್ಯವೂ ತುಂಬಿರುತ್ತದೆ. ಸಂಭಾಷಣೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಧರ್ಮದ ಬಗ್ಗೆ ಗೌರವವಿರಲಿ. ಕುಟುಂಬದಲ್ಲಿ ಸಂತಸ ಹೆಚ್ಚಾಗುತ್ತದೆ. ಸಂಗಾತಿಯಿಂದ ಬೆಂಬಲ ದೊರೆಯುತ್ತದೆ.
icon

(3 / 13)

ಮಿಥುನ ರಾಶಿ: ಮಿಥುನ ರಾಶಿಯವರಿಗೆ ಮಾನಸಿಕ ಶಾಂತಿ ಮತ್ತು ಸಂತೋಷ ಸಿಗಲಿದೆ. ಆದರೆ ತಾಳ್ಮೆ ಮತ್ತು ಸಂಯಮದಿಂದ ಇರಲು ಪ್ರಯತ್ನಿಸಿ. ಉದ್ಯೋಗದಲ್ಲಿ ಅಧಿಕಾರಿಗಳ ಸಹಕಾರ ದೊರೆಯಲಿದ್ದು, ಇದು ಪ್ರಗತಿಯ ಹಾದಿಯನ್ನು ಸುಗಮಗೊಳಿಸುವುದು. ಆದಾಯ ಹೆಚ್ಚಲಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
icon

(4 / 13)

ಕರ್ಕಾಟಕ ರಾಶಿ: ಕರ್ಕಾಟಕ ರಾಶಿಯವರು ಚಂಚಲ ಮನಸ್ಸು ಹೊಂದಿರುತ್ತಾರೆ. ಸಮಾಧಾನದಿಂದ ಇರುವುದು ಮುಖ್ಯ. ಕೋಪ ಮಾಡಿಕೊಳ್ಳದಿರಿ. ಶೈಕ್ಷಣಿಕ ವಿಷಯಗಳಲ್ಲಿ ತೊಂದರೆ ಉಂಟಾಗುವ ಸಾಧ್ಯತೆ. ಜಾಗರೂಕರಾಗಿರಿ. ಉದ್ಯೋಗದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.
icon

(5 / 13)

ಸಿಂಹ: ಸಿಂಹ ರಾಶಿಯವರು ಮನಸ್ಸಿನಲ್ಲಿ ನಿರಾಶೆ ಮತ್ತು ಖಿನ್ನತೆಯನ್ನು ಹೊಂದಿರುತ್ತಾರೆ. ಕುಟುಂಬ ಸಮೇತ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಬಹುದು. ಮನೆಯಲ್ಲಿ ನೆಮ್ಮದಿ ಹೆಚ್ಚುತ್ತದೆ. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು.
icon

(6 / 13)

ಕನ್ಯಾರಾಶಿ: ಕನ್ಯಾ ರಾಶಿಯವರಿಗೆ ಮಾನಸಿಕ ಬೇಸರ ಕಾಡಬಹುದು. ಆತ್ಮವಿಶ್ವಾಸದ ಕೊರತೆ ಎದುರಿಸಲಿದ್ದೀರಿ. ಸಮಸ್ಯೆಗಳು ತಾತ್ಕಾಲಿಕ ಎಂಬುದನ್ನು ನೆನಪಿಡಿ. ಕೋಪವನ್ನು ತಪ್ಪಿಸಿ. ದುಶ್ಚಟಗಳಿಂದ ದೂರವಿರಿ. ಕುಟುಂಬದಲ್ಲಿ ಶಾಂತಿಯನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ಮಿತವ್ಯಯದ ತತ್ವಗಳನ್ನು ಅನುಸರಿಸಿ. ಸ್ನೇಹಿತರಿಂದ ಬೆಂಬಲ ದೊರೆಯಲಿದೆ.
icon

(7 / 13)

ತುಲಾ ರಾಶಿ: ತುಲಾ ರಾಶಿಯವರು ಚಂಚಲ ಮನಸ್ಸು ಹೊಂದಿರುತ್ತಾರೆ. ಮನಸ್ಸಿನ ಖಿನ್ನತೆ ಮತ್ತು ಅಸಂತೋಷವನ್ನು ಹೋಗಲಾಡಿಸಿ. ಈ ರಾಶಿಯವರು ಶೈಕ್ಷಣಿಕ ಮತ್ತು ಸಂಶೋಧನಾ ಕಾರ್ಯಗಳಲ್ಲಿ ಯಶಸ್ವಿಯಾಗುತ್ತಾರೆ. ವಿದ್ಯಾಭ್ಯಾಸಕ್ಕಾಗಿ ವಿದೇಶಕ್ಕೆ ಹೋಗುವ ಅವಕಾಶವಿದೆ. 
icon

(8 / 13)

ವೃಶ್ಚಿಕ ರಾಶಿ: ವೃಶ್ಚಿಕ ರಾಶಿಯವರು ಆತ್ಮವಿಶ್ವಾಸದಿಂದ ಇರುತ್ತಾರೆ. ಆದರೆ ಮನಸ್ಸಿನಲ್ಲಿ ಏರಿಳಿತಗಳು ಸಂಭವಿಸಬಹುದು. ಕುಟುಂಬದಲ್ಲಿ ಧಾರ್ಮಿಕ ಚಟುವಟಿಕೆಗಳೂ ನಡೆಯುವ ಸಾಧ್ಯತೆ. ಗೌರವಕ್ಕೆ ಪಾತ್ರರಾಗಲಿದ್ದೀರಿ. ನೀವು ಹೆಚ್ಚು ಶ್ರಮಿಸಬೇಕು.
icon

(9 / 13)

ಧನು ರಾಶಿ: ಧನು ರಾಶಿಯವರಿಗೆ ಮಾನಸಿಕ ಸಂತೋಷವಿರುತ್ತದೆ. ಆದರೆ ಆತ್ಮವಿಶ್ವಾಸದ ಕೊರತೆ ಕಾಡಲಿದೆ. ಅಸಾಧ್ಯ ಎಂಬ ಭಾವವನ್ನು ಮನಸ್ಸಿನಿಂದ ತೆಗೆದುಹಾಕಬೇಕು. ವ್ಯಾಪಾರಕ್ಕೆ ಹೆಚ್ಚಿನ ಶ್ರಮ ಹಾಕಬೇಕಾಗಬಹುದು. ಆದರೆ, ಲಾಭ ಕಡಿಮೆಯಾಗುವ ಸೂಚನೆ.
icon

(10 / 13)

ಮಕರ ರಾಶಿ: ಮಕರ ರಾಶಿಯವರ ಮಾತಿನಲ್ಲಿ ಮಾಧುರ್ಯವಿದೆ. ಆದರೆ ಕೋಪವನ್ನು ತಪ್ಪಿಸಿ. ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ಮನೆಯಲ್ಲಿ ನೆಮ್ಮದಿ ಹೆಚ್ಚುತ್ತದೆ. ಕೌಟುಂಬಿಕ ಜೀವನ ಆನಂದಮಯವಾಗಿರುತ್ತದೆ. ಶೈಕ್ಷಣಿಕ ಕಾರ್ಯಗಳತ್ತ ಗಮನ ಕೊಡಿ.
icon

(11 / 13)

ಕುಂಭ ರಾಶಿ: ಕುಂಭ ರಾಶಿಯವರು ಚಂಚಲ ಮನಸ್ಸು ಹೊಂದಿರುತ್ತಾರೆ. ಆತ್ಮವಿಶ್ವಾಸದ ಕೊರತೆ ಈ ರಾಶಿಯವರಲ್ಲೂ ಕಾಣಬಹುದು. ಸಂಭಾಷಣೆಯಲ್ಲಿ ಸಮತೋಲನವನ್ನು ಕಾಪಾಡಿಕೊಳ್ಳಿ. ನೀವು ತಾಯಿಯ ಸಂಬಂಧಿಕರಿಂದ ಬೆಂಬಲವನ್ನು ಪಡೆಯುತ್ತೀರಿ. ವ್ಯಾಪಾರವು ಶ್ರಮದಾಯಕವಾಗಿದೆ.
icon

(12 / 13)

ಮೀನ ರಾಶಿ: ಮೀನ ರಾಶಿಯವರು ಮಾನಸಿಕ ಶಾಂತಿಗಾಗಿ ಒತ್ತಡವನ್ನು ತಪ್ಪಿಸುವುದು ಅಗತ್ಯ. ಅನಗತ್ಯ ಕೋಪ ಮತ್ತು ವಾದಗಳನ್ನು ತಪ್ಪಿಸಿ. ಉದ್ಯೋಗದಲ್ಲಿ ಅಧಿಕಾರಿಗಳೊಂದಿಗೆ ಸೌಹಾರ್ದತೆ ಮೆರೆಯಬೇಕು. ತಂದೆಯಿಂದ ಬೆಂಬಲ. ಹಠಾತ್ ಆರ್ಥಿಕ ಲಾಭವನ್ನು ಕಾಣಬಹುದು.
icon

(13 / 13)

ಇತರ ಗ್ಯಾಲರಿಗಳು