ಕಟಕ ರಾಶಿ ಜುಲೈ ತಿಂಗಳ ಭವಿಷ್ಯ; ಸಾಕಷ್ಟು ಹಣ ಕೈಸೇರುವ ಈ ರಾಶಿಯವರು ಅದೃಷ್ಟವಂತರು, ಗೊಂದಲವೇ ಸಮಸ್ಯೆ- ಮತ್ತೇನು ಹೇಳುತ್ತೆ ಮಾಸ ಭವಿಷ್ಯ
ಕಟಕ ರಾಶಿ ಜುಲೈ ತಿಂಗಳ ಭವಿಷ್ಯ; ಪ್ರತಿ ತಿಂಗಳ ಆರಂಭದಲ್ಲಿ 'ಮಾಸ ಭವಿಷ್ಯ' ಹೇಗಿದೆ ಎಂದು ನೋಡಿಕೊಳ್ಳುವ ರೂಢಿ ಇರಿಸಿಕೊಂಡಿದ್ದಾರೆ. ಜ್ಯೋತಿಷ್ಯ ಶಾಸ್ತ್ರವನ್ನು ಅಭ್ಯಾಸ ಮಾಡಿರುವ ಹಿರಿಯ ಜ್ಯೋತಿಷಿ ಎಚ್. ಸತೀಶ್ ಅವರು ಎಲ್ಲ ರಾಶಿಗಳ ಭವಿಷ್ಯವನ್ನು ಅಂಥವರಿಗಾಗಿ ಶ್ರದ್ಧೆಯಿಂದ ಬರೆಯುತ್ತಾರೆ. ಅದನ್ನು ಆಧರಿಸಿದ ಕರ್ಕಾಟಕ ರಾಶಿಯವರ ಜುಲೈ ತಿಂಗಳ ಮಾಸ ಭವಿಷ್ಯ ಹೀಗಿದೆ.
(1 / 9)
ಕಟಕ ರಾಶಿಯವರ ಜುಲೈ ತಿಂಗಳ ಮಾಸ ಭವಿಷ್ಯದ ಪ್ರಕಾರ, ಈ ರಾಶಿಯವರಿಗೆ ಅವಶ್ಯಕತೆಗೆ ಬೇಕಾದಷ್ಟು ಹಣ ಕೈ ಸೇರುತ್ತದೆ. ಹಣದ ವಿಚಾರಕ್ಕೆ ಯಾವುದೇ ಕೊರತೆ ಉಂಟಾಗದು. ಆ ಮಟ್ಟಿಗೆ ಅದೃಷ್ಟಶಾಲಿಗಳಿವರು.
(3 / 9)
ಜುಲೈ ತಿಂಗಳ ಮಾಸ ಭವಿಷ್ಯದ ಪ್ರಕಾರ, ಕರ್ಕಾಟಕ ರಾಶಿಯಲ್ಲಿ ಜನಿಸಿದ ರಾಜಕಾರಣಿಗಳಿಗೆ ಮಾನಸಿಕ ಒತ್ತಡ ಹೆಚ್ಚಾಗುತ್ತದೆ.
(4 / 9)
ಯೋಚಿಸದೇ ಯಾವುದೇ ಕೆಲಸವನ್ನು ಮಾಡದಿರಿ. ಯಾವ ಕೆಲಸ ಮಾಡಬೇಕಾದರೂ ಸರಿ, ತಪ್ಪುಗಳ ಆಲೋಚನೆ ಮಾಡಬೇಕು. ಅವಕಾಶಗಳ ತುಲನೆ ಮಾಡಿ ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು.
(5 / 9)
ಯಾವುದೇ ವಿಚಾರದಲ್ಲಿಯೂ ಅತಿಯಾದ ಆಸೆ ಬೇಡ. ಇದು ತಿನ್ನುವುದಕ್ಕೆ ಮಾತ್ರ ಸೀಮಿತವಲ್ಲ. ಎಲ್ಲವೂ ತನಗೆ ಬೇಕು ಎಂಬ ಆಸೆಯೂ ಬೇಡ ಎಂಬುದು ಇಲ್ಲಿನ ತಾತ್ಪರ್ಯ.
(9 / 9)
ಗಮನಿಸಿ: ಈ ಲೇಖನದಲ್ಲಿರುವ ಮಾಹಿತಿಯನ್ನು ನಂಬಬೇಕೆ ಅಥವಾ ಬೇಡವೇ ಎಂಬುದು ಅವರವರ ನಂಬಿಕೆಗಳಿಗೆ ಬಿಟ್ಟ ವಿಚಾರ. ಇಲ್ಲಿ ಉಲ್ಲೇಖಿಸಲಾದ ಎಲ್ಲಾ ಮಾಹಿತಿ ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ಪ್ರವಚನಗಳು / ಧರ್ಮಗಳು / ಧರ್ಮಗ್ರಂಥಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ನಮ್ಮ ಉದ್ದೇಶ. ಸರಳವಾಗಿ ಹೇಳಬೇಕು ಎಂದರೆ ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ
ಇತರ ಗ್ಯಾಲರಿಗಳು