Taurus Personality; ಎಲ್ಲವೂ ಪರ್ಫೆಕ್ಟ್ ಆಗಿರಬೇಕು ಅನ್ನೋ ವೃಷಭ ರಾಶಿಯವರು ನಿಮ್ಮ ಸಂಗಾತಿಯಾಗಿದ್ರೆ ಈ ವಿಚಾರಗಳಲ್ಲಿ ಎಚ್ಚರ ಇರಬೇಕು-astrology if your partner is a taurus wants everything to be perfect u should be careful on these things personality uks ,ಫೋಟೋ ಗ್ಯಾಲರಿ ಸುದ್ದಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Taurus Personality; ಎಲ್ಲವೂ ಪರ್ಫೆಕ್ಟ್ ಆಗಿರಬೇಕು ಅನ್ನೋ ವೃಷಭ ರಾಶಿಯವರು ನಿಮ್ಮ ಸಂಗಾತಿಯಾಗಿದ್ರೆ ಈ ವಿಚಾರಗಳಲ್ಲಿ ಎಚ್ಚರ ಇರಬೇಕು

Taurus Personality; ಎಲ್ಲವೂ ಪರ್ಫೆಕ್ಟ್ ಆಗಿರಬೇಕು ಅನ್ನೋ ವೃಷಭ ರಾಶಿಯವರು ನಿಮ್ಮ ಸಂಗಾತಿಯಾಗಿದ್ರೆ ಈ ವಿಚಾರಗಳಲ್ಲಿ ಎಚ್ಚರ ಇರಬೇಕು

Taurus sun sign personality; ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿ ರಾಶಿಗೂ ಅದರದ್ದೇ ಆದ ಗುಣಲಕ್ಷಣಗಳನ್ನು ಉಲ್ಲೇಖಿಸಲಾಗಿದೆ. ಇದರಂತೆ, ಆಯಾ ರಾಶಿಯಲ್ಲಿ ಜನಿಸಿದವರಿಗೆ ಅದರ ಗುಣಲಕ್ಷಣಗಳು ಬಂದೇ ಬರುತ್ತವೆ. ಇದರಂತೆ, ಎಲ್ಲವೂ ಪರ್ಫೆಕ್ಟ್ ಆಗಿರಬೇಕು ಅನ್ನೋ ವೃಷಭ ರಾಶಿಯವರು ನಿಮ್ಮ ಸಂಗಾತಿಯಾಗಿದ್ರೆ ಈ ವಿಚಾರಗಳಲ್ಲಿ ಎಚ್ಚರ ಇರಬೇಕು. ಆ ವಿವರ ಹೀಗಿದೆ. 

ವೃಷಭ ರಾಶಿಯವರು ಅತ್ಯಂತ ವಿಶ್ವಾಸಾರ್ಹ ಮತ್ತು ನಿಷ್ಠೆಯುಳ್ಳ ಪರಿಪೂರ್ಣ ಜೀವನ ಸಂಗಾತಿಯಾಗಬಲ್ಲವರು. ಉದ್ಯೋಗ ಕ್ಷೇತ್ರದಲ್ಲೂ ಅಷ್ಟೆ ಪರಿಪೂರ್ಣ ಸ್ನೇಹಿತರಾಗಿ, ನಿಷ್ಠೆ ಮತ್ತು ವಿಶ್ವಾಸಾರ್ಹತೆಯಿಂದ ನಡೆದುಕೊಳ್ಳ ಪರಿಪೂರ್ಣ ಸಹೋದ್ಯೋಗಿಯೂ ಹೌದು. ಆದಾಗ್ಯೂ ರಾಶಿ ಚಕ್ರದ ಗುಣಲಕ್ಷಣಗಳ ಪ್ರಕಾರ ಈ ರಾಶಿಯವರಿಗೆ ಇನ್ನೊಂದು ಕರಾಳ ಮುಖವೂ ಇದೆ. ಅದರ ಬಗ್ಗೆ ತಿಳಿಯೋಣ.
icon

(1 / 7)

ವೃಷಭ ರಾಶಿಯವರು ಅತ್ಯಂತ ವಿಶ್ವಾಸಾರ್ಹ ಮತ್ತು ನಿಷ್ಠೆಯುಳ್ಳ ಪರಿಪೂರ್ಣ ಜೀವನ ಸಂಗಾತಿಯಾಗಬಲ್ಲವರು. ಉದ್ಯೋಗ ಕ್ಷೇತ್ರದಲ್ಲೂ ಅಷ್ಟೆ ಪರಿಪೂರ್ಣ ಸ್ನೇಹಿತರಾಗಿ, ನಿಷ್ಠೆ ಮತ್ತು ವಿಶ್ವಾಸಾರ್ಹತೆಯಿಂದ ನಡೆದುಕೊಳ್ಳ ಪರಿಪೂರ್ಣ ಸಹೋದ್ಯೋಗಿಯೂ ಹೌದು. ಆದಾಗ್ಯೂ ರಾಶಿ ಚಕ್ರದ ಗುಣಲಕ್ಷಣಗಳ ಪ್ರಕಾರ ಈ ರಾಶಿಯವರಿಗೆ ಇನ್ನೊಂದು ಕರಾಳ ಮುಖವೂ ಇದೆ. ಅದರ ಬಗ್ಗೆ ತಿಳಿಯೋಣ.(HT File Photo)

ನಾನೇಕೆ ಕ್ಷಮೆ ಕೇಳಲಿ?; ಹೀಗೊಂದು ಮನೋಭಾವ ವೃಷಭ ರಾಶಿಯವರಲ್ಲಿ ಕೆಲವೊಮ್ಮೆ ಕಂಡುಬರುತ್ತದೆ. ಕ್ಷಮೆಯನ್ನು ನಿರೀಕ್ಷಿಸುತ್ತಿರುವಿರಾ? ಅವರು ತಪ್ಪು ಮಾಡಿದರೂ ಕ್ಷಮೆ ಕೇಳುವುದಿಲ್ಲ. ಮೊಂಡುತನದ ಮತ್ತು ಕ್ಷಮೆಯಾಚಿಸದ, ಹಟಮಾರಿ ಮನೋಭಾವ ಅವರದ್ದು. ಬೇಕಾದರೆ ನನ್ನ ದಾರಿಗೆ ಬಾ ಎನ್ನುವವರು. ವೃಷಭ ರಾಶಿಯವರು ತಾವು ಮಾಡಿದ್ದೇ ಸರಿ ಎಂದು ನಂಬುತ್ತಾರೆ.ಇದು ಹೆಚ್ಚಾಗಿ ಅವರ ವೈಯಕ್ತಿಕ ಸಂಬಂಧವನ್ನು ಹಾಳುಮಾಡಬಹುದು ಅಥವಾ ಕಳಂಕಗೊಳಿಸಬಹುದು,  
icon

(2 / 7)

ಭಾವನಾತ್ಮಕವಾಗಿ ಸ್ಪಂದಿಸುವುದಿಲ್ಲ. ಅವರ ಆಂತರಿಕ ಶಾಂತಿ, ನೆಮ್ಮದಿ ಅವರಿಗೆ ಮುಖ್ಯ. ಅದನ್ನು ಸ್ವಯಂ ರಕ್ಷಿಸುವುದಕ್ಕೆ ಬೇಕಾದ ಮನೋಧರ್ಮ ಅವರದ್ದು. ಅವರ ಸಂತೋಷವೇ ಅವರಿಗೆ ಮುಖ್ಯ. ಸ್ವಯಂ-ಸಂರಕ್ಷಿಸುವ ಸಲುವಾಗಿ ಅವರು ಕೆಲವೊಮ್ಮೆ ಬೇರ್ಪಡುತ್ತಾರೆ ಅಥವಾ ಬೇರ್ಪಡಿಸುತ್ತಾರೆ. ನಿಮಗೆ ಹೆಚ್ಚು ಅಗತ್ಯವಿರುವ ಸಂದರ್ಭದಲ್ಲಿ ಅವರು ಭಾವನಾತ್ಮಕವಾಗಿ ಅಲಭ್ಯರಾಗುತ್ತಾರೆ. ಇದು ವ್ಯಕ್ತಿಯನ್ನು ತೀವ್ರವಾಗಿ ಘಾಸಿಗೊಳಿಸಬಹುದು ಅಥವಾ ನೋಯಿಸಬಹುದು, ಆದರೆ ವೃಷಭ ರಾಶಿಯವರು ಇಂಥ ಸನ್ನಿವೇಶವನ್ನು ಸುಲಭವಾಗಿ ಎದುರಿಸುತ್ತಾರೆ.  
icon

(3 / 7)

ಸಾಂಕೇತಿಕವಾಗಿ ಹೇಳುವುದಾದರೆ ಗೂಳಿಯನ್ನು ದೂರ ತಳ್ಳಿದರೆ ಅದು ಹಿಂಸಾಭಾವ ತೋರಬಹುದು. ಕೆರಳಬಹುದು. ಅದೇ ರೀತಿ, ಈ ರಾಶಿಯವರನ್ನು ಕೆಣಕಿದರೆ, ದೂರ ಮಾಡಿದರೆ ಅವರು ಕೆರಳಬಹುದು. ದ್ವೇಷ ಸಾಧಿಸಬಹುದು. ಇದು ಪ್ರತೀಕಾರ ಭಾವನೆಗೂ ಕಾರಣವಾಗಬಹುದು.
icon

(4 / 7)

ವೃಷಭ ರಾಶಿಯವರಿಗೆ ಉತ್ತಮ ಜೀವನ ಬೇಕು. ಅದು ಇದ್ದರೆ ಸಮಸ್ಯೆ ಇಲ್ಲ. ಇಲ್ಲದೇ ಹೋದರೆ, ಅವರು ಅಸೂಯೆ ಪಡಲಾರಂಭಿಸುತ್ತಾರೆ. ಹೊಟ್ಟೆಕಿಚ್ಚು ಪಟ್ಟು ಇರುವ ಸಂತೋಷವನ್ನೂ ಹಾಳು ಮಾಡತೊಡಗುತ್ತಾರೆ. 
icon

(5 / 7)

ವೃಷಭ ರಾಶಿಯವರ ರಾಶಿಗುಣಗಳ ಪ್ರಕಾರ ನೋಡುವುದಾದರೆ, ದುರಾಸೆ ಹೆಚ್ಚು. ಕೆಲವೊಮ್ಮೆ ಕೆಟ್ಟ ದಾರಿಯನ್ನೂ ಹಿಡಿಯಬಹುದು. ಜೀವನ ಉತ್ತಮಗೊಳಿಸುವ ಭರದಲ್ಲಿ ಇರುವ ಜೀವನವನ್ನೂ ಹಾಳುಮಾಡುವ ರೀತಿ ದುರಾಸೆ ಹೊಂದಬಹುದು. ಹೀಗಾಗಿ ಇಂಥವರನ್ನು ಇತರರು ಬಳಸಿಕೊಂಡು ತಮ್ಮ ಸ್ವಾರ್ಥ ಸಾಧಿಸುವುದು ಹೆಚ್ಚು.
icon

(6 / 7)

ಈ ಲೇಖನದಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾಹಿತಿ ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ಪ್ರವಚನಗಳು / ಧರ್ಮಗಳು / ಧರ್ಮಗ್ರಂಥಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ನಮ್ಮ ಉದ್ದೇಶ. ಸರಳವಾಗಿ ಹೇಳಬೇಕು ಎಂದರೆ ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
icon

(7 / 7)

ಇತರ ಗ್ಯಾಲರಿಗಳು