ಕುಂಭ ರಾಶಿ ಜುಲೈ ತಿಂಗಳ ಭವಿಷ್ಯ; ಮಾನಸಿಕ ಒತ್ತಡ ಹೆಚ್ಚಾಗಲಿದ್ದು, ಆರೋಗ್ಯ ಜೋಪಾನ, ವಾಹನ ಚಾಲನೆ ಎಚ್ಚರ, ಮತ್ತೇನು ಹೇಳುತ್ತೆ ಮಾಸ ಭವಿಷ್ಯ
ಕುಂಭ ರಾಶಿ ಜುಲೈ ತಿಂಗಳ ಭವಿಷ್ಯ; ಪ್ರತಿ ತಿಂಗಳ ಆರಂಭದಲ್ಲಿ 'ಮಾಸ ಭವಿಷ್ಯ' ಹೇಗಿದೆ ಎಂದು ನೋಡುವ ರೂಢಿ ಇರಿಸಿಕೊಂಡಿದ್ದಾರೆ. ಜ್ಯೋತಿಷ್ಯ ಶಾಸ್ತ್ರವನ್ನು ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಅಂಥವರಿಗಾಗಿ ಶ್ರದ್ಧೆಯಿಂದ ಬರೆಯುತ್ತಾರೆ. ಅದನ್ನು ಆಧರಿಸಿದ ಕುಂಭ ರಾಶಿಯವರ ಜುಲೈ ತಿಂಗಳ ಮಾಸ ಭವಿಷ್ಯ ಹೀಗಿದೆ.
(1 / 8)
ಕುಂಭ ರಾಶಿ ಜುಲೈ ತಿಂಗಳ ಭವಿಷ್ಯದ ಪ್ರಕಾರ ಈ ರಾಶಿಯವರಿಗೆ ಜುಲೈನಲ್ಲಿ ಮಾನಸಿಕ ಒತ್ತಡ ಹೆಚ್ಚುವ ಕಾರಣ ಅನಾರೋಗ್ಯದಿಂದ ಬಳಲುವಿರಿ. ಆದ್ದರಿಂದ ಗೊಂದಲ, ಮಾನಸಿಕ ಒತ್ತಡ ನಿರ್ವಹಣೆಗಾಗಿ ಯೋಗ, ಪ್ರಾಣಾಯಾಮ ನಡೆಸುವುದು ಒಳಿತು.
(2 / 8)
ಕುಂಭ ರಾಶಿಯವರ ಜುಲೈ ತಿಂಗಳ ಮಾಸ ಭವಿಷ್ಯದ ಪ್ರಕಾರ, ಉದ್ಯೋಗಿಗಳಿಗೆ ಒಳಿತಾಗಲಿದೆ. ಬದಲಾವಣೆ ಕೆಲವರಿಗೆ ಅನಿವಾರ್ಯ. ಅಂತೆಯೇ, ವೃತ್ತಿನಿರತರರಿಗೆ ದೂರದೂರಿಗೆ ವರ್ಗಾವಣೆಯಾಗಬಹುದು.
(3 / 8)
ನಿಮ್ಮ ಮನದ ವಿಚಾರವನ್ನು ಬೇರೆಯವರಿಗೆ ಹೇಳಿಕೊಂಡಲ್ಲಿ ಮಾತ್ರ ತೊಂದರೆಯಿಂದ ಮುಕ್ತರಾಗಬಹುದು. ಮನಸ್ಸು ಹಗುರಾಗಬಹುದು.
(4 / 8)
ಹೆಚ್ಚಿನ ಪ್ರಯತ್ನದಿಂದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸನ್ನು ಗಳಿಸುವಿರಿ. ಭವಿಷ್ಯದ ದಾರಿ ತೆರೆದುಕೊಳ್ಳಲಿದೆ.
(6 / 8)
ವಾಹನ ಚಾಲನೆ ಮಾಡುವವರು ಎಚ್ಚರಿಕೆಯಿಂದ ಇರಬೇಕು. ಜುಲೈ ತಿಂಗಳ ಮಾಸ ಭವಿಷ್ಯ ಪ್ರಕಾರ, ಕುಂಭ ರಾಶಿಯವರಿಗೆ ಅಪಾಯ ಸಂಭವಿಸುವ ಸಾಧ್ಯತೆ ಇದ್ದು, ವಾಹನ ಚಾಲನೆ ಮಾಡುವಾಗ ಜಾಗರೂಕರಾಗಿರಬೇಕು.
(7 / 8)
ಹಣ್ಣು ಮತ್ತು ತರಕಾರಿಗಳ ವ್ಯಾಪಾರದಲ್ಲಿ ಲಾಭವಿದೆ. ಕಬ್ಬಿಣ ಅಥವಾ ಕಟ್ಟಡಕ್ಕೆ ಬೇಕಾದ ಲೋಹಗಳ ವಸ್ತುಗಳ ವ್ಯಾಪಾರದಲ್ಲಿ ಹೇರಳ ಲಾಭ ಗಳಿಸುವಿರಿ.
(8 / 8)
ಗಮನಿಸಿ: ಈ ಲೇಖನದಲ್ಲಿರುವ ಮಾಹಿತಿಯನ್ನು ನಂಬಬೇಕೆ ಅಥವಾ ಬೇಡವೇ ಎಂಬುದು ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ. ಇಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾಹಿತಿ ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ಪ್ರವಚನಗಳು / ಧರ್ಮಗಳು / ಧರ್ಮಗ್ರಂಥಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ನಮ್ಮ ಉದ್ದೇಶ. ಸರಳವಾಗಿ ಹೇಳಬೇಕು ಎಂದರೆ ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
ಇತರ ಗ್ಯಾಲರಿಗಳು